Apr 2, 2026 Languages : ಕನ್ನಡ | English

ಫ್ಲಿಪ್‌ಕಾರ್ಟ್‌ನಲ್ಲಿ ರೆಡ್ಮಿ ಹಬ್ಬ: ಸ್ಲಿಮ್ ಡಿಸೈನ್, ದೈತ್ಯ ಬ್ಯಾಟರಿ ಹೊಂದಿರೋ ಹೊಸ ಸ್ಮಾರ್ಟ್‌ಫೋನ್ ಮಾಹಿತಿ ಬಹಿರಂಗ!!

ನೀವು ಹೊಸ ಫೋನ್ ಕೊಳ್ಳಬೇಕು ಅಂತ ಪ್ಲಾನ್ ಮಾಡ್ತಿದ್ದೀರಾ? ಅದೂ ಕಮ್ಮಿ ಬಜೆಟ್‌ನಲ್ಲಿ, ಚಾರ್ಜ್ ಮಾಡಿದ್ರೆ ಎರಡು ದಿನ ಬರಬೇಕು ಅನ್ನೋವಂತ ಫೋನ್ ಬೇಕಾ? ಹಾಗಾದ್ರೆ ನಿಮಗಾಗಿಯೇ ರೆಡ್ಮಿ ಕಂಪನಿ ಒಂದು ಸೂಪರ್ ಫೋನ್ ತರುತ್ತಿದೆ. ಅದೇ 'ರೆಡ್ಮಿ ನೋಟ್ 15 SE 5G' (Redmi Note 15 SE 5G). ಹೌದು, ಈ ಫೋನ್ ಬಗ್ಗೆ ಈಗಾಗ್ಲೇ ಮಾರುಕಟ್ಟೆಯಲ್ಲಿ ದೊಡ್ಡ ಕ್ರೇಜ್ ಶುರುವಾಗಿದೆ. ಯಾಕಂದ್ರೆ ಇದರ ಫೀಚರ್ಸ್ ಮತ್ತು ಲುಕ್ ಅಷ್ಟೊಂದು ಸಖತ್ ಆಗಿದೆ.

ರೆಡ್ಮಿ ನೋಟ್ 15 SE 5G – ಬಜೆಟ್ ಫೋನ್ ಲಾಂಚ್!! | Photo Credit: https://www.91mobiles.com
ರೆಡ್ಮಿ ನೋಟ್ 15 SE 5G – ಬಜೆಟ್ ಫೋನ್ ಲಾಂಚ್!! | Photo Credit: https://www.91mobiles.com

ಮುಖ್ಯಾಂಶಗಳು

  • ಬಿಗ್ ಬ್ಯಾಟರಿ: ಇದರಲ್ಲಿ ಬರೋಬ್ಬರಿ 5800mAh ಸಾಮರ್ಥ್ಯದ ಬ್ಯಾಟರಿ ಇರಲಿದೆ.
  • ಪವರ್‌ಫುಲ್ ಪ್ರೊಸೆಸರ್: ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್‌ನಿಂದ ಈ ಫೋನ್ ಓಡಲಿದೆ.
  • ಲಾಂಚ್ ಡೇಟ್: ಏಪ್ರಿಲ್ 2 ರಂದು ಮಧ್ಯಾಹ್ನ 12 ಗಂಟೆಗೆ ಇದು ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಯಾವಾಗ ಬಿಡುಗಡೆ? ಎಲ್ಲಿ ಸಿಗುತ್ತೆ?

ರೆಡ್ಮಿ ಕಂಪನಿಯು ಈ ಹೊಸ ಸ್ಪೆಷಲ್ ಎಡಿಷನ್ ಫೋನ್ ಅನ್ನು ಏಪ್ರಿಲ್ 2 ರಂದು ಅಂದರೆ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಲಾಂಚ್ ಆಗಿದೆ.  ಈ ಬಗ್ಗೆ ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಒಂದು ಸಣ್ಣ ಸುಳಿವು ಕೂಡ ಸಿಕ್ಕಿದೆ. ನೀವು ಮನೆಯಲ್ಲೇ ಕೂತು ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಮೂಲಕ ಆರ್ಡರ್ ಮಾಡಬಹುದು. ಬಜೆಟ್ ಪ್ರೈಸ್‌ನಲ್ಲಿ ಈ ಫೋನ್ ಬರಲಿರೋದು ಗ್ರಾಹಕರಿಗೆ ಖುಷಿಯ ವಿಚಾರ.

ಬ್ಯಾಟರಿ ಅಂದ್ರೆ ಇದಪ್ಪಾ ಬ್ಯಾಟರಿ!

ಈ ಫೋನಿನ ಹೈಲೈಟ್ ಅಂದ್ರೆ ಅದರ ಬ್ಯಾಟರಿ. ಈಗಿನ ಫೋನ್‌ಗಳಲ್ಲಿ ಸಾಮಾನ್ಯವಾಗಿ 5000mAh ಬ್ಯಾಟರಿ ಇರುತ್ತೆ. ಆದ್ರೆ ಈ ರೆಡ್ಮಿ ನೋಟ್ 15 SE ನಲ್ಲಿ ಕಂಪನಿಯು 5800mAh ನ ದೊಡ್ಡ ಬ್ಯಾಟರಿ ಕೊಟ್ಟಿದೆ. ಅಂದ್ರೆ ನೀವು ದಿನಪೂರ್ತಿ ಗೇಮ್ ಆಡಿದ್ರೂ ಅಥವಾ ಸಿನಿಮಾ ನೋಡಿದ್ರೂ ಚಾರ್ಜ್ ಬೇಗ ಖಾಲಿಯಾಗಲ್ಲ. ಇದಕ್ಕೆ ಪೂರಕವಾಗಿ 45W ಫಾಸ್ಟ್ ಚಾರ್ಜಿಂಗ್ ಕೂಡ ಇದೆ, ಅಂದ್ರೆ ಫೋನ್ ಬೇಗನೆ ಫುಲ್ ಚಾರ್ಜ್ ಆಗುತ್ತೆ.

ಕಲರ್ ಮತ್ತು ಡಿಸೈನ್ ಹೇಗಿದೆ?

ಈ ಫೋನ್ ನೋಡೋಕೆ ತುಂಬಾ ಪ್ರೀಮಿಯಂ ಆಗಿ ಕಾಣುತ್ತೆ. ವಿಶೇಷವಾಗಿ 'ಕ್ರಿಮ್ಸನ್ ರಿಸರ್ವ್' ಅಂದ್ರೆ ಕೆಂಪು ಬಣ್ಣದ ಆಯ್ಕೆಯು ಎಲ್ಲರ ಗಮನ ಸೆಳೆಯುತ್ತಿದೆ. ಗೋಲ್ಡ್ ಬಣ್ಣದ ಫ್ರೇಮ್ ಇರೋದ್ರಿಂದ ಈ ಫೋನ್ ಕೈಯಲ್ಲಿ ಹಿಡಿದರೆ ಒಂತರಾ ರಾಯಲ್ ಫೀಲ್ ಕೊಡುತ್ತೆ. ಕೆಂಪು ಬಣ್ಣ ಮಾತ್ರವಲ್ಲದೆ ಕಾರ್ಬನ್ ಬ್ಲಾಕ್ ಮತ್ತು ವೈಟ್ ಬಣ್ಣಗಳಲ್ಲಿ ಕೂಡ ಈ ಫೋನ್ ಲಭ್ಯವಿರಲಿದೆ.

ಕ್ಯಾಮೆರಾ ಮತ್ತು ಪರ್ಫಾರ್ಮೆನ್ಸ್:

ಫೋಟೋ ಪ್ರಿಯರಿಗಾಗಿ ಇದರಲ್ಲಿ 50 ಮೆಗಾಪಿಕ್ಸೆಲ್‌ನ ಮಾಸ್ಟರ್ ಪಿಕ್ಸೆಲ್ ಕ್ಯಾಮೆರಾ ಕೊಡಲಾಗಿದೆ. ಇದರಿಂದ ನೀವು 4K ಕ್ವಾಲಿಟಿಯ ವಿಡಿಯೋಗಳನ್ನು ಶೂಟ್ ಮಾಡಬಹುದು. ಇನ್ನು ಈ ಫೋನ್ ಹ್ಯಾಂಗ್ ಆಗದಂತೆ ಕೆಲಸ ಮಾಡಲು ಸ್ನಾಪ್‌ಡ್ರಾಗನ್ 6 Gen 3 ಪ್ರೊಸೆಸರ್ ಅಳವಡಿಸಲಾಗಿದೆ. ಅಂದ್ರೆ ಮಲ್ಟಿ ಟಾಸ್ಕಿಂಗ್ ಮತ್ತು ಗೇಮಿಂಗ್‌ಗೆ ಇದು ಬೆಸ್ಟ್ ಬಜೆಟ್ ಫೋನ್ ಆಗೋದ್ರಲ್ಲಿ ಅನುಮಾನವಿಲ್ಲ.

ನಮ್ಮ ಕಿವಿಮಾತು:

ನೀವು ಕಾಲೇಜ್ ಸ್ಟೂಡೆಂಟ್ ಆಗಿರಲಿ ಅಥವಾ ಆಫೀಸ್‌ಗೆ ಹೋಗೋರಾಗಿರಲಿ, ಒಂದು ಒಳ್ಳೆ ಸ್ಟೈಲಿಶ್ ಮತ್ತು ಹೆಚ್ಚು ಬ್ಯಾಟರಿ ಬ್ಯಾಕಪ್ ಇರೋ ಫೋನ್ ಬೇಕು ಅಂದ್ರೆ ಏಪ್ರಿಲ್ 2 ರವರೆಗೆ ಸ್ವಲ್ಪ ವೇಯ್ಟ್ ಮಾಡಿ. ಫ್ಲಿಪ್‌ಕಾರ್ಟ್‌ನಲ್ಲಿ ಲಾಂಚ್ ಆದ ಮೇಲೆ ಒಳ್ಳೆ ಆಫರ್‌ಗಳು ಕೂಡ ಸಿಗಬಹುದು.