Sunday, Nov 22, 2026
|
Advertisement

ಸ್ನಾತಕೋತ್ತರ ಪದವೀಧರರಿಗೆ ಸಂಶೋಧನೆಗೆ ಅವಕಾಶ- ಸಿಯುಕೆಯಿಂದ ಪಿಎಚ್.ಡಿ. ಪ್ರವೇಶಾತಿ ಪ್ರಕಟಣೆ !!

ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (Central University of Karnataka – CUK) ಸಿಹಿಸುದ್ದಿ ನೀಡಿದೆ. 2026-27ನೇ ಶೈಕ್ಷಣಿಕ ಸಾಲಿನ ವಿವಿಧ ವಿಭಾಗಗಳ ಪಿಎಚ್.ಡಿ. (Ph.D.) ಪ್ರವೇಶಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ಪ್ರವೇಶಾತಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಉನ್ನತ ಶಿಕ್ಷಣ, ಸಂಶೋಧನಾ ಪ್ರವೇಶಾತಿ. | Photo Credit: https://i.ytimg.com/vi/Tz-ozaJRpao/sddefault.jpg
ಉನ್ನತ ಶಿಕ್ಷಣ, ಸಂಶೋಧನಾ ಪ್ರವೇಶಾತಿ. | Photo Credit: https://i.ytimg.com/vi/Tz-ozaJRpao/sddefault.jpg

ವಿಶ್ವವಿದ್ಯಾಲಯವು 2026ರ ನವೆಂಬರ್ 6ರಂದು ಪ್ರವೇಶಾತಿ ಸೂಚನೆ ಮತ್ತು ಅರ್ಜಿ ನೋಂದಣಿ ಲಿಂಕ್ ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ನವೆಂಬರ್ 27ರೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಪಿಎಚ್.ಡಿ. ಸಂಶೋಧನೆ ಕೈಗೊಳ್ಳಲು ಬಯಸುವ ಸ್ನಾತಕೋತ್ತರ ಪದವೀಧರರಿಗೆ ಇದೊಂದು ಉತ್ತಮ ಅವಕಾಶವಾಗಿದೆ. 

Advertisement

ಯಾವೆಲ್ಲ ವಿಭಾಗಗಳಲ್ಲಿ ಪಿಎಚ್.ಡಿ. ಮಾಡಲು ಅವಕಾಶ?

ವಿಶ್ವವಿದ್ಯಾಲಯವು ವಿವಿಧ ವಿಷಯಗಳಲ್ಲಿ ಸಂಶೋಧನೆ ಕೈಗೊಳ್ಳಲು ಅವಕಾಶ ನೀಡಿದೆ. ಪ್ರಮುಖ ವಿಭಾಗಗಳು ಹೀಗಿವೆ:

  •  ಕನ್ನಡ, ಇಂಗ್ಲಿಷ್, ಹಿಂದಿ, ಅರೇಬಿಕ್ ಮತ್ತು ಸ್ಪ್ಯಾನಿಷ್
  •  ಇತಿಹಾಸ, ಭೂಗೋಳಶಾಸ್ತ್ರ ಮತ್ತು ಪುರಾತತ್ವ
  •  ಅರ್ಥಶಾಸ್ತ್ರ, ವಾಣಿಜ್ಯ ಮತ್ತು ನಿರ್ವಹಣೆ
  •  ಮನೋವಿಜ್ಞಾನ, ಸಮಾಜಕಾರ್ಯ ಮತ್ತು ಸಾರ್ವಜನಿಕ ಆಡಳಿತ
  •  ಶಿಕ್ಷಣ, ಕಾನೂನು ಮತ್ತು ಮಾಧ್ಯಮ ಅಧ್ಯಯನ
  •  ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ
  •  ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಜೆನೆಟಿಕ್ಸ್
  •  ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್
  • ಪ್ರವಾಸೋದ್ಯಮ ನಿರ್ವಹಣೆ
  • ಸಂಗೀತ, ಜಾನಪದ ಮತ್ತು ಬುಡಕಟ್ಟು ಅಧ್ಯಯನ

ವಿಭಾಗವಾರು ಅರ್ಹತೆ ಮತ್ತು ಶೈಕ್ಷಣಿಕ ವಿಷಯಗಳ ವಿವರಗಳನ್ನು ವಿಶ್ವವಿದ್ಯಾಲಯದ ಅಧಿಕೃತ ಪ್ರವೇಶಾತಿ ಸೂಚನೆಯಲ್ಲಿ ನೀಡಲಾಗಿದೆ. 

ಶೈಕ್ಷಣಿಕ ಅರ್ಹತೆ ಏನಿರಬೇಕು?

ಪಿಎಚ್.ಡಿ. ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಅಧಿಸೂಚನೆಯಲ್ಲಿ ಸೂಚಿಸಿರುವ ಸಮಾನ ಅರ್ಹತೆಯನ್ನು ಹೊಂದಿರಬೇಕು.

ಸಾಮಾನ್ಯವಾಗಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರಬೇಕು. ಎಸ್‌ಸಿ, ಎಸ್‌ಟಿ, ಒಬಿಸಿ (ನಾನ್‌ಕ್ರೀಮಿ ಲೇಯರ್), ಪಿಡಬ್ಲ್ಯೂಡಿ ಹಾಗೂ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಇತರ ಅರ್ಹ ವರ್ಗಗಳಿಗೆ ಶೇ.50 ಅಂಕಗಳ ಮಾನದಂಡ ಅನ್ವಯಿಸುತ್ತದೆ. ಕೆಲವು ತಾಂತ್ರಿಕ ವಿಭಾಗಗಳಿಗೆ ನಿರ್ದಿಷ್ಟ ಎಂಜಿನಿಯರಿಂಗ್ ಪದವಿಗಳ ಅರ್ಹತೆಯನ್ನೂ ಸೂಚಿಸಲಾಗಿದೆ.

Advertisement

ಇದಲ್ಲದೆ ಯುಜಿಸಿ-ನೆಟ್, ಜೆಆರ್‌ಎಫ್, ಸಿಎಸ್‌ಐಆರ್-ನೆಟ್, ಗೇಟ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಹಾಗೂ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಫೆಲೋಶಿಪ್ ಹೊಂದಿರುವವರಿಗೆ ನೇರ ಸಂದರ್ಶನಕ್ಕೆ ಹಾಜರಾಗುವ ಅವಕಾಶವಿದೆ. 

ಅರ್ಜಿ ಶುಲ್ಕ ಎಷ್ಟು?

ವಿಶ್ವವಿದ್ಯಾಲಯದ ಅಧಿಸೂಚನೆಯ ಪ್ರಕಾರ ಅರ್ಜಿ ನೋಂದಣಿಗೆ ಮರುಪಾವತಿಸಲಾಗದ ಶುಲ್ಕ ನಿಗದಿಪಡಿಸಲಾಗಿದೆ.

           ವರ್ಗ  -   ಅರ್ಜಿ ಶುಲ್ಕ

  • ಸಾಮಾನ್ಯ, ಒಬಿಸಿ (ಎನ್‌ಸಿಎಲ್), ಇಡಬ್ಲ್ಯೂಎಸ್  -   ₹500
  • ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ                                -   ₹100



ಪ್ರಮುಖ ದಿನಾಂಕಗಳು

  • ಆನ್‌ಲೈನ್ ನೋಂದಣಿ ಆರಂಭ - ನವೆಂಬರ್ 6
  • ಅರ್ಜಿ ಸಲ್ಲಿಸಲು ಕೊನೆಯ ದಿನ - 27 ನವೆಂಬರ್ 2026
  • ಅರ್ಹ ಅಭ್ಯರ್ಥಿಗಳ ಪಟ್ಟಿ - 30 ನವೆಂಬರ್ 2026
  • ಅರ್ಹತೆ ಕುರಿತ ಆಕ್ಷೇಪಣನ.-  30 – ಡಿ. 1
  • ಸಂದರ್ಶನ ದಿನಾಂಕ - ಡಿ. 3–9, 2026
  •  ಆಯ್ಕೆ ಪಟ್ಟಿ ಪ್ರಕಟಣೆ - 10 ಡಿಸೆಂಬರ್ 2026
  •  ಪ್ರವೇಶಾತಿ ಮತ್ತು ಶುಲ್ಕ ಪಾವತಿ - 11 ಡಿಸೆಂಬರ್ 2026
  •  ತರಗತಿಗಳ ಆರಂಭ - 4 ಜನವರಿ 2027

ವಿಶ್ವವಿದ್ಯಾಲಯದ ಅಧಿಸೂಚನೆಯಲ್ಲಿನ ತಾತ್ಕಾಲಿಕ ವೇಳಾಪಟ್ಟಿ.


ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಿದೆ?

ಅಭ್ಯರ್ಥಿಗಳ ಆಯ್ಕೆಗೆ ಒಟ್ಟು 100 ಅಂಕಗಳ ಮೌಲ್ಯಮಾಪನ ವ್ಯವಸ್ಥೆ ರೂಪಿಸಲಾಗಿದೆ. ಇದರಲ್ಲಿ ಶೇ.70ರಷ್ಟು ಅಂಕಗಳನ್ನು ರಾಷ್ಟ್ರೀಯ ಮಟ್ಟದ ಅರ್ಹತೆ, ಸ್ನಾತಕೋತ್ತರ ಪದವಿಯ ಅಂಕಗಳು ಮತ್ತು ಸಂಬಂಧಪಟ್ಟ ವಿಭಾಗ ನಡೆಸುವ ಆನ್‌ಲೈನ್ ಪರೀಕ್ಷೆಯ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಉಳಿದ ಶೇ.30ರಷ್ಟು ಅಂಕಗಳನ್ನು ಸಂಶೋಧನಾ ವಿಷಯದ ಪ್ರಸ್ತುತಿ ಮತ್ತು ಮೌಖಿಕ ಸಂದರ್ಶನಕ್ಕೆ ನೀಡಲಾಗುತ್ತದೆ.

ಸಂಯೋಜಿತ ಮೌಲ್ಯಮಾಪನದಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ ಶೇ.50 ಹಾಗೂ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಮೀಸಲಾತಿ ವರ್ಗಗಳ ಅಭ್ಯರ್ಥಿಗಳು ಶೇ.45 ಅಂಕಗಳನ್ನು ಗಳಿಸಬೇಕು. ನಂತರ ಅರ್ಹತಾ ಮತ್ತು ಮೆರಿಟ್ ಆಧಾರದ ಮೇಲೆ ಪ್ರವೇಶಾತಿ ನೀಡಲಾಗುತ್ತದೆ. 

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.
1. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ತೆರೆಯಿರಿ.
2. Ph.D. Admission 2026-27 ವಿಭಾಗವನ್ನು ಆಯ್ಕೆಮಾಡಿ.
3. ಪ್ರವೇಶಾತಿ ಸೂಚನೆ ಹಾಗೂ ಅರ್ಹತಾ ನಿಯಮಗಳನ್ನು ಓದಿಕೊಳ್ಳಿ.
4. ಆನ್‌ಲೈನ್ ನೋಂದಣಿ ಪೋರ್ಟಲ್‌ಗೆ ಭೇಟಿ ನೀಡಿ.
5. ಅಗತ್ಯ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ.
6. ಕೇಳಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
7. ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಿ.

ಹೀಗಾಗಿ, ಸಂಶೋಧನಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಕನಸು ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಕೊನೆಯ ದಿನಾಂಕದವ

Comments