Jan 25, 2026 Languages : ಕನ್ನಡ | English

ಕೆಟ್ಟದಾಗಿ ಕಾಮೆಂಟ್ ಮಾಡೋರು ಹುಷಾರ್ - ವಿಜಯಲಕ್ಷ್ಮಿ ಅವರಿಗೆ ಕಾಮೆಂಟ್ ಹಾಕಿದವರ ಗತಿ ಏನಾಯ್ತು ನೋಡಿ

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹೆಚ್ಚು ಕೆಟ್ಟ ಕಾಮೆಂಟ್ ಗಳು ಈ ಮಹಿಳೆಯರ ವಿರುದ್ಧ ಕೇಳಿ ಬರುತ್ತಲೇ ಇರುತ್ತವೆ. ಅದರಲ್ಲೂ ಈ ಸಿನಿ  ತಾರೆಯರ ವಿಚಾರವಾಗಿ  ಹೆಚ್ಚು ಕೆಟ್ಟ ಅಭಿಪ್ರಾಯಗಳು ಹರಿದು ಬರುವುದು ಮಾಮೂಲಿ. ಅಂತಹ ಕಾಮೆಂಟ್ ಗಳು ಹರಿದು ಬರುತ್ತಲೇ ಇವೆ. ಸೆಲೆಬ್ರೆಟಿಗಳು ಇದಕ್ಕೆ ಹೆಚ್ಚು ಗುರಿಯಾಗುತ್ತಾರೆ. ಇತ್ತೀಚಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೇಣುಕಾಸ್ವಾಮಿ ಜೀವಹಾನಿ ಪ್ರಕರಣದಲ್ಲಿ ಜೈಲು ಸೇರಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿರುವಾಗ ಇವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಕೆಟ್ಟದಾಗಿ ಮಾತಾಡಿ ಕಾಮೆಂಟ್ ಮಾಡುವ ಮೂಲಕ ಅವರ ಕೆಟ್ಟತನ ಎತ್ತಿ ತೋರಿಸಿದ್ದರು. 

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ

ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧ ಇದೀಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ.  ಹೌದು ವಿಜಯಲಕ್ಷ್ಮಿ ಅವರಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ ಪ್ರಕರಣದಲ್ಲಿ ಕಾಮೆಂಟ್ ಮಾಡಿದ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಷಯ ಇದೀಗ ಗಂಭೀರ ಚರ್ಚೆಗೆ ಒಳಗಾಗಿದೆ ಎಂದು ಹೇಳಬಹುದು. 

ಪ್ರಕರಣದ ಹಿನ್ನೆಲೆ 

ಪ್ರಕರಣದ ಹಿನ್ನೆಲೆ ನೋಡುವುದಾದರೆ ನಟ ದರ್ಶನ್ ಅವರ ಪತ್ನಿಗೆ ಕೆಲವರಿಂದ ಅಶ್ಲೀಲವಾದ ಕಾಮೆಂಟ್ ಗಳ ಮೂಲಕ ಪೋಸ್ಟ್ ಮಾಡಲಾಗಿತ್ತು. ಇದು ಹೆಚ್ಚು ಕಾಣುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಉಂಟಾಗಿತ್ತು. ವಿಜಯಲಕ್ಷ್ಮಿ ಅವರ ಅಭಿಮಾನಿಗಳು ಈ ಕಾಮೆಂಟ್ ಪೋಸ್ಟ್ ನೋಡಿ ಆಕ್ರೋಶ ಹೊರ ಹಾಕಿದ್ದರು. ಒಬ್ಬ ದೊಡ್ಡ ಸ್ಟಾರ್ ನಟನ ಪತ್ನಿಗೆ ಈ ರೀತಿ ಮಾತನಾಡುತ್ತಾರೆ ಅಂದರೆ ಇನ್ನೂ ಸಾಮಾನ್ಯ ಮಹಿಳೆಯರ ಗತಿ ಏನಾಗಬಹುದು, ಇಂಥಹ ಸಮಸ್ಯೆ ಎದುರಾದರೆ ಅವರು ಏನು ಮಾಡುತ್ತಾರೆ ಹೇಳಿ ನೋಡೋಣ ಎಂದು ಅವರ ಅನುಯಾಯಿಗಳು ಆಕ್ರೋಶ ಹೊರ ಹಾಕಿದ್ದಾರೆ. ಹಾಗೆ ಕೆಟ್ಟ ಕಾಮೆಂಟ್ ಗಳ ಮಾಡುವವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ ಮತ್ತು ಪ್ರಶ್ನೆ ಕೂಡ ಮಾಡಿದರು. 

ಆರೋಪಿಗಳ ಬಂಧನ

ಅಶ್ಲೀಲವಾಗಿ ಕಾಮೆಂಟ್ ಮಾಡಿ ಪೋಸ್ಟ್ ಮಾಡಿದ್ದವರ ವಿರುದ್ಧ ಸಿಸಿಬಿ ಪೊಲೀಸರು ಐಪಿ ಅಡ್ರೆಸ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಅವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ ಎನ್ನಲಾಗಿದೆ. ಹೌದು ಆರೋಪಿಗಳಾದ ಚಂದ್ರು ಹಾಗೂ ನಿತೀನ್ ಎಂಬುವವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಜಯಲಕ್ಷ್ಮಿ ಅವರಿಗೆ ಕೆಟ್ಟದಾಗಿ ಅಶ್ಲೀಲ ಕಾಮೆಂಟ್ ಹಾಕಿದವರ ವಿರುದ್ಧ ಸೈಬರ್ ಕ್ರೈಂ ತಂಡವು ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಂದ ಬಂದ ಪ್ರತಿಕ್ರಿಯೆ

ಎರಡು ದಿನಗಳ ಹಿಂದೆ ವಿಜಯಲಕ್ಷ್ಮೀ ಅವರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದರು, ಇದರ ಕುರಿತಾಗಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಚರ್ಚೆ ನಡೆಸಿದ್ದರು. ಬಳಿಕ ಪೊಲೀಸರು ಈ ಕಾರ್ಯ ಕೈಗೊಂಡವರ ವಿರುದ್ಧ ಸ್ಪಂದಿಸುತ್ತಿಲ್ಲ, ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದರು. ಆಗ ತ್ವರಿತವಾಗಿ ಎಚ್ಚೆತ್ತುಕೊಂಡ ಸಿಸಿಬಿ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪೊಲೀಸರ ಕ್ರಮ

ಸೈಬರ್ ಕ್ರೈಂ ವಿಭಾಗವು ಬಹಳ ಬೇಗ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಈ ಪ್ರಕರಣವನ್ನು ಮಾದರಿಯಾಗಿ ತೆಗೆದುಕೊಂಡು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. 

ಸಾಮಾಜಿಕ ಕಳಕಳಿ 

ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರ ವಿರುದ್ಧ ಅಶ್ಲೀಲ ಕಾಮೆಂಟ್‌ ಮಾಡುವ, ಹಾಗೆ ಸುಖಾಸುಮ್ಮನೆ ಅವಹೇಳನಕಾರಿ ಪೋಸ್ಟ್‌ಗಳ ಹರಿ ಬಿಡುವುದು ನಿಜಕ್ಕೂ ನಮ್ಮ ಸಮಾಜದಲ್ಲಿ ಗಂಭೀರ ಸಮಸ್ಯೆಯಾಗಿದೆ. ಈ ತಪ್ಪನ್ನು ಯಾರು ಮಾಡಬೇಡಿ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಹೀಗೆ ಗುರಿಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಇನ್ನೂ ಸಾಮಾನ್ಯ ಮಹಿಳೆಯರ ಸುರಕ್ಷತೆ ಹೇಗೆ ಎನ್ನುವ  ಎಂಬ ಸಾಮಾನ್ಯ ಪ್ರಶ್ನೆ ಎದ್ದಿದ್ದು, ತೀರ್ವ ಚರ್ಚೆಗೆ ಕಾರಣವಾಗಿದೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದರಿಂದ ಕಿಡಿಗೇಡಿಗಳಿಗೆ ಪಾಠ ಕಲಿಸುವುದು ಪೋಲೀಸರ ಕರ್ತವ್ಯ ಆಗಿದೆ ಎಂದು ಇನ್ನೂ ಹಲವರು ಅಭಿಪ್ರಾಯ ತಿಳಿಸಿದ್ದಾರೆ.  

ತಜ್ಞರ ಅಭಿಪ್ರಾಯ

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಅಶ್ಲೀಲ ಕಾಮೆಂಟ್‌ ಬರುತ್ತಿದ್ದು ಅವುಗಳ ವಿರುದ್ಧ ಹಾಗೆ ಅದನ್ನು ಕೈಗೊಂಡವರ ವಿರುದ್ಧ ಕಾನೂನು ಕ್ರಮಗಳನ್ನು ಬಲಪಡಿಸಬೇಕು ಎಂದಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವುದು ನಿಜಕ್ಕೂ ಅತ್ಯವಶ್ಯಕ, ಅಗತ್ಯ ಕೂಡ ಇದೆ ಎಂದಿದ್ದಾರೆ. 

ಮಹಿಳೆಯರ ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ ಕಾಮೆಂಟ್‌ಗಳು ಸಮಾಜದಲ್ಲಿ ನಿಜಕ್ಕೂ ದೊಡ್ಡ ಅಸಹ್ಯಕರ ಎಂದು ತಜ್ಞರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ವಿರುದ್ಧ ನಡೆದ ಅಶ್ಲೀಲ ಕಾಮೆಂಟ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವುದು ಸೈಬರ್ ಕ್ರೈಂ ವಿಭಾಗದ ದೊಡ್ಡ ಯಶಸ್ಸು ಎನ್ನಬಹುದು. ಈ ಪ್ರಕರಣವು ಸಮಾಜದಲ್ಲಿ ಮಹಿಳೆಯರ ಸುರಕ್ಷತೆ, ಗೌರವ, ಹಾಗೂ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಆರೋಪಿಗಳಿಗೆ ತಕ್ಕ ಪಾಠ ಕಲಿಸುವ ಮೂಲಕ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ಅವುಗಳ ತಡೆಯುವ ನಿರೀಕ್ಷೆ ಹೆಚ್ಚಾಗಬೇಕಿದೆ.

Latest News