Apr 17, 2026 Languages : ಕನ್ನಡ | English

ಸಾಕ್ಷಿ ಇಲ್ಲದೆ ಸೋತ ನಟಿ ತಮನ್ನಾ!! ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ನಟಿಗೆ ನಿರಾಸೆ!!

ನಟಿ ತಮನ್ನಾ ಭಾಟಿಯಾ ಮತ್ತು ಸೋಪ್ ಕಂಪನಿಯೊಂದರ ನಡುವೆ ಕಳೆದ ಒಂದೂವರೆ ದಶಕದಿಂದ ನಡೀತಿದ್ದ ಲೈಟ್ ಆಫ್ ಯುದ್ಧಕ್ಕೆ ಈಗ ಮದ್ರಾಸ್ ಹೈಕೋರ್ಟ್ ಫುಲ್ ಸ್ಟಾಪ್ ಇಟ್ಟಿದೆ. 1 ಕೋಟಿ ರೂಪಾಯಿ ಪರಿಹಾರ ಕೇಳಿದ್ದ ಮಿಲ್ಕಿ ಬ್ಯೂಟಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಹಿನ್ನಡೆಯಾಗಿದೆ.

ತಮನ್ನಾ  ಸೋಪ್ ಗೆ ಕೇಸ್‌ನಲ್ಲಿ ಟ್ವಿಸ್ಟ್ | Photo Credit: https://x.com/SooriyanFMlk |
ತಮನ್ನಾ ಸೋಪ್ ಗೆ ಕೇಸ್‌ನಲ್ಲಿ ಟ್ವಿಸ್ಟ್ | Photo Credit: https://x.com/SooriyanFMlk |

ಏನಿದು ಹಳೆಯ ಫೋಟೋ ರಗಳೆ?

ಕಥೆ ಶುರುವಾಗಿದ್ದು 2008ರಲ್ಲಿ. ಆಗ ತಮನ್ನಾ ಸಖತ್ ಫೇಮಸ್ ಆಗಿದ್ರು. ಆ ಟೈಮ್‌ನಲ್ಲಿ ಅವರು ಪವರ್ ಸೋಪ್ಸ್ ಅನ್ನೋ ಬ್ರಾಂಡ್‌ಗೆ ಅಂಬಾಸಿಡರ್ ಆಗಿದ್ರು. ಅಗ್ರಿಮೆಂಟ್ ಪ್ರಕಾರ, 2009ರ ಅಕ್ಟೋಬರ್ ನಂತರ ಆ ಕಂಪನಿ ತಮನ್ನಾ ಅವರ ಫೋಟೋ ಬಳಸುವಂತಿರಲಿಲ್ಲ.

ಆದ್ರೆ, ಒಪ್ಪಂದ ಮುಗಿದ ಮೇಲೂ ಕಂಪನಿಯವರು ಸೋಪ್ ಕವರ್‌ಗಳ ಮೇಲೆ ತಮ್ಮ ಫೋಟೋ ಹಾಕಿ ವ್ಯಾಪಾರ ಮಾಡ್ತಿದ್ದಾರೆ ಅಂತ ತಮನ್ನಾ 2010ರಲ್ಲಿ ಕೋರ್ಟ್ ಮೆಟ್ಟಿಲೇರಿದ್ರು. ಇದರಿಂದ ನನ್ನ ಮಾರ್ಕೆಟ್ ವ್ಯಾಲ್ಯೂಗೆ ಹೊಡೆತ ಬಿದ್ದಿದೆ, ಬೇರೆ ಬ್ರಾಂಡ್‌ಗಳು ನನಗೆ ಚಾನ್ಸ್ ಕೊಡ್ತಿಲ್ಲ ಅಂತ ಅವರು 1 ಕೋಟಿ ರೂಪಾಯಿ ದಂಡ ಕೇಳಿದ್ರು.

ಕೋರ್ಟ್‌ನಲ್ಲಿ ತಮನ್ನಾಗೆ "ಸಾಕ್ಷಿ" ಸಂಕಷ್ಟ - ಸುದೀರ್ಘ 16 ವರ್ಷಗಳ ಕಾಲ ಈ ಕೇಸ್ ನಡೀತು. ತಮನ್ನಾ ಕಡೆಯವರು ಸೋಪ್ ಪ್ಯಾಕೆಟ್‌ಗಳನ್ನ ಸಾಕ್ಷಿಯಾಗಿ ತೋರಿಸಿದ್ರು ನಿಜ. ಆದ್ರೆ, ಆ ಪ್ಯಾಕೆಟ್‌ಗಳ ಮೇಲೆ ಉತ್ಪಾದನಾ ದಿನಾಂಕ ಇರಲಿಲ್ಲ, ಬ್ಯಾಚ್ ನಂಬರ್ ಕೂಡ ಸರಿಯಾಗಿ ಇರಲಿಲ್ಲ.

ಹೀಗಾಗಿ, ಈ ಸೋಪ್‌ಗಳು ಅಗ್ರಿಮೆಂಟ್ ಅವಧಿಯಲ್ಲೇ ತಯಾರಾಗಿದ್ದಾ ಅಥವಾ ಆಮೇಲೆ ಬಂದವಾ ಅನ್ನೋದು ಕನ್ಫರ್ಮ್ ಆಗಲಿಲ್ಲ. ಬಲವಾದ ಸಾಕ್ಷಿ ಇಲ್ಲದ ಕಾರಣ ಕೋರ್ಟ್ ತಮನ್ನಾ ಅವರ ಅರ್ಜಿಯನ್ನೇ ವಜಾ ಮಾಡಿದೆ. ಕಂಪನಿಗೆ ಯಾವುದೇ ದಂಡ ಹಾಕಲು ಸಾಧ್ಯವಿಲ್ಲ ಅಂತ ಪೀಠ ಖಡಕ್ ಆಗಿ ಹೇಳಿದೆ.

ಮತ್ತೆ ರವಿತೇಜ ಜೊತೆ ತಮನ್ನಾ?

ಕೋರ್ಟ್ ಮ್ಯಾಟರ್ ಪಕ್ಕಕ್ಕಿಟ್ಟರೆ, ಸಿನಿಮಾದಲ್ಲಿ ತಮನ್ನಾ ಕ್ರೇಜ್ ಕಮ್ಮಿ ಆಗಿಲ್ಲ. ಈಗ ಕೇಳಿ ಬರ್ತಿರೋ ಲೇಟೆಸ್ಟ್ ಸುದ್ದಿ ಅಂದ್ರೆ, ಟಾಲಿವುಡ್‌ನ 'ಮಾಸ್ ಮಹಾರಾಜ' ರವಿತೇಜ ಅವರ ಮುಂದಿನ ಸಿನಿಮಾಗೆ ತಮನ್ನಾ ಅವರನ್ನೇ ಫೈನಲ್ ಮಾಡಲಾಗಿದೆಯಂತೆ. ಸದ್ಯ ಬಾಲಿವುಡ್‌ನಲ್ಲಿ ಮಿಂಚ್ತಿರೋ ಅವರು ಮತ್ತೆ ಸೌತ್ ಸಿನಿಮಾಗಳಲ್ಲಿ ಸಕ್ರಿಯರಾಗಲಿದ್ದಾರೆ.

2008ರಲ್ಲಿ ಶುರುವಾದ ಈ ಸೋಪ್ ವಿವಾದಕ್ಕೆ 2026ರಲ್ಲಿ ಮುಕ್ತಿ ಸಿಕ್ಕಿದೆ. ಗೆಲುವು ಸಿಗದಿದ್ರೂ, ಒಂದು ದೊಡ್ಡ ತಲೆನೋವಿನಿಂದ ತಮನ್ನಾ ಈಗ ರಿಲೀಫ್ ಆಗಿದ್ದಾರೆ.