Apr 29, 2026 Languages : ಕನ್ನಡ | English

ಬಂಗಾರ ಖರೀದಿಸುವವರಿಗೆ ಗುಡ್ ನ್ಯೂಸ್! ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಇಳಿಕೆ.

ನೀವು ಚಿನ್ನದ ಆಭರಣಗಳನ್ನು ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೆ ಇಲ್ಲಿದೆ ಒಂದು ಶುಭ ಸುದ್ದಿ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ ಮತ್ತೆ ಇಳಿಕೆ ಕಂಡಿವೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತದಲ್ಲೂ ಬೆಲೆಗಳು ತಗ್ಗಿದ್ದು, ಗ್ರಾಹಕರಲ್ಲಿ ಸಮಾಧಾನ ತಂದಿದೆ.

ಮದುವೆ ಸೀಸನ್‌ಗೆ ಸಿಹಿ ಸುದ್ದಿ – ಚಿನ್ನ ಮತ್ತು ಬೆಳ್ಳಿ ದರ ಇಳಿಕೆ
ಮದುವೆ ಸೀಸನ್‌ಗೆ ಸಿಹಿ ಸುದ್ದಿ – ಚಿನ್ನ ಮತ್ತು ಬೆಳ್ಳಿ ದರ ಇಳಿಕೆ

ಇಳಿಕೆಯಾದ ದರ ಎಷ್ಟು?
ಶುಕ್ರವಾರದ ಮಾರುಕಟ್ಟೆ ವರದಿಯ ಪ್ರಕಾರ, ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್‌ಗೆ ಸುಮಾರು 250 ರಿಂದ 280 ರೂಪಾಯಿಗಳಷ್ಟು ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯೂ ಕೂಡ ಪ್ರತಿ ಗ್ರಾಮ್‌ಗೆ 10 ರಿಂದ 20 ರೂಪಾಯಿಗಳಷ್ಟು ಕುಸಿದಿದೆ. ವಿದೇಶಿ ಮಾರುಕಟ್ಟೆಯಲ್ಲೂ ಚಿನ್ನದ ಬೇಡಿಕೆ ಕುಸಿದಿರುವುದು ಭಾರತೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. 

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಎಷ್ಟು?
ಚಿನ್ನದ ಹಾದಿಯಲ್ಲೇ ಬೆಳ್ಳಿಯೂ ಕೂಡ ಇಳಿಕೆ ಕಂಡಿದೆ. ಬೆಂಗಳೂರು ಮತ್ತು ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಗಣನೀಯವಾಗಿ ತಗ್ಗಿದೆ.
1 ಗ್ರಾಮ್ ಬೆಳ್ಳಿ: 280 ರೂ.
100 ಗ್ರಾಮ್ ಬೆಳ್ಳಿ: 28,000 ರೂ.
1 ಕೆಜಿ ಬೆಳ್ಳಿ: 2,80,000 ರೂ.

ಬೆಲೆ ಇಳಿಕೆಗೆ ಕಾರಣವೇನು?
ಜಾಗತಿಕ ಮಟ್ಟದಲ್ಲಿ ಡಾಲರ್ ಮೌಲ್ಯದ ಸ್ಥಿರತೆ ಮತ್ತು ಹೂಡಿಕೆದಾರರು ಬೇರೆಡೆ ಗಮನ ಹರಿಸುತ್ತಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಮದುವೆ ಹಾಗೂ ಶುಭ ಸಮಾರಂಭಗಳ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ದರ ಇಳಿಕೆಯಾಗಿರುವುದು ಸಾರ್ವಜನಿಕರಿಗೆ ಅನುಕೂಲಕರವಾಗಿದೆ. 
 
ಬೆಂಗಳೂರು, ತಮಿಳುನಾಡು ಮತ್ತು ಕೇರಳದ ಬಹುತೇಕ ನಗರಗಳಲ್ಲಿ ಇಂದಿನ ದರ ಸರಿಸುಮಾರು ಒಂದೇ ಆಗಿದ್ದು, ಆಭರಣ ಖರೀದಿದಾರರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

Latest News