Apr 3, 2026 Languages : ಕನ್ನಡ | English

ಸಂಬಳದ ಸ್ಲಿಪ್ ನೋಡಿ ಶಾಕ್ ಆಗಬೇಡಿ - ನಿಮ್ಮ ಕೈಗೆ ಬರೋ ಹಣ ಕಡಿಮೆ ಆದ್ರೂ ಭವಿಷ್ಯಕ್ಕೆ ಸಿಗಲಿದೆ ಕೋಟಿ ಕೋಟಿ!!

ಸಾಮಾನ್ಯವಾಗಿ ಒಂದು ಕಂಪನಿ ಬಿಟ್ಟು ಇನ್ನೊಂದು ಕಂಪನಿಗೆ ಸೇರೋದು ಅಂದ್ರೆ ನಮಗೆ ದೊಡ್ಡ ಟೆನ್ಷನ್ ಅಂದ್ರೆ ಅದು 'ಫುಲ್ ಅಂಡ್ ಫೈನಲ್ ಸೆಟಲ್‌ಮೆಂಟ್' (Full and Final Settlement). ಹಳೆ ಕಂಪನಿಯಲ್ಲಿ ನಮಗೆ ಬರಬೇಕಾದ ಬಾಕಿ ಸಂಬಳ, ರಜೆಯ ಹಣ (Leave Encashment) ಕೈಗೆ ಬರಲು ಕನಿಷ್ಠ 3 ರಿಂದ 4 ತಿಂಗಳು ಕಾಯಬೇಕಿತ್ತು. ಆದರೆ, ಇಂದಿನಿಂದ ಅಂದರೆ ಏಪ್ರಿಲ್ 1, 2026 ರಿಂದ ಈ ಎಲ್ಲಾ ತಲೆನೋವುಗಳಿಗೆ ಬ್ರೇಕ್ ಬಿದ್ದಿದೆ! ಕೇಂದ್ರ ಸರ್ಕಾರ ಹೊಸ 'ಲೇಬರ್ ಲಾ' ಜಾರಿಗೆ ತಂದಿದ್ದು, ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.

ಮೂಲ ವೇತನ ಈಗ 50% ಕಡ್ಡಾಯ
ಮೂಲ ವೇತನ ಈಗ 50% ಕಡ್ಡಾಯ

ಕೇವಲ 48 ಗಂಟೆಯಲ್ಲಿ ಹಣ ನಿಮ್ಮ ಅಕೌಂಟ್‌ಗೆ!

ಹೊಸ ವೇತನ ಸಂಹಿತೆಯ (New Wage Code) ಪ್ರಕಾರ, ನೀವು ಕೆಲಸ ಬಿಟ್ಟ 48 ಗಂಟೆಯೊಳಗೆ ಕಂಪನಿಯು ನಿಮ್ಮ ಪೈಸೆ ಪೈಸೆಯನ್ನೂ ಕ್ಲಿಯರ್ ಮಾಡಬೇಕು.

  • ನೀವು ರಾಜೀನಾಮೆ ನೀಡಿರಲಿ ಅಥವಾ ಕಂಪನಿಯೇ ನಿಮ್ಮನ್ನು ಕೆಲಸದಿಂದ ತೆಗೆದಿರಲಿ, ಕೇವಲ 2 ದಿನದಲ್ಲಿ ನಿಮ್ಮ ಎಲ್ಲಾ ಬಾಕಿ ಹಣ ಜಮಾ ಆಗಲೇಬೇಕು.

  • ಒಂದು ವೇಳೆ ಕಂಪನಿ ವಿಳಂಬ ಮಾಡಿದರೆ, ಅದು ಕಾನೂನು ಬಾಹಿರ. ನೀವು ಕಾರ್ಮಿಕ ಇಲಾಖೆಗೆ ದೂರು ನೀಡಬಹುದು ಅಷ್ಟೇ ಅಲ್ಲ, ತಡವಾದ ದಿನಗಳಿಗೆ ಬಡ್ಡಿ ಸಮೇತ ಹಣ ವಸೂಲಿ ಮಾಡಬಹುದು!

ಗ್ರಾಚ್ಯುಟಿ ಪಡೆಯಲು ಇನ್ನು 5 ವರ್ಷ ಕಾಯಬೇಕಿಲ್ಲ!

ಹಳೆಯ ರೂಲ್ಸ್ ಪ್ರಕಾರ, ಒಂದು ಕಂಪನಿಯಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದರೆ ಮಾತ್ರ ಗ್ರಾಚ್ಯುಟಿ ಸಿಗುತ್ತಿತ್ತು. ಆದರೆ ಈಗ ಆ ನಿಯಮ ಉಡೀಸ್! ಕೇವಲ 1 ವರ್ಷ ಕೆಲಸ ಮಾಡಿದರೂ ನೀವು ಗ್ರಾಚ್ಯುಟಿ ಪಡೆಯಲು ಅರ್ಹರು. ನೀವು ಕೆಲಸ ಬಿಟ್ಟ 30 ದಿನದೊಳಗೆ ಈ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರಬೇಕು ಎಂಬುದು ಕಡ್ಡಾಯ.

ನಿಮ್ಮ ಸಂಬಳದ ಸ್ಲಿಪ್ ಕೂಡ ಬದಲಾಗಲಿದೆ!

ಇನ್ಮುಂದೆ ಕಂಪನಿಗಳು ನಿಮ್ಮ ಬೇಸಿಕ್ ಸ್ಯಾಲರಿ (Basic Pay) ಕಡಿಮೆ ತೋರಿಸಿ, ಬೇರೆ ಭತ್ಯೆಗಳನ್ನು ಜಾಸ್ತಿ ತೋರಿಸುವಂತಿಲ್ಲ. ನಿಮ್ಮ ಒಟ್ಟು ಸಂಬಳದ (CTC) ಕನಿಷ್ಠ 50% ಭಾಗ ಬೇಸಿಕ್ ಸ್ಯಾಲರಿ ಆಗಿರಲೇಬೇಕು.

  • ಇದರಿಂದ ಏನು ಲಾಭ?: ನಿಮ್ಮ ಬೇಸಿಕ್ ಸಂಬಳ ಹೆಚ್ಚಾದಷ್ಟೂ, ನಿಮ್ಮ ಪಿಎಫ್ (PF) ಖಾತೆಗೆ ಹೋಗುವ ಹಣವೂ ಹೆಚ್ಚಾಗುತ್ತದೆ.

  • ಒಂದು ಸಣ್ಣ ಇಕ್ಕಟ್ಟು: ಪಿಎಫ್ ಕಡಿತ ಜಾಸ್ತಿ ಆಗೋದ್ರಿಂದ ನಿಮ್ಮ ಕೈಗೆ ಸಿಗುವ 'ಟೇಕ್ ಹೋಮ್ ಸ್ಯಾಲರಿ' ಸ್ವಲ್ಪ ಕಡಿಮೆ ಆಗಬಹುದು. ಆದರೆ ಲಾಂಗ್ ಟರ್ಮ್‌ನಲ್ಲಿ ನಿಮ್ಮ ನಿವೃತ್ತಿ ಜೀವನಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗಲಿದೆ.

ಈ ವಿಷಯಗಳಲ್ಲಿ ಸ್ವಲ್ಪ ಎಚ್ಚರ ಇರಲಿ!

ನಿಯಮಗಳು ನಮಗೆ ಸಪೋರ್ಟ್ ಮಾಡುತ್ತಿವೆ ಅಂದಾಕ್ಷಣ ನಾವು ಕೂಡ ಕೆಲವು ಜವಾಬ್ದಾರಿ ಪಾಲಿಸಬೇಕು:

  1. ನೋಟಿಸ್ ಪಿರಿಯಡ್: ಕೆಲಸ ಬಿಡುವಾಗ ನೋಟಿಸ್ ಪಿರಿಯಡ್ ಅನ್ನು ಸರಿಯಾಗಿ ಪೂರ್ಣಗೊಳಿಸಿ. ಇಲ್ಲದಿದ್ದರೆ ಕಂಪನಿ ನಿಮ್ಮ ಸೆಟಲ್‌ಮೆಂಟ್ ಹಣದಲ್ಲಿ ಕಟ್ ಮಾಡಬಹುದು.

  2. ಟ್ಯಾಕ್ಸ್ ಪ್ರೂಫ್: ನಿಮ್ಮ ಹೂಡಿಕೆ ದಾಖಲೆಗಳನ್ನು (Investment Proofs) ಸರಿಯಾದ ಸಮಯಕ್ಕೆ ಆಫೀಸ್‌ಗೆ ಸಲ್ಲಿಸಿ, ಆಗ ಮಾತ್ರ ಟ್ಯಾಕ್ಸ್ ಲೆಕ್ಕಾಚಾರ ಸರಿಯಾಗಿ ನಡೆದು ಪೂರ್ತಿ ಹಣ ನಿಮ್ಮ ಕೈ ಸೇರುತ್ತೆ.