ಆಸ್ಪತ್ರೆ ಮುಂಭಾಗ ಫೋಟೋಗ್ರಾಫರ್‌ಗಳ ವಿರುದ್ಧ ಕಿಡಿಕಾರಿದ ಸಲ್ಮಾನ್ ಖಾನ್ - ವಿಡಿಯೋ ವೈರಲ್; ಯಾಕೆ ಗೊತ್ತಾ?

ಬಾಲಿವುಡ್‌ನ 'ಸುಲ್ತಾನ್' ಸಲ್ಮಾನ್ ಖಾನ್ ಅವರು ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ಯಾವುದೇ ಸಿನಿಮಾ ವಿಚಾರಕ್ಕಲ್ಲ, ಬದಲಿಗೆ ಮುಂಬೈನ ಆಸ್ಪತ್ರೆಯೊಂದರ ಹೊರಗಡೆ ಮೀಡಿಯಾ ಮತ್ತು ಫೋಟೋಗ್ರಾಫರ್‌'ಗಳ ಮೇಲೆ ತೀವ್ರವಾಗಿ ಆಕ್ರೋಶ ಹೊರಹಾಕಿರುವ ಕಾರಣಕ್ಕೆ ಭಾರಿ ಚರ್ಚೆಯಲ್ಲಿದ್ದಾರೆ.

ಸಲ್ಮಾನ್ ಖಾನ್ ಗರಂ: ಆಸ್ಪತ್ರೆ ಹೊರಗಡೆ ಪಾಪರಾಜಿಗಳಿಗೆ ಕ್ಲಾಸ್; | Photo Credit: https://x.com/choga_don
ಸಲ್ಮಾನ್ ಖಾನ್ ಗರಂ: ಆಸ್ಪತ್ರೆ ಹೊರಗಡೆ ಪಾಪರಾಜಿಗಳಿಗೆ ಕ್ಲಾಸ್; | Photo Credit: https://x.com/choga_don

ಮುಂಬೈನ ಹಿಂದೂಜಾ ಆಸ್ಪತ್ರೆಯ ಹೊರಗಡೆ ನೆರೆದಿದ್ದ ಫೋಟೋಗ್ರಾಫರ್‌ಗಳು ಸಲ್ಮಾನ್ ಖಾನ್ ಅವರನ್ನು ಕಂಡೊಡನೆ ಜೋರಾಗಿ ಕೂಗಾಡಲು ಶುರು ಮಾಡಿದ್ದಾರೆ. ಇದರಿಂದ ಸಿಟ್ಟಾದ ಸಲ್ಮಾನ್ ಖಾನ್, ಮೈದಾನದಲ್ಲೇ ಪಾಪರಾಜಿಗಳಿಗೆ ಕ್ಲಾಸ್ ತಗೆದುಕೊಂಡಿದ್ದಾರೆ. ಈ ಇಡೀ ಘಟನೆಯ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹರಡುತ್ತಿವೆ.

"ನಿಮ್ಮ ಮನೆಯವರು ಒಳಗಿದ್ದರೆ ಹೀಗೆ ಮಾಡ್ತೀರಾ?" - ಸಲ್ಲೂ ಭಾಯ್ ಗರಂ!

ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸುವಂತೆ, 60 ವರ್ಷದ ನಟ ಸಲ್ಮಾನ್ ಖಾನ್ ಆಸ್ಪತ್ರೆಯಿಂದ ಹೊರಗೆ ಬರುತ್ತಿದ್ದಂತೆ ಫೋಟೋಗ್ರಾಫರ್‌ಗಳು ಮತ್ತು ಮೀಡಿಯಾದವರು ಫೋಟೋ ಹಾಗೂ ವಿಡಿಯೋಗಳಿಗಾಗಿ ಮುಗಿಬಿದ್ದು ಜೋರಾಗಿ ಕಿರುಚಾಡಲು ಆರಂಭಿಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಹೀಗೆ ಗದ್ದಲ ಮಾಡಿದ್ದನ್ನು ನೋಡಿ ಸಹಿಸದ ಸಲ್ಮಾನ್ ಖಾನ್, ತಕ್ಷಣವೇ ಅಲ್ಲಿಗೆ ಬಂದು ಬೈದಿದ್ದಾರೆ.

"ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಯ ಒಳಗೆ ದಾಖಲಾಗಿದ್ದರೆ, ನೀವು ಇದೇ ರೀತಿ ಹೊರಗಡೆ ನಿಂತು ಜೋರಾಗಿ ಕೂಗಾಡುತ್ತೀರಾ?" ಎಂದು ಸಲ್ಮಾನ್ ಖಾನ್ ಪಾಪರಾಜಿಗಳನ್ನು ನೇರವಾಗಿ ಪ್ರಶ್ನಿಸಿ ತರಾಟೆಗೆ ತಗೆದುಕೊಂಡಿದ್ದಾರೆ. ಆಸ್ಪತ್ರೆಗಳ ಬಳಿ ಶಾಂತತೆ ಕಾಪಾಡಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ವರ್ತಿಸುವ ಮಾಧ್ಯಮಗಳ ಬೇಜವಾಬ್ದಾರಿತನಕ್ಕೆ ಸಲ್ಲೂ ಭಾಯ್ ಸರಿಯಾಗಿಯೇ ಚಾಟಿ ಬೀಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಖಡಕ್ ಪೋಸ್ಟ್ - "ನಾನು ಹೋರಾಡುವುದು ಮರೆತಿಲ್ಲ!"

ಆಸ್ಪತ್ರೆಯ ಹೊರಗಡೆ ಕ್ಲಾಸ್ ತಗೆದುಕೊಂಡ ಬೆನ್ನಲ್ಲೇ, ಸಲ್ಮಾನ್ ಖಾನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಸೆಲ್ಫಿಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಕ್ಯಾಪ್ಷನ್‌ನಲ್ಲಿ, 'ನನಗೆ ಈಗ 60 ವರ್ಷ ವಯಸ್ಸಾಗಿರಬಹುದು, ಆದರೆ ನಾನು ಹೇಗೆ ಹೋರಾಡಬೇಕು ಎಂಬುದನ್ನು ಇನ್ನು ಮರೆತಿಲ್ಲ' ಎಂದು ಬರೆಯುವ ಮೂಲಕ ತಮ್ಮ ಹಳೆಯ ಕಾನೂನು ಹೋರಾಟಗಳು ಮತ್ತು ವಿವಾದಗಳನ್ನು ಪರೋಕ್ಷವಾಗಿ ನೆನಪಿಸಿದ್ದಾರೆ. ಇದರ ಜೊತೆಗೆ, ಆಸ್ಪತ್ರೆಗಳ ಮುಂಭಾಗ ಸಾರ್ವಜನಿಕರು ಹಾಗೂ ಮಾಧ್ಯಮದವರು ಸೌಂಡ್ ಮಾಡದೆ ಸೈಲೆಂಟ್ ಆಗಿರಬೇಕು ಎಂದು ಅವರು ಕಟ್ಟುನಿಟ್ಟಾಗಿ ಮನವಿ ಮಾಡಿದ್ದಾರೆ.

ಪರ-ವಿರೋಧ ಚರ್ಚೆ

ಸಲ್ಮಾನ್ ಖಾನ್ ಅವರ ಈ ವರ್ತನೆ ಮತ್ತು ಫಿಟ್‌ನೆಸ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 60 ವರ್ಷ ಆದರೂ ಭಾಯ್ ಅವರ ಬಾಡಿ ಲ್ಯಾಂಗ್ವೇಜ್ ಮತ್ತು ಅವರ ಔರ ಹಾಗೇ ಇದೆ ಎಂದು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಗದ್ದಲ ಮಾಡಿದವರಿಗೆ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹಲವರು ಸಲ್ಮಾನ್ ಬೆಂಬಲಕ್ಕೆ ನಿಂತಿದ್ದಾರೆ.

ಆದರೆ, ಇದೇ ಸಮಯದಲ್ಲಿ ಸಲ್ಮಾನ್ ಖಾನ್ ವಿರುದ್ಧ ಕೆಲವು ಟೀಕೆಗಳೂ ಕೇಳಿಬರುತ್ತಿವೆ. ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಗಣ್ಯ ವ್ಯಕ್ತಿಗಳ ಭದ್ರತಾ ಕಾನ್ವಾಯ್‌ಗಳನ್ನ ಕಡಿತಗೊಳಿಸಲಾಗುತ್ತಿದೆ. ಆದರೆ ಸಲ್ಮಾನ್ ಖಾನ್ ಅವರು ಇಷ್ಟೊಂದು ದೊಡ್ಡ ಮಟ್ಟದ ಖಾಸಗಿ ಸೆಕ್ಯೂರಿಟಿ ಹಸಿರು ನಿಶಾನೆಯೊಂದಿಗೆ ಓಡಾಡುತ್ತಿರುವುದು ಎಷ್ಟು ಸರಿ? ಎಂದು ವಿಮರ್ಶಕರು ಪ್ರಶ್ನಿಸುತ್ತಿದ್ದಾರೆ.

ಬಾಲಿವುಡ್ ತಾರೆಯರ ವೈಯಕ್ತಿಕ ಜೀವನ ಮತ್ತು ಅವರ ಬೆನ್ನತ್ತಿ ಹೋಗುವ ರೇಸ್‌ ಪ್ರೊಫೈಲ್ ಮೀಡಿಯಾಗಳ ನಡುವಿನ ಈ ನಿರಂತರ ಸಂಘರ್ಷ ಮುಂಬೈ ಆಸ್ಪತ್ರೆಯ ಘಟನೆಯಿಂದ ಮತ್ತೊಮ್ಮೆ ಜಗಜ್ಜಾಹೀರಾಗಿದೆ. 

Latest News