ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಸಿನಿಮಾ 'ರಾಮಾಯಣ'ದ ಲೋಕ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಆದರೆ ಚಿತ್ರತಂಡ ಮಾತ್ರ ಒಂದೇ ಒಂದು ಸಣ್ಣ ತುಣುಕಿಗೆ ಸುಮ್ಮನಾಗುವ ಲಕ್ಷಣ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸುತ್ತಲೇ ಇದೆ.
ಮೊದಲ ಝಲಕ್‌ನಲ್ಲಿ ಯಶ್ ಎಲ್ಲಿ?
ಚಿತ್ರತಂಡ ಯಶ್ ಅವರ ಒಂದು ಸಣ್ಣ ಗ್ಲಿಂಪ್ಸ್ ಬಿಡುಗಡೆ ಮಾಡಿತ್ತು. ಅದರಲ್ಲಿ ಪುಷ್ಪಕ ವಿಮಾನದ ಅದ್ಭುತ ಲೋಕ ಮತ್ತು ತಾಂತ್ರಿಕ ಶ್ರೀಮಂತಿಕೆಯನ್ನು ಮಾತ್ರ ತೋರಿಸಲಾಗಿತ್ತು. ಇದನ್ನು ನೋಡಿ ಸಿನಿಮಾ ಪ್ರಿಯರು ಬೆರಗಾಗಿದ್ದೇನೋ ನಿಜ. ಆದರೆ, ನಮ್ಮ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಮಾತ್ರ ಸಣ್ಣದೊಂದು ಬೇಸರ ಕಾಡಿತು. ಕಾರಣ, ಇಡೀ ಪ್ರಪಂಚವೇ 'ರಾವಣ'ನ ಪಾತ್ರದಲ್ಲಿ ಯಶ್ ಅವರನ್ನು ನೋಡಲು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದೆ. ಆದರೆ ಈ ಮೊದಲ ಝಲಕ್‌ನಲ್ಲಿ ಯಶ್ ಅವರ ಲುಕ್ ಅನ್ನು ರಿವೀಲ್ ಮಾಡದೆ, ಕೇವಲ ಅವರ ವರ್ಕ್ ಮತ್ತು ಆ ಭವ್ಯವಾದ ಲೋಕವನ್ನಷ್ಟೇ ತೋರಿಸಲಾಗಿತ್ತು.
"ನಮ್ಮ ಬಾಸ್ ಎಲ್ಲಿ?" ಅನ್ನೋದು ಅಭಿಮಾನಿಗಳ ಸದ್ಯದ ಪ್ರಶ್ನೆ ಆದರೆ, ಇದೇ ಈಗ ಸಿನಿಮಾದ ಮೇಲಿರುವ ಕುತೂಹಲವನ್ನು ಡಬಲ್ ಮಾಡಿದೆ.
AI ಮೂಲಕ ಸೃಷ್ಟಿಯಾದ 'ರಾವಣ'ನ ಲುಕ್ ವೈರಲ್
ಸಿನಿಮಾ ತಂಡ ಯಶ್ ಅವರನ್ನು ತೋರಿಸದಿದ್ದರೆ ಏನಂತೆ? ಅಭಿಮಾನಿಗಳೇನು ಸುಮ್ಮನಿದ್ದಾರಾ? ಯಶ್ ಅವರ ಅಭಿಮಾನಿಗಳ ಕ್ರಿಯೇಟಿವಿಟಿ ಈಗ ಮುಗಿಲು ಮುಟ್ಟಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಿ ಯಶ್ ಅವರನ್ನು ರಾವಣನ ಅವತಾರದಲ್ಲಿ ಹೇಗಿರಬಹುದು ಎಂದು ಕ್ರಿಯೇಟ್ ಮಾಡಿರುವ ವಿಡಿಯೋಗಳು ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿವೆ. ಆ ವಿಡಿಯೋಗಳಲ್ಲಿನ ಯಶ್ ಅವರ ರಗಡ್ ಲುಕ್, ಆ ಗತ್ತು ನೋಡಿದರೆ, "ನಿಜವಾಗಿಯೂ ಸಿನಿಮಾದಲ್ಲಿ ಹೀಗೆ ಇರ್ತಾರಾ?" ಎಂಬ ಚರ್ಚೆ ಶುರುವಾಗಿದೆ.
Ravanasura 🥵@malhotra_namit Ramayana
Directed By @niteshtiwari22
In cinemas, globally - Diwali 2026 & 2027#Yash #Ramayana #YashBOSS #Ravana pic.twitter.com/1poTgZwdqt— Toxic Raya (@RockyRayaRavana) May 9, 2026
ಶೀಘ್ರದಲ್ಲೇ ಬರಲಿದೆ 'ಪವರ್‌ಫುಲ್' ಅಪ್‌ಡೇಟ್
ಈಗ ಕೇಳಿಬರುತ್ತಿರುವ ಅಸಲಿ ಸುದ್ದಿಯೆಂದರೆ, ಚಿತ್ರತಂಡ ಕೇವಲ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿಲ್ಲ. ಇದು ಮಹಾಕಾವ್ಯದ ಮಟ್ಟದಲ್ಲಿ ನಡೆಯುತ್ತಿರುವ ಒಂದು ಅದ್ಭುತ ಲೋಕದ ಸೃಷ್ಟಿ. ಮಾಹಿತಿಯ ಪ್ರಕಾರ, ಶೀಘ್ರದಲ್ಲೇ ಚಿತ್ರತಂಡದಿಂದ ಎರಡು ಪವರ್‌ಫುಲ್ ಅಪ್‌ಡೇಟ್‌ಗಳು ಹೊರಬರಲಿವೆ.
ಮುಂದಿನ ಟೀಸರ್‌ನಲ್ಲಿ ಯಶ್ ಅವರ ಅಸಲಿ ಲುಕ್ ಕಾಣಿಸಿಕೊಳ್ಳಲಿದೆಯಾ? ಅಥವಾ ಅವರ ಪಾತ್ರದ ಮತ್ತಷ್ಟು ಇಂಟರೆಸ್ಟಿಂಗ್ ವಿಷಯಗಳು ಹೊರಬರಲಿವೆಯಾ? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅಭಿಮಾನಿಗಳು ಅಂತೂ ಸೆಕೆಂಡ್ ಟೀಸರ್‌ನಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಲು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ.
ಯಶ್ ಅಂದ್ರೆ ಕೇವಲ ನಟನಲ್ಲ, ಅವರೊಂದು ಬ್ರ್ಯಾಂಡ್. ರಾಮಾಯಣದಲ್ಲಿ ಅವರು ರಾವಣನಾಗಿ ಯಾವ ರೀತಿ ಅಬ್ಬರಿಸಲಿದ್ದಾರೆ ಎಂಬುದು ಇಡೀ ಭಾರತೀಯ ಚಿತ್ರರಂಗದ ಕುತೂಹಲ. ಈ 'ವರ್ಲ್ಡ್ ಆಫ್ ರಾಮಾಯಣ' ದಲ್ಲಿ ನಮ್ಮ ಕನ್ನಡದ ನಟ ವಿಶ್ವಮಟ್ಟದಲ್ಲಿ ಹೇಗೆ ಮಿಂಚಲಿದ್ದಾರೆ ಎಂದು ನೋಡಲು ನಾವೂ ಕಾಯುತ್ತಿದ್ದೇವೆ.