ದಕ್ಷಿಣ ಭಾರತದ ಸೂಪರ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ದಳಪತಿ ವಿಜಯ್ ಸದ್ಯ ಎರಡು ಕಾರಣಕ್ಕೆ ಭಾರಿ ಸುದ್ದಿಯಲ್ಲಿದ್ದಾರೆ. ಒಂದು ಅವರ ಸಿಂಪಲ್ ಲೈಫ್, ಇನ್ನೊಂದು ಅವರ ಬಹುನಿರೀಕ್ಷಿತ ಸಿನಿಮಾ 'ಜನ ನಾಯಕನ್'. ಸದ್ಯ ಈ ಸಿನಿಮಾ ಸೆನ್ಸಾರ್ ಮಂಡಳಿಯ ಅಂಗಳದಲ್ಲಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಈ ಬಗ್ಗೆ ಲೇಟೆಸ್ಟ್ ಅಪ್‌ಡೇಟ್ ಇಲ್ಲಿದೆ ನೋಡಿ.
ಮನೆಯಲ್ಲಿ 'ಸೂಪರ್ ಡ್ಯಾಡ್' ವಿಜಯ್
ಸಿನಿಮಾಗಳ ಬ್ಯುಸಿ ಶೆಡ್ಯೂಲ್‌ನಿಂದ ಸ್ವಲ್ಪ ಬ್ರೇಕ್ ತಗೊಂಡಿರೋ ವಿಜಯ್, ಈಗ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಮನೆಯಲ್ಲಿ ಮಕ್ಕಳ ಜೊತೆ ಆಟವಾಡುವುದು, ಆರಾಮವಾಗಿ ಕಾಲ ಕಳೆಯುತ್ತಿರುವ ಫೋಟೋಗಳು ಮತ್ತು ವೀಡಿಯೊಗಳು ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿವೆ. ಅಷ್ಟೇ ಅಲ್ಲ, ಮನೆಗೆ ಬಂದ ಅಭಿಮಾನಿಗಳ ಜೊತೆ ನಗುನಗುತ್ತಾ ಸೆಲ್ಫಿ ಕೊಟ್ಟಿರೋ ಎಕ್ಸ್‌ಕ್ಲೂಸಿವ್ ಫೋಟೋಗಳು ಫ್ಯಾನ್ಸ್‌ಗೆ ಫುಲ್ ಖುಷಿ ಕೊಟ್ಟಿವೆ. "ಸಿನಿಮಾದಲ್ಲಿ ಅಬ್ಬರಿಸೋ ದಳಪತಿ ಮನೆಯಲ್ಲಿ ಇಷ್ಟು ಸಾಫ್ಟಾ?" ಅಂತ ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.
EXCLUSIVE: Thalapathy VIJAY interacted with a family in Coimbatore during his visit for a booth committee meeting last year.
P.S: Video without watermarks. pic.twitter.com/jb379msA2g— Actor Vijay Team (@ActorVijayTeam) April 27, 2026
'ಜನ ನಾಯಕನ್' ಸೆನ್ಸಾರ್ ಕಥೆ ಏನು?
ವಿಜಯ್ ಅವರ ಸಿನಿಮಾಗಳಿಗೆ ವಿವಾದಗಳೇನು ಹೊಸದಲ್ಲ. ಆದರೆ ಈ ಬಾರಿ 'ಜನ ನಾಯಕನ್' ಚಿತ್ರಕ್ಕೆ ದೊಡ್ಡ ಅಡೆತಡೆಯೇ ಎದುರಾಗಿದೆ.
ಏನಿದು ವಿವಾದ? - ಈ ಸಿನಿಮಾದಲ್ಲಿ ವಿಜಯ್ ಅವರ ಹೊಸ ರಾಜಕೀಯ ಪಕ್ಷ TVK (ತಮಿಳಗ ವೆಟ್ರಿ ಕಳಗಂ) ಬಗ್ಗೆ ಮತ್ತು ಅದರ ಸಿದ್ಧಾಂತಕ್ಕೆ ಪೂರಕವಾದ ಪವರ್‌ಫುಲ್ ಡೈಲಾಗ್‌ಗಳಿವೆ. ಇದೇ ಕಾರಣಕ್ಕೆ ಸೆನ್ಸಾರ್ ಮಂಡಳಿ (CBFC) ಚಿತ್ರಕ್ಕೆ ಪರ್ಮಿಷನ್ ಕೊಡಲು ಮೀನಾಮೇಷ ಎಣಿಸಿತ್ತು.
ರಿವೈಸಿಂಗ್ ಕಮಿಟಿ: ಇಂದು ಮಧ್ಯಾಹ್ನವಷ್ಟೇ ರಿವೈಸಿಂಗ್ ಸಮಿತಿ ಚಿತ್ರವನ್ನು ಕೂತು ನೋಡಿದೆ. ಸಿನಿಮಾದಲ್ಲಿ ಏನನ್ನು ಕಟ್ ಮಾಡಬೇಕು ಅಥವಾ ಯಾವ ಡೈಲಾಗ್‌ಗಳಿಗೆ ಮ್ಯೂಟ್ ಬಟನ್ ಹಾಕಬೇಕು ಅನ್ನೋ ಬಗ್ಗೆ ಸಂಜೆ ವೇಳೆಗೆ ಅಂತಿಮ ನಿರ್ಧಾರ ಬರೋ ಸಾಧ್ಯತೆ ಇದೆ.
ಜನವರಿಯಲ್ಲಿ ಮಿಸ್ ಆಯ್ತು, ಮೇ ತಿಂಗಳಲ್ಲಿ ಫಿಕ್ಸ್?
ನಿಜವಾಗಿಯೂ ಈ ಸಿನಿಮಾ ಈ ವರ್ಷದ ಆರಂಭದಲ್ಲೇ ಅಂದರೆ ಜನವರಿ 9ರಂದು ಅದ್ಧೂರಿಯಾಗಿ ರಿಲೀಸ್ ಆಗಬೇಕಿತ್ತು. ಆದರೆ ಪೊಲಿಟಿಕಲ್ ಕಂಟೆಂಟ್ ಮತ್ತು ಸೆನ್ಸಾರ್ ತಗಾದೆಯಿಂದಾಗಿ ಡೇಟ್ ಮುಂದೂಡಲ್ಪಟ್ಟಿತ್ತು.
ಈಗ ಸಿಗುತ್ತಿರುವ ಮಾಹಿತಿ ಪ್ರಕಾರ - ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೆ, ನಿರ್ಮಾಪಕರು ಮೇ ತಿಂಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ.ಬೇಸಿಗೆ ರಜೆಯ ಮಜಾದಲ್ಲಿ ದಳಪತಿ ಸಿನಿಮಾ ಬಂದರೆ ಕಲೆಕ್ಷನ್ ಧೂಳ್ ಎಬ್ಬಿಸೋದು ಗ್ಯಾರಂಟಿ ಅನ್ನೋದು ಚಿತ್ರತಂಡದ ಲೆಕ್ಕಾಚಾರ.
ಹೈಪ್ ಕ್ರಿಯೇಟ್ ಮಾಡಿದ ಎಚ್. ವಿನೋತ್ - ಅನಿರುದ್ಧ್ ಜೋಡಿ
ಈ ಸಿನಿಮಾದ ಮೇಲೆ ನಿರೀಕ್ಷೆ ಬೆಟ್ಟದಷ್ಟಿರಲು ಕಾರಣ ನಿರ್ದೇಶಕ ಎಚ್. ವಿನೋತ್ ಅವರ ಕಥೆ ಮತ್ತು ಅನಿರುದ್ಧ್ ರವಿಚಂದರ್ ಅವರ ಮ್ಯೂಸಿಕ್. ಈಗಾಗಲೇ ಲೀಕ್ ಆಗಿರೋ ಕೆಲವು ಮಾಹಿತಿಗಳಿಂದ ಸಿನಿಮಾ ಫುಲ್ ಪೊಲಿಟಿಕಲ್ ಥ್ರಿಲ್ಲರ್ ಆಗಿರಲಿದೆ ಅನ್ನೋದು ಕನ್ಫರ್ಮ್ ಆಗಿದೆ. ವಿಜಯ್ ಅವರ ರಾಜಕೀಯ ಎಂಟ್ರಿಗೆ ಈ ಸಿನಿಮಾ ಒಂದು ಭದ್ರವಾದ ಅಡಿಪಾಯ ಹಾಕಿಕೊಡಲಿದೆ ಅನ್ನೋದು ಅವರ ಅಭಿಮಾನಿಗಳ ಬಲವಾದ ನಂಬಿಕೆ.
ಲೀಕ್ ಆಗಿರೋ ಫೋಟೋಗಳು ಮತ್ತು ವಿವಾದಗಳ ನಡುವೆಯೂ 'ಜನ ನಾಯಕನ್' ಚಿತ್ರದ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ. ಸಂಜೆ ಬರೋ ಸೆನ್ಸಾರ್ ರಿಪೋರ್ಟ್ ಇಡೀ ಕಾಲಿವುಡ್‌ನಲ್ಲಿ ಹೊಸ ಸಂಚಲನ ಮೂಡಿಸುವುದಂತೂ ಪಕ್ಕಾ.