Monday, Oct 19, 2026
|

ಗ್ಯಾಸ್ ಬಿಕ್ಕಟ್ಟಿಗೆ ಸರ್ಕಾರದ 'ಮಾಸ್ಟರ್ ಪ್ಲಾನ್' - ಅಡುಗೆ ಮನೆಗೆ ಇನ್ಮುಂದೆ ಇಲ್ಲ ಸಂಕಷ್ಟ!!

ಗಲ್ಫ್ ರಾಷ್ಟ್ರಗಳಲ್ಲಿನ ಯುದ್ಧದಂತಹ ಪರಿಸ್ಥಿತಿ ಮತ್ತು ಹೊರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿದ್ದರಿಂದ ಭಾರತಕ್ಕೆ ಬರಬೇಕಿದ್ದ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದನ್ನು ಸರಿಪಡಿಸಲು ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

ಸಿಲಿಂಡರ್ ಕೊರತೆಗೆ ಬ್ರೇಕ್
ಸಿಲಿಂಡರ್ ಕೊರತೆಗೆ ಬ್ರೇಕ್

1. ದೇಶೀಯ ಉತ್ಪಾದನೆಗೆ ಹೆಚ್ಚಿನ ಒತ್ತು
ಹಿಂದೆ ಭಾರತವು ಶೇ.90 ರಷ್ಟು ಗ್ಯಾಸ್ ಅನ್ನು ಆಮದು ಮಾಡಿಕೊಳ್ಳುತ್ತಿತ್ತು. ಈಗ ಬಿಕ್ಕಟ್ಟು ಎದುರಾದ ಮೇಲೆ ದೇಶದ ಪ್ರಮುಖ ತೈಲ ಕಂಪನಿಗಳಾದ BPCL, HPCL ಮತ್ತು IOCL ಗೆ ದೇಶೀಯವಾಗಿ ಎಲ್‌ಪಿಜಿ ಉತ್ಪಾದಿಸಲು ಸೂಚಿಸಲಾಗಿದೆ. ಕಳೆದ 10-12 ದಿನಗಳಲ್ಲಿ ಈ ಕಂಪನಿಗಳು ಶೇ.40 ರಷ್ಟು ಉತ್ಪಾದನೆಯನ್ನು ಹೆಚ್ಚಿಸಿವೆ. ಅಲ್ಲದೆ, ಇಲ್ಲಿ ಉತ್ಪಾದನೆಯಾದ ಗ್ಯಾಸ್ ಅನ್ನು ವಿದೇಶಕ್ಕೆ ರಫ್ತು ಮಾಡದಂತೆ ನಿರ್ಬಂಧ ಹೇರಲಾಗಿದೆ.

2. ಹೊಸ ದೇಶಗಳಿಂದ ಅನಿಲ ಆಮದು
ಕೇವಲ ಗಲ್ಫ್ ರಾಷ್ಟ್ರಗಳನ್ನು ನೆಚ್ಚಿಕೊಳ್ಳುವ ಬದಲು, ಈಗ ಪರ್ಯಾಯ ಮಾರ್ಗಗಳ ಮೂಲಕ ಬೇರೆ ದೇಶಗಳಿಂದ ಗ್ಯಾಸ್ ತರಲು ನಿರ್ಧರಿಸಲಾಗಿದೆ.

ಪ್ರಮುಖ ದೇಶಗಳು: ಅಮೆರಿಕಾ, ನಾರ್ವೇ, ಆಲ್ಜೀರಿಯಾ, ಕೆನಡಾ ಮತ್ತು ರಷ್ಯಾದಿಂದ ಆಮದು ಪ್ರಕ್ರಿಯೆ ಆರಂಭವಾಗಿದೆ.

ಅಮೆರಿಕಾದ ನೆರವು: ಅಮೆರಿಕಾದಿಂದ 20 ದೊಡ್ಡ ಗ್ಯಾಸ್ ಕ್ಯಾರಿಯರ್‌ಗಳ ಮೂಲಕ 1 ಮಿಲಿಯನ್ ಟನ್ ಗ್ಯಾಸ್ ಬರಲಿದೆ. ಈ ವರ್ಷ ಒಟ್ಟು 2.2 ಮಿಲಿಯನ್ ಟನ್ ಗ್ಯಾಸ್ ಪೂರೈಸುವಂತೆ ಅಮೆರಿಕಾಗೆ ವಿನಂತಿಸಲಾಗಿದೆ.

3. ಗೃಹ ಬಳಕೆಗೆ ಮೊದಲ ಆದ್ಯತೆ
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗಿಂತ ಮನೆಯ ಒಲೆಗಳು ಉರಿಯುವುದು ಮುಖ್ಯ ಎಂಬುದು ಸರ್ಕಾರದ ನಿಲುವು. ಹೀಗಾಗಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯನ್ನು ಸ್ವಲ್ಪ ಕಡಿತಗೊಳಿಸಿ, ಗೃಹಬಳಕೆಯ ಸಿಲಿಂಡರ್ ಸರಬರಾಜಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ.

4. ಪರ್ಯಾಯ ಇಂಧನಗಳ ಬಳಕೆಗೆ ಸಲಹೆ
ಎಲ್‌ಪಿಜಿ ಮೇಲಿನ ಅವಲಂಬನೆ ತಗ್ಗಿಸಲು ಸರ್ಕಾರ ಕೆಲವು ಸಲಹೆಗಳನ್ನು ನೀಡಿದೆ:

ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG): ನಗರ ಪ್ರದೇಶದ ಜನರು ಪಿಎನ್‌ಜಿ ಸಂಪರ್ಕ ಪಡೆಯಲು ಉತ್ತೇಜಿಸಲಾಗುತ್ತಿದೆ. ಕೆಲವು ಕಂಪನಿಗಳು 500 ರೂ. ಮೌಲ್ಯದ ಗ್ಯಾಸ್ ಅನ್ನು ಉಚಿತವಾಗಿ ನೀಡುತ್ತಿವೆ.

ಹೋಟೆಲ್‌ಗಳಿಗೆ ಸೂಚನೆ: ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮುಂದಿನ ಒಂದು ತಿಂಗಳು ಸೀಮೆಎಣ್ಣೆ, ಕಲ್ಲಿದ್ದಲು ಅಥವಾ ಬಯೋಮಾಸ್ ಬಳಸಲು ಅನುಮತಿ ನೀಡಲಾಗಿದೆ.

5. ಅಕ್ರಮ ದಾಸ್ತಾನು ತಡೆಗೆ ಕಾರ್ಯಾಚರಣೆ
ಗ್ಯಾಸ್ ಕೊರತೆಯ ಲಾಭ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ. ದೇಶಾದ್ಯಂತ 12 ಸಾವಿರ ಕಡೆ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 15 ಸಾವಿರ ಸಿಲಿಂಡರ್ಗಳನ್ನು ಜಪ್ತಿ ಮಾಡಲಾಗಿದೆ. ಇದರಿಂದ 'ಪ್ಯಾನಿಕ್ ಬುಕ್ಕಿಂಗ್' (ಹೆದರಿಕೆಯಿಂದ ಮುಂಚಿತವಾಗಿ ಬುಕ್ ಮಾಡುವುದು) ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

Comments

Leave a Comment

Latest News