ಬಾದಾಮಿ ಗುಹಾಂತರ ದೇವಾಲಯದಲ್ಲಿ ಚಪ್ಪಲಿ ವಿವಾದ: ಭಾರಿ ಸೌಂಡ್ ಮಾಡ್ತಾ ಇರೋ ವಿಡಿಯೋ ಈಗ ಬಾರಿ ವೈರಲ್!!

ಸದ್ಯ ಕರ್ನಾಟಕದ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಬಾದಾಮಿ ಗುಹಾಂತರ ದೇವಾಲಯದ ಆವರಣದಲ್ಲಿ ನಡೆದಿರೋ ಒಂದು ಗಲಾಟೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಹಸಿರು ಬಣ್ಣದ ಚುಡಿದಾರ್ ಧರಿಸಿದ ಮಹಿಳೆಯೊಬ್ಬರು ಗುಹೆಯ ಒಳಗಡೆ ಚಪ್ಪಲಿ ಹಾಕಿಕೊಂಡು ಓಡಾಡಿದ್ದಾರೆ, ಇದನ್ನು ಪ್ರಶ್ನಿಸಿದ ಪ್ರವಾಸಿಗರ ಜೊತೆ ವಾಗ್ವಾದ ನಡೆಸಿದ್ದಾರೆ ಅನ್ನೋದು ವಿಡಿಯೋದ ಸಾರಾಂಶ.

ಬಾದಾಮಿ ಗುಹಾಂತರ ದೇವಾಲಯದ ಚಪ್ಪಲಿ ವಿವಾದದ ಅಸಲಿ ಸತ್ಯ; | Photo Credit: https://x.com/MeghUpdates
ಬಾದಾಮಿ ಗುಹಾಂತರ ದೇವಾಲಯದ ಚಪ್ಪಲಿ ವಿವಾದದ ಅಸಲಿ ಸತ್ಯ; | Photo Credit: https://x.com/MeghUpdates

ವಿಡಿಯೋ ನೋಡಿದ ತಕ್ಷಣ ಇಂಟರ್ನೆಟ್‌ನಲ್ಲಿ ಜನ ಫುಲ್ ಗರಂ ಆಗಿದ್ದಾರೆ. "ನಮ್ಮ ಐತಿಹಾಸಿಕ ಪವಿತ್ರ ತಾಣಗಳಿಗೆ ಇಂತಹ ಅಧಿಕಾರಿಗಳು ಗೌರವ ಕೊಡಲ್ವಾ?" ಅಂತ ಕಾಮೆಂಟ್ ಬಾಕ್ಸ್‌ನಲ್ಲಿ ಬೆಂಕಿ ಉಗುಳುತಾ ಇದ್ದಾರೆ. ಆದರೆ, ಈ ಇಡೀ ವಿವಾದದ ಹಿಂದೆ ನಾವು-ನೀವು ಅಂದುಕೊಂಡಿರದ ಬೇರೆಯದೇ ಆದ ಒಂದು ಅಸಲಿ ಸತ್ಯ ಅಡಗಿದೆ! ಅದೇನೆಂದು ತಿಳಿಯಲು ಈ ಲೇಖನ ಪೂರ್ತಿ ಓದಿ.

ವಿವಾದದ ಕಂಪ್ಲೀಟ್ ಸ್ಟೋರಿ

ಫೇಕ್ ಹೈಪ್ ಬೇಡ, ಸತ್ಯ ತಿಳಿಯಿರಿ - ಸೋಶಿಯಲ್ ಮೀಡಿಯಾದಲ್ಲಿ ಆ ಮಹಿಳೆಯ ಹೆಸರು 'ರೋಷನಿ' ಹಾಗೂ ಆಕೆ ಇಲಾಖೆಯ ಉದ್ಯೋಗಿ ಅಂತ ಪ್ರಚಾರ ಮಾಡಲಾಗುತ್ತಿದೆ. ಆದರೆ ಇದಕ್ಕೆ ಯಾವುದೇ ಅಧಿಕೃತ ಆಧಾರವಿಲ್ಲ.

ಕಾನೂನು ಏನ ಹೇಳುತ್ತೆ? - ಪುರಾತತ್ವ ಇಲಾಖೆಯ (ASI) ನಿಯಮದ ಪ್ರಕಾರ ಬಾದಾಮಿ ಗುಹೆಯ ಒಳಗೆ ಚಪ್ಪಲಿ ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿಲ್ಲ!

ಹೆರಿಟೇಜ್ ವಿವಾದ - ಈ ಸಣ್ಣ ಘಟನೆ ಈಗ ದೇಶಾದ್ಯಂತ ಇರುವ ಹಿಂದೂ ಸ್ಮಾರಕಗಳ ಮೇಲಿನ ಸರ್ಕಾರಿ ನಿಯಂತ್ರಣದ ಕುರಿತಾದ ದೊಡ್ಡ ಮಟ್ಟದ ಡಿಬೇಟ್‌ಗೆ ಕಾರಣವಾಗಿದೆ.

'ರೋಷನಿ' ವರ್ಸಸ್ ಪ್ರವಾಸಿಗರು! ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿರೋ ಸುದ್ದಿಯೇನು?

ವಿಡಿಯೋ ವೈರಲ್ ಆಗ್ತಾ ಇದ್ದಂತೆ ನೆಟ್ಟಿಗರು ಆ ಮಹಿಳೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಸಿಬ್ಬಂದಿ ಅಂತ ಹಣೆಪಟ್ಟಿ ಕಟ್ಟಿದ್ದಾರೆ. ಇಷ್ಟೊಂದು ಸುಂದರವಾದ ಹಿಂದೂ ಮತ್ತು ಜೈನ ಶಿಲ್ಪಕಲೆಗಳಿರೋ ಪವಿತ್ರ ಗುಹೆಯೊಳಗೆ ಚಪ್ಪಲಿ ಹಾಕಿ ನಮ್ಮ ಆಚಾರ-ವಿಚಾರಗಳಿಗೆ ಧಕ್ಕೆ ತಂದಿದ್ದಾರೆ ಅಂತ ಜನರು ಆಕ್ರೋಶ ಹೊರಹಾಕ್ತಿದ್ದಾರೆ.

ಇಷ್ಟೇ ಅಲ್ಲದೆ, "ಇಂತಹ ಹೆರಿಟೇಜ್ ಸೈಟ್‌ಗಳ ಉಸ್ತುವಾರಿಗೆ ಕೇವಲ ಹಿಂದೂ ಧರ್ಮದ ಸಿಬ್ಬಂದಿಗಳನ್ನು ಮಾತ್ರ ನೇಮಕ ಮಾಡಬೇಕು" ಅನ್ನೋ ಹೊಸದೊಂದು ಸಾರ್ವಜನಿಕ ಒತ್ತಾಯವೂ ಕೇಳಿಬರ್ತಾ ಇದೆ. ಆದರೆ ಟ್ವಿಸ್ಟ್ ಏನಪ್ಪಾ ಅಂದ್ರೆ, ಆ ಮಹಿಳೆ ನಿಜವಾಗಿಯೂ ಅಲ್ಲಿನ ಸಿಬ್ಬಂದಿನಾ ಅಥವಾ ಅವರ ಹೆಸರು ರೋಷನಿನಾ ಅನ್ನೋ ಬಗ್ಗೆ ಇಲಾಖೆಯಿಂದ ಯಾವುದೇ ಪಕ್ಕಾ ಮಾಹಿತಿ ಹೊರಬಿದ್ದಿಲ್ಲ. ಅದೆಲ್ಲಾ ಕೇವಲ ಇಂಟರ್ನೆಟ್ ಲೆಕ್ಕಾಚಾರ ಅಷ್ಟೇ!

ಬಾದಾಮಿ ಬೆಟ್ಟದ ಮೇಲಿನ ಅಸಲಿ ಕಥೆ ಏನು? ಚಪ್ಪಲಿ ಯಾಕೆ ಬಿಚ್ಚಬೇಕಾಗಿಲ್ಲ?

ಈ ವಿವಾದದ ಬೆನ್ನಲ್ಲೇ ಬಾದಾಮಿ ಗುಹೆಗೆ ಹೋಗುವಾಗ ಚಪ್ಪಲಿ ಬಿಚ್ಚಬೇಕಾ ಬೇಡವಾ ಅನ್ನೋ ಕನ್ಫ್ಯೂಷನ್ ಎಲ್ಲರಲ್ಲೂ ಶುರುವಾಗಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಬಾದಾಮಿ ಗುಹೆಗಳು ದಿನನಿತ್ಯ ಪೂಜೆ ನಡೆಯುವ ಆಕ್ಟಿವ್ ದೇವಸ್ಥಾನಗಳಿಗಿಂತ ಹೆಚ್ಚಾಗಿ 'ರಕ್ಷಿತ ಪ್ರವಾಸಿ ತಾಣಗಳು' (Protected Monuments). ಹೀಗಾಗಿ ಇಲ್ಲಿ ಚಪ್ಪಲಿ ಬಿಚ್ಚಬೇಕು ಅನ್ನೋ ಯಾವುದೇ ಕಡ್ಡಾಯ ನಿಯಮ ಜಾರಿಯಲ್ಲಿಲ್ಲ.

ಅದಕ್ಕಿಂತ ಮುಖ್ಯವಾಗಿ, ಈ ಗುಹೆಗಳು ಇರೋದು ಕಲ್ಲಿನ ಬೆಟ್ಟದ ಮೇಲೆ. ಇಲ್ಲಿನ ಮೆಟ್ಟಿಲುಗಳು ಮತ್ತು ರಸ್ತೆಗಳು ಸಖತ್ ಕಠಿಣವಾಗಿವೆ. ಅದರಲ್ಲೂ ನಮ್ಮ ಉತ್ತರದ ಕಡೆ ಬೇಸಿಗೆಯಲ್ಲಿ ಬಂಡೆಗಳು ಕೆಂಡದಂತೆ ಕಾಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸಿಗರು ಬರಿಗಾಲಿನಲ್ಲಿ ನಡೆದರೆ ಕಾಲು ಸುಟ್ಟು ಬೊಕ್ಕೆ ಬರುವುದು ಗ್ಯಾರಂಟಿ. ಇದೇ ಕಾರಣಕ್ಕೆ ಇಲಾಖೆಯು ಇಲ್ಲಿ ಚಪ್ಪಲಿ ಧರಿಸಲು ಆಫೀಶಿಯಲ್ ಆಗಿ ಅವಕಾಶ ಕೊಟ್ಟಿದೆ.

ಭಾವನೆಗಳಿಗಿಂತ ನಿಯಮ ದೊಡ್ಡದು!

ಯಾವುದೇ ಒಂದು ವಿಡಿಯೋ ನೋಡಿದ ತಕ್ಷಣ ಭಾವೋದ್ವೇಗಕ್ಕೆ ಒಳಗಾಗುವ ಮುನ್ನ ಅಲ್ಲಿನ ವಾಸ್ತವ ಮತ್ತು ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಬಾದಾಮಿಯ ಈ ಘಟನೆ ಸದ್ಯಕ್ಕೆ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದ್ದು, ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಪಾಡುವಲ್ಲಿ ನಾವು ನಿಯಮಗಳನ್ನು ಹೇಗೆ ಪಾಲಿಸಬೇಕು ಅನ್ನೋದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.  

Latest News