May 1, 2026 Languages : ಕನ್ನಡ | English

ಮಿಕ್ಸರ್ ಜಾರ್ ಮಸಾಲೆ ನುಣ್ಣಗೆ ಮಾಡ್ತಿಲ್ಲವೇ? ಬ್ಲೇಡ್ ಶಾರ್ಪ್ ಮಾಡಲು ಇಲ್ಲಿವೆ 5 ಸೂಪರ್ ಟಿಪ್ಸ್!!

ಅಡುಗೆ ಮನೆಯಲ್ಲಿ ನಮ್ಮ ಬೆಸ್ಟ್ ಫ್ರೆಂಡ್ ಅಂದ್ರೆ ಅದು ಮಿಕ್ಸರ್ ಗ್ರೈಂಡರ್. ಚಟ್ನಿ ಮಾಡೋಕೆ, ಮಸಾಲೆ ರುಬ್ಬೋಕೆ ಅಥವಾ ಬೆಳಗ್ಗಿನ ಬ್ಯುಸಿ ಸಮಯದಲ್ಲಿ ಪಟಪಟ ಅಂತ ಕೆಲಸ ಮುಗಿಸೋಕೆ ಮಿಕ್ಸರ್ ಇಲ್ಲದಿದ್ದರೆ ಆಗುವುದೇ ಇಲ್ಲ. ಆದ್ರೆ ಕೆಲವು ದಿನ ಬಳಸ್ತಿದ್ದ ಹಾಗೆ ಮಿಕ್ಸರ್ ಜಾರ್ ಬ್ಲೇಡ್ ತನ್ನ ಹರಿತ ಕಳೆದುಕೊಂಡು ಬಿಡುತ್ತೆ. ಎಷ್ಟೇ ಹೊತ್ತು ಮಿಕ್ಸರ್ ಓಡಿಸಿದ್ರೂ ಮಸಾಲೆ ಮಾತ್ರ ನುಣ್ಣಗೆ ಆಗೋದೇ ಇಲ್ಲ!

ಮನೆಯಲ್ಲೇ ಮಿಕ್ಸರ್ ಬ್ಲೇಡ್ ಅನ್ನು ಕತ್ತಿಯಂತೆ ಚೂಪುಗೊಳಿಸಿ | Photo Credit: AI
ಮನೆಯಲ್ಲೇ ಮಿಕ್ಸರ್ ಬ್ಲೇಡ್ ಅನ್ನು ಕತ್ತಿಯಂತೆ ಚೂಪುಗೊಳಿಸಿ | Photo Credit: AI

ಇಂತಹ ಸಮಯದಲ್ಲಿ "ಅಯ್ಯೋ, ಇದು ಹಾಳಾಗಿದೆ" ಅಂತ ಹೊಸ ಜಾರ್ ತರೋಕೆ ಅಥವಾ ಮೆಕ್ಯಾನಿಕ್ ಹತ್ತಿರ ಓಡೋಕೆ ಮುನ್ನ, ನಿಮ್ಮ ಅಡುಗೆ ಮನೆಯಲ್ಲಿರೋ ಈ ಐದು ವಸ್ತುಗಳನ್ನು ಬಳಸಿ ನೋಡಿ. ಎರಡೇ ನಿಮಿಷದಲ್ಲಿ ನಿಮ್ಮ ಹಳೆಯ ಮಿಕ್ಸರ್ ಬ್ಲೇಡ್ ಕತ್ತಿಯಂತೆ ಶಾರ್ಪ್ ಆಗುತ್ತೆ!

1. ಕಲ್ಲು ಉಪ್ಪಿನ ಕಿಲಾಡಿ ತನ!

ಬ್ಲೇಡ್ ಹರಿತಗೊಳಿಸಲು ಇದು ಎಲ್ಲರಿಗಿಂತ ಅಗ್ಗದ ಮತ್ತು ಬೆಸ್ಟ್ ದಾರಿ. ನಿಮ್ಮ ಮನೆಯಲ್ಲಿರೋ ಒಂದು ಹಿಡಿ ಕಲ್ಲು ಉಪ್ಪನ್ನು ಜಾರ್‌ಗೆ ಹಾಕಿ. ನಂತರ ಮಿಕ್ಸರ್ ಅನ್ನು ಒಂದೆರಡು ನಿಮಿಷಗಳ ಕಾಲ ಚಲಾಯಿಸಿ. ಉಪ್ಪಿನ ಹರಳುಗಳು ಒರಟಾಗಿರುವುದರಿಂದ ಬ್ಲೇಡ್ ಮೇಲಿರುವ ಜಿಡ್ಡು ಹೋಗಲಾಡಿಸಿ, ಅದಕ್ಕೆ ಹೊಸ ಶಾರ್ಪ್‌ನೆಸ್ ನೀಡುತ್ತದೆ. ಕೆಲಸ ಮುಗಿದ ಮೇಲೆ ಆ ಉಪ್ಪನ್ನು ಅಡುಗೆಗೆ ಬಳಸಬಹುದು, ವೇಸ್ಟ್ ಆಗಲ್ಲ!

2. ಐಸ್ ಕ್ಯೂಬ್ಸ್ ಮ್ಯಾಜಿಕ್

ಫ್ರಿಡ್ಜ್‌ನಲ್ಲಿರೋ ಐಸ್ ತುಂಡುಗಳು ಕೇವಲ ಜ್ಯೂಸ್‌ಗೆ ಮಾತ್ರವಲ್ಲ, ಮಿಕ್ಸರ್‌ಗೂ ಬೇಕು! ಜಾರ್‌ಗೆ 3-4 ಐಸ್ ಕ್ಯೂಬ್ಸ್ ಹಾಕಿ ಕೆಲವು ಸೆಕೆಂಡ್ ಬ್ಲೆಂಡ್ ಮಾಡಿ. ಇದು ಬ್ಲೇಡ್‌ಗಳ ಸಂದಿ-ಗೊಂದಿಯಲ್ಲಿ ಸಿಲುಕಿಕೊಂಡಿರುವ ಸಣ್ಣ ಕಣಗಳನ್ನು ಕಿತ್ತೆಸೆಯುತ್ತದೆ. ಇದರಿಂದ ಬ್ಲೇಡ್ ಸ್ವಚ್ಛವಾಗುವುದಲ್ಲದೆ, ಅದರ ಹರಿತವೂ ಸುಧಾರಿಸುತ್ತದೆ.

3. ಮೊಟ್ಟೆಯ ಸಿಪ್ಪೆ ಬಿಸಾಡಬೇಡಿ

ನೀವು ಮೊಟ್ಟೆ ತಿನ್ನುವವರಾಗಿದ್ದರೆ, ಅದರ ಸಿಪ್ಪೆಗಳನ್ನು ಎಸೆಯುವ ಬದಲು ಒಮ್ಮೆ ತೊಳೆದು ಒಣಗಿಸಿ ಇಟ್ಟುಕೊಳ್ಳಿ. ಈ ಒಣಗಿದ ಸಿಪ್ಪೆಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಗ್ರೈಂಡ್ ಮಾಡಿ. ಸಿಪ್ಪೆಯ ಒರಟು ಗುಣವು ಬ್ಲೇಡ್ ಅನ್ನು ಹೊಸದರಂತೆ ಶಾರ್ಪ್ ಮಾಡುತ್ತದೆ. ನಂತರ ಜಾರ್ ಅನ್ನು ಮಾಮೂಲಿ ನೀರಿನಲ್ಲಿ ತೊಳೆದುಬಿಡಿ.

4. ಅಲ್ಯೂಮಿನಿಯಂ ಫಾಯಿಲ್ ಬಳಕೆ

ಟಿಫನ್ ಬಾಕ್ಸ್‌ಗೆ ಬಳಸುವ ಅಲ್ಯೂಮಿನಿಯಂ ಫಾಯಿಲ್ ಕೂಡ ಇಲ್ಲಿ ಕೆಲಸಕ್ಕೆ ಬರುತ್ತೆ. ಒಂದು ಸಣ್ಣ ಫಾಯಿಲ್ ಪೇಪರ್ ತೆಗೆದುಕೊಂಡು ಅದನ್ನು ಸಣ್ಣ ಉಂಡೆಯಂತೆ ಮಾಡಿ ಜಾರ್ ಒಳಗೆ ಹಾಕಿ. ಮಿಕ್ಸರ್ ಅನ್ನು ಸ್ವಲ್ಪ ಹೊತ್ತು ಓಡಿಸಿ. ಈ ಫಾಯಿಲ್‌ನ ಘರ್ಷಣೆಯಿಂದ ಬ್ಲೇಡ್‌ಗಳಲ್ಲಿರುವ ಸಣ್ಣಪುಟ್ಟ ದೋಷಗಳು ಸರಿಯಾಗಿ, ಚೂಪಾಗುತ್ತವೆ.

5. ಜಿಡ್ಡು ಹೋಗಲಾಡಿಸಲು ಬೇಕಿಂಗ್ ಸೋಡಾ

ಹಲವು ದಿನಗಳಿಂದ ಮಸಾಲೆ ರುಬ್ಬಿ ರುಬ್ಬಿ ಬ್ಲೇಡ್ ಮೇಲೆ ಜಿಡ್ಡು ಕುಳಿತಿದ್ದರೆ, ಬ್ಲೇಡ್ ಶಾರ್ಪ್ ಆಗಲ್ಲ. ಇಂತಹ ಸಮಯದಲ್ಲಿ ಬೇಕಿಂಗ್ ಸೋಡಾಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ ಬ್ಲೇಡ್‌ಗಳಿಗೆ ಹಚ್ಚಿ. 5 ನಿಮಿಷ ಬಿಟ್ಟು ತೊಳೆದರೆ ಸಾಕು, ಬ್ಲೇಡ್ ಕನ್ನಡಿಯಂತೆ ಹೊಳೆಯುತ್ತೆ ಮತ್ತು ಕೆಲಸ ಕೂಡ ಸ್ಪೀಡ್ ಆಗುತ್ತೆ.

ಈ ಟಿಪ್ಸ್ ಬಳಸುವಾಗ ಜಾರ್‌ನ ಮುಚ್ಚಳ ಸರಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಿ. ಮಿಕ್ಸರ್ ಕೆಲಸ ಮಾಡದಿದ್ದಾಗ ಹೊಸದು ಖರೀದಿಸುವ ಬದಲು ಇಂತಹ ಸಿಂಪಲ್ ಮನೆಮದ್ದುಗಳನ್ನು ಟ್ರೈ ಮಾಡೋದ್ರಿಂದ ನಿಮ್ಮ ದುಡ್ಡು ಕೂಡ ಉಳಿಯುತ್ತೆ, ಕೆಲಸವೂ ಸುಲಭವಾಗುತ್ತೆ.

Latest News