ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಮಂತಾ ರುತ್ ಪ್ರಭು, 2010ರಲ್ಲಿ ‘ಯೇ ಮಾಯಾ ಚೇಸಾವೆ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಚಿತ್ರದಿಂದಲೇ ಪ್ರೇಕ್ಷಕರ ಮನ ಗೆದ್ದ ಸಮಂತಾ, ನಂತರ ಹಿಂತಿರುಗಿ ನೋಡಲೇ ಇಲ್ಲ. ನಟನಾ ಕೌಶಲ್ಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿ, ಇಂದು ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಏಳು–ಬೀಳುಗಳನ್ನು ಎದುರಿಸಿದರೂ, ಪ್ರತೀ ಬಾರಿಯೂ ಧೈರ್ಯದಿಂದ ಪುಟಿದೇಳುವ ಮೂಲಕ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದ್ದಾರೆ.
ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಸಮಂತಾ, ವೈವಾಹಿಕ ಜೀವನದಲ್ಲಿ ಸಂಕಷ್ಟ ಅನುಭವಿಸಿದರು. ನಾಗಚೈತನ್ಯ ಜೊತೆಗಿನ ವಿವಾಹ ಅಂತ್ಯಗೊಂಡ ನಂತರ, ಅವರು ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ವಿವಾಹವಾಗುವ ಮೂಲಕ ಹೊಸ ಜೀವನ ಆರಂಭಿಸಿದರು. ಸಿನಿಮಾದ ಜೊತೆಗೆ ಸಮಂತಾ ‘ಪ್ರತ್ಯೂಷಾ ಸಪೋರ್ಟ್’ ಟ್ರಸ್ಟ್ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.
ಸಮಂತಾ ಆಸ್ತಿ
ಸಮಂತಾ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಅವರ ಒಟ್ಟು ಆಸ್ತಿ ಮೌಲ್ಯ ₹100–₹101 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರತಿ ಸಿನಿಮಾಗಾಗಿ ₹3–₹5 ಕೋಟಿ ಸಂಭಾವನೆ ಪಡೆಯುವ ಅವರು, ಇತ್ತೀಚೆಗೆ ‘ಸಿಟಾಡೆಲ್: ಹನಿ ಬನ್ನಿ’ ವೆಬ್ ಸರಣಿಗೆ ₹10 ಕೋಟಿ ಪಡೆದಿದ್ದಾರೆ. ಜಾಹೀರಾತುಗಳಿಂದಲೂ ವಾರ್ಷಿಕವಾಗಿ ₹8 ಕೋಟಿ ಗಳಿಸುತ್ತಾರೆ.
ಅವರ ಐಷಾರಾಮಿ ಜೀವನಶೈಲಿಯಲ್ಲಿ ಹೈದರಾಬಾದ್‌ನ ₹7.8 ಕೋಟಿ ಮೌಲ್ಯದ ಡ್ಯುಪ್ಲೆಕ್ಸ್ ಅಪಾರ್ಟ್ಮೆಂಟ್, ಮುಂಬೈನ ₹15 ಕೋಟಿ ಮೌಲ್ಯದ ಸೀ-ಫೇಸಿಂಗ್ ಫ್ಲಾಟ್ ಸೇರಿವೆ. ಕಾರು ಸಂಗ್ರಹದಲ್ಲಿ ಆಡಿ Q7, ಪೋರ್ಷೆ ಕೇಮನ್ GTS, ಲ್ಯಾಂಡ್ ರೋವರ್ ರೇಂಜ್ ರೋವರ್, ಮರ್ಸಿಡಿಸ್ ಬೆಂಜ್ GLC ಮತ್ತು ಬಿಎಂಡಬ್ಲ್ಯು 7 ಸೀರಿಸ್ ಸೇರಿವೆ.
ರಾಜ್ ನಿಡಿಮೋರು ಆಸ್ತಿ
‘ದಿ ಫ್ಯಾಮಿಲಿ ಮ್ಯಾನ್’ ಮತ್ತು ‘ಸಿಟಾಡೆಲ್: ಹನಿ ಬನ್ನಿ’ ವೆಬ್ ಸರಣಿಗಳ ಮೂಲಕ ಖ್ಯಾತಿ ಪಡೆದ ನಿರ್ದೇಶಕ ರಾಜ್ ನಿಡಿಮೋರು ನಿರ್ಮಾಪಕರೂ ಆಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಅವರ ಒಟ್ಟು ಆಸ್ತಿ ಮೌಲ್ಯ ₹85–₹89 ಕೋಟಿ. ಸಮಂತಾ ಮತ್ತು ರಾಜ್ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಕಂಡು, ಒಟ್ಟಾಗಿ ಅಪಾರ ಸಂಪತ್ತಿನ ಮಾಲೀಕರಾಗಿದ್ದಾರೆ. ಸಿನಿಮಾ, ಜಾಹೀರಾತು ಮತ್ತು ಹೂಡಿಕೆಗಳಿಂದ ಸಂಪಾದಿಸಿದ ಈ ಜೋಡಿ, ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿರುವುದು ಅಭಿಮಾನಿಗಳಿಗೆ ಸಂತಸದ ವಿಷಯ.