Mar 11, 2026 Languages : ಕನ್ನಡ | English

ಕನ್ನಡಿಗನ ಕೆಣಕಿದ ಹಿಂದಿ ಲೇಡಿ - ಕನ್ನಡ ಭಾಷೆ ವಿಚಾರಕ್ಕೆ ನಾಲಿಗೆ ಹರಿಬಿಟ್ಟ ಯುವತಿ!! ವಿಡಿಯೋ ವೈರಲ್

ಬೆಂಗಳೂರು ನಗರದ ಒಂದು ಹೆರ್ ಸೆಲ್ಯೂನ್ ನಲ್ಲಿ ಕನ್ನಡ ಮಾತನಾಡು ಎಂದು ಕೇಳಿದ ಕನ್ನಡಿಗ ಗ್ರಾಹಕರಿಗೆ ಹಿಂದಿ ಮಾತನಾಡುವ ಸಿಬ್ಬಂದಿಯಿಂದ ಅವಮಾನವಾಗಿದೆ. “ಇದು ಭಾರತ, ಇಲ್ಲಿ ಹಿಂದಿಯೇ ಕೆಲಸ ಮಾಡುತ್ತದೆ” ಎಂಬ ಧಿಕ್ಕಾರದ ಮಾತು ಕೇಳಿಬಂದಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಈ ಘಟನೆ ನಡೆದ ಸ್ಥಳದಲ್ಲಿ ಗ್ರಾಹಕರು ತಮ್ಮ ಭಾಷೆಯ ಹಕ್ಕು ಕೇಳಿದಾಗ, ಸಿಬ್ಬಂದಿ ತೀವ್ರವಾಗಿ ಪ್ರತಿಕ್ರಿಯಿಸಿ, ಅವಮಾನಕಾರಿ ಪದಗಳನ್ನು ಬಳಕೆ ಮಾಡಿದರೆಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಮತ್ತು ಆಡಿಯೋ ಕ್ಲಿಪ್‌ಗಳು ವೈರಲ್ ಆಗಿದ್ದು, ಕನ್ನಡ ಸಂಘಟನೆಗಳು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಳಿ ಬಂದಿರುವ ವರದಿಯ ಪ್ರಕಾರ, ಈ ಅವಮಾನ ಮಾಡಿದ ಅಂಗಡಿ ಮಾಲೀಕ ಜಲಂ ಎಂಬವರು ರಾಜಸ್ಥಾನ ಮೂಲದವರೆಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ.

ಕನ್ನಡ ಭಾಷೆಯ ಗೌರವವನ್ನು ಕಾಪಾಡುವ ಉದ್ದೇಶದಿಂದ ಹಲವಾರು ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದು, “ನಮ್ಮ ನಾಡಿನಲ್ಲಿ ನಮ್ಮ ಭಾಷೆಗೆ ಗೌರವ ಇರಬೇಕು” ಎಂಬ ಘೋಷಣೆಗಳನ್ನು ಎತ್ತಿವೆ. ಈ ಘಟನೆ ಭಾಷಾ ಹಕ್ಕುಗಳ ಕುರಿತಂತೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಇದಕ್ಕೂ ಮುನ್ನವೂ ಕರ್ನಾಟಕದಲ್ಲಿ ಭಾಷಾ ವಿವಾದಗಳು ನಡೆದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಭಾಷೆ, ಸೇವೆ ಮತ್ತು ಸಂವಹನದ ಅಗತ್ಯತೆ ಕುರಿತು ಹಲವಾರು ಬಾರಿ ಚರ್ಚೆಗಳು ನಡೆದಿವೆ. ಈ ಘಟನೆಯು ಆ ಚರ್ಚೆಗೆ ಹೊಸ ಆಯಾಮ ನೀಡಿದೆ.

ಈ ಘಟನೆ ಕನ್ನಡಿಗರ ಭಾಷಾ ಹಕ್ಕುಗಳಿಗೆ ಧಕ್ಕೆಯಾಗಿ ಪರಿಣಮಿಸಿದ್ದು, ಸರ್ಕಾರ ಮತ್ತು ಸ್ಥಳೀಯ ಆಡಳಿತದಿಂದ ಸ್ಪಷ್ಟ ಕ್ರಮ ನಿರೀಕ್ಷಿಸಲಾಗಿದೆ. ಭಾಷಾ ಗೌರವ ಕೇವಲ ಸಂಸ್ಕೃತಿಯ ಭಾಗವಲ್ಲ, ಅದು ವ್ಯಕ್ತಿಯ ಆತ್ಮಗೌರವಕ್ಕೂ ಸಂಬಂಧಿಸಿದೆ ಎಂಬ ಸಂದೇಶ ಈ ಘಟನೆಯಿಂದ ಹೊರಬರುತ್ತಿದೆ. ಈ ಯುವತಿ ಅದೆಷ್ಟು ಕೆಟ್ಟದಾಗಿ ಮಾತನಾಡಿದ್ದಾಳೆ ಗೊತ್ತಾ? ಇಲ್ಲಿದೆ ನೋಡಿ ಆ ವಿಡಿಯೋ. ನೋಡಿ ಇಂತಹವರಿಗೆ ಮೊದಲು ಶಿಕ್ಷೆ ಆಗಬೇಕು ಎಂದು ಕಾಮೆಂಟ್ ಮಾಡಿ. 

Latest News