ಪ್ರತಿನಿತ್ಯದ ಕೆಲವು ಅಂಶದಲ್ಲಿ ಇದೊಂದು ವಿಚಾರ ಸಹ ಈಗ ಮುನ್ನೆಲೆಗೆ ಬಂದಿದೆ ನೋಡಿ. ಸಾಕಷ್ಟು ಪ್ರದೇಶಗಳಲ್ಲಿ ಅಥವಾ ಈ ಹಳ್ಳಿ ಕಡೆಯ ಕೆಲವರು, ಸಿಟಿಯಲ್ಲಿಯೂ ಕೆಲ ಹೆಣ್ಣುಮಕ್ಕಳು ಕೂದಲು ಮಾರಾಟ ಮಾಡುತ್ತಾರೆ. ಹೆಣ್ಣುಮಕ್ಕಳು ದಿನನಿತ್ಯ ತಲೆ ಬಾಚಣಿಕೆಯಿಂದ ಬಾಚಿಕೊಳ್ಳುವುದು ರೂಡಿ. ದೈನಂದಿನ ತಮ್ಮ ಕೆಲಸಕ್ಕೆ ಅಥವಾ ಯಾವುದಾದ್ರೂ ಒಂದು ಕೆಲಸದ ನಿಮಿತ್ತ ಅಥವಾ ನಿತ್ಯವೂ ಹೆಣ್ಣುಮಕ್ಕಳು ರೆಡಿಯಾಗುವಾಗ ತಲೆ ಬಾಚಿಕೊಳ್ಳುತ್ತಾರೆ. ಅದು ನಿಮಗೂ ಗೊತ್ತು. ತಲೆ ಬಾಚಿಕೊಂಡ ಮೇಲೆ ವೆಸ್ಟ್ ಆದ ಅವರ ಕೂದಲನ್ನು ಒಂದು ಡಬ್ಬದಲ್ಲಿ ಶೇಖರಿಸಿ, ರಸ್ತೆ ಬದಿ ಕೂದಲು ಖರೀದಿಸುವ ವ್ಯಾಪಾರಗಾರರು ಬಂದಾಗ, ಆ ಕೂದಲನ್ನು ಒಂದು ವಸ್ತು ಪಡೆದು ಮಾರಿ ಬಿಡುತ್ತಾರೆ. ಸ್ಟಿಲ್ ಡಬ್ಬ ಅಥವಾ ಮನೆಗೆ ಉಪಯುಕ್ತ ಆಗುವ ಪ್ಲಾಸ್ಟಿಕ್ ಡಬ್ಬವನ್ನು ಕೂದಲು ಕೊಟ್ಟು ತೆಗೆದುಕೊಂಡು ಬಿಡುತ್ತಾರೆ. ಅದು ತುಂಬಾನೇ ತಪ್ಪು ಎನ್ನುತ್ತದೆ ಶಾಸ್ತ್ರ.
ಹೌದು ಆ ರೀತಿ ತಲೆ ಕೂದಲು ಕೊಟ್ಟು ಏನಾದ್ರು ಒಂದು ವಸ್ತು ಪಡೆಯುವ ಮುನ್ನ ಎಲ್ಲಾ ಮಹಿಳೆಯರು ಈ ಸ್ಟೋರಿ ಓದಿ. ನಮ್ಮ ದೇಹದ ಪ್ರತಿಯೊಂದು ಭಾಗಕ್ಕೂ ಅದರದ್ದೇ ಆದ ದೊಡ್ಡ ಮಹತ್ವ ಇದೆ. ಕೂದಲನ್ನು ಶುಕ್ರ ಮತ್ತು ಚಂದ್ರನಿಗೆ ಶಾಸ್ತ್ರದಲ್ಲಿ ಹೋಲಿಕೆ ಮಾಡಲಾಗುತ್ತದೆ. ನಿಮ್ಮ ಕೂದಲನ್ನು ಇನ್ನೂಬ್ಬರಿಗೆ ಕೊಟ್ಟ ಬಳಿಕ, ಅದರಿಂದ ಏನೋ ಒಂದು ಲಾಭದ ಅಂಶ ನಿಮ್ಮ ಮನೆ ಸೇರಿದರೆ, ಅದು ನಿಜಕ್ಕೂ ದೊಡ್ಡ ನಷ್ಟವಂತೆ. ಮನುಷ್ಯನ ಪ್ರಭಾವಲಯ ಕೂದಲಿನಲ್ಲಿ ಇರುತ್ತದೆ. ಶುಕ್ರ ಮತ್ತು ಚಂದ್ರ ಗ್ರಹ ಈ ರೀತಿ ಮಾಡೋದರಿಂದ ಶಕ್ತಿಯನ್ನು ಕಳೆದುಕೊಳ್ಳುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದ್ದು ಇದರಿಂದ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸಹ ಕುಂದುತ್ತದೆ. ಕೌಟುಂಬಿಕ ಕಲಹ ಉಂಟಾಗುತ್ತದೆ ಎಂದು ತಿಳಿದುಬಂದಿದೆ.
ನಿಮ್ಮ ಬಳಿ ಬೀದಿಯಲ್ಲಿ ಕೂದಲು ಪಡೆಯುವವರು, ನಿಮ್ಮ ಕೂದಲನ್ನು ಅದೆಲ್ಲಿ ಮಾರುತ್ತಾರೆ ಎಂದು ಯಾರಿಗೂ ತಿಳಿಯದು. ಅದೇ ಕೂದಲನ್ನು ಬಳಸಿ ನಿಮ್ಮ ಮೇಲೆ ತಾಂತ್ರಿಕ ಕೆಲಸದ ನಡೆಸಿ, ಮಾಟ ಮಂತ್ರ ಕೂಡ ಪ್ರಯೋಗಿಸಿ ನಿಮ್ಮ ಅರೋಗ್ಯ ಹದಗೆಡುವ ಹಾಗೆ ಮಾಡಲೂಬಹುದು. ನಿಮ್ಮ ಏಳಿಗೆಯನ್ನು ಕುಂದಿಸಬಹುದು. ಹಿಂದೂ ಧರ್ಮದಲ್ಲಿ ದೇಹದ ಭಾಗಗಳನ್ನು ಮಾರಾಟ ಮಾಡಿ ಹಣ ಗಳಿಸುವುದು ನಿಷೇಧಿತವಾಗಿದೆ. ಇಸ್ಲಾಂ ಧರ್ಮದಲ್ಲೂ ಕೂದಲು ಮಾರಾಟ ಮಾಡುವುದನ್ನು ಹರಾಮ್ ಎಂದು ಪರಿಗಣಿಸಲಾಗುತ್ತದೆ. ಇದು ಕೇವಲ ನಂಬಿಕೆಯ ವಿಷಯವಲ್ಲ, ಮನುಷ್ಯನ ಘನತೆಗೆ ಸಂಬಂಧಿಸಿದ ಮಹತ್ವದ ಅಂಶವಾಗಿದೆ.
ಸಾಮಾನ್ಯವಾಗಿ ನಾವು ಹಳೆಯ ವಸ್ತುಗಳನ್ನು ಕೊಟ್ಟು ಹೊಸ ವಸ್ತು ಪಡೆಯುತ್ತೇವೆ. ಆದರೆ ಕೂದಲು ವ್ಯಕ್ತಿತ್ವದ ಭಾಗವಾಗಿರುವುದರಿಂದ, ಅದನ್ನು ಮಾರಾಟ ಮಾಡುವುದು ಸೂಕ್ತವಲ್ಲ. ಕೂದಲನ್ನು ಬೀದಿಯಲ್ಲಿ ಮಾರುವ ಬದಲು, ಸುರಕ್ಷಿತವಾಗಿ ಮಣ್ಣಿನಲ್ಲಿ ಹೂತು ಹಾಕುವುದು ಅಥವಾ ಕಸದೊಂದಿಗೆ ವಿಲೇವಾರಿ ಮಾಡುವುದು ಉತ್ತಮ. ನಿಮ್ಮ ಮತ್ತು ನಿಮ್ಮ ಕುಟುಂಬದ ನೆಮ್ಮದಿಗಾಗಿ, ಸಣ್ಣ ಆಸೆಗೆ ಬಿದ್ದು ಕೂದಲನ್ನು ಅಪರಿಚಿತರಿಗೆ ನೀಡಬೇಡಿ. ಧಾರ್ಮಿಕ ಮತ್ತು ತಾಂತ್ರಿಕ ವಿದ್ವಾಂಸರ ಅಭಿಪ್ರಾಯದಲ್ಲಿ, ಕೂದಲಿನ ಮೇಲೆ ನಡೆಯುವ ಕೆಲವು ತಾಂತ್ರಿಕ ಪ್ರಯೋಗಗಳು ಮಾನಸಿಕ ಒತ್ತಡ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ತಿಳಿಯದೆ ಕೂದಲು ಮಾರಾಟ ಮಾಡಿ ದುಡ್ಡನ್ನು ಪಡೆದಿದ್ದರೆ, ಆ ಮೊತ್ತವನ್ನು ಅಥವಾ ಆ ಹಣಕ್ಕೆ ಸಮನಾದ ಆಹಾರವನ್ನು ಬಡವರಿಗೆ ದಾನ ಮಾಡಿದರೆ ದೋಷದಿಂದ ಮುಕ್ತರಾಗಬಹುದು.