Tuesday, Oct 20, 2026
|

ಇರಾನ್ vs ಅಮೆರಿಕ ಹೈಡ್ರಾಮಾ - ಹರ್ಮೂಜ್ ಜಲಸಂಧಿಯಲ್ಲಿ ಮತ್ತೆ ಶುರುವಾಯ್ತು ಯುದ್ಧದ ಭೀತಿ!

ಗಲ್ಫ್ ಪ್ರದೇಶದಲ್ಲಿ ಜಟಾಪಟಿ ಜೋರಾಗ್ತಿದೆ! ಹರ್ಮೂಜ್ ಜಲಸಂಧಿ (Strait of Hormuz) ಹತ್ರ ಅಮೆರಿಕ ಮಿಲಿಟರಿ ಇತ್ತೀಚೆಗೆ ದಾಳಿ ಮಾಡಿದ್ದಕ್ಕೆ ಇರಾನ್ ಕೆಂಡಾಮಂಡಲವಾಗಿದೆ. "ನಮ್ಮ ತಂಟೆಗೆ ಬಂದ್ರೆ ಸುಮ್ಮನಿರಲ್ಲ, ಜೋಕೆ!" ಅಂತ ಖಡಕ್ ವಾರ್ನಿಂಗ್ ಕೊಟ್ಟಿದೆ. ಇದರಿಂದಾಗಿ ಎರಡು ದೇಶಗಳ ನಡುವೆ ಇದ್ದ ಸ್ವಲ್ಪ ಸಾಫ್ಟ್ ವಾತಾವರಣ ಈಗ ಮತ್ತೆ ಕಾವೇರಿದೆ.

ಅಮೆರಿಕದ ಅಟ್ಯಾಕ್ ಬೆನ್ನಲ್ಲೇ ಇರಾನ್ ಕೆಂಡಾಮಂಡಲ! | Photo Credit: https://www.lokmattimes.com
ಅಮೆರಿಕದ ಅಟ್ಯಾಕ್ ಬೆನ್ನಲ್ಲೇ ಇರಾನ್ ಕೆಂಡಾಮಂಡಲ! | Photo Credit: https://www.lokmattimes.com

ಏನಿದು ಹರ್ಮೂಜ್ ರಗಳೆ?

ವಿಷಯ ಏನಪ್ಪಾ ಅಂದ್ರೆ, ಸೋಮವಾರದ ದಿನ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಇರಾನ್‌ನ ದಕ್ಷಿಣ ಭಾಗದಲ್ಲಿರೋ ಮಿಸೈಲ್ ಲಾಂಚ್ ಸೈಟ್‌ಗಳು ಮತ್ತು ಕೆಲವು ಬೋಟ್‌ಗಳ ಮೇಲೆ ಬಾಂಬ್ ಹಾಕಿದೆ. ಅಮೆರಿಕದ ಪ್ರಕಾರ, ಆ ಬೋಟ್‌ಗಳು ಸಮುದ್ರದಲ್ಲಿ ಮೈನ್‌ಗಳನ್ನು (Naval Mines) ಇಡಲು ಪ್ಲಾನ್ ಮಾಡ್ತಿದ್ವು. "ನಮ್ಮ ಸೈನಿಕರ ರಕ್ಷಣೆಗಾಗಿ ನಾವು ಸೆಲ್ಫ್-ಡಿಫೆನ್ಸ್ ದಾಳಿ ಮಾಡಬೇಕಾಯ್ತು" ಅಂತ ಅಮೆರಿಕದ ಸ್ಪೋಕ್ಸ್ ಪರ್ಸನ್ ಟಿಮ್ ಹಾಕಿನ್ಸ್ ಹೇಳಿದ್ದಾರೆ.

ಆದ್ರೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇದಕ್ಕೆ ಭರ್ಜರಿ ಕೌಂಟರ್ ಕೊಟ್ಟಿದೆ. "ಈ ಜಲಸಂಧಿ ನಮ್ಮ ಕಂಟ್ರೋಲ್‌ನಲ್ಲಿದೆ. ಇನ್ನು ಮುಂದೆ ಏನಾದ್ರೂ ಅಮೆರಿಕ ಈ ತರಹದ ಕಿರಿಕ್ ಮಾಡಿದ್ರೆ, ನಾವು ಸರಿಯಾದ ಪಾಠ ಕಲಿಸ್ತೀವಿ, ಕ್ರಷಿಂಗ್ ರೆಸ್ಪಾನ್ಸ್ ಕೊಡ್ತೀವಿ" ಅಂತ ಇರಾನ್ ಮೀಡಿಯಾಗಳಲ್ಲಿ ಅಬ್ಬರಿಸಿದೆ.

ಕದನ ವಿರಾಮಕ್ಕೆ ಕಂಟಕ!

ನಿಮಗೆ ಗೊತ್ತಿರಲಿ, ಕಳೆದ ಏಪ್ರಿಲ್ 8 ರಿಂದ ಇವೆರಡು ದೇಶಗಳ ಮಧ್ಯೆ ಒಂದು ಸಣ್ಣ ಕದನ ವಿರಾಮ (Ceasefire) ನಡಿತಾ ಇತ್ತು. ಇಬ್ಬರ ನಡುವೆ ಮಾತುಕತೆ ನಡೆಸಿ ಗಲಾಟೆ ಮುಗಿಸೋಣ ಅನ್ಕೊಂಡಿರೋವಾಗ್ಲೇ ಈ ಅಮೆರಿಕದ ಅಟ್ಯಾಕ್ ಎಲ್ಲವನ್ನೂ ಹಾಳು ಮಾಡೋ ತರ ಕಾಣ್ತಿದೆ. ಗಲ್ಫ್ ರೀಜನ್‌ನಲ್ಲಿ ನೆಮ್ಮದಿ ಇಲ್ಲಾಂದ್ರೆ ಇಡೀ ವರ್ಲ್ಡ್‌ನ ಆಯಿಲ್ ಮತ್ತು ಗ್ಲೋಬಲ್ ಬಿಸಿನೆಸ್‌ಗೆ ದೊಡ್ಡ ಪೆಟ್ಟು ಬೀಳುತ್ತೆ ಅನ್ನೋದೇ ಎಲ್ಲರ ಟೆನ್ಷನ್.

ಇರಾನ್ ಕೊಡ್ತಿರೋ ಲೆಕ್ಕಾಚಾರ ಏನು?

ಇರಾನ್ ನೇವಿ ಹೇಳ್ತಿರೋ ಪ್ರಕಾರ, ಈ ಗಲಾಟೆ ಮಧ್ಯೆಯೂ ಕಳೆದ 24 ಗಂಟೆಗಳಲ್ಲಿ 25 ದೊಡ್ಡ ಆಯಿಲ್ ಟ್ಯಾಂಕರ್ ಮತ್ತು ಕಂಟೈನರ್ ಶಿಪ್‌ಗಳು ಅವರ ಅಂಡರ್‌ನಲ್ಲೇ ಸೇಫ್ ಆಗಿ ಪಾಸ್ ಆಗಿವೆಯಂತೆ. ಇಡೀ ಜಲಸಂಧಿಯ ಮೇಲೆ ನಮ್ಮದೇ ಸೂಪರ್ ವಿಜನ್ ಇದೆ ಅಂತ ಇರಾನ್ ಕಾಲರ್ ಎಗರಿಸ್ತಾ ಇದೆ.

ಆದ್ರೆ ಇನ್ನೊಂದ್ ಕಡೆ, ಅಮೆರಿಕ ಇರಾನ್‌ನ ಪೋರ್ಟ್‌ಗಳ ಮೇಲೆ ನೇವಲ್ ಬ್ಲಾಕೇಡ್ (ನೌಕಾ ದಿಗ್ಬಂಧನ) ಮಾಡಿದೆ. ಅಂದ್ರೆ ಇರಾನ್ ಕಡೆಗೆ ಯಾವುದೇ ಶಿಪ್ ಹೋಗದಂತೆ ತಡೆಯೊಡ್ಡಿದೆ. ಕಳೆದ ವಾರ ಅಮೆರಿಕ ಅಡ್ಡ ಹಾಕಿದ್ದಕ್ಕೆ ಸುಮಾರು 100 ಶಿಪ್‌ಗಳು ದಾರಿ ಬದಲಿಸಬೇಕಾಯ್ತು ಮತ್ತು 4 ಶಿಪ್‌ಗಳು ಜಖಂಗೊಂಡಿವೆ ಅಂತ CENTCOM ಹೇಳಿದೆ.

ಯಾಕೆ ಈ ಜಾಗ ಇಷ್ಟೊಂದು ಇಂಪಾರ್ಟೆಂಟ್?

ಹರ್ಮೂಜ್ ಜಲಸಂಧಿ ಅನ್ನೋದು ಪ್ರಪಂಚದ ಅತಿ ಮುಖ್ಯವಾದ ಎನರ್ಜಿ ಸಪ್ಲೈ ರೂಟ್. ಗಲ್ಫ್ ದೇಶಗಳಿಂದ ಬರೋ ಬಹುಪಾಲು ಕಚ್ಚಾ ತೈಲ (Crude Oil) ಇದೇ ದಾರಿಯಲ್ಲೇ ಪಾಸ್ ಆಗಬೇಕು. ಇಲ್ಲಿ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಪೆಟ್ರೋಲ್, ಡೀಸೆಲ್ ರೇಟ್ ಗಗನಕ್ಕೆ ಮುಟ್ಟುತ್ತೆ!

ಫೆಬ್ರವರಿಯಿಂದ ಶುರುವಾದ ಕಿಚ್ಚು

ಹಾಗೆ ನೋಡಿದ್ರೆ ಈ ಕಿರಿಕ್ ಇವತ್ತಿನದಲ್ಲ. ಕಳೆದ ಫೆಬ್ರವರಿ 28 ಕ್ಕೆ ಇರಾನ್ ಒಂದು ರೂಲ್ ಮಾಡಿತ್ತು. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದ್ವು ಅಲ್ವಾ? ಅದಕ್ಕೆ ಕೋಪ ಮಾಡ್ಕೊಂಡ ಇರಾನ್, "ಇನ್ಮೇಲೆ ಅಮೆರಿಕ ಅಥವಾ ಇಸ್ರೇಲ್‌ಗೆ ಲಿಂಕ್ ಇರೋ ಯಾವುದೇ ಹಡಗು ಈ ಹರ್ಮೂಜ್ ಜಲಸಂಧಿಯಲ್ಲಿ ಓಡಾಡುವಂತಿಲ್ಲ" ಅಂತ ಬ್ಯಾನ್ ಹೇರಿತ್ತು. ಅದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ತನ್ನ ನೌಕಾಪಡೆಯನ್ನಿಟ್ಟುಕೊಂಡು ಇರಾನ್ ಶಿಪ್‌ಗಳನ್ನ ತಡೆಯೋಕೆ ಶುರು ಮಾಡಿತು.

ಸದ್ಯಕ್ಕಂತೂ ಇಬ್ಬರ ನಡುವೆ ಸೈಲೆಂಟ್ ವಾರ್ ನಡೀತಿದೆ. ಇರಾನ್ ಮಾತ್ರ "ನಾವು ರೆಡಿ ಇದ್ದೀವಿ" ಅಂತ ಸನ್ನೆ ಮಾಡ್ತಿದೆ. ಅಮೆರಿಕ ಕೂಡ "ನಾವು ಸುಮ್ಮನೆ ಕೂರಲ್ಲ" ಅಂತಿದೆ. ಈ ಇಬ್ಬರ ಜಗಳ ಎಲ್ಲಿಗೆ ಹೋಗಿ ನಿಲ್ಲುತ್ತೋ, ಗ್ಲೋಬಲ್ ಮಾರ್ಕೆಟ್‌ಗೆ ಏನು ಕಾದಿದೆಯೋ ಕಾದು ನೋಡಬೇಕು. 

Comments

Leave a Comment

Latest News