ಜಗತ್ತಿನ ಅತಿ ದೊಡ್ಡ ಕ್ರೀಡಾ ಹಬ್ಬ ‘ಫಿಫಾ ವಿಶ್ವಕಪ್ 2026’ (FIFA World Cup 2026) ಹತ್ತಿರ ಬರುತ್ತಿದ್ದಂತೆ ವಿಶ್ವಾದ್ಯಂತ ಫುಟ್‌ಬಾಲ್ ಜ್ವರ ಜೋರಾಗ್ತಿದೆ. ಕೋಟ್ಯಂತರ ಅಭಿಮಾನಿಗಳು ಈ ಕ್ರೀಡಾ ಸಂಭ್ರಮವನ್ನು ಎಂಜಾಯ್ ಮಾಡಲು ಕಾಯುತ್ತಿದ್ದಾರೆ. ಇದೇ ಹೊತ್ತಿನಲ್ಲಿ, ಸೋಶಿಯಲ್ ಮೀಡಿಯಾ ದೈತ್ಯ ‘ಮೆಟಾ’ (Meta) ಕಂಪನಿಯು ತನ್ನ ಬಳಕೆದಾರರಿಗೆ ಭರ್ಜರಿ ಗಿಫ್ಟ್ ನೀಡಿದೆ. ತನ್ನ ಪ್ರಮುಖ ಆಪ್‌ಗಳಾದ ಇನ್‌ಸ್ಟಾಗ್ರಾಮ್, ವಾಟ್ಸಾಪ್, ಫೇಸ್‌ಬುಕ್, ಮೆಸೆಂಜರ್ ಮತ್ತು ಥ್ರೆಡ್ಸ್ (Threads) ಪ್ಲಾಟ್‌ಫಾರ್ಮ್‌ಗಳಲ್ಲಿ ಫುಟ್‌ಬಾಲ್‌ಗೆ ಸಂಬಂಧಿಸಿದ ಹಲವು ಸೂಪರ್ ಫೀಚರ್‌ಗಳನ್ನು ಪರಿಚಯಿಸಿದೆ.
ವಿಶ್ವಕಪ್ ಪಂದ್ಯಗಳು ನಡೆಯುವ ಉದ್ದಕ್ಕೂ ಈ ಅಪ್‌ಡೇಟ್‌ಗಳು ಲಭ್ಯವಿರಲಿವೆ. ಅಷ್ಟೇ ಅಲ್ಲದೆ, ಪ್ರಸಾರಕರು, ಫುಟ್‌ಬಾಲ್ ತಂಡಗಳು, ಆಟಗಾರರು ಮತ್ತು ಕ್ರಿಯೇಟರ್‌ಗಳ ಜೊತೆ ಕೈಜೋಡಿಸಿರುವ ಮೆಟಾ, ಬಳಕೆದಾರರಿಗೆ ಎಕ್ಸ್‌ಕ್ಲೂಸಿವ್ ಕಂಟೆಂಟ್, ಮ್ಯಾಚ್ ಹೈಲೈಟ್ಸ್ ಹಾಗೂ ರಿಯಲ್-ಟೈಮ್ ಅಪ್‌ಡೇಟ್‌ಗಳನ್ನು ನೀಡಲು ಸಜ್ಜಾಗಿದೆ.
Threads ನಲ್ಲಿ ಲೈವ್ ಫುಟ್‌ಬಾಲ್ ಚಾಟ್
ಮೆಟಾ ತನ್ನ ‘Threads’ ಆಪ್‌ನಲ್ಲಿ ಕೇವಲ ಫುಟ್‌ಬಾಲ್ ಚರ್ಚೆಗಳಿಗಾಗಿಯೇ ಹೊಸದಾಗಿ ‘ಲೈವ್ ಚಾಟ್ಸ್’ (Live Chats) ಫೀಚರ್ ತಂದಿದೆ. ಪಂದ್ಯದ ಆರಂಭಕ್ಕೆ ಮುನ್ನ, ಮ್ಯಾಚ್ ನಡೆಯುವಾಗ ಮತ್ತು ಮ್ಯಾಚ್ ಮುಗಿದ ನಂತರ ಫ್ಯಾನ್ಸ್ ಇಲ್ಲಿ ರಿಯಲ್-ಟೈಮ್‌ನಲ್ಲಿ ಚರ್ಚೆ ಮಾಡಬಹುದು. ಜಗತ್ತಿನ ಫೇಮಸ್ ಫುಟ್‌ಬಾಲ್ ಪರ್ಸನಾಲಿಟಿಗಳು, ಕಾಮೆಂಟೇಟರ್‌ಗಳು ಈ ಚರ್ಚೆಯನ್ನು ನಡೆಸಿಕೊಡಲಿದ್ದಾರೆ.
ದಂತಕಥೆ ಸರ್ಜಿಯೋ ಅಗುಲೋ ಮತ್ತು ಇಂಗ್ಲೆಂಡ್‌ನ ಮಾಜಿ ಸ್ಟಾರ್ ಇಯಾನ್ ರೈಟ್ ಅವರು ಮೊದಲ ಹಂತದಲ್ಲಿ ಈ ಲೈವ್ ಚಾಟ್‌ಗಳನ್ನು ಹೋಸ್ಟ್ ಮಾಡಲಿದ್ದಾರೆ. ಜೊತೆಗೆ ಇಲ್ಲಿ ಲೈವ್ ಸ್ಕೋರ್, ಪ್ಲೇಯರ್ ಅಪ್‌ಡೇಟ್ಸ್, ಫುಟ್‌ಬಾಲ್ ಥೀಮ್ ಸ್ಟಿಕ್ಕರ್ಸ್ ಮತ್ತು ಕಸ್ಟಮ್ ಎಮೋಜಿ ರಿಯಾಕ್ಷನ್‌ಗಳು ಸಿಗಲಿವೆ.
ಇನ್‌ಸ್ಟಾಗ್ರಾಮ್‌ನಲ್ಲಿ ‘ವರ್ಲ್ಡ್ ಕಪ್ ಹಬ್’
ಇನ್‌ಸ್ಟಾಗ್ರಾಮ್ ಯೂಸರ್ಸ್‌ಗಾಗಿ ಪ್ರತ್ಯೇಕವಾದ ‘ವರ್ಲ್ಡ್ ಕಪ್ ಕಂಟೆಂಟ್ ಹಬ್’ ಸೃಷ್ಟಿಸಲಾಗಿದೆ. ಇಲ್ಲಿ ಬ್ರಾಡ್‌ಕಾಸ್ಟರ್ಸ್ ಹಾಗೂ ಫುಟ್‌ಬಾಲ್ ಇನ್‌ಫ್ಲುಯೆನ್ಸರ್‌ಗಳ ಕ್ಯುರೇಟೆಡ್ ರೀಲ್ಸ್ ಮತ್ತು ಸ್ಟೋರಿಗಳನ್ನು ನೋಡಬಹುದು.
ಇದರ ಜೊತೆಗೆ ಡಿಎಂ (Direct Message) ನಲ್ಲಿ ಹೊಸ ಎಐ (AI) ಫೀಚರ್ ಬರಲಿದೆ. ನೀವು ಚಾಟ್ ಮಾಡುವಾಗ ವಿಶೇಷವಾದ “Goal!” ವಾಯ್ಸ್ ಎಫೆಕ್ಟ್ ಆಕ್ಟಿವೇಟ್ ಮಾಡಿದರೆ, ನಿಮ್ಮ ಇಡೀ ಚಾಟ್ ಬಾಕ್ಸ್‌ನಲ್ಲಿ ಫುಟ್‌ಬಾಲ್ ಅನಿಮೇಷನ್‌ಗಳು ಮೂಡಿಬರಲಿವೆ. ಇದು ನಿಮಗೆ ಸ್ಟೇಡಿಯಂನಲ್ಲಿ ಕೂತು ಮ್ಯಾಚ್ ನೋಡುವ ಫೀಲ್ ಕೊಡುತ್ತದೆ.
ಫೇಸ್‌ಬುಕ್‌ನಲ್ಲಿ ‘ಫುಟ್‌ಬಾಲ್ ಮೋಡ್’ ಮತ್ತು ‘AI ಜರ್ಸಿ ಟ್ರೈ-ಆನ್’
ಫೇಸ್‌ಬುಕ್‌ನಲ್ಲಿ ಒಂದು ಮಸ್ತ್ ಫೀಚರ್ ಬಂದಿದೆ. ನಿಮ್ಮ ನ್ಯೂಸ್ ಫೀಡ್‌ನಲ್ಲಿರುವ ಫೇಸ್‌ಬುಕ್ ಲೋಗೋವನ್ನು ಎರಡು ಬಾರಿ ಟ್ಯಾಪ್ (Double-tap) ಮಾಡಿದರೆ ಸಾಕು, ‘ಫುಟ್‌ಬಾಲ್ ಮೋಡ್’ ಆಕ್ಟಿವೇಟ್ ಆಗುತ್ತದೆ. ಇದರಲ್ಲಿ ಸ್ಪೆಷಲ್ ಥೀಮ್ ರಿಯಾಕ್ಷನ್ಸ್, ಸರ್ಪ್ರೈಸ್ ಎಫೆಕ್ಟ್ಸ್ ಹಾಗೂ ಒಂದು ಇಂಟರಾಕ್ಟಿವ್ ಫುಟ್‌ಬಾಲ್ ಮಿನಿ ಗೇಮ್ ಕೂಡ ಆಡಬಹುದು.
ಇವೆಲ್ಲದರ ಜೊತೆಗೆ ‘Wear It’ ಎಂಬ ಎಐ ಟೂಲ್ ಪರಿಚಯಿಸಲಾಗಿದೆ. ಇದರ ಸಹಾಯದಿಂದ ಯೂಸರ್ಸ್ ತಮ್ಮ ನೆಚ್ಚಿನ ರಾಷ್ಟ್ರೀಯ ತಂಡದ ಜರ್ಸಿಯನ್ನು ಡಿಜಿಟಲ್ ಆಗಿ ಧರಿಸಿ (AI ಜರ್ಸಿ ಟ್ರೈ-ಆನ್), ಆ ಫೋಟೋವನ್ನು ತಮ್ಮ ಪ್ರೊಫೈಲ್ ಪಿಕ್ಚರ್ ಅಥವಾ ಸ್ಟೋರಿಯಾಗಿ ಶೇರ್ ಮಾಡಿಕೊಳ್ಳಬಹುದು.
ಮೆಸೆಂಜರ್‌ನಲ್ಲಿ ಲೈವ್ ಮ್ಯಾಚ್ ಅಪ್‌ಡೇಟ್ಸ್
ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಗ್ರೂಪ್ ಚಾಟ್‌ಗಳಿಗೆ ಮೆಸೆಂಜರ್ ಹೊಸ ಲುಕ್ ನೀಡಲಿದೆ. ಪಂದ್ಯದ ವೇಳೆ ಗೋಲು ಬಿದ್ದಾಗ, ರೆಡ್ ಕಾರ್ಡ್ ನೀಡಿದಾಗ, ಪೆನಾಲ್ಟಿ ಅಥವಾ ಪ್ಲೇಯರ್ ಸಬ್ಸ್ಟಿಟ್ಯೂಷನ್ ಆದಾಗ ತಕ್ಷಣವೇ ಗ್ರೂಪ್ ಚಾಟ್‌ಗೆ ಲೈವ್ ಅಪ್‌ಡೇಟ್ಸ್ ನೋಟಿಫಿಕೇಶನ್ ಬರಲಿದೆ. ಜೊತೆಗೆ ಫುಟ್‌ಬಾಲ್ ಬ್ಯಾಕ್‌ಗ್ರೌಂಡ್ಸ್ ಹಾಗೂ ಅನಿಮೇಟೆಡ್ ಸ್ಟಿಕ್ಕರ್‌ಗಳು ಸಿಗಲಿವೆ.
ಆಡೀಡಸ್ (Adidas) ಜೊತೆ ವಾಟ್ಸಾಪ್ ಪಾರ್ಟ್‌ನರ್‌ಶಿಪ್
ಮೆಟಾ ಕಂಪನಿಯು ಪ್ರಖ್ಯಾತ ಕ್ರೀಡಾ ಬ್ರ್ಯಾಂಡ್ ‘ಆಡೀಡಸ್’ ಜೊತೆ ಕೈಜೋಡಿಸಿ ವಾಟ್ಸಾಪ್‌ನಲ್ಲಿ ಧಮಾಕಾ ಫೀಚರ್ ತಂದಿದೆ. ಇನ್ಮುಂದೆ ನೀವು ವಾಟ್ಸಾಪ್‌ನಲ್ಲಿ ಕಳುಹಿಸುವ ಸಾಮಾನ್ಯ ಫುಟ್‌ಬಾಲ್ ಎಮೋಜಿ, ಈ ವಿಶ್ವಕಪ್‌ನ ಅಧಿಕೃತ ಪಂದ್ಯದ ಚೆಂಡು ‘Trionda’ ರೂಪಕ್ಕೆ ಬದಲಾಗಲಿದೆ. ವಿಡಿಯೋ ಕಾಲ್ ಮಾಡುವಾಗ ಫುಟ್‌ಬಾಲ್ ಥೀಮ್ ಎಫೆಕ್ಟ್‌ಗಳನ್ನು ಬಳಸಬಹುದು. ಇದಲ್ಲದೆ ವಾಟ್ಸಾಪ್‌ನಲ್ಲಿ ಲೈವ್ ಸ್ಕೋರ್ಸ್ ಹಾಗೂ ಟೂರ್ನಮೆಂಟ್ ಅಪ್‌ಡೇಟ್ಸ್ ನೀಡಲು ಪ್ರತ್ಯೇಕ ಸೆಕ್ಷನ್ ಇರಲಿದೆ.
ಭದ್ರತೆಗೂ ಇದೆ ಆದ್ಯತೆ
ಕೇವಲ ಎಂಟರ್‌ಟೈನ್‌ಮೆಂಟ್ ಅಷ್ಟೇ ಅಲ್ಲದೆ, ಯೂಸರ್ಸ್ ಸುರಕ್ಷತೆಗೂ ಮೆಟಾ ಹೆಚ್ಚಿನ ಒತ್ತು ನೀಡಿದೆ. ವಿಶ್ವಕಪ್ ನೆಪದಲ್ಲಿ ನಡೆಯುವ ಟಿಕೆಟ್ ಸ್ಕ್ಯಾಮ್ (Fake Tickets), ಫಿಶಿಂಗ್ ಲಿಂಕ್‌ಗಳು, ಆನ್‌ಲೈನ್ ಕಿರುಕುಳ ಮತ್ತು ನಿಂದನಾತ್ಮಕ ನಡವಳಿಕೆಗಳನ್ನು ತಡೆಯಲು ಸೆಕ್ಯೂರಿಟಿಯನ್ನು ಬಲಪಡಿಸಲಾಗಿದೆ. ಯಾವುದೇ ಅನುಮಾನಾಸ್ಪದ ಲಿಂಕ್ ಕಂಡರೆ ಬಳಕೆದಾರರಿಗೆ ಎಚ್ಚರಿಕೆ ಸಂದೇಶಗಳು ರವಾನೆಯಾಗಲಿವೆ.