ಸಿನಿಮಾಕಾನ್‌ನಲ್ಲಿ ಯಶ್ ಬಾಂಬ್ !! 'ಟಾಕ್ಸಿಕ್' ಸಿನಿಮಾದ ಸೀಕ್ರೆಟ್ ಕಥೆ ಬಿಚ್ಚಿಟ್ಟ ರಾಕಿಂಗ್ ಸ್ಟಾರ್!!

ಯಶ್ ಅಭಿಮಾನಿಗಳು ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿದೆ. ಸಿನಿಮಾಕಾನ್ 2026ರಲ್ಲಿ ಮಿಂಚುತ್ತಿರುವ ನಮ್ಮ 'ರಾಕಿಂಗ್ ಸ್ಟಾರ್' ಯಶ್, ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಗ್ಗೆ ಯಾರಿಗೂ ಗೊತ್ತಿಲ್ಲದ ಸೀಕ್ರೆಟ್ ಒಂದನ್ನ ಬಾಯಿಬಿಟ್ಟಿದ್ದಾರೆ. ಈ ಸಿನಿಮಾ ಬರೀ ಆಕ್ಷನ್ ಅಲ್ಲ, ಇದರಲ್ಲಿ ಒಂದು ಎಮೋಷನಲ್ ಸೇಡಿನ ಕಥೆ ಇದೆ ಅಂತ ಯಶ್ ಹೇಳಿದ್ದಾರೆ.


ಟಾಕ್ಸಿಕ್ ಸೀಕ್ರೆಟ್ ರಿವೀಲ್ – ಯಶ್ ಹೇಳಿದ ಅಪ್ಪ-ಮಗನ ಸೇಡಿನ ಕಥೆ | Photo Credit: https://x.com/RakeshGouda1818
ಟಾಕ್ಸಿಕ್ ಸೀಕ್ರೆಟ್ ರಿವೀಲ್ – ಯಶ್ ಹೇಳಿದ ಅಪ್ಪ-ಮಗನ ಸೇಡಿನ ಕಥೆ | Photo Credit: https://x.com/RakeshGouda1818

ಅಪ್ಪ-ಮಗನ ನಡುವೆ ಜಿದ್ದಾಜಿದ್ದಿ?

ಹಾಲಿವುಡ್ ರಿಪೋರ್ಟರ್‌ಗಳಿಗೆ ನೀಡಿದ ಸಂದರ್ಶನದಲ್ಲಿ ಯಶ್ ಸಿನಿಮಾದ ಕಥೆಯ ಎಳೆಯನ್ನು ಬಿಚ್ಚಿಟ್ಟಿದ್ದಾರೆ. "ಟಾಕ್ಸಿಕ್ ಸಿನಿಮಾ ರಾಮಾಯಣಕ್ಕಿಂತ ಸಾಹಸಮಯ ಮತ್ತು ವಿಭಿನ್ನವಾಗಿದೆ. ಇದು ದೊಡ್ಡವರಿಗಾಗಿ ಮಾಡಿರೋ ಒಂದು ವೈಲ್ಡ್ ಫ್ಯಾಂಟಸಿ ಕಥೆ. ಮುಖ್ಯವಾಗಿ ಇಲ್ಲಿ ತಂದೆ ಮತ್ತು ಮಗನ ನಡುವಿನ ಸೇಡಿನ ಕಥೆ ಇರಲಿದೆ" ಅಂತ ಯಶ್ ಹೇಳುವ ಮೂಲಕ ಎಲ್ಲರಲ್ಲೂ ಕುತೂಹಲ ಹೆಚ್ಚಿಸಿದ್ದಾರೆ.

ಈ ಮಾತಿನಿಂದ ಒಂದು ವಿಷಯ ಆಲ್ಮೋಸ್ಟ್ ಕನ್ಫರ್ಮ್ ಆದಂತಿದೆ ಅದುವೇ ಯಶ್ ಅವರ ದ್ವಿಪಾತ್ರ ಚಿತ್ರದಲ್ಲಿ 'ರಾಯ' ಮತ್ತು 'ಟಿಕೆಟ್' ಎಂಬ ಎರಡು ಪಾತ್ರಗಳು ಅಪ್ಪ-ಮಗನಾಗಿ ಕಾಣಿಸಿಕೊಳ್ಳಲಿವೆ ಅನ್ನೋದು ಈಗ ಗಾಂಧಿನಗರದಲ್ಲಿ ಹಾಟ್ ಟಾಪಿಕ್ ಆಗಿದೆ.

ಗೋವಾ ಬ್ಯಾಕ್‌ಡ್ರಾಪ್‌ನಲ್ಲಿ ಗ್ಯಾಂಗ್‌ಸ್ಟರ್ ಆಟ

ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ಈ ಸಿನಿಮಾದ ಕಥೆ ನಡೆಯೋದು ನಮ್ಮ ಪಕ್ಕದ ರಾಜ್ಯ ಗೋವಾದಲ್ಲಿ. ಭಾರತಕ್ಕೆ 1947ರಲ್ಲೇ ಸ್ವಾತಂತ್ರ್ಯ ಸಿಕ್ಕರೂ, ಗೋವಾ ಮಾತ್ರ 1961ರವರೆಗೂ ಪೋರ್ಚುಗೀಸರ ಕೈಯಲ್ಲೇ ಇತ್ತು. ಆ ಕಾಲಘಟ್ಟದಲ್ಲಿ ನಡೆಯುವ ಒಂದು ಕಾಲ್ಪನಿಕ ಗ್ಯಾಂಗ್‌ಸ್ಟರ್ ಕಥೆಯನ್ನ ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ.

ಯಶ್ ಅವರೇ ಹೇಳುವಂತೆ, "ಇದು ಬರೀ ಗುಂಡು-ಬಾಂಬಿನ ಆಕ್ಷನ್ ಸಿನಿಮಾ ಅಲ್ಲ. ಇದರಲ್ಲಿ ಸೈಕಲಾಜಿಕಲ್ ಆಟಗಳಿವೆ, ಎಮೋಷನ್ಸ್ ಇವೆ. ನಾನು ಕೇವಲ ಆಕ್ಷನ್ ಹೀರೋ ಮಾತ್ರವಲ್ಲ, ಒಬ್ಬ ಒಳ್ಳೆ ನಟ ಅಂತ ಕರೆಸಿಕೊಳ್ಳಲು ಇಷ್ಟಪಡುತ್ತೇನೆ" ಎಂದಿದ್ದಾರೆ.

ತಾರಾಗಣದಲ್ಲಿ ಯಾರ್ಯಾರಿದ್ದಾರೆ?
ಈ ಸಿನಿಮಾದಲ್ಲಿ ಬರೀ ಯಶ್ ಮಾತ್ರವಲ್ಲ, ದೊಡ್ಡ ತಾರಾಬಳಗವೇ ಇದೆ:

ನಟಿಯರು - ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ.

ಸಂಗೀತ - ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಮ್ಯೂಸಿಕ್ ಈ ಚಿತ್ರಕ್ಕೂ ಇರಲಿದೆ.

ನಿರ್ಮಾಣ - ಕೆ. ವೆಂಕಟ್ ನಾರಾಯಣ್ ಮತ್ತು ಸ್ವತಃ ಯಶ್ ಅವರೇ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ರಿಲೀಸ್ ಡೇಟ್ ಯಾವಾಗ?

ಎಲ್ಲವೂ ಅಂದುಕೊಂಡಂತೆ ನಡೆದರೆ, ಜೂನ್ 4ರಂದು ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ 'ಟಾಕ್ಸಿಕ್' ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಕೆಜಿಎಫ್ ನಂತರ ಯಶ್ ಅವರ ರೇಂಜ್ ಚೇಂಜ್ ಆಗಿರೋದ್ರಿಂದ, ಈ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯೋದ್ರಲ್ಲಿ ಡೌಟೇ ಇಲ್ಲ.

'ರಾಯ'ನ ಅವತಾರದಲ್ಲಿ ಯಶ್ ಅಪ್ಪ-ಮಗನಾಗಿ ಹೇಗೆ ಮೋಡಿ ಮಾಡ್ತಾರೆ ಅನ್ನೋದನ್ನ ನೋಡಲು ಇಡೀ ದೇಶವೇ ಕಾಯ್ತಿದೆ. ಇದು ಬರೀ ಸಿನಿಮಾವಲ್ಲ, ಇದು ಯಶ್ ಅವರ ಕೆರಿಯರ್‌ನ ಮತ್ತೊಂದು ಮಾಸ್ಟರ್‌ಪೀಸ್ ಆಗೋ ಎಲ್ಲಾ ಲಕ್ಷಣಗಳು ಕಾಣ್ತಿವೆ.