ಯುದ್ಧ ಸಂತ್ರಸ್ತರ ಕಣ್ಣೀರು ಒರೆಸಿದ ದೇವತೆ - ಸೂಪರ್‌ಸ್ಟಾರ್ ಏಂಜೆಲಿನಾ ಜೋಲಿ ಲೈಫ್‌ನ ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ;

ಸಾಮಾನ್ಯವಾಗಿ ಸಿನಿಮಾ ನಟಿಯರು ಅಂದರೆ ನಮಗೆ ನೆನಪಾಗೋದು ಗ್ಲಾಮರ್, ದುಬಾರಿ ಕಾರುಗಳು, ಅವಾರ್ಡ್ ಫಂಕ್ಷನ್‌ಗಳು ಮತ್ತು ಲಕ್ಸುರಿ ಲೈಫ್‌ಸ್ಟೈಲ್ ಮಾತ್ರ. ಆದರೆ, ಅದೇ ಗ್ಲಾಮರ್ ಪ್ರಪಂಚದಿಂದ ಆಚೆ ಬಂದು, ಇಡೀ ಜಗತ್ತಿನ ಕಡು ಬಡವರು ಹಾಗೂ ಯುದ್ಧ ಸಂತ್ರಸ್ತರ ಕಣ್ಣೀರು ಒರೆಸುವ ಮೂಲಕ ಕೋಟ್ಯಾಂತರ ಜನರ ಪಾಲಿಗೆ 'ದೇವತೆ'ಯಾಗಿ ನಿಲ್ಲುವವರು ತುಂಬಾ ಅಪರೂಪ. ಅಂತಹ ಅದ್ಭುತ ವ್ಯಕ್ತಿತ್ವ ಹೊಂದಿರುವ ಹಾಲಿವುಡ್‌ನ ಎವರ್‌ಗ್ರೀನ್ ಸೂಪರ್‌ಸ್ಟಾರ್ ಅಂದರೆ ಅದು ಏಂಜೆಲಿನಾ ಜೋಲಿ (Angelina Jolie).

ರೀಲ್ ಹೀರೊ ಮಾತ್ರವಲ್ಲ ರಿಯಲ್ ದೇವತೆ;
ರೀಲ್ ಹೀರೊ ಮಾತ್ರವಲ್ಲ ರಿಯಲ್ ದೇವತೆ;

ಏಂಜೆಲಿನಾ ಜೋಲಿ ಎಂದರೆ ಕೇವಲ ಸೌಂದರ್ಯದ ಗಣಿಯಲ್ಲ, ಆಕೆ ಧೈರ್ಯ ಮತ್ತು ಕರುಣೆಯ ಸಾಕ್ಷಾತ್ ರೂಪ. ಇವತ್ತಿಗೂ ಗೂಗಲ್, ಇನ್‌ಸ್ಟಾಗ್ರಾಮ್ ಅಥವಾ ಮ್ಯಾಗಜಿನ್‌ಗಳ ಮುಖಪುಟಗಳಲ್ಲಿ ಏಂಜೆಲಿನಾ ಜೋಲಿ ಅವರ ಸಿನಿಮಾಗಳಿಗಿಂತ ಹೆಚ್ಚಾಗಿ ಅವರ ಸಮಾಜಸೇವೆ ಮತ್ತು ಧೈರ್ಯಶಾಲಿ ನಿರ್ಧಾರಗಳೇ ಸದಾ ಟ್ರೆಂಡ್ ಆಗಿರುತ್ತವೆ. ಹಾಗಾದರೆ, ಹಾಲಿವುಡ್‌ನ ಒಬ್ಬ ಬಂಡಾಯ ನಟಿಯಾಗಿ ಎಂಟ್ರಿ ಕೊಟ್ಟ ಈ ಬೆಂಕಿ ಕಣ್ಣಿನ ಸುಂದರಿ, ಜಾಗತಿಕ ಮಟ್ಟದ ಮಾನವೀಯತೆಯ ಪ್ರತೀಕವಾಗಿದ್ದು ಹೇಗೆ? ಇಲ್ಲಿದೆ ನೋಡಿ ಅವರ ಕಂಪ್ಲೀಟ್ ಸ್ಟೋರಿ.

ಸ್ಟಾರ್ ಕಿಡ್ ಆಗಿದ್ದರೂ ಕಣ್ಣೀರಲ್ಲೇ ಕಳೆದ ಬಾಲ್ಯ!

ಏಂಜೆಲಿನಾ ಜೋಲಿ ಅವರು 1975ರ ಜೂನ್ 4ರಂದು ಅಮೆರಿಕದ ಲಾಸ್ ಏಂಜಲೀಸ್‌ನ ಖ್ಯಾತ ಹಾಲಿವುಡ್ ಕುಟುಂಬದಲ್ಲೇ ಜನಿಸಿದರು. ಇವರ ತಂದೆ ಜಾನ್ ವಾಯ್ಟ್ ಆಸ್ಕರ್ ಪ್ರಶಸ್ತಿ ವಿಜೇತ ನಟ ಮತ್ತು ತಾಯಿ ಮಾರ್ಷೆಲಿನ್ ಬೆರ್ಟ್ರಾಂಡ್ ಕೂಡ ಖ್ಯಾತ ನಟಿ.

ಹೊರಗಿನ ಜಗತ್ತಿಗೆ ಏಂಜೆಲಿನಾ ದೊಡ್ಡ ಸ್ಟಾರ್ ಮಗಳಾಗಿ ಕಾಣಿಸಿಕೊಂಡರೂ, ಅವರ ಬಾಲ್ಯ ಮಾತ್ರ ತುಂಬಾ ಕಷ್ಟ ಮತ್ತು ನೋವಿನಿಂದ ಕೂಡಿತ್ತು. ತಂದೆ-ತಾಯಿಯ ನಡುವಿನ ಜಗಳ, ಕುಟುಂಬದ ಒತ್ತಡಗಳಿಂದಾಗಿ ಅವರು ಬಾಲ್ಯದಲ್ಲಿ ತೀವ್ರ ಏಕಾಂತವನ್ನು ಅನುಭವಿಸಿದರು. ಟೀನೇಜ್ ವಯಸ್ಸಿಗೆ ಬರುತ್ತಿದ್ದಂತೆ ತೀವ್ರ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು (Depression) ಎದುರಿಸಿದ ಏಂಜೆಲಿನಾ, "ನಾನು ಸಮಾಜದಿಂದ ಸಂಪೂರ್ಣವಾಗಿ ದೂರವಿದ್ದಂತೆ ಅನುಭವಿಸುತ್ತಿದ್ದೆ" ಎಂದು ತಮ್ಮ ಕಹಿ ದಿನಗಳನ್ನು ಬಹಿರಂಗವಾಗಿಯೇ ಹಂಚಿಕೊಂಡಿದ್ದಾರೆ.

ಗ್ಲಾಮರ್ ಆಚೆಯ ಮಾನವೀಯತೆ - ಸಿನಿಮಾ ನಟಿಯರು ಅಂದರೆ ದುಬಾರಿ ಕಾರು, ಲಕ್ಸುರಿ ಲೈಫ್ ಅಂದುಕೊಳ್ಳುವ ಕಾಲದಲ್ಲಿ, ಯುದ್ಧ ಸಂತ್ರಸ್ತರು ಹಾಗೂ ಕಡು ಬಡವರ ಕಣ್ಣೀರು ಒರೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಮಾನವೀಯತೆಯ ಪ್ರತೀಕವಾಗಿ ನಿಂತವರು ಏಂಜೆಲಿನಾ ಜೋಲಿ.

ಸ್ಟಾರ್ ಕಿಡ್ ಆದ್ರೂ ಕಣ್ಣೀರಿನ ಬಾಲ್ಯ - 1975ರ ಜೂನ್ 4ರಂದು ಲಾಸ್ ಏಂಜಲೀಸ್‌ನ ಖ್ಯಾತ ನಟ ಜಾನ್ ವಾಯ್ಟ್ ಮತ್ತು ನಟಿ ಮಾರ್ಷೆಲಿನ್ ಬೆರ್ಟ್ರಾಂಡ್ ದಂಪತಿಯ ಮಗಳಾಗಿ ಜನಿಸಿದರೂ ಇವರ ಬಾಲ್ಯ ಸುಖವಾಗಿರಲಿಲ್ಲ. ಪೋಷಕರ ನಡುವಿನ ಜಗಳದಿಂದಾಗಿ ತೀವ್ರ ಒಂಟಿತನ ಅನುಭವಿಸಿ, ಟೀನೇಜ್‌ನಲ್ಲಿ ಭೀಕರ ಡಿಪ್ರೆಷನ್‌ಗೆ ಒಳಗಾಗಿದ್ದರು.

ಆರಂಭದಲ್ಲೇ ಆಸ್ಕರ್ ಅಬ್ಬರ - 1990ರ ದಶಕದಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ಆರಂಭದಲ್ಲೇ ಅತ್ಯಂತ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡರು. 'ಜಿಯಾ' ಮತ್ತು 'ಗರ್ಲ್, ಇಂಟರಪ್ಟೆಡ್' ಚಿತ್ರಗಳ ಅದ್ಭುತ ನಟನೆಗಾಗಿ ಸಣ್ಣ ವಯಸ್ಸಿನಲ್ಲೇ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

ವಿಶ್ವದ ನಂಬರ್ ಒನ್ ನಟಿ - 'ಲಾರಾ ಕ್ರಾಫ್ಟ್ - ಟಾಂಬ್ ರೈಡರ್', 'ಮಿಸ್ಟರ್ ಅಂಡ್ ಮಿಸಸ್ ಸ್ಮಿತ್', 'ವಾಂಟೆಡ್' ಮತ್ತು 'ಮಾಲೆಫಿಸೆಂಟ್' ನಂತಹ ಜಾಗತಿಕ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿ, ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಂಬರ್ ಒನ್ ಮಹಿಳಾ ಸೂಪರ್‌ಸ್ಟಾರ್ ಆಗಿ ಇತಿಹಾಸ ಸೃಷ್ಟಿಸಿದರು.

ಏಳುಬೀಳುಗಳ ವೈಯಕ್ತಿಕ ಜೀವನ - ಇವರ ಪರ್ಸನಲ್ ಲೈಫ್ ಸಾಕಷ್ಟು ಏರುಪೇರುಗಳಿಂದ ಕೂಡಿತ್ತು. ಬಿಲ್ಲಿ ಬಾಬ್ ಥಾರ್ನ್‌ಟನ್ ಹಾಗೂ ಹಾಲಿವುಡ್ ಹ್ಯಾಂಡ್ಸಮ್ ಸ್ಟಾರ್ ಬ್ರಾಡ್ ಪಿಟ್ ಜೊತೆಗಿನ ಮದುವೆ ಮತ್ತು ವಿಚ್ಛೇದನ (Divorce) ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡಿದ್ದವು.

ಕ್ಯಾನ್ಸರ್ ಜಾಗೃತಿಯ ನಾಯಕಿ - ತಮಗೆ ಬಂದಿದ್ದ ಕ್ಯಾನ್ಸರ್ ಕಾಯಿಲೆಯ ಭೀತಿಯನ್ನು ಎದುರಿಸಿ, ಅದಕ್ಕಾಗಿ ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯ ಬಗ್ಗೆ ಸಾರ್ವಜನಿಕವಾಗಿ ಮುಕ್ತವಾಗಿ ಮಾತನಾಡುವ ಮೂಲಕ ಇಡೀ ವಿಶ್ವದ ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಮೂಡಿಸಿದ ಧೀಮಂತೆ ಈಕೆ.

ವಿಶ್ವಸಂಸ್ಥೆಯ ರಾಯಭಾರಿಯಾಗಿ ಕರುಣೆಯ ಕಾಯಕ - ವೈಯಕ್ತಿಕ ಜೀವನದ ಬಿರುಗಾಳಿಗಳ ಮಧ್ಯೆಯೂ ಇವರು ವಿಶ್ವಸಂಸ್ಥೆಯ (UNHCR) ವಿಶೇಷ ರಾಯಭಾರಿಯಾಗಿ ಅದ್ಭುತ ಕೆಲಸ ಮಾಡಿದರು. ಶೂಟಿಂಗ್ ಸೆಟ್‌ ಬಿಟ್ಟು ಸಿರಿಯಾ, ಆಫ್ರಿಕಾ ಮತ್ತು ಏಷ್ಯಾದ ಭೀಕರ ಯುದ್ಧಪೀಡಿತ ಪ್ರದೇಶಗಳು ಹಾಗೂ ಶರಣಾರ್ಥಿ ಶಿಬಿರಗಳಿಗೆ ನೇರವಾಗಿ ಭೇಟಿ ನೀಡಿ ನೆರವಾದರು.

ಅನಾಥ ಮಕ್ಕಳ ಪಾಲಿನ ತಾಯಿ - ಕೇವಲ ಕೋಟ್ಯಾಂತರ ರೂಪಾಯಿ ಹಣ ಸಹಾಯ ಮಾಡುವುದಷ್ಟೇ ಅಲ್ಲದೆ, ವಿವಿಧ ದೇಶಗಳ ಅನಾಥ ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ಪಡೆದು, ಸ್ವಂತ ಮಕ್ಕಳಂತೆ ಪ್ರೀತಿಯಿಂದ ಸಾಕಿ ಬೆಳೆಸುವ ಮೂಲಕ ತಾವೊಬ್ಬ 'ರಿಯಲ್ ಲೈಫ್ ಹೀರೊ' ಎಂಬುದನ್ನು ಸಾಬೀತುಪಡಿಸಿದರು.

ಇಂದಿಗೂ ಇನ್ಸ್‌ಪಿರೇಷನ್ - ಸದ್ಯ ಗ್ಲಾಮರ್ ಪ್ರಪಂಚದಿಂದ ಕೊಂಚ ಬ್ರೇಕ್ ಪಡೆದಿರುವ ಏಂಜೆಲಿನಾ ಜೋಲಿ, ಸಿನಿಮಾಗಳ ನಿರ್ದೇಶನ ಹಾಗೂ ಜಾಗತಿಕ ಮಾನವ ಹಕ್ಕುಗಳ ಹೋರಾಟದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಏಷ್ಟೇ ಕಷ್ಟಗಳು ಬಂದರೂ ಮನುಷ್ಯತ್ವವನ್ನು ಬಿಡಬಾರದು ಎಂದು ತೋರಿಸಿಕೊಟ್ಟ ಇವರ ಬದುಕು ಇಂದಿಗೂ ಕೋಟ್ಯಾಂತರ ಜನರಿಗೆ ದೊಡ್ಡ ಪ್ರೇರಣೆ.

Latest News