ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪೆನ್ಷನರ್‌ಗಳಿಗೆ ಇಲ್ಲಿದೆ ಒಂದು ಭರ್ಜರಿ ಗುಡ್ ನ್ಯೂಸ್! ಇಡೀ ದೇಶಾದ್ಯಂತ ಇರೋ ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಸಖತ್ ಕುತೂಹಲದಿಂದ ಕಾಯ್ತಾ ಇರೋ 8ನೇ ವೇತನ ಆಯೋಗದ (8th Pay Commission) ಕೆಲಸಗಳು ಈಗ ಭರದಿಂದ ಸಾಗಿವೆ!
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದಲ್ಲಿ ರಚನೆ ಆಗಿರೋ ಈ ಕಮಿಷನ್, ಸದ್ಯ ದೇಶದ ಬೇರೆ ಬೇರೆ ಕಡೆಗಳಿಗೆ ಭೇಟಿ ನೀಡಿ ಅಲ್ಲಿನ ನೌಕರರ ಸಂಘಟನೆಗಳ ಜೊತೆ ಮೀಟಿಂಗ್ ನಡೆಸಿ ಚರ್ಚೆ ಮಾಡ್ತಾ ಇದೆ. ಈ ಬೆನ್ನಲ್ಲೇ ಈಗ ನೌಕರರ ಸಂಬಳ ಮತ್ತು ಪೆನ್ಷನ್ ನಿರ್ಧಾರ ಮಾಡೋ 'ಫಿಟ್‌ಮೆಂಟ್ ಫ್ಯಾಕ್ಟರ್' (Fitment Factor) ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಹೊಸ ಪೇ ಸ್ಕೇಲ್ ಜಾರಿಯಾದ್ರೆ ನೌಕರರ ಕನಿಷ್ಠ ಬೇಸಿಕ್ ಸ್ಯಾಲರಿ ಬರೋಬ್ಬರಿ ಮೂರು ಪಟ್ಟು ಹೆಚ್ಚಾಗೋ ಸಾಧ್ಯತೆ ಇದೆ ಅಂತ ರೈಲ್ವೆ ಮತ್ತು ರಕ್ಷಣಾ ಇಲಾಖೆಯ ಕಾರ್ಮಿಕ ಸಂಘಟನೆಗಳು ಅಂದಾಜಿಸಿವೆ!
ಏನಿದು 'ಫಿಟ್‌ಮೆಂಟ್ ಫ್ಯಾಕ್ಟರ್'?
ತುಂಬಾ ಸಿಂಪಲ್ ಆಗಿ ಹೇಳ್ಬೇಕಂದ್ರೆ, ಕೇಂದ್ರ ಸರ್ಕಾರಿ ನೌಕರರ ಹಳೆಯ ಬೇಸಿಕ್ ಸಂಬಳವನ್ನು ಹೊಸ ಪೇ-ಸ್ಟ್ರಕ್ಚರ್‌ಗೆ ಬದಲಾಯಿಸಲು ಬಳಸುವ ಒಂದು ಮ್ಯಾಥಮೆಟಿಕಲ್ ನಂಬರ್ ಇದಾಗಿದೆ. ಈಗಿರೋ ಬೇಸಿಕ್ ಸಂಬಳವನ್ನು ಈ ನಂಬರ್‌ನಿಂದ ಗುಣಿಸಿ ಹೊಸ ಸಂಬಳವನ್ನು ಲೆಕ್ಕ ಹಾಕಲಾಗುತ್ತದೆ.
ಹಿಂದಿನ 7ನೇ ವೇತನ ಆಯೋಗದಲ್ಲಿ ಈ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು 2.57 ಎಂದು ಫಿಕ್ಸ್ ಮಾಡಲಾಗಿತ್ತು. ಇದರಿಂದಾಗಿ ಆಗ ನೌಕರರ ಕನಿಷ್ಠ ಬೇಸಿಕ್ ಸಂಬಳ 7,000 ರೂಪಾಯಿಯಿಂದ ಒಂದೇ ಬಾರಿಗೆ 18,000 ರೂಪಾಯಿಗೆ ಏರಿಕೆಯಾಗಿತ್ತು. ಆದರೆ ಈಗ ದೇಶದಲ್ಲಿ ಹೆಚ್ಚಿರೋ ಹಣದುಬ್ಬರ ಮತ್ತು ಜೀವನ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಭರ್ಜರಿಯಾಗಿ ಹೆಚ್ಚಿಸಬೇಕು ಅಂತ ನೌಕರರ ಸಂಘಗಳು ಪಟ್ಟು ಹಿಡಿದಿವೆ.
18 ಸಾವಿರದಿಂದ 72 ಸಾವಿರಕ್ಕೆ ಜಂಪ್ ಆಗುತ್ತಾ ಬೇಸಿಕ್ ಸಂಬಳ?
ಸದ್ಯ ನಡೀತಾ ಇರೋ ಮೀಟಿಂಗ್‌ಗಳಲ್ಲಿ ಬೇರೆ ಬೇರೆ ನೌಕರರ ಸಂಘಗಳು ತಮ್ಮದೇ ಆದ ಡಿಮ್ಯಾಂಡ್‌ಗಳನ್ನು ಕಮಿಷನ್ ಮುಂದೆ ಇಟ್ಟಿವೆ:
ನ್ಯಾಷನಲ್ ಕೌನ್ಸಿಲ್ (NC-JCM) - ಇವರು ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು 3.83ಕ್ಕೆ ಹೆಚ್ಚಿಸಬೇಕು ಅಂತ ಪ್ರಪೋಸಲ್ ಇಟ್ಟಿದ್ದಾರೆ. ಒಂದು ವೇಳೆ ಸರ್ಕಾರ ಇದಕ್ಕೆ ಒಪ್ಪಿದರೆ, ಕನಿಷ್ಠ ಬೇಸಿಕ್ ಸ್ಯಾಲರಿ ಈಗಿರೋ 18,000 ರೂಪಾಯಿಯಿಂದ ನೇರವಾಗಿ 51,480 ರೂಪಾಯಿಗೆ ಏರಲಿದೆ.
ಭಾರತೀಯ ಪ್ರತಿರಕ್ಷ ಮಜ್ದೂರ್ ಸಂಘ (BPMS) - ಇವರು ಒಂದು ಹೆಜ್ಜೆ ಮುಂದೆ ಹೋಗಿ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು 4.0 ರಷ್ಟು ಹೆಚ್ಚಿಸಬೇಕು ಮತ್ತು ಪ್ರತಿ ವರ್ಷ ಕೊಡೋ ಇನ್ಕ್ರಿಮೆಂಟ್ ಅನ್ನು ಶೇ. 3 ರಿಂದ ಶೇ. 6 ಕ್ಕೆ ಏರಿಸಬೇಕು ಅಂತ ಡಿಮ್ಯಾಂಡ್ ಮಾಡಿದ್ದಾರೆ. ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೆ, ಕನಿಷ್ಠ ಬೇಸಿಕ್ ಸಂಬಳ ಬರೋಬ್ಬರಿ 72,000 ರೂಪಾಯಿ ಆಗಲಿದೆ!
ರೈಲ್ವೆ ಟೆಕ್ನಿಕಲ್ ಸ್ಟಾಫ್ ಅಸೋಸಿಯೇಷನ್ (IRTSA) - ಇವರು ನೌಕರರ ಲೆವೆಲ್ ಆಧಾರದ ಮೇಲೆ (ಲೆವೆಲ್ 1 ರಿಂದ ಲೆವೆಲ್ 18 ರವರೆಗೆ) 2.92 ರಿಂದ 4.38 ರವರೆಗೆ ಬೇರೆ ಬೇರೆ ಫಿಟ್‌ಮೆಂಟ್ ಫ್ಯಾಕ್ಟರ್ ನೀಡಬೇಕು ಮತ್ತು ಕನಿಷ್ಠ ಸಂಬಳ 52,000 ರೂಪಾಯಿ ಇರಬೇಕು ಅಂತ ಹೊಸ ಲೆಕ್ಕಾಚಾರ ತಂದಿದ್ದಾರೆ.
ಹೊಸ ಸಂಬಳ ಕೈ ಸೇರೋದು ಯಾವಾಗ? ಭಾರಿ 'ಅರಿಯರ್ಸ್' ಗ್ಯಾರಂಟಿ!
ನಿಜವಾಗಿ ಈ ಹೊಸ ಸಂಬಳದ ಪರಿಷ್ಕರಣೆ ಜನವರಿ 1, 2026 ರಿಂದಲೇ ಜಾರಿಗೆ ಬರಬೇಕಾಗಿತ್ತು. ಅದಕ್ಕಾಗಿಯೇ 8ನೇ ವೇತನ ಆಯೋಗ ತನ್ನ ಕೆಲಸವನ್ನು ಸ್ಪೀಡ್ ಅಪ್ ಮಾಡಿದೆ. ಮೇ 18 ಮತ್ತು 19 ರಂದು ಹೈದರಾಬಾದ್‌ಗೆ ಭೇಟಿ ನೀಡಿದ್ದ ಕಮಿಷನ್ ಮೆಂಬರ್ಸ್, ಜೂನ್ ಮೊದಲ ವಾರದಲ್ಲಿ ಶ್ರೀನಗರ್, ಲಡಾಖ್ ಮತ್ತು ಲಕ್ನೋಗೆ ಹೋಗಿ ನೌಕರರ ಅಭಿಪ್ರಾಯಗಳನ್ನು ಕಲೆಹಾಕಲಿದ್ದಾರೆ.
ಕ್ಯಾಬಿನೆಟ್ ಸೆಕ್ರೆಟರಿ ಟಿ.ವಿ. ಸೋಮನಾಥನ್ ನೇತೃತ್ವದಲ್ಲಿ ನಡೆದ ಜಂಟಿ ಸಮಾಲೋಚನಾ ಸಮಿತಿ (JCM) ಮೀಟಿಂಗ್‌ನಲ್ಲಿ, ಪ್ರತಿ 10 ವರ್ಷಕ್ಕೊಮ್ಮೆ ಅಲ್ಲದೆ ಪ್ರತಿ 5 ವರ್ಷಕ್ಕೊಮ್ಮೆ ಪೆನ್ಷನ್ ಪರಿಷ್ಕರಣೆ ಮಾಡಬೇಕೆಂಬ ಪಾರ್ಲಿಮೆಂಟರಿ ಕಮಿಟಿಯ ಶಿಫಾರಸನ್ನು ಕೂಡ ಪರಿಶೀಲಿಸಲು ನಿರ್ಧರಿಸಲಾಗಿದೆ.
ಆದರೆ ಈ ಇಡೀ ಡೇಟಾವನ್ನು ಅನಾಲಿಸಿಸ್ ಮಾಡಿ ರಿಪೋರ್ಟ್ ರೆಡಿ ಮಾಡಲು ಸರ್ಕಾರ ಕಮಿಷನ್‌ಗೆ ಸುಮಾರು 18 ತಿಂಗಳ ಟೈಮ್ ಕೊಟ್ಟಿದೆ. ಇದರ ಪ್ರಕಾರ ನೋಡಿದ್ರೆ, 2027ರ ಮಧ್ಯಭಾಗದ ವೇಳೆಗೆ ಕಮಿಷನ್ ತನ್ನ ಫೈನಲ್ ರಿಪೋರ್ಟ್ ಅನ್ನು ಕೇಂದ್ರ ಸರ್ಕಾರಕ್ಕೆ ಸಬ್ಮಿಟ್ ಮಾಡಬಹುದು. ಆಮೇಲೆ ಕೇಂದ್ರ ಕ್ಯಾಬಿನೆಟ್ ಇದರ ಮೇಲೆ ಅಂತಿಮ ನಿರ್ಧಾರ ತಗೋಬೇಕಾಗುತ್ತೆ. ಅಂದರೆ, ಹೊಸ ಸಂಬಳ ನೌಕರರ ಕೈ ಸೇರಲು 2027 ರವರೆಗೆ ಕಾಯಲೇಬೇಕು.
ಬಾಕಿ ಹಣದ ಬಂಪರ್ ಆಫರ್ - ಸಂಬಳ ಕೈ ಸೇರೋದು 2027 ಕ್ಕೆ ತಡವಾದ್ರೂ ನೌಕರರು ತಲೆಬಿಸಿ ಮಾಡ್ಕೊಳ್ಳೋ ಅಗತ್ಯವಿಲ್ಲ. ಯಾಕಂದ್ರೆ ಈ ಹೊಸ ಪೇ ಸ್ಕೇಲ್ ಜನವರಿ 1, 2026 ರ ಹಳೇ ಡೇಟ್‌ನಿಂದಲೇ ಅನ್ವಯ ಆಗೋದ್ರಿಂದ, ಮಧ್ಯದ ತಿಂಗಳುಗಳ ಕಂಪ್ಲೀಟ್ ಬಾಕಿ ಹಣ (Arrears) ಒಂದೇ ಬಾರಿಗೆ ನೌಕರರ ಬ್ಯಾಂಕ್ ಅಕೌಂಟ್‌ಗೆ ಜಮೆಯಾಗಲಿದೆ! ಅಲ್ಲಿಯವರೆಗೆ 7ನೇ ವೇತನ ಆಯೋಗದ ನಿಯಮಗಳ ಪ್ರಕಾರವೇ ತುಟ್ಟಿಭತ್ಯೆ (DA) ಹೆಚ್ಚಳದಂತಹ ಆರ್ಥಿಕ ಲಾಭಗಳು ಮುಂದುವರಿಯಲಿವೆ.