ಐಫೋನ್ ತರಹದ ಲುಕ್, ಮಿಲಿಟರಿ ದರ್ಜೆಯ ಗಡಸುತನ: ಐಟೆಲ್ ಝೆನೋ 200 ಫೋನ್ ಬೆಲೆ ನೋಡಿ; ನಿಜ ಫಿದಾ ಆಗ್ತೀರಾ!!

ಭಾರತೀಯ ಎಂಟ್ರಿ-ಲೆವೆಲ್ ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಐಟೆಲ್ (Itel) ಕಂಪನಿ ತನ್ನ ಹೊಸ ಅಸ್ತ್ರವನ್ನು ಬಿಡುಗಡೆ ಮಾಡಿದೆ. ಅದೇ ಐಟೆಲ್ ಝೆನೋ 200 (Itel Zeno 200). ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಐಫೋನ್ 17 ಪ್ರೊ ಮಾದರಿಯ ಪ್ರೀಮಿಯಂ ಮತ್ತು ಸ್ಟೈಲಿಶ್ ಲುಕ್ ಬಯಸುವ ಗ್ರಾಹಕರಿಗೆ ಈ ಫೋನ್ ಒಂದು ಪಕ್ಕಾ ಪೈಸಾ ವಸೂಲ್ ಆಪ್ಷನ್ ಆಗಿದೆ.

ಬಜೆಟ್ ಕಿಂಗ್ ಐಟೆಲ್‌ನಿಂದ ಹೊಸ ಮಾಸ್ಟರ್‌ಸ್ಟ್ರೋಕ್; | Photo Credit: https://www.gadgets360.com
ಬಜೆಟ್ ಕಿಂಗ್ ಐಟೆಲ್‌ನಿಂದ ಹೊಸ ಮಾಸ್ಟರ್‌ಸ್ಟ್ರೋಕ್; | Photo Credit: https://www.gadgets360.com

ಕೇವಲ ಹತ್ತು ಸಾವಿರದ ಆಸುಪಾಸಿನ ಬೆಲೆಗೆ ಮಿಲಿಟರಿ ದರ್ಜೆಯ ಗಟ್ಟಿತನ ಮತ್ತು 120Hz ರಿಫ್ರೆಶ್ ರೇಟ್‌ನಂತಹ ಸೂಪರ್ ಫೀಚರ್ಸ್‌ಗಳನ್ನು ಈ ಫೋನ್‌ನಲ್ಲಿ ಪ್ಯಾಕ್ ಮಾಡಲಾಗಿದೆ.

ಫೋನ್‌ ಕಂಪ್ಲೀಟ್ ರಿಪೋರ್ಟ್ (Quick Specifications);

ಲುಕ್ ಮತ್ತು ಡಿಸೈನ್ - ಹಿಂಭಾಗದಲ್ಲಿ ಐಫೋನ್ ಶೈಲಿಯ ಬಿಗ್ ಕ್ಯಾಮೆರಾ ಮಾಡ್ಯೂಲ್ ಮತ್ತು ಆಕರ್ಷಕ ಮ್ಯಾಟ್ ಫಿನಿಶ್ ಡಿಸೈನ್.

ಸ್ಮೂತ್ ಡಿಸ್ಪ್ಲೇ:- 6.75-ಇಂಚಿನ ದೊಡ್ಡ HD+ ಸ್ಕ್ರೀನ್ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 590 Nits ಬ್ರೈಟ್‌ನೆಸ್.

ರಗಡ್ ಬಾಡಿ:- ಬಜೆಟ್ ಫೋನ್ ಆದರೂ ಇದು ಮಿಲಿಟರಿ ದರ್ಜೆಯ (MIL-STD-810H) ಸರ್ಟಿಫಿಕೇಟ್ ಹಾಗೂ IP65 ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್ ಹೊಂದಿದೆ.

ಮೆಮೊರಿ ಮತ್ತು ಪ್ರೊಸೆಸರ್:- ಯುನಿಸಾಕ್ T7250 ಪ್ರೊಸೆಸರ್ ಜೊತೆಗೆ 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ!

ಬ್ಯಾಟರಿ ಲೈಫ್ ಮತ್ತು ಕ್ಯಾಮೆರಾ ಪರ್ಫಾಮೆನ್ಸ್;

ಈ ಫೋನ್‌ನ ಮತ್ತೊಂದು ಬಿಗ್ ಪ್ಲಸ್ ಪಾಯಿಂಟ್ ಎಂದರೆ ಇದರ ಬ್ಯಾಟರಿ ಬ್ಯಾಕಪ್. ಇದರಲ್ಲಿರೋ 5000mAh ಸಾಮರ್ಥ್ಯದ ಬ್ಯಾಟರಿ 15W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 46 ದಿನಗಳವರೆಗೆ ಸ್ಟ್ಯಾಂಡ್‌ಬೈ ಲೈಫ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಅಷ್ಟೇ ಅಲ್ಲದೆ, ಡಿಸ್ಪ್ಲೇ ಮೇಲೆ ನೀರು ಅಥವಾ ಎಣ್ಣೆಯ ಜಿಡ್ಡು ಇದ್ದರೂ ಟಚ್ ಕೆಲಸ ಮಾಡುವ 'ವೆಟ್ ಅಂಡ್ ಆಯ್ಲಿ ಟಚ್' ಟೆಕ್ನಾಲಜಿ ಇಲ್ಲಿದೆ.

ಛಾಯಾಗ್ರಹಣಕ್ಕಾಗಿ ಹಿಂಭಾಗದಲ್ಲಿ 13MP ಪ್ರೈಮರಿ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲಾಶ್ ನೀಡಲಾಗಿದ್ದು, ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ಲಭ್ಯವಿದೆ. ಫೋನ್‌ನ ಸೆಕ್ಯೂರಿಟಿಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಇದ್ದು, ಇದು ಲೇಟೆಸ್ಟ್ ಆಂಡ್ರಾಯ್ಡ್ 15 (ಗೋ ಎಡಿಷನ್) ನಲ್ಲಿ ರನ್ ಆಗುತ್ತದೆ.

ಬೆಲೆ ಮತ್ತು ಲಭ್ಯತೆ (Price & Availability):

ಭಾರತೀಯ ಮಾರುಕಟ್ಟೆಯಲ್ಲಿ ಐಟೆಲ್ ಝೆನೋ 200 ಸ್ಮಾರ್ಟ್‌ಫೋನ್‌ನ (4GB + 128GB) ಬೆಲೆ ₹10,399 ಆಗಿದೆ. ಬ್ಯಾಂಕ್ ಆಫರ್‌ಗಳನ್ನು ಬಳಸಿಕೊಂಡರೆ ಇದನ್ನು ಇನ್ನೂ ಕಡಿಮೆ ಬೆಲೆಗೆ ಅಂದ್ರೆ ₹9,999 ಕ್ಕೆ ಸ್ವಂತ ಮಾಡಿಕೊಳ್ಳಬಹುದು.

ಈ ಫೋನ್ ಕಾಮೆಟ್ ಆರೆಂಜ್, ಮೀಟಿಯರ್ ಟೈಟಾನಿಯಂ ಮತ್ತು ನೈಟ್ಲಿ ಬ್ಲೂ ಎಂಬ ಮೂರು ಡಿಫರೆಂಟ್ ಕಲರ್ಸ್‌ಗಳಲ್ಲಿ ಬರಲಿದ್ದು, ಪ್ರಮುಖ ಇ-ಕಾಮರ್ಸ್ ತಾಣವಾದ ಅಮೆಜಾನ್ (Amazon) ಹಾಗೂ ನಿಮ್ಮ ಹತ್ತಿರದ ಮೊಬೈಲ್ ಶಾಪ್‌ಗಳಲ್ಲಿ ಖರೀದಿಗೆ ಸಿಗಲಿದೆ. ಕಡಿಮೆ ದುಡ್ಡಿನಲ್ಲಿ ಐಫೋನ್ ರೇಂಜ್‌ನ ಲುಕ್ ಬೇಕು ಅನ್ನೋ ಕಾಲೇಜು ಸ್ಟೂಡೆಂಟ್ಸ್‌ಗೆ ಇದೊಂದು ಬೆಸ್ಟ್ ಚಾಯ್ಸ್!  

Latest News