Apr 23, 2026 Languages : ಕನ್ನಡ | English

ಇತಿಹಾಸ ಸೃಷ್ಟಿಸಿದ ಫೋನ್ ಪೇ - 1,000 ಕೋಟಿ ಟ್ರಾನ್ಸಾಕ್ಷನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ, ಅದು ಇಲ್ಲಿದೆ ನೋಡಿ!!

ಭಾರತದಲ್ಲಿ ಈಗ ಜೇಬಲ್ಲಿ ನಗದು ಇಟ್ಟುಕೊಳ್ಳುವವರ ಸಂಖ್ಯೆ ಕಡಿಮೆ ಆಗ್ತಿದೆ. ಚಹಾ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್‌ಗಳವರೆಗೆ ಎಲ್ಲರೂ ಸ್ಕ್ಯಾನ್ ಮಾಡೋಕೆ ಶುರು ಮಾಡಿದ್ದಾರೆ. ಈ ಯುಪಿಐ ಕ್ರಾಂತಿಯಲ್ಲಿ ಈಗ ಫೋನ್ ಪೇ (PhonePe) ಅಕ್ಷರಶಃ ಇತಿಹಾಸ ಸೃಷ್ಟಿಸಿದೆ. 2026ರ ಮಾರ್ಚ್ ತಿಂಗಳ ಯುಪಿಐ ದತ್ತಾಂಶ ಹೊರಬಿದ್ದಿದ್ದು, ಫೋನ್ ಪೇ ಯಾರು ತಲುಪಲಾಗದ ಮೈಲಿಗಲ್ಲನ್ನು ಮುಟ್ಟಿದೆ.

ಗೂಗಲ್ ಪೇ ಹಿಂದಿಕ್ಕಿ ಫೋನ್ ಪೇ ಅಬ್ಬರ
ಗೂಗಲ್ ಪೇ ಹಿಂದಿಕ್ಕಿ ಫೋನ್ ಪೇ ಅಬ್ಬರ

ಯಾವುದೇ ಒಂದು ಯುಪಿಐ ಆ್ಯಪ್ ಒಂದು ತಿಂಗಳ ಅವಧಿಯಲ್ಲಿ 1,000 ಕೋಟಿ (10 ಬಿಲಿಯನ್) ಟ್ರಾನ್ಸಾಕ್ಷನ್ ಪೂರೈಸಿರಲಿಲ್ಲ. ಆದರೆ, ಫೋನ್ ಪೇ ಈ ಸಾಹಸ ಮಾಡಿದ ಮೊದಲ ಆ್ಯಪ್ ಆಗಿ ಹೊರಹೊಮ್ಮಿದೆ. ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಒಟ್ಟು 2,260 ಕೋಟಿ ಯುಪಿಐ ವಹಿವಾಟುಗಳು ನಡೆದಿದ್ದರೆ, ಅದರಲ್ಲಿ ಅರ್ಧದಷ್ಟು ಅಂದರೆ ಬರೋಬ್ಬರಿ 1,000 ಕೋಟಿಗೂ ಅಧಿಕ ಟ್ರಾನ್ಸಾಕ್ಷನ್‌ಗಳು ಕೇವಲ ಫೋನ್ ಪೇ ಮೂಲಕವೇ ನಡೆದಿವೆ!

ಯಾವ ಆ್ಯಪ್ ಎಷ್ಟನೇ ಸ್ಥಾನದಲ್ಲಿದೆ?

ಯುಪಿಐ ಮಾರ್ಕೆಟ್‌ನಲ್ಲಿ ಈಗ ಫೋನ್ ಪೇ ಮತ್ತು ಗೂಗಲ್ ಪೇ ನಡುವೆ ದೊಡ್ಡ ಪೈಪೋಟಿ ನಡೀತಿದೆ. ಆದರೆ ಫೋನ್ ಪೇ ಸದ್ಯಕ್ಕೆ ನಂಬರ್ 1 ಪಟ್ಟವನ್ನು ಭದ್ರವಾಗಿ ಹಿಡಿದುಕೊಂಡಿದೆ.

ಟಾಪ್-6 ಯುಪಿಐ ಆ್ಯಪ್‌ಗಳ ರಿಪೋರ್ಟ್ ಕಾರ್ಡ್ ಹೀಗಿದೆ:

ಫೋನ್ ಪೇ: 1,000 ಕೋಟಿ ಟ್ರಾನ್ಸಾಕ್ಷನ್ (ಕಿಂಗ್ ಆಫ್ ಯುಪಿಐ)

ಗೂಗಲ್ ಪೇ: 750 ಕೋಟಿ ಟ್ರಾನ್ಸಾಕ್ಷನ್ (ಎರಡನೇ ಸ್ಥಾನ)

ಪೇಟಿಎಂ: 170 ಕೋಟಿ ಟ್ರಾನ್ಸಾಕ್ಷನ್ (ಬಹಳ ಹಿಂದೆ ಉಳಿದಿದೆ)

ನವಿ (Navi): 80 ಕೋಟಿ ಟ್ರಾನ್ಸಾಕ್ಷನ್

ಸೂಪರ್ ಡಾಟ್ ಮನಿ: 34 ಕೋಟಿ ಟ್ರಾನ್ಸಾಕ್ಷನ್

ಭೀಮ್ (BHIM): 20 ಕೋಟಿ ಟ್ರಾನ್ಸಾಕ್ಷನ್

ಹಣದ ಲೆಕ್ಕಾಚಾರ ಕೇಳಿದ್ರೆ ಶಾಕ್ ಆಗ್ತೀರಾ

ಎನ್​ಪಿಸಿಐ (NPCI) ನೀಡಿರುವ ಮಾಹಿತಿಯ ಪ್ರಕಾರ, ಮಾರ್ಚ್ ತಿಂಗಳಲ್ಲಿ ಯುಪಿಐ ಮೂಲಕ ನಡೆದ ಒಟ್ಟು ಹಣದ ವರ್ಗಾವಣೆ 29.6 ಲಕ್ಷ ಕೋಟಿ ರೂಪಾಯಿಗಳು. ಇದರಲ್ಲಿ ಫೋನ್ ಪೇ ಒಂದರಲ್ಲೇ 14.48 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆದಿದೆ. ಇನ್ನು ಗೂಗಲ್ ಪೇನಲ್ಲಿ 10 ಲಕ್ಷ ಕೋಟಿ ರೂ. ಮೊತ್ತದ ಟ್ರಾನ್ಸಾಕ್ಷನ್ ಆಗಿದೆ. ಅಂದ್ರೆ ದೇಶದ ಅರ್ಧದಷ್ಟು ಡಿಜಿಟಲ್ ಹಣದ ಹರಿವು ಈ ಎರಡೇ ಆ್ಯಪ್‌ಗಳ ಮೂಲಕ ಆಗ್ತಿದೆ.

ಮಾರುಕಟ್ಟೆಯ ಮೇಲಿನ ಹಿಡಿತ

ಸದ್ಯದ ಮಾರುಕಟ್ಟೆಯಲ್ಲಿ ಫೋನ್ ಪೇ ಶೇ. 45ರಷ್ಟು ಪಾಲು ಹೊಂದಿದ್ದರೆ, ಗೂಗಲ್ ಪೇ ಶೇ. 33ರಷ್ಟು ಪಾಲು ಹೊಂದಿದೆ. ಇವೆರಡೂ ಸೇರಿ ಶೇ. 78ರಷ್ಟು ಮಾರ್ಕೆಟ್ ಕಬ್ಜ ಮಾಡಿವೆ. ವಾಸ್ತವವಾಗಿ, ಯಾವುದೇ ಒಂದು ಆ್ಯಪ್ ಶೇ. 30ಕ್ಕಿಂತ ಹೆಚ್ಚು ಪಾಲು ಹೊಂದಿರಬಾರದು ಎಂಬುದು ಎನ್​ಪಿಸಿಐ ನಿಯಮವಾಗಿದ್ದರೂ, ಸದ್ಯಕ್ಕೆ ಈ ಎರಡೂ ಆ್ಯಪ್‌ಗಳ ಹವಾ ಮಾತ್ರ ಜೋರಾಗಿದೆ.

Latest News