ಇವತ್ತಿನ ಕಾಲದಲ್ಲಿ ಸಾವಿರ ರೂಪಾಯಿಗೆ ಬೆಲೆಯೇ ಇಲ್ಲದಂತಾಗಿದೆ. ಅಂತಹದ್ರಲ್ಲಿ ತಿಂಗಳಿಗೆ ಬರೀ 1,000 ರೂಪಾಯಿ ಪೆನ್ಷನ್ ಇಟ್ಟುಕೊಂಡು ಜೀವನ ಮಾಡೋದು ಎಷ್ಟು ಕಷ್ಟ ಅನ್ನೋದು ನಿವೃತ್ತ ನೌಕರರಿಗೆ ಚೆನ್ನಾಗಿ ಗೊತ್ತು. ಊಟ, ತಿಂಡಿ ಬಿಡಿ, ತಿಂಗಳ ಔಷಧಿ ಖರ್ಚಿಗೂ ಆ ಹಣ ಸಾಲುತ್ತಿಲ್ಲ. ದಿನೇ ದಿನೇ ಏರುತ್ತಿರುವ ಮನೆ ಬಾಡಿಗೆ ಮತ್ತು ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಈಗ ಕೇಂದ್ರ ಸರ್ಕಾರವು ಕನಿಷ್ಠ ಪೆನ್ಷನ್ ಮೊತ್ತವನ್ನು 1,500 ರಿಂದ 3,000 ರೂಪಾಯಿವರೆಗೆ ಹೆಚ್ಚಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.
ಈ ಪೆನ್ಷನ್ ಪಡೀಲಿಕ್ಕೆ ಯಾರ್ಯಾರು ಅರ್ಹರು?
ನೀವು EPS-95 ಯೋಜನೆಯಡಿ ಪೆನ್ಷನ್ ಸೌಲಭ್ಯ ಪಡೆಯಬೇಕೆಂದರೆ ಕೆಲವು ಮುಖ್ಯ ನಿಯಮಗಳಿವೆ:
- ನೀವು ಕೆಲಸದಲ್ಲಿದ್ದಾಗ EPFO ಮೂಲಕ ಕನಿಷ್ಠ 10 ವರ್ಷಗಳ ಕಾಲ ವಂತಿಗೆ (Contribution) ಪಾವತಿಸಿರಬೇಕು.
- ಸಾಮಾನ್ಯವಾಗಿ 15,000 ರೂಪಾಯಿ ಒಳಗಿನ ಸಂಬಳದ ಆಧಾರದ ಮೇಲೆ ಈ ಪೆನ್ಷನ್ ಲೆಕ್ಕ ಹಾಕಲಾಗುತ್ತದೆ.
- ಕಡಿಮೆ ಸಂಬಳ ಬರುವ ಮತ್ತು ಸದ್ಯಕ್ಕೆ ಅಲ್ಪ ಮೊತ್ತದ ಪೆನ್ಷನ್ ಪಡೆಯುತ್ತಿರುವ ನೌಕರರಿಗೆ ಈ ಏರಿಕೆ ನಿಜಕ್ಕೂ ಲಾಟರಿ ಹೊಡೆದಂತೆ! ಆದರೆ ಈಗಾಗಲೇ ಹೆಚ್ಚಿನ ಪೆನ್ಷನ್ ಆಯ್ಕೆ ಮಾಡಿಕೊಂಡವರಿಗೆ ಇದರಿಂದ ದೊಡ್ಡ ಲಾಭ ಇರುವುದಿಲ್ಲ.
ನಿಮ್ಮ ಪೆನ್ಷನ್ ಮೊತ್ತ ನೀವೇ ಲೆಕ್ಕ ಹಾಕಿ
ನಿಮ್ಮ ಕೈಗೆ ಎಷ್ಟು ಪೆನ್ಷನ್ ಬರುತ್ತೆ ಅನ್ನೋದನ್ನ ಈ ಕೆಳಗಿನ ಸಿಂಪಲ್ ಫಾರ್ಮುಲಾ ಮೂಲಕ ತಿಳಿಯಬಹುದು.
ಒಂದು ಮಸ್ತ್ ವಿಷಯ ಅಂದ್ರೆ, ನೀವು 20 ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದ್ದರೆ ಸರ್ಕಾರ ನಿಮಗೆ ಬೋನಸ್ ಆಗಿ ಇನ್ನೂ 2 ವರ್ಷಗಳನ್ನು ಹೆಚ್ಚುವರಿಯಾಗಿ ಸೇರಿಸುತ್ತದೆ. ಅಂದರೆ ನೀವು ಎಷ್ಟು ಹೆಚ್ಚು ವರ್ಷ ಸರ್ವಿಸ್ ಮಾಡ್ತೀರೋ, ಅಷ್ಟು ಹೆಚ್ಚು ಪೆನ್ಷನ್ ನಿಮ್ಮದಾಗುತ್ತದೆ.
ಯಾರಿಗೆ ಎಷ್ಟು ಲಾಭವಾಗುತ್ತೆ?
ಸರ್ಕಾರ ಪೆನ್ಷನ್ ಮೊತ್ತವನ್ನು ಎಷ್ಟು ಫಿಕ್ಸ್ ಮಾಡುತ್ತದೆ ಎನ್ನುವುದರ ಮೇಲೆ ನಿಮ್ಮ ಲಾಭ ನಿರ್ಧಾರವಾಗುತ್ತದೆ.
3,000 ರೂ. ಪೆನ್ಷನ್ ಆದರೆ - 10,000 ದಿಂದ 14,000 ರೂಪಾಯಿ ಸಂಬಳವಿದ್ದು, ಸುಮಾರು 14 ವರ್ಷ ಕೆಲಸ ಮಾಡಿದವರಿಗೆ ಇದು ಬಂಪರ್ ಲಾಭ. ಇವರ ಈಗಿನ ಪೆನ್ಷನ್ 3,000 ಕ್ಕಿಂತ ಕಡಿಮೆ ಇರುವುದರಿಂದ, ಇನ್ಮುಂದೆ ನೇರವಾಗಿ 3,000 ರೂಪಾಯಿ ಕೈ ಸೇರುತ್ತದೆ.
2,500 ರೂ. ಪೆನ್ಷನ್ ಆದರ - 12 ವರ್ಷ ಕೆಲಸ ಮಾಡಿ ಕಡಿಮೆ ಸಂಬಳ ಪಡೆಯುವವರಿಗೆ ಇದರಿಂದ ನೇರ ಲಾಭವಾಗಲಿದೆ.
ಸಂಬಳ 15,000 ಇದ್ದರೆ - ಇವರಿಗೆ ಈಗಾಗಲೇ ಲೆಕ್ಕಾಚಾರದ ಪ್ರಕಾರ ಪೆನ್ಷನ್ ಹೆಚ್ಚೇ ಬರುವುದರಿಂದ ದೊಡ್ಡ ಬದಲಾವಣೆ ಕಾಣಿಸದಿರಬಹುದು. ಉದಾಹರಣೆಗೆ, 30 ವರ್ಷ ಕೆಲಸ ಮಾಡಿದವರಿಗೆ ಈಗಲೇ 6,800 ರೂಪಾಯಿಗೂ ಹೆಚ್ಚು ಪೆನ್ಷನ್ ಬರುತ್ತದೆ.
ಅಂದಾಜು ಪೆನ್ಷನ್ ಪಟ್ಟಿ ಇಲ್ಲಿದೆ:
| ಸಂಬಳ (ರೂ.) | ಕೆಲಸದ ಅವಧಿ | ಅಂದಾಜು ಪೆನ್ಷನ್ (ರೂ.) |
| 15,000 | 10 ವರ್ಷ | 2,143 |
| 15,000 | 30 ವರ್ಷ | 6,800+ |
| 10,000 | 10 ವರ್ಷ | 1,429 |
ಇವತ್ತಿನ ಸುದ್ದಿಯ ಮುಖ್ಯಾಂಶಗಳು:
ಪ್ರಸ್ತಾವನೆ - ಕನಿಷ್ಠ ಪೆನ್ಷನ್ 1,000 ದಿಂದ 3,000 ರೂಪಾಯಿಗೆ ಏರಿಸುವ ಸಾಧ್ಯತೆ.
ಫಲಾನುಭವಿಗಳು - ಖಾಸಗಿ ವಲಯದ ಲಕ್ಷಾಂತರ ನಿವೃತ್ತ ನೌಕರರು.
ಕಡ್ಡಾಯ: ಕನಿಷ್ಠ 10 ವರ್ಷಗಳ ನಿರಂತರ ಸೇವೆ ಇರಬೇಕು.
ನಿರೀಕ್ಷೆ - 2026ರಲ್ಲಿ ಈ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆಯಾಗುವ ಚಾನ್ಸ್ ಇದೆ.