Mar 4, 2026 Languages : ಕನ್ನಡ | English

ಮದುವೆ ಕಾಲದ ಬೇಡಿಕೆ – ಮತ್ತೆ ಚಿನ್ನದ ದರದಲ್ಲಿ ಬಾರಿ ಬದಲಾವಣೆ!! ಇಲ್ಲಿದೆ ಇವತ್ತಿನ ಬಂಗಾರದ ಬೆಲೆ

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇಂದು ಇದ್ದ ಚಿನ್ನದ ದರ ನಾಳೆ ಕಡಿಮೆ ಆಗಬಹುದು. ಹೀಗೆ ಪ್ರತಿದಿನ ಚಿನ್ನದ ದರ ಏರಿಳಿತ ಕಾಣುತ್ತಿದ್ದು ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಬಹುದು. ಇಂದಿನ ಬಂಗಾರದ ದರ ನೋಡುವುದಾದರೆ ಭಾರತದಲ್ಲಿ ಯಾವ ಯಾವ ಪ್ರದೇಶದಲ್ಲಿ ಎಷ್ಟು ದರ ಏರಿಕೆಯಾಗಿದೆ ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ. ಹೌದು, ಭಾರತದಲ್ಲಿ ಇಂದು ಅಂದರೆ, 21 ಫೆಬ್ರವರಿ 2026 ರಂದು ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,928 ಆಗಿದ್ದು, ನಿನ್ನೆಗಿನ ಇವತ್ತು ₹15,737 ದರದಿಂದ ₹191 ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹14,600 ಆಗಿದ್ದು ₹175 ಹೆಚ್ಚಳವಾಗಿದೆ. 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹11,946 ಆಗಿದ್ದು ₹143 ಏರಿಕೆಯಾಗಿದೆ. 

ಹೂಡಿಕೆದಾರರಿಗೆ ಹೊಸ ಸೂಚನೆ ನೀಡಿದ ತಜ್ಞರು!!
ಹೂಡಿಕೆದಾರರಿಗೆ ಹೊಸ ಸೂಚನೆ ನೀಡಿದ ತಜ್ಞರು!!

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಸ್ಥಿರವಾಗಿದ್ದರೂ ಸಹ, ಇಂದಿನ ಚಿನ್ನದ ಏರಿಕೆ ಹೂಡಿಕೆದಾರರ ಗಮನ ಸೆಳೆದಿದೆ ಎನ್ನಬಹುದು. ಜಾಗತಿಕ ಮಾರುಕಟ್ಟೆ ಪರಿಸ್ಥಿತಿ, ಡಾಲರ್ ಮೌಲ್ಯ ಮತ್ತು ದರ ಏರಿಕೆ (ಇನ್‌ಫ್ಲೇಷನ್) ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿವೆ. ಚಿನ್ನವನ್ನು ವರ್ಷಗಳಿಂದ ಸುರಕ್ಷಿತ ಹೂಡಿಕೆ ಸಾಧನವಾಗಿ ಪರಿಗಣಿಸಲಾಗಿದೆ. ದರ ಏರಿಕೆಯ ಸಮಯದಲ್ಲಿ ಚಿನ್ನ ಉತ್ತಮ ರಕ್ಷಣಾ ಸಾಧನ (ಹೆಡ್ಜ್) ಆಗಿ ಕೆಲಸ ಮಾಡುತ್ತದೆ ಎಂದು ತಜ್ಞರು ಕೂಡ ತಿಳಿಸಿದ್ದಾರೆ. ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಚಿನ್ನದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ವಿಶೇಷವಾಗಿ ಈ ಮದುವೆ ಮತ್ತು ಹಬ್ಬಗಳ ಕಾಲದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ಬೆಲೆಗಳಲ್ಲಿ ಹೆಚ್ಚಳ ಕಂಡುಬರುವುದು ಸಾಮಾನ್ಯವಾಗಿದೆ ಎಂದು ಹೇಳಬಹುದು.

24 ಕ್ಯಾರೆಟ್ ಚಿನ್ನದ ದರವನ್ನು ವಿವಿಧ ತೂಕಗಳಲ್ಲಿ ನೋಡಿದರೆ, 1 ಗ್ರಾಂಗೆ ₹15,928, 8 ಗ್ರಾಂಗೆ ₹1,27,424, 10 ಗ್ರಾಂಗೆ ₹1,59,280 ಮತ್ತು 100 ಗ್ರಾಂಗೆ ₹15,92,800 ಆಗಿದೆ. ನಿನ್ನೆಗಿನ ದರದೊಂದಿಗೆ ಹೋಲಿಕೆ ಮಾಡಿ ನೋಡಿದರೆ ಅಥ್ವಾ ಹೋಲಿಸಿದರೆ 10 ಗ್ರಾಂಗೆ ₹1,910 ಹೆಚ್ಚಳವಾಗಿದೆ. ಇದು ಮಾರುಕಟ್ಟೆಯಲ್ಲಿ ಚಿನ್ನದ ಚಲನವಲನವನ್ನು ಸ್ಪಷ್ಟವಾಗಿ ತೋರಿಸುತ್ತದೆ. ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸುವವರಿಗೆ ಈ ಏರಿಕೆ ಹೆಚ್ಚಿನ ವ್ಯತ್ಯಾಸ ಉಂಟುಮಾಡಬಹುದು. 

22 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ ₹14,600 ಆಗಿದ್ದು, 8 ಗ್ರಾಂಗೆ ₹1,16,800, 10 ಗ್ರಾಂಗೆ ₹1,46,000 ಮತ್ತು 100 ಗ್ರಾಂಗೆ ₹14,60,000 ಆಗಿದೆ. 10 ಗ್ರಾಂಗೆ ₹1,750 ಹೆಚ್ಚಳ ಕಂಡುಬಂದಿದೆ. 22 ಕ್ಯಾರೆಟ್ ಚಿನ್ನವನ್ನು ಸಾಮಾನ್ಯವಾಗಿ ಆಭರಣ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದ್ದರಿಂದ ಮದುವೆ ಮತ್ತು ವಿಶೇಷ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಇದರ ಬೇಡಿಕೆ ಹೆಚ್ಚಾಗುತ್ತದೆ. ಬೆಲೆ ಏರಿಕೆ ಇದ್ದರೂ ಜನರು ಚಿನ್ನ ಖರೀದಿಸಲು ಮುಂದಾಗುತ್ತಿದ್ದಾರೆ.

18 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ ₹11,946 ಆಗಿದ್ದು, 8 ಗ್ರಾಂಗೆ ₹95,568, 10 ಗ್ರಾಂಗೆ ₹1,19,460 ಮತ್ತು 100 ಗ್ರಾಂಗೆ ₹11,94,600 ಆಗಿದೆ. 10 ಗ್ರಾಂಗೆ ₹1,430 ಏರಿಕೆಯಾಗಿದೆ. 18 ಕ್ಯಾರೆಟ್ ಚಿನ್ನವನ್ನು ಹಗುರವಾದ ಮತ್ತು ಆಧುನಿಕ ವಿನ್ಯಾಸದ ಆಭರಣಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಯುವಜನರು ಹಾಗೂ ನಗರ ಪ್ರದೇಶಗಳಲ್ಲಿ ಇದರ ಬೇಡಿಕೆ ಹೆಚ್ಚಾಗಿದೆ ಎಂದು  ಹೇಳಬಹುದು. 

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಇಂದು ಹೇಗಿದೆ ಎಂದು ನೋಡುವುದಾದರೆ, ಚಿನ್ನದ ದರದಲ್ಲಿ ಅಲ್ಲಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ದರ ₹16,015 ಆಗಿದ್ದು, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಕೊಲ್ಕತ್ತಾದಲ್ಲಿ ₹15,928 ಆಗಿದೆ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ₹15,943 ಮತ್ತು ಅಹಮದಾಬಾದ್, ವಡೋದರಾ ನಗರಗಳಲ್ಲಿ ₹15,933 ದರ ಇರೋದಾಗಿ ಕಂಡುಬಂದಿದೆ. ಸ್ಥಳೀಯ ತೆರಿಗೆ, ಸಾರಿಗೆ ವೆಚ್ಚ ಮತ್ತು ಬೇಡಿಕೆ ಆಧರಿಸಿ ನಗರದಿಂದ ನಗರಕ್ಕೆ ಬೆಲೆ ವ್ಯತ್ಯಾಸ ಉಂಟಾಗುತ್ತದೆ.

ಚಿನ್ನದ ಬೆಲೆ ಇಂದು ಏರಿಕೆಯಾಗಿರುವುದು ಹೂಡಿಕೆದಾರರಿಗೆ ಮಹತ್ವದ ಸೂಚನೆಯಾಗಿದೆ. ಆದರೆ ಮೇಲ್ಕಂಡ ಬೆಲೆ ದರಗಳಲ್ಲಿ ಜಿಎಸ್‌ಟಿ, ಟಿಸಿಎಸ್ ಹಾಗೂ ಇತರೆ ಶುಲ್ಕಗಳು ಸೇರಿಲ್ಲ. ನಿಮಗೆ ದರದ ಬಗ್ಗೆ ಮತ್ತು ಇತರೆ ಶುಲ್ಕಗಳ ಬಗ್ಗೆ ಖಚಿತ ದರ ತಿಳಿಯಲು, ನಿಮ್ಮ ಹತ್ತಿರದ ಸ್ಥಳೀಯ ಆಭರಣ ಅಂಗಡಿಯನ್ನು ಸಂಪರ್ಕಿಸುವುದು ಉತ್ತಮ ಎನ್ನಬಹುದು. ಮುಂದಿನ ದಿನಗಳಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿ, ಅಮೆರಿಕದ ದರ ಏರಿಕೆ ಅಂಕಿ ಅಂಶಗಳು ಮತ್ತು ಮಾರುಕಟ್ಟೆ ಚಲನವಲನಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೂಡಿಕೆ ಮಾಡುವ ಮುನ್ನ ಒಮ್ಮೆ ತಜ್ಞರ ಸಲಹೆ ಪಡೆಯುವುದು ಸೂಕ್ತ. 

Latest News