Monday, Oct 19, 2026
|

ಇರಾನ್ ಅಟ್ಟಹಾಸ - ಅಮೆರಿಕದ ತೈಲ ನೌಕೆಗಳ ಮೇಲೆ ಭೀಕರ ದಾಳಿ, ಸುಳ್ಳಾಯ್ತು ದೊಡ್ಡಣ್ಣನ ಲೆಕ್ಕಾಚಾರ!!

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಸ್ಫೋಟಕವಾಗುತ್ತಿದೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಇರಾನ್ ಅಮೆರಿಕ ನಡುವಿನ ಶೀತಲ ಸಮರ ಈಗ ನೇರ ಸಂಘರ್ಷಕ್ಕೆ ತಿರುಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ತೈಲ ನೌಕೆಗಳ ಮೇಲೆ ಇರಾನ್ ಪಡೆಗಳು ಭೀಕರ ದಾಳಿ ನಡೆಸುತ್ತಿವೆ ಎಂಬ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಪಾಶ್ಚಿಮಾತ್ಯ ಮಾಧ್ಯಮಗಳು ಈ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿವೆ ಎಂಬ ಆರೋಪಗಳ ನಡುವೆ, ಈ ಸುದ್ಧಿ ಈಗ ಸೋಷಿಯಲ್ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ.

ಅಮೆರಿಕದ ತೈಲ ನೌಕೆಗಳ ಮೇಲೆ ಇರಾನ್ ಪಡೆಗಳ ದಾಳಿ!!
ಅಮೆರಿಕದ ತೈಲ ನೌಕೆಗಳ ಮೇಲೆ ಇರಾನ್ ಪಡೆಗಳ ದಾಳಿ!!

ಹಾರ್ಮುಜ್ ಜಲಸಂಧಿಯು ಜಗತ್ತಿನ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಪ್ರಪಂಚದ ಬಹುಪಾಲು ಕಚ್ಚಾ ತೈಲವು ಇದೇ ಮಾರ್ಗದ ಮೂಲಕ ರಫ್ತಾಗುತ್ತದೆ. ಇಲ್ಲಿ ಅಮೆರಿಕ ತನ್ನ ಹಿಡಿತ ಹೊಂದಿದೆ ಎಂದು ಹೇಳಿಕೊಳ್ಳುತ್ತಲೇ ಬಂದಿದೆ. ಆದರೆ, ಇರಾನ್ ಈಗ ಅಮೆರಿಕದ ಈ ಪ್ರತಿಷ್ಠೆಗೆ ಪೆಟ್ಟು ನೀಡಿದಂತೆ ತೋರುತ್ತಿದೆ. ಅಮೆರಿಕದ ತೈಲ ಟ್ಯಾಂಕರ್‌ಗಳನ್ನ ಗುರಿಯಾಗಿಸಿಕೊಂಡು ಇರಾನ್ ನಡೆಸುತ್ತಿರುವ ದಾಳಿಗಳು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭೀತಿ ಹುಟ್ಟಿಸಿವೆ.

ಕೇವಲ ಒಂದು ದಿನದ ಹಿಂದೆಯಷ್ಟೇ ಅಮೆರಿಕದ ರಕ್ಷಣಾ ಇಲಾಖೆಯು "ಹಾರ್ಮುಜ್ ಜಲಸಂಧಿ ನಮ್ಮ ಸಂಪೂರ್ಣ ನಿಯಂತ್ರಣದಲ್ಲಿದೆ" ಎಂದು ಹೇಳಿಕೆ ನೀಡಿತ್ತು. ಆದರೆ, ಈ ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಅಮೆರಿಕದ ನೌಕೆಗಳು ಸುಟ್ಟು ಹೋಗುತ್ತಿರುವ ದೃಶ್ಯಗಳು ವರದಿಯಾಗುತ್ತಿರುವುದು ಅಮೆರಿಕದ ಮಿಲಿಟರಿ ಯೋಜನೆಯ ದೊಡ್ಡ ವೈಫಲ್ಯ ಎಂದು ವಿಶ್ಲೇಷಕರು ಬಣ್ಣಿಸುತ್ತಿದ್ದಾರೆ. ಇದನ್ನು "ಆಪರೇಷನ್ ಎಪಿಕ್ ಫಕ್-ಅಪ್" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ ಮಾಡಲಾಗುತ್ತಿದೆ.

ಗಮನಾರ್ಹ ಸಂಗತಿಯೆಂದರೆ, ಪಾಶ್ಚಿಮಾತ್ಯ ಪ್ರಮುಖ ಮಾಧ್ಯಮಗಳು ಈ ಘಟನೆಯ ಬಗ್ಗೆ ಹೆಚ್ಚಿನ ವರದಿಗಳನ್ನು ನೀಡಲು ಹಿಂಜರಿಯುತ್ತಿವೆ. ಅಮೆರಿಕದ ಮಿಲಿಟರಿ ಶಕ್ತಿಗೆ ಧಕ್ಕೆಯಾಗುವ ಸುದ್ದಿಗಳು ಹೊರಬರದಂತೆ ತಡೆಯಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಈ ದಾಳಿಗಳು ಮುಂದುವರಿದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜಾಗತಿಕವಾಗಿ ಗಗನಕ್ಕೇರಲಿವೆ. ಇದು ಕೇವಲ ಎರಡು ದೇಶಗಳ ನಡುವಿನ ಯುದ್ಧವಾಗಿ ಉಳಿಯದೆ, ಇಡೀ ವಿಶ್ವದ ಆರ್ಥಿಕತೆಯ ಮೇಲೆ ಕರಾಳ ಛಾಯೆ ಬೀರಲಿದೆ.

ಇರಾನ್‌ನ ಈ ದಾಳಿಗಳಿಗೆ ಅಮೆರಿಕ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ. ಈಗಾಗಲೇ ಈ ಪ್ರದೇಶದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಅಮೆರಿಕ ತನ್ನ ನೌಕಾಪಡೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಆದರೆ, ಇರಾನ್‌ನ ಡ್ರೋನ್ ಮತ್ತು ಮಿಸೈಲ್ ತಂತ್ರಜ್ಞಾನವು ಅಮೆರಿಕದ ಸುಧಾರಿತ ರಕ್ಷಣಾ ವ್ಯವಸ್ಥೆಗಳಿಗೇ ಸವಾಲು ಹಾಕುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.  

Comments

Leave a Comment

Latest News