Monday, Oct 19, 2026
|

15ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆಹಚ್ಚಿದ ಜಿನ್ನಿ – ಪೊಲೀಸ್ ಇಲಾಖೆಯ ಹೆಮ್ಮೆ

ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಜೀವಹಾನಿ  ಪ್ರಕರಣಗಳನ್ನು ಬೇಧಿಸುವಲ್ಲಿ 'ಕಿಂಗ್' ಎನಿಸಿಕೊಂಡಿರುವ ಡಿಟೆಕ್ಟಿವ್ ಶ್ವಾನ ಜಿನ್ನಿ. ಕಳೆದ 5 ವರ್ಷಗಳಿಂದ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿನ್ನಿ, ಕಳೆದ ಬಹುತೇಕ ಒಂದು ವರ್ಷದಿಂದ ಪತ್ತೇದಾರಿ ಕೆಲಸದಲ್ಲಿ ಭಾಗವಹಿಸಿ ಈವರೆಗೆ ಬರೋಬ್ಬರಿ 15ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆಹಚ್ಚಿದೆ. ಇದರಿಂದಾಗಿ ಪೊಲೀಸ್ ಇಲಾಖೆಯಲ್ಲಿ ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ.

ಪತ್ತೇದಾರಿ ಕೆಲಸದಲ್ಲಿ ಮೆಚ್ಚುಗೆ ಪಡೆದ ಬೆಂಗಳೂರು ಪೊಲೀಸ್ ಶ್ವಾನ
ಪತ್ತೇದಾರಿ ಕೆಲಸದಲ್ಲಿ ಮೆಚ್ಚುಗೆ ಪಡೆದ ಬೆಂಗಳೂರು ಪೊಲೀಸ್ ಶ್ವಾನ

ಜಿನ್ನಿಯ ಇತ್ತೀಚಿನ ಸಾಧನೆಗಳಲ್ಲಿ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೀವಹಾನಿ ಪ್ರಕರಣವು ಗಮನಾರ್ಹವಾದುದು. ಕನಕಪುರ ರಸ್ತೆಯ ಮೆಟ್ರೋ ಪಿಲ್ಲರ್ 113 ರ ಪಕ್ಕ 50 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಯಾರೋ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಪ್ರಾಣಹಾನಿ ಮಾಡಿದ್ದರು. ಆರೋಪಿಯನ್ನು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆಗ ಜಿನ್ನಿಯನ್ನು ಬಳಸಿಕೊಳ್ಳಲಾಯಿತು. ಜಿನ್ನಿ ನೇರವಾಗಿ ಆರೋಪಿ ಮಲಗಿದ್ದ ಜಾಗಕ್ಕೆ ಕರೆದೊಯ್ದು, ಕೊನೆಗೆ ಆರೋಪಿಯನ್ನು ಪತ್ತೆಹಚ್ಚಲು ಸಹಾಯ ಮಾಡಿತು. ಈ ಪ್ರಕರಣದ ಸಾಧನೆಗಾಗಿ ಜಿನ್ನಿಗೆ ಪೊಲೀಸ್ ಆಯುಕ್ತರಿಂದ ಅಭಿನಂದನೆ ಸಿಕ್ಕಿತು.

ಅಲ್ಲದೇ, ಕಳೆದ ಕೆಲ ತಿಂಗಳ ಹಿಂದೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಆಗಿದ್ದ ಮಗು ಒಂದನ್ನು ಪತ್ತೆಹಚ್ಚಿದ್ದರಲ್ಲಿ ಜಿನ್ನಿಯ ಪಾತ್ರ ಮಹತ್ತ್ವಪೂರ್ಣವಾಗಿತ್ತು. ಈ ಎಲ್ಲಾ ಕಾರ್ಯಗಳಿಗೆ ಜಿನ್ನಿ ಇದೀಗ ಪೊಲೀಸ್ ಇಲಾಖೆಯ ಮೆಚ್ಚುಗೆ ಪಡೆದಿದೆ. ನೀವು ಕೂಡ ಒಂದು ಮೆಚ್ಚುಗೆಯ ಶುಭಾಶಯ ತಿಳಿಸಿ.  

Comments

Leave a Comment

Latest News