ವಿನೋದ್ ಗೊಬ್ರಗಾಲ-ನಿಸರ್ಗ ಪ್ರೇಮಾಯಣ? ಹುಟ್ಟುಹಬ್ಬದ ವಿಡಿಯೋ ನೋಡಿ 'ಲವ್ ಕನ್ಫರ್ಮ್' ಅಂದ ಅಭಿಮಾನಿಗಳು!

ಸೋಶಿಯಲ್ ಮೀಡಿಯಾದಲ್ಲಿ ಈಗ ಭಾರೀ ಟ್ರೆಂಡ್ ಆಗುತ್ತಿರುವ ಹೆಸರು ಅಂದ್ರೆ ವಿನೋದ್ ಗೊಬ್ರಗಾಲ. “ಸಿಂಗಲ್” ಅಂತಾ ಸ್ಕಿಟ್‌ಗಳಲ್ಲಿ ಹೇಳಿಕೊಂಡು ಬಂದಿರುವ ವಿನೋದ್ ಈಗ ಲವ್ ಟ್ರ್ಯಾಕ್‌ನಲ್ಲಿ ಇದ್ದಾರಾ? ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ಕೇಂದ್ರ: ವಿನೋದ್ ಗೊಬ್ರಗಾಲ
ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ಕೇಂದ್ರ: ವಿನೋದ್ ಗೊಬ್ರಗಾಲ

ವಿನೋದ್ ಗೊಬ್ರಗಾಲಾ ಸಿಂಗಲ್ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಅನೇಕ ಕಾಮಿಡಿ ಸ್ಕಿಟ್‌ಗಳಲ್ಲಿ “ಸಿಂಗಲ್ ಮಿಂಗಲ್ ಆಗೋಕೆ ರೆಡಿ” ಅಂತಾ ಹೇಳಿ ನಗಿಸಿದ್ದಾರೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಶೇಷ ವಿಡಿಯೋ ಸಖತ್ ವೈರಲ್ ಆಗಿದೆ. ಆ ವಿಡಿಯೋ ನೋಡಿದ ಮೇಲೆ ಅಭಿಮಾನಿಗಳು “ಇದು ಸ್ನೇಹ ಮಾತ್ರನಾ? ಅಥವಾ ಇನ್ನೇನಾದ್ರೂ ವಿಶೇಷವಾ?” ಅಂತಾ ಚರ್ಚೆ ಶುರು ಮಾಡಿದ್ದಾರೆ.

ಹುಟ್ಟುಹಬ್ಬದ ವಿಡಿಯೋ ಏನು ಹೇಳುತ್ತಿದೆ?
ಅಂದಹಾಗೆ, ಈ ವಿಡಿಯೋವನ್ನು ವಿನೋದ್ ತಮ್ಮ ಸ್ನೇಹಿತೆ ನಿಸರ್ಗ ಅವರ ಹುಟ್ಟುಹಬ್ಬದಂದು ಪೋಸ್ಟ್ ಮಾಡಿದ್ದಾರೆ. ಇಬ್ಬರೂ ಸೇರಿ ಕಾಣಿಸಿಕೊಂಡಿರುವ ವಿಡಿಯೋಗೆ ಫ್ಯಾನ್ಸ್ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಇವರಿಬ್ಬರು ಒಟ್ಟಿಗೆ ವಿಡಿಯೋ ಮಾಡೋದು ಇದೇ ಮೊದಲಲ್ಲ. ಇದಕ್ಕೂ ಮೊದಲು ಕೂಡ ಜಂಟಿ ರೀಲ್ಸ್ ಮತ್ತು ಪೋಸ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿಸರ್ಗ ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. ವಿನೋದ್ ಕೂಡ ಮನರಂಜನಾ ಕ್ಷೇತ್ರದಲ್ಲೇ ಸಕ್ರಿಯ. ಒಂದೇ ವಲಯದಲ್ಲಿ ಕೆಲಸ ಮಾಡುವ ಕಾರಣದಿಂದ ಸ್ನೇಹ ಬೆಳೆದಿರಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಆದರೆ “ನಾವು ಲವ್‌ನಲ್ಲಿ ಇದ್ದೇವೆ” ಎಂದು ಇಬ್ಬರೂ ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ.

ಸದ್ಯಕ್ಕೆ ಸ್ಪಷ್ಟ ಉತ್ತರ ಯಾವುದೂ ಇಲ್ಲ. ಅಭಿಮಾನಿಗಳು ಮಾತ್ರ ಕುತೂಹಲದಿಂದ ಕಾದಿದ್ದಾರೆ. ವಿಡಿಯೋದಲ್ಲಿ ಕಾಣಿಸುವ ಆತ್ಮೀಯತೆ ನೋಡಿ ಕೆಲವರು “ಲವ್ ಸ್ಟೋರಿ ಸ್ಟಾರ್ಟ್ ಆಗಿದೆ” ಎನ್ನುತ್ತಿದ್ದಾರೆ. ಮತ್ತಿಬ್ಬರು “ಅದು ಕೇವಲ ಸ್ನೇಹ” ಅಂತಾ ಹೇಳುತ್ತಿದ್ದಾರೆ. ಹೇಳೋದಾದ್ರೆ – ಪ್ರೀತಿನೋ? ಸ್ನೇಹನೋ? ಇನ್ನೂ ಖಚಿತವಾಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಮಾತ್ರ ಸಖತ್ ಟ್ರೆಂಡ್ ಆಗ್ತಿದೆ!

Latest News