Friday, Oct 30, 2026
|

ಎಐ ಜಗತ್ತಿನ ಕರಾಳ ಮುಖಕ್ಕೆ ಬಲಿಯಾದ್ರಾ ರುಕ್ಮಿಣಿ ವಸಂತ್? ವೈರಲ್ ಬಿಕಿನಿ ವಿಡಿಯೋದ ಅಸಲಿ ಸತ್ಯ ಇಲ್ಲಿದೆ!!

ಚಿತ್ರರಂಗದಲ್ಲಿ ಒಬ್ಬ ನಟಿ ಸಾಲು ಸಾಲು ಬಿಗ್ ಆಫರ್ ಗಿಟ್ಟಿಸಿಕೊಂಡು ಟಾಪ್ ಲೆವೆಲ್‌ಗೆ ಬೆಳಿತಾ ಇದ್ದರೆ, ಅವರ ಇಮೇಜ್ ಹಾಳು ಮಾಡಲು ಚಿತ್ರವಿಚಿತ್ರ ಸಂಚುಗಳು ನಡೆಯುವುದು ಹೊಸದೇನಲ್ಲ. ಆದರೆ ಈಗ ಈ ಕೆಟ್ಟ ಆಟಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿರುವುದು ಆತಂಕಕಾರಿ ಸಂಗತಿ. ಸದ್ಯ ಇಡೀ ದಕ್ಷಿಣ ಭಾರತ ಚಿತ್ರರಂಗವೇ ಕೊಂಡಾಡುತ್ತಿರುವ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಬಿಕಿನಿ ವಿಡಿಯೋ ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿದೆ. ಆದರೆ ಈ ಇಡೀ ವಿವಾದದ ಹಿಂದೆ ದೊಡ್ಡದೊಂದು ಸೈಬರ್ ಕ್ರಿಮಿನಲ್ ನೆಟ್‌ವರ್ಕ್ ಕೆಲಸ ಮಾಡಿದೆ ಎಂಬ ಸತ್ಯ ಈಗ ಬಯಲಾಗಿದೆ!

ವೈರಲ್ ಬಿಕಿನಿ ಕ್ಲಿಪ್ ನಕಲಿ;
ವೈರಲ್ ಬಿಕಿನಿ ಕ್ಲಿಪ್ ನಕಲಿ;

ಶೂಟಿಂಗ್ ಸೆಟ್‌ನ ಹೈಟೆಕ್ ವಂಚನೆ - ಪತ್ತೆಯಾಯ್ತು ಅಸಲಿ ಮುಖವಾಡ!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕ್ಲಿಪ್‌ನಲ್ಲಿ ಮಹಿಳೆಯೊಬ್ಬರು ಸ್ವಿಮ್ಮಿಂಗ್ ಪೂಲ್ ಬಳಿ ಗ್ರೀನ್ ಬಿಕಿನಿ ಧರಿಸಿ ಹೆಜ್ಜೆ ಹಾಕುತ್ತಿದ್ದಾರೆ. ಸುತ್ತಲೂ ದೊಡ್ಡ ಕ್ಯಾಮೆರಾಗಳು, ಸಿನಿಮಾ ಕ್ರೂ ಇರುವುದರಿಂದ "ಇದು ಅವರ ಅಂತರರಾಷ್ಟ್ರೀಯ ಶೂಟಿಂಗ್ ಇರಬೇಕು" ಎಂದು ಎಲ್ಲರೂ ಭಾವಿಸಿದ್ದರು.

ಆದರೆ ಸೈಬರ್ ತಜ್ಞರು ಈ ದೃಶ್ಯಗಳನ್ನು ಡಿಕೋಡ್ ಮಾಡಿದಾಗ ಇದೊಂದು ವ್ಯವಸ್ಥಿತ 'AI ಡೀಪ್‌ಫೇಕ್' (Deepfake) ಕೃತ್ಯ ಎಂಬುದು ಸಾಬೀತಾಗಿದೆ. ಯಾರೋ ಕಿಡಿಗೇಡಿಗಳು ಬೇರೆ ಮಾಡೆಲ್ ಒಬ್ಬರ ವಿಡಿಯೋಗೆ ತಂತ್ರಜ್ಞಾನದ ನೆರವಿನಿಂದ ರುಕ್ಮಿಣಿ ವಸಂತ್ ಅವರ ಮುಖವನ್ನು ಅತಿ ನಿಖರವಾಗಿ ಎಡಿಟ್ ಮಾಡಿ ಮ್ಯಾಚ್ ಮಾಡಿದ್ದಾರೆ. ಈ ವಿಡಿಯೋಗೂ ನಟಿಗೂ ಶೇಕಡಾ ಒಂದರಷ್ಟೂ ಸಂಬಂಧವಿಲ್ಲ. ಈ ವಿಕೃತ ಗಿಮಿಕ್‌ನ ಹಿಂದೆ ನಟಿಯ ಇಮೇಜ್ ಡ್ಯಾಮೇಜ್ ಮಾಡುವ ದೊಡ್ಡ ಪ್ಲಾನ್ ಅಡಗಿದೆ.

ಗ್ಲಾಮರ್ ಹುಡುಕದ 'ಮೋಸ್ಟ್ ವಾಂಟೆಡ್' ನಟಿ;

ಸಿನಿಮಾ ಇಂಡಸ್ಟ್ರಿಯಲ್ಲಿ ರುಕ್ಮಿಣಿ ವಸಂತ್ ಸದಾ ತಮ್ಮ ನಟನಾ ಕೌಶಲ್ಯದಿಂದಲೇ ಮುಂಚೂಣಿಗೆ ಬಂದವರು. ಕೇವಲ ಶೋ-ಪೀಸ್ ಪಾತ್ರಗಳಿಗೆ ಅವರು ಯಾವತ್ತೂ ಒಪ್ಪಿಗೆ ಕೊಟ್ಟವರಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಪ್ರವಾಸದ ಬಗ್ಗೆ ಮಾತನಾಡಿದ್ದ ಅವರು,

"ನನಗೆ ಸಿಗುವ ಪಾತ್ರಗಳು ಮತ್ತು ಅದರ ತೂಕ ಮುಖ್ಯವೇ ಹೊರತು ಗ್ಲಾಮರ್ ಲೇಬಲ್ ಅಲ್ಲ. ಗುಣಮಟ್ಟದ ಕಥೆಗಳ ಮೂಲಕ ಜನರ ಹೃದಯ ತಲುಪುವುದೇ ನನ್ನ ಏಕೈಕ ಉದ್ದೇಶ" ಎಂದು ಹೇಳಿದ್ದರು.

ಅವರ ಈ ಸಿನಿಮಾ ಪ್ಯಾಶನ್ ಎಷ್ಟರಮಟ್ಟಿಗಿದೆ ಎಂದರೆ, ತಮಗೆ ಬ್ರೇಕ್ ಕೊಟ್ಟ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಆಡಿಷನ್‌ಗಾಗಿ ಸ್ವತಃ ತಾವೇ ನಿರ್ದೇಶಕ ಹೇಮಂತ್ ರಾವ್ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ದರಂತೆ! ಸಿನಿಮಾ ರಂಗದಲ್ಲಿ ಯಶ್ ಮತ್ತು ರಿಷಬ್ ಶೆಟ್ಟಿ ಅವರಂತಹ ದೊಡ್ಡ ಸಾಧಕರಿಂದ ಕಲಿಯುವುದು ಸಾಕಷ್ಟಿದೆ ಎಂದು ನಂಬಿರುವ ರುಕ್ಮಿಣಿ, ಸದ್ಯ ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ಹೀರೋಯಿನ್ ಆಗಿ ಹೊರಹೊಮ್ಮಿದ್ದಾರೆ.

ಬೆಳವಣಿಗೆ ಸಹಿಸದವರಿಂದಲೇ ಈ ಕುತಂತ್ರ?

ರುಕ್ಮಿಣಿ ವಸಂತ್ ಅವರ ಈ ಸಡನ್ ಬೆಳವಣಿಗೆ ಇತ್ತೀಚೆಗೆ ಭಾರತೀಯ ಚಿತ್ರರಂಗವನ್ನೇ ಬೆರಗುಗೊಳಿಸಿದೆ. ಸದ್ಯ ಅವರು ರಿಷಬ್ ಶೆಟ್ಟಿ ನಿರ್ದೇಶನದ ಮೆಗಾ ಪ್ರಾಜೆಕ್ಟ್ 'ಕಾಂತಾರ: ಚಾಪ್ಟರ್ 1', ರಾಕಿಂಗ್ ಸ್ಟಾರ್ ಯಶ್ ಅಭಿನಯದ ಇಂಟರ್ನ್ಯಾಷನಲ್ ಹೈಪ್ ಇರುವ 'ಟಾಕ್ಸಿಕ್' (Toxic) ಹಾಗೂ ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಡ್ರ್ಯಾಗನ್' (Dragon) ಚಿತ್ರಗಳಲ್ಲಿ ಪ್ರಮುಖ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇಷ್ಟು ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿಯ ಮಾರ್ಕೆಟ್ ಮತ್ತು ಜನಪ್ರಿಯತೆಯನ್ನು ಧೂಳೀಪಟ ಮಾಡಲು ಈ ರೀತಿಯ ಚೀಪ್ ಸೈಬರ್ ಅಟ್ಯಾಕ್ ಮಾಡಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಇಂತಹ ತಂತ್ರಜ್ಞಾನದ ವಿಕೃತಿಗಳನ್ನು ಯಾರೂ ನಂಬಬೇಡಿ ಮತ್ತು ಇಂಟರ್ನೆಟ್‌ನಲ್ಲಿ ಫಾರ್ವರ್ಡ್ ಮಾಡಬೇಡಿ ಎಂದು ಸೈಬರ್ ಪೊಲೀಸರು ಹಾಗೂ ಸಿನಿಮಾ ರಂಗದ ಗಣ್ಯರು ಕಡಕ್ ಎಚ್ಚರಿಕೆ ನೀಡಿದ್ದಾರೆ!

Comments

Latest News