ಕಪಿಲ್ ಶರ್ಮಾ ಶೋನಲ್ಲಿ ಬರಿ ನಗೋದಕ್ಕೆ ಒಂದು ಎಪಿಸೋಡ್ ಗೆ ಲಕ್ಷ ಲಕ್ಷ ಸಂಭಾವನೆ - ಅರ್ಚನಾ ಪುರನ್ ಸಿಂಗ್ ಲಕ್ ನೋಡಿ!!

ಟಿವಿ ಓಪನ್ ಮಾಡಿದ್ರೆ ಸಾಕು, ಕಪಿಲ್ ಶರ್ಮಾ ಶೋನಲ್ಲಿ (The Kapil Sharma Show) ಒಬ್ಬರ ನಗು ಮಾತ್ರ ಇಡೀ ದೇಶಕ್ಕೆ ಕೇಳಿಸುತ್ತೆ. ಹೌದು, ನಾವಿಲ್ಲಿ ಮಾತಾಡ್ತಿರೋದು ಮತ್ಯಾರ ಬಗ್ಗೆನೂ ಅಲ್ಲ, ಬಾಲಿವುಡ್‌ನ ಎವರ್‌ಗ್ರೀನ್ ನಟಿ ಅರ್ಚನಾ ಪುರನ್ ಸಿಂಗ್ (Archana Puran Singh) ಅವರ ಬಗ್ಗೆ! ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಇವರ ಸಂಭಾವನೆ ಬಗ್ಗೆ ದೊಡ್ಡದೊಂದು ಸುದ್ದಿ ಭಾರಿ ವೈರಲ್ ಆಗ್ತಾ ಇದೆ.

ಬರೀ ನಗೋದಕ್ಕೆ 10 ಲಕ್ಷ; | Photo Credit: https://www.instagram.com/netflix_in/
ಬರೀ ನಗೋದಕ್ಕೆ 10 ಲಕ್ಷ; | Photo Credit: https://www.instagram.com/netflix_in/

"ಯಪ್ಪಾ.. ಬರೀ ನಗೋದಕ್ಕೆ ಅಷ್ಟೊಂದು ದುಡ್ಡು ಕೊಡ್ತಾರಾ?" ಅಂತ ಜನ ಹುಬ್ಬೇರಿಸುತ್ತಿದ್ದಾರೆ. ಕಪಿಲ್ ಶರ್ಮಾ ಶೋನಲ್ಲಿ ಯಾವುದೇ ಡೈಲಾಗ್ ಇಲ್ಲ, ಆಕ್ಟಿಂಗ್ ಇಲ್ಲ, ಜಸ್ಟ್ ಆರಾಮಾಗಿ ಸೋಫಾ ಮೇಲೆ ಕೂತ್ಕೊಂಡು ಮನಸ್ಸು ಬಿಚ್ಚಿ ಜೋರಾಗಿ ನಗೋದಷ್ಟೇ ಇವರ ಕೆಲಸ. ಹೀಗೆ ಬಿದ್ದೂ ಬಿದ್ದೂ ನಗೋದಕ್ಕೆ ಇವರಿಗೆ ಸಿಗೋ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ ಒಂದು ಎಪಿಸೋಡ್‌ಗೆ 10 ಲಕ್ಷ ರೂಪಾಯಿ ಅಂತೆ! ಇದನ್ನು ಕೇಳಿದ್ಮೇಲೆ ನೆಟ್ಟಿಗರಂತೂ ಫುಲ್ ಶಾಕ್ ಆಗ್ಬಿಟ್ಟಿದ್ದಾರೆ.

ಬರೀ ನಗೋದಕ್ಕೆ 10 ಲಕ್ಷ ರೂಪಾಯಿನಾ?

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಲೇಟೆಸ್ಟ್ ರಿಪೋರ್ಟ್ಸ್ ಪ್ರಕಾರ, ಅರ್ಚನಾ ಪುರನ್ ಸಿಂಗ್ ಅವರು ಕಪಿಲ್ ಶರ್ಮಾ ಶೋನ ಪ್ರತಿ ಎಪಿಸೋಡ್‌ಗೆ ಹತ್ತಿರ ಹತ್ತಿರ 10 ಲಕ್ಷ ರೂಪಾಯಿ ಜೇಬಿಗೆ ಇಳಿಸ್ತಾರಂತೆ. ಶೋನಲ್ಲಿ ಯಾರಾದ್ರೂ ಜೋಕ್ ಮಾಡಿದ್ರೆ ಸಾಕು, ಇವರು ಖುಷಿಯಿಂದ ಜೋರಾಗಿ ನಗಬೇಕು, ಅಷ್ಟೇ ಮ್ಯಾಟರ್. ಇವರ ಈ ಸ್ಪೆಷಲ್ ನಗುವಿಗಾಗಿಯೇ ಶೋ ಮೇಕರ್ಸ್ ಕೋಟಿ ಕೋಟಿ ದುಡ್ಡನ್ನು ನೀರಿನಂತೆ ಖರ್ಚು ಮಾಡೋಕೆ ರೆಡಿಯಾಗಿದ್ದಾರೆ.

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಸಣ್ಣಪುಟ್ಟ ಕಾಮಿಡಿ ಮತ್ತು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ತಾ ಇದ್ದ ಅರ್ಚನಾ, ಇವತ್ತು ಟಿವಿ ಇಂಡಸ್ಟ್ರಿಯಲ್ಲೇ ಅತ್ಯಂತ ಶ್ರೀಮಂತ ಮತ್ತು ಕಾಸ್ಟ್‌ಲಿ ಜಡ್ಜ್ ಆಗಿ ಗುರುತಿಸಿಕೊಂಡಿದ್ದಾರೆ. ಇವರ ಐಷಾರಾಮಿ ಬಂಗಲೆ, ಲಕ್ಸುರಿ ಲೈಫ್‌ಸ್ಟೈಲ್ ಮತ್ತು ರಾಯಲ್ ಕಾರುಗಳ ಕಲೆಕ್ಷನ್ ನೋಡಿದ್ರೆ ಯಾರಿಗಾದ್ರೂ ಒಂದು ಕ್ಷಣ ತಲೆ ತಿರುಗೋದಂತೂ ಗ್ಯಾರಂಟಿ. "ಬರೀ ನಗೋದ್ರಿಂದಲೇ ಇಷ್ಟೊಂದು ದುಡ್ಡು ಮಾಡೋಕೆ ಸಾಧ್ಯನಾ?" ಅನ್ನೋ ಪ್ರಶ್ನೆ ಇವತ್ತು ಎಲ್ಲರ ಮನಸ್ಸಿನಲ್ಲೂ ಮೂಡ್ತಾ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್‌ ಹಬ್ಬ!

ಈ ಸುದ್ದಿ ಹೊರಬಿದ್ದಾಗಿನಿಂದ ನೆಟ್ಟಿಗರು ಸುಮ್ಮನೆ ಕೂತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅರ್ಚನಾ ಪುರನ್ ಸಿಂಗ್ ಅವರ ನಗುವಿನ ಮೇಲೆ ಸಾಲು ಸಾಲು ಜೋಕ್ಸ್ ಮತ್ತು ಮೀಮ್ಸ್‌ಗಳನ್ನು ಕ್ರಿಯೇಟ್ ಮಾಡಿ ಹಬ್ಬ ಮಾಡ್ತಿದ್ದಾರೆ.

ಜನ ಕಮೆಂಟ್ ಬಾಕ್ಸ್‌ನಲ್ಲಿ, "ನಮ್ಮ ನಗುವಿಗೂ ಯಾರಾದ್ರೂ ಇಷ್ಟೊಂದು ವ್ಯಾಲ್ಯೂ ಕೊಟ್ಟಿದ್ದಿದ್ರೆ, ಇಷ್ಟೊತ್ತಿಗೆ ನಾವೆಲ್ಲಾ ಮಿಲಿಯನೇರ್‌ಗಳು ಆಗ್ಬಿಡ್ತಾ ಇದ್ವಿ ಬ್ರೋ!" ಅಂತ ತಮಾಷೆ ಮಾಡ್ತಿದ್ದಾರೆ. ಇನ್ನು ಕೆಲವರು, "ಲಕ್ ಇರಬೇಕು ಅಂದ್ರೆ ಅರ್ಚನಾ ಅವರ ತರ ಇರಬೇಕು, ಅಲ್ಲಿ ಜೋಕ್ ಮಾಡೋರು ಕಷ್ಟಪಟ್ಟು ಸ್ಕ್ರಿಪ್ಟ್ ಬರೆದು ಡೈಲಾಗ್ ಹೊಡೆದ್ರೆ, ಇವರು ಜಸ್ಟ್ ನಕ್ಕು ದುಡ್ಡು ಮಾಡ್ತಾರೆ" ಅಂತ ಕಾಲೆಳಿತಿದ್ದಾರೆ.

ನಗುವಿನ ಹಿಂದೆ ಇರೋ ಬ್ಯುಸಿನೆಸ್ ಸೀಕ್ರೆಟ್!

ಮೇಲ್ನೋಟಕ್ಕೆ ಇದು ಕೇವಲ ನಗುವಿನ ತರ ಕಂಡರೂ, ಟಿವಿ ಶೋಗಳ ಬ್ಯುಸಿನೆಸ್ ಲೆಕ್ಕಾಚಾರವೇ ಬೇರೆ ಇರುತ್ತೆ. ಕಪಿಲ್ ಶರ್ಮಾ ಶೋನಲ್ಲಿ ಅರ್ಚನಾ ಪುರನ್ ಸಿಂಗ್ ಅವರ ನಗು ಆ ಶೋನ ಒಂದು ಪ್ರಮುಖ ಬ್ರ್ಯಾಂಡ್ ಆಗ್ಬಿಟ್ಟಿದೆ. ಅವರು ನಗುವ ಶೈಲಿ ಮತ್ತು ಆ ನಗುವಿನಿಂದ ಸೃಷ್ಟಿಯಾಗೋ ಹೈಪ್, ಶೋನ ಟಿಆರ್‌ಪಿ (TRP) ಹೆಚ್ಚಿಸೋಕೆ ತುಂಬಾನೇ ಹೆಲ್ಪ್ ಆಗುತ್ತೆ. ಅದಕ್ಕಾಗಿಯೇ ಮೇಕರ್ಸ್ ಅವರಿಗೆ ಅಷ್ಟೊಂದು ಭರ್ಜರಿ ಅಮೌಂಟ್‌ ಫಿಕ್ಸ್ ಮಾಡಿದ್ದಾರೆ.

ಸದ್ಯಕ್ಕಂತೂ ಇಂಟರ್ನೆಟ್‌ನಲ್ಲಿ "ಅರ್ಚನಾ ಪುರನ್ ಸಿಂಗ್.. ಎಲ್ಲಿ ನಗುವಿರುತ್ತದೆಯೋ, ಅಲ್ಲಿ ಹಣವಿರುತ್ತದೆ!" ಅನ್ನೋ ಒನ್‌ಲೈನರ್ ಸಖತ್ ಟ್ರೆಂಡ್ ಆಗ್ತಿದೆ. ಆ ಕ್ಷಣದ ನಗುವಿಗೆ ಇಷ್ಟೊಂದು ಡಿಮ್ಯಾಂಡ್ ಇರೋದು ನಿಜಕ್ಕೂ ಅಚ್ಚರಿಯೇ ಸರಿ. ಏನೋ ಪ್ಲಾನ್ ಮಾಡಿ ಕಷ್ಟಪಟ್ಟು ದುಡಿಯೋ ನಮಗೆ, ಈ ತರಹ ನಕ್ಕರೆ ಕೋಟಿ ಸಿಗುತ್ತೆ ಅನ್ನೋದು ಒಂಥರಾ ಸ್ವರ್ಗದ ಫೀಲಿಂಗ್ ಅಲ್ವಾ? 

Latest News