ಆಭರಣ ಪ್ರಿಯರಿಗೆ ದೊಡ್ಡ ಶಾಕ್ ಎದುರಾಗಿದೆ. ಒಂದೇ ದಿನದಲ್ಲಿ ಬೆಳ್ಳಿ ದರ ಕೆಜಿಗೆ 10 ಸಾವಿರ ರೂಪಾಯಿ ಏರಿಕೆಯಾಗಿದೆ. ಈಗಾಗಲೇ ಚಿನ್ನದ ಬೆಲೆ ಏರಿಕೆ ಜನರನ್ನು ಕಂಗೆಡಿಸಿದ್ದರೆ, ಬೆಳ್ಳಿಯ ದರ ಕೂಡ ಚಿನ್ನವನ್ನು ಮೀರಿ ಸಾಗುತ್ತಿರುವುದು ಮಾರುಕಟ್ಟೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಹೌದು ಸದ್ಯ ಒಂದು ಕೆಜಿ ಬೆಳ್ಳಿ 3 ಲಕ್ಷ 5 ಸಾವಿರ ರೂಪಾಯಿ ತಲುಪಿದೆ. ಇದೇ ಮೊದಲ ಬಾರಿಗೆ ಬೆಳ್ಳಿ ದರ 3 ಲಕ್ಷ ಗಡಿ ದಾಟಿರುವುದು ಗಮನಾರ್ಹ. 2025ರ ಅಂತ್ಯದಲ್ಲಿ ಬೆಳ್ಳಿ ದರ ಕೆಜಿಗೆ 2.4 ಲಕ್ಷ ರೂಪಾಯಿ ಇತ್ತು. ಅಂದಿನಿಂದ ಇಂದಿನವರೆಗೂ ಬೆಳ್ಳಿ ಬೆಲೆ ನೋಡು ನೋಡುತ್ತಿದ್ದಂತೆ ಗಗನಕ್ಕೇರಿದೆ.
ಕಳೆದ 19 ದಿನಗಳಲ್ಲಿ ಮಾತ್ರವೇ ಬೆಳ್ಳಿ ದರವು ಸುಮಾರು 63 ಸಾವಿರ ರೂಪಾಯಿ ಏರಿಕೆಯಾಗಿದೆ. ಈ ಏರಿಕೆ ಆಭರಣ ಮಾರುಕಟ್ಟೆಯಲ್ಲಿಯೂ, ಕೈಗಾರಿಕಾ ಬಳಕೆಯಲ್ಲಿಯೂ ದೊಡ್ಡ ಪರಿಣಾಮ ಬೀರಿದೆ. ಸಾಮಾನ್ಯ ಜನರಿಗೆ ಬೆಳ್ಳಿ ಖರೀದಿ ಇನ್ನಷ್ಟು ದುಬಾರಿಯಾಗಿದ್ದು, ಹೂಡಿಕೆದಾರರಿಗೆ ಇದು ಹೊಸ ಲಾಭದ ಅವಕಾಶವಾಗಿ ಪರಿಣಮಿಸಿದೆ. ಈ ಬೆಳ್ಳಿ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಸುಂಕ ಸಮರ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಜಾಗತಿಕ ರಾಜಕೀಯ ಅಸ್ಥಿರತೆ – ಇವೆಲ್ಲವೂ ಬೆಳ್ಳಿ ದರ ಏರಿಕೆಗೆ ಕಾರಣವಾಗಿವೆ ಎನ್ನಲಾಗುತ್ತಿದೆ.
ಹೌದು ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿ ಬೇಡಿಕೆ ಹೆಚ್ಚುತ್ತಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿಯೂ ಬೆಲೆ ಏರಿಕೆ ಕಂಡುಬರುತ್ತಿದೆ. ಆಭರಣ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರು ಖರೀದಿಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಆದರೆ ಹೂಡಿಕೆದಾರರು ಬೆಳ್ಳಿಯನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಿರುವುದರಿಂದ ಬೇಡಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ವಿಶ್ಲೇಷಕರ ಪ್ರಕಾರ, ದೇಶದಲ್ಲಿ ಬೆಳ್ಳಿ ಬೆಲೆ ಇನ್ನಷ್ಟು ಏರಿಕೆ ಸಾಧ್ಯತೆ ಇದೆ. ಜಾಗತಿಕ ಅಸ್ಥಿರತೆ ಮುಂದುವರಿದರೆ, ಬೆಳ್ಳಿ ದರವು ಹೊಸ ಗಡಿಗಳನ್ನು ದಾಟಬಹುದು. ಸಾಮಾನ್ಯ ಜನರಿಗೆ ಇದು ಶಾಕ್ ಆಗಿದ್ದರೂ, ಹೂಡಿಕೆದಾರರಿಗೆ ಇದು ಲಾಭದಾಯಕ ಬೆಳವಣಿಗೆಯಾಗಿದೆ. ಹೌದು ಒಟ್ಟಾರೆ, ಬೆಳ್ಳಿ ಬೆಲೆ ಏರಿಕೆಯಿಂದ ಆಭರಣ ಮಾರುಕಟ್ಟೆ, ಕೈಗಾರಿಕಾ ಬಳಕೆ ಹಾಗೂ ಹೂಡಿಕೆದಾರರ ನಿರೀಕ್ಷೆಗಳಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಜನರಿಗೆ ಇದು ಶಾಕ್ ಆಗಿದ್ದರೂ, ಮಾರುಕಟ್ಟೆಗೆ ಇದು ಹೊಸ ಅಧ್ಯಾಯವಾಗಿದೆ.