ಹೊಲದಲ್ಲಿ ಬೋರ್ವೆಲ್ ಹಾಕಿಸುವ ರೈತರಿಗೆ ಸಿಹಿ ಸುದ್ದಿ - ಗಂಗಾ ಕಲ್ಯಾಣ ವತಿಯಿಂದ ಸಿಗುತ್ತೆ 5 ಲಕ್ಷ ಸಹಾಯಧನ!!

ಸ್ನೇಹಿತರೆ ಇದೀಗ ಕರ್ನಾಟಕದ ಕ್ರಿಶ್ಚಿಯನ್ ಸಮುದಾಯದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸರ್ಕಾರದಿಂದ ಒಂದು ಮಹತ್ವದ ನೆರವು ಸಿಗುವುದಾಗಿ ಕೇಳಿ ಬಂದಿದೆ. ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಜಾರಿಗೆಯಲ್ಲಿರುವ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ, ನಮ್ಮ ರೈತಾಪಿ ವರ್ಗದ ರೈತರು ತಮ್ಮ ಭೂಮಿಯ ಹೊಲಗಳಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಲು ನೇರವಾಗಿ ಸಹಾಯಧನ ಪಡೆಯಬಹುದು. ಕೆಲವರು ಕೇವಲ ಪ್ರತಿವರ್ಷದ ಮಳೆಯ ಮೇಲೆ ಅವಲಂಬಿತರಾಗಿರುವ ರೈತರಿಗೆ ಇದು ಶಾಶ್ವತ ನೀರಾವರಿ ಮಾಡಿಕೊಡುವ ವ್ಯವಸ್ಥೆ ಆಗಿದ್ದು ಒಂದು ಮಾತಲ್ಲಿ ಹೇಳಬೇಕು ಅಂದರೆ ಭರವಸೆಯ ಯೋಜನೆ ಎನ್ನಬಹುದು. 

ಗಂಗಾ ಕಲ್ಯಾಣ ಯೋಜನೆ
ಗಂಗಾ ಕಲ್ಯಾಣ ಯೋಜನೆ

ಅಸಲಿಗೆ ‘ಗಂಗಾ ಕಲ್ಯಾಣ’ ಯೋಜನೆ ಎಂದರೇನು ಗೊತ್ತಾ? 

ಈ ಯೋಜನೆಯು ರಾಜ್ಯ ಸರ್ಕಾರದ ಅಡಿಯಲ್ಲಿ ಬರುತ್ತಿದ್ದು ಸರಕಾರದ ನೆರವಿನಿಂದ ಜಾರಿಯಲ್ಲಿದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದಂತಹ  ಸಣ್ಣ ರೈತರಿಗೆ ಅವರವರ ಹೊಲದಲ್ಲಿ ಬೋರ್ವೆಲ್ ಕೊರೆಸಿಕೊಳ್ಳಲು ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ ಬರುವ ಅರ್ಹ ರೈತರಿಗೆ ಗರಿಷ್ಠವಾಗಿ ₹4 ಲಕ್ಷದಿಂದ ₹5 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ ಎಂದು ಕೇಳಿ ಬಂದೆ. ಈ ಮೊತ್ತವನ್ನು ಬೋರ್ವೆಲ್ ಕೊರೆಸುವುದು, ಪಂಪ್ ಸೆಟ್ ಖರೀದಿ ಮತ್ತು ಸಂಬಂಧಿತ ಕಾರ್ಯಗಳಿಗೆ ಬಳಸಬಹುದು.

ಯೋಜನೆಯ ಉದ್ದೇಶ ಹೀಗಿದೆ ನೋಡಿ 

  • ಅರ್ಹ ರೈತರಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವುದು
  • ಕಡಿಮೆ ಮಳೆ, ಊರಿನ ಕೆರೆಗಳಲ್ಲಿ ಬತ್ತಿದ ನೀರು, ನೀರಿನ ಅಭಾವದಿಂದ ಉಂಟಾಗುವ ಸಮಸ್ಯೆ  ಬಗೆ ಹರಿಸಲು ಇದನ್ನು ನೀಡುತ್ತಿದ 
  • ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು
  • ರೈತರ ಆದಾಯವನ್ನು ಈ ಮೂಲಕ ಸುಧಾರಿಸುವುದು
  • ರೈತರ ಸಾಲದ ಅವಲಂಬನೆ ಕಡಿಮೆ ಮಾಡಿ ಸ್ವಾವಲಂಬಿ ಕೃಷಿ ವ್ಯವಸ್ಥೆ  ನಿರ್ಮಾಣ ಮಾಡುವುದು 

ಅರ್ಹತೆಗಳು

ಈ ಯೋಜನೆಯ ಲಾಭ ಪಡೆದುಕೊಳ್ಳಲು ಸರಕಾರ ಕೆಲವು ನಿಯಮಗಳನ್ನು ನಿಗದಿ ಮಾಡಿದೆ

  • ಮೊದಲು ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
  • ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು
  • ಸಣ್ಣ ಅಥವಾ ಅತಿ ಸಣ್ಣ ಹಿಡುವಳಿದಾರರಾಗಿರಬೇಕು
  • 5 ಎಕರೆಗಿಂತ ಕಡಿಮೆ ಜಮೀನನ್ನು ಹೊಂದಿರಬೇಕು
  • ವಾರ್ಷಿಕ ಆದಾಯ ₹1.5 ಲಕ್ಷಕ್ಕಿಂತ ಕಡಿಮೆ ಇರಬೇಕು
  • ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿರಬೇಕು

ಬೇಕಾಗುವ ದಾಖಲೆಗಳು

ಅರ್ಜಿ ಸಲ್ಲಿಸುವಾಗ ರೈತರು ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು 

  • ಆಧಾರ್ ಕಾರ್ಡ್
  • ಮತದಾರರ ಗುರುತಿನ ಚೀಟಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಭೂ ಕಂದಾಯ ಪಾವತಿ ರಶೀದಿಗಳು
  • ಜಮೀನಿನ ದಾಖಲೆಗಳು (RTC ಇತ್ಯಾದಿ)
  • ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

ಬ್ಯಾಂಕ್ ಖಾತೆಯ ವಿವರಗಳು

ಅರ್ಜಿ ಸಲ್ಲಿಸುವ ವಿಧಾನ

  • ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆನ್‌ಲೈನ್ ಮೂಲಕವೆ  ನಡೆಯುತ್ತದೆ.
  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಂತರ “ಗಂಗಾ ಕಲ್ಯಾಣ ಯೋಜನೆ” ಮೆನು ಆಯ್ಕೆಮಾಡಿ.
  • ಹೊಸ ಬಳಕೆದಾರರಾಗಿದ್ದರೆ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಮೂಲಕ ಲಾಗಿನ್ ಮಾಡಿ.
  • ಅರ್ಜಿ ಫಾರ್ಮ್‌ನಲ್ಲಿ ವೈಯಕ್ತಿಕ ಮಾಹಿತಿ, ಜಮೀನಿನ ವಿವರ ಮತ್ತು ಆದಾಯ ಮಾಹಿತಿ ನಮೂದಿಸಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. 
  • ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ, ನಂತರ ಅರ್ಜಿ ಸಲ್ಲಿಸಿರಿ. 

ಕೊನೆಯದಾಗಿ ಹೇಳಬೇಕು ಅಂದರೆ, ಗಂಗಾ ಕಲ್ಯಾಣ ಯೋಜನೆ ಕ್ರಿಶ್ಚಿಯನ್ ಸಮುದಾಯದ ಸಣ್ಣ ರೈತರಿಗೆ ಕೃಷಿಯಲ್ಲಿ ಶಾಶ್ವತ ನೀರಾವರಿ ವ್ಯವಸ್ಥೆ ಒದಗಿಸುವ ಮಹತ್ವದ ಅತಿ ದೊಡ್ಡ ಯೋಜನೆಯಾಗಿದೆ. ಅವರವರ ಹೊಲಗಳಲ್ಲಿ ಬೋರ್ವೆಲ್ ಕೊರೆಸಿಕೊಳ್ಳಲು ಸರ್ಕಾರದಿಂದ ರೈತರಿಗೆ ₹5 ಲಕ್ಷದವರೆಗೆ ಸಹಾಯಧನ ಸಿಗುವುದು ದೊಡ್ಡ ಆರ್ಥಿಕ ನೆರವು. ನೀರಿನ ಅಭಾವದಿಂದ, ನೀರಿನ ಸಮಸ್ಯೆಯ ಕೊರತೆಯಿಂದ ಕೃಷಿ ಮಾಡಲು ಕಷ್ಟಪಡುತ್ತಿರುವ ರೈತರು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಅರ್ಹರಾಗಿದ್ದರೆ, ಅಗತ್ಯ ದಾಖಲೆಗಳನ್ನು ಇವತ್ತೇ ಸಿದ್ಧಪಡಿಸಿಕೊಂಡು, ಕೂಡಲೇ ಅರ್ಜಿ ಸಲ್ಲಿಸಿ ಮತ್ತು ಈ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ಧನ್ಯವಾದಗಳು.

Latest News