ಕಾಲ ಬದಲಾದಂತೆ ಜನರ ಫ್ಯಾಷನ್, ತಿನ್ನುವ ಅಭ್ಯಾಸ ಎಲ್ಲವೂ ಬದಲಾಗುತ್ತೆ. ಆದ್ರೆ ಪ್ರೀತಿ ಮಾಡೋ ಜಾಗ ಕೂಡ ಇಷ್ಟೊಂದು ವಿಚಿತ್ರವಾಗಿ ಬದಲಾಗುತ್ತೆ ಅಂತ ಯಾರೂ ಅನ್ಕೊಂಡಿರಲಿಲ್ಲ. ಈಗಿನ ಕಾಲದ ಹುಡುಗ-ಹುಡುಗಿಯರು ಅಂದ್ರೆ ಈ 'ಜನರೇಷನ್ ಝಡ್' (Gen Z) ಮಂದಿ, ಡೇಟಿಂಗ್ ಮಾಡೋಕೆ ಕಾಫಿ ಶಾಪ್ ಅಥವಾ ಪಾರ್ಕ್‌ಗಳಿಗೆ ಹೋಗೋದನ್ನ ಬಿಟ್ಟು ಸ್ಮಶಾನಗಳಿಗೆ ಹೋಗ್ತಿದ್ದಾರಂತೆ.
ಕೇಳೋಕೆ ಸ್ವಲ್ಪ ಭಯಾನಕ ಅಥವಾ ವಿಚಿತ್ರ ಅನ್ಸಿದ್ರೂ, ಇದು ಈಗಿನ ಲೇಟೆಸ್ಟ್ ಟ್ರೆಂಡ್. ಮೆಟ್ರೋ ಮತ್ತು ವೋಗ್ ಇಂಡಿಯಾದಂತಹ ದೊಡ್ಡ ಮ್ಯಾಗಜೀನ್‌ಗಳ ರಿಪೋರ್ಟ್ ಪ್ರಕಾರ, ಯುವಜನತೆ ಈಗ ರೊಮ್ಯಾಂಟಿಕ್ ಡೇಟ್‌ಗಾಗಿ ಸ್ಮಶಾನಗಳನ್ನೇ ಫೇವರಿಟ್ ಸ್ಪಾಟ್ ಮಾಡಿಕೊಳ್ತಿದ್ದಾರೆ. ಅಷ್ಟಕ್ಕೂ ಸ್ಮಶಾನದಲ್ಲಿ ಅಂತದ್ದೇನಿದೆ? ಬನ್ನಿ ಈ 'ಭಯಾನಕ' ಪ್ರೇಮ ಕಥೆಯ ಗುಟ್ಟು ತಿಳ್ಕೊಳ್ಳೋಣ.
ಇದಕ್ಕೆ ಮುಖ್ಯ ಕಾರಣ ಅಂದ್ರೆ ನೆಮ್ಮದಿ ಮತ್ತು ಪ್ರೈವೆಸಿ. ಈಗಿನ ಕೆಫೆ ಅಥವಾ ಹೋಟೆಲ್‌ಗಳಲ್ಲಿ ಜನಜಂಗುಳಿ ಜಾಸ್ತಿ, ಸದಾ ಮೊಬೈಲ್ ಸೌಂಡ್, ಸೋಶಿಯಲ್ ಮೀಡಿಯಾ ಕಿರಿಕಿರಿ ಇರುತ್ತೆ. ಇಂತಹ ಕಡೆ ಮನಬಿಚ್ಚಿ ಮಾತಾಡೋಕೆ ಆಗಲ್ಲ ಅನ್ನೋದು ಇವರ ವಾದ.
ಸ್ಮಶಾನಗಳಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತೆ. ಅಲ್ಲಿ ಯಾವುದೇ ಗಲಾಟೆ ಇರಲ್ಲ. ಇದರಿಂದ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳೋಕೆ ಮತ್ತು ಆಳವಾದ ಮಾತುಕತೆ ನಡೆಸೋಕೆ ಸಹಾಯವಾಗುತ್ತೆ ಅಂತ ಈ ಯುವಜೋಡಿಗಳು ಹೇಳ್ತಾರೆ. ಪಬ್ಲಿಕ್ ಪಾರ್ಕ್ ಅಥವಾ ಕಾಫಿ ಶಾಪ್‌ಗಳಲ್ಲಿ ಯಾರಾದರೂ ನೋಡ್ತಾರೆ ಅನ್ನೋ ಭಯ ಇರುತ್ತೆ. ಆದ್ರೆ ಸ್ಮಶಾನ ಅಂದ್ರೆ ಅಲ್ಲಿ ಜನ ಬರಲ್ಲ. ಇಡೀ ಜಾಗ ಇವರಿಗೇ ಖಾಲಿ ಸಿಗುತ್ತೆ. ಇನ್ನು ಕೆಲವರು ಸ್ವಲ್ಪ ಫಿಲಾಸಫಿಕಲ್ ಆಗಿ ಯೋಚನೆ ಮಾಡ್ತಾರೆ. ಸುತ್ತಲೂ ಸಮಾಧಿಗಳ ಮಧ್ಯೆ ಕುಳಿತು ಪ್ರೀತಿ ಮಾಡೋದ್ರಿಂದ ಜೀವನ ಮತ್ತು ಸಾವು ಎಷ್ಟು ಸತ್ಯ ಅನ್ನೋದು ನೆನಪಾಗುತ್ತೆ. ಇದರಿಂದ ಅವರ ನಡುವಿನ ಎಮೋಷನಲ್ ಬಾಂಡ್ ಇನ್ನು ಸ್ಟ್ರಾಂಗ್ ಆಗುತ್ತಂತೆ.
ಹಾಗಂತ ಈ ವಿಷಯಕ್ಕೆ ವಿರೋಧ ಇಲ್ಲ ಅಂತಲ್ಲ. "ಸ್ಮಶಾನ ಅನ್ನೋದು ಅಗಲಿದವರ ನೆನಪಿನಲ್ಲಿ ಮೌನವಾಗಿರಬೇಕಾದ ಜಾಗ. ಅಲ್ಲಿ ಗೌರವ ಕೊಡೋದು ಬಿಟ್ಟು ಇವರು ರೊಮ್ಯಾನ್ಸ್ ಮಾಡ್ತಾರಾ?" ಅಂತ ದೊಡ್ಡವರು ಕೆಂಡಾಮಂಡಲ ಆಗ್ತಿದ್ದಾರೆ. ಸಮಾಜದ ಒಂದು ವರ್ಗ ಇವರ ಈ 'ಡೆಡ್ಲಿ ರೊಮ್ಯಾನ್ಸ್' ಅನ್ನ ಟೀಕಿಸುತ್ತಿದೆ. ಇನ್ನು ಕೆಲವರು ಇದನ್ನ 'ಸೋಶಿಯಲ್ ಮೀಡಿಯಾ ಪಬ್ಲಿಸಿಟಿ' ಅಂತಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳೋಕೆ ಹೀಗೆ ಮಾಡ್ತಿದ್ದಾರೆ ಹೊರತು ನಿಜವಾದ ಪ್ರೀತಿ ಏನಿಲ್ಲ ಅಂತ ಕಾಲೆಳೆಯುತ್ತಿದ್ದಾರೆ.
ಹೌದು, ಕಾಲ ಬದಲಾಗಿದೆ. Gen Z ಗೆ ಈಗ ದೊಡ್ಡ ದೊಡ್ಡ ಖರ್ಚು ಅಥವಾ ಐಷಾರಾಮಿ ಹೊಟೇಲ್‌ಗಳಿಗಿಂತ ಹೆಚ್ಚಾಗಿ, ಎಲ್ಲೋ ಒಂದು ಕಡೆ ಶಾಂತವಾಗಿ ಕುಳಿತು ಮನಬಿಚ್ಚಿ ಮಾತಾಡೋದು ಮುಖ್ಯ ಅನಿಸುತ್ತಿದೆ. ಇದು ಅವರ ಲೈಫ್ ಸ್ಟೈಲ್ ಇರಬಹುದು, ಆದ್ರೆ ಸ್ಮಶಾನದಂತಹ ಜಾಗಗಳ ಪವಿತ್ರತೆಯನ್ನ ಕಾಪಾಡೋದು ಕೂಡ ಅಷ್ಟೇ ಮುಖ್ಯ ಅಲ್ವಾ? ಡೇಟಿಂಗ್ ಮಾಡೋಕೆ ಸ್ಮಶಾನ ಬೆಸ್ಟ್ ಅಂತೀರಾ ಅಥವಾ ಇದೊಂದು ಪೈಶಾಚಿಕ ಐಡಿಯಾ ಅಂತೀರಾ? ಕಮೆಂಟ್ ಮಾಡಿ ತಿಳಿಸಿ.