Apr 15, 2026 Languages : ಕನ್ನಡ | English

KGF & ಟಾಕ್ಸಿಕ್‌ಗೂ ಇದೆಯಾ ನಂಟು? ಯಶ್ ನೀಡಿದ ಆ ಒಂದು ಸುಳಿವು ಸೃಷ್ಟಿಸಿದೆ ಹೊಸ ಸಂಚಲನ!!

ಯಶ್ ಅವರ ಸಿನಿಮಾ ಅಂದಮೇಲೆ ಅಲ್ಲಿ ಏನೋ ಒಂದು 'ಕಿಕ್' ಇರುತ್ತೆ ಅನ್ನೋದು ಎಲ್ಲರಿಗೂ ಗೊತ್ತು. 'ಕೆಜಿಎಫ್' ನಂತರ ಇಡೀ ದೇಶವೇ ಕಾಯ್ತಿರೋ ಸಿನಿಮಾ ಅಂದ್ರೆ ಅದು 'ಟಾಕ್ಸಿಕ್'. ಈ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಚರ್ಚೆ ನಡೀತಲೇ ಇರುತ್ತೆ. ಸದ್ಯ ಲಾಸ್ ಏಂಜಲ್ಸ್‌ನಲ್ಲಿ ನಡೆಯುತ್ತಿರುವ 'ಸಿನಿಮಾಕಾನ್ 2026' ರಲ್ಲಿ ಭಾಗವಹಿಸಿರೋ ಯಶ್, ತಮ್ಮ ಸಿನಿಮಾ ಬಗ್ಗೆ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಜೂನ್ 4ಕ್ಕೆ ರಾಕಿ ಭಾಯ್ ಅಟ್ಟಹಾಸ
ಜೂನ್ 4ಕ್ಕೆ ರಾಕಿ ಭಾಯ್ ಅಟ್ಟಹಾಸ

ನಮಗೆಲ್ಲ ಗೊತ್ತಿರೋ ಹಾಗೆ 'ಟಾಕ್ಸಿಕ್' ಸಿನಿಮಾ ಮಾರ್ಚ್ 19ಕ್ಕೇ ರಿಲೀಸ್ ಆಗಬೇಕಿತ್ತು. ಆದರೆ ಜಾಗತಿಕ ಮಟ್ಟದ ಯುದ್ಧದ ಭೀತಿಯಿಂದಾಗಿ ರಿಲೀಸ್ ಡೇಟ್ ಕೊಂಚ ಮುಂದಕ್ಕೆ ಹೋಗಿದೆ. ಈಗ ಸಿಕ್ಕಿರೋ ಲೇಟೆಸ್ಟ್ ಅಪ್‌ಡೇಟ್ ಪ್ರಕಾರ, ಜೂನ್ 4 ರಂದು ಸಿನಿಮಾ ಅದ್ದೂರಿಯಾಗಿ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ. ಸಿನಿಮಾ ಲೇಟ್ ಆದರೂ ಲೇಟೆಸ್ಟ್ ಆಗಿ ಬರುತ್ತೆ ಅನ್ನೋದು ಅಭಿಮಾನಿಗಳ ನಂಬಿಕೆ.

ಮೇಲ್ನೋಟಕ್ಕೆ ಇದು ಗ್ಯಾಂಗ್‌ಸ್ಟರ್ ಸಿನಿಮಾ ತರಹ ಕಂಡರೂ, ಕತೆಯ ಆಳದಲ್ಲಿ ಅಸಲಿ ಆಟವೇ ಬೇರೆ ಇದೆ. ಈ ಬಗ್ಗೆ ಮಾತಾಡಿರೋ ಯಶ್, "ಇದು ಬರೀ ಆಕ್ಷನ್ ಸಿನಿಮಾ ಅಲ್ಲ, ಇದೊಂದು ಸೈಕಾಲಜಿಕಲ್ ಥ್ರಿಲ್ಲರ್. ಇಲ್ಲಿ ಮಾನವೀಯ ಸಂಬಂಧಗಳ ಬಗ್ಗೆಯೂ ಒಂದು ಎಮೋಷನಲ್ ಎಳೆಯಿದೆ" ಅಂತ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ಸಾಮಾನ್ಯವಾಗಿ ಗ್ಯಾಂಗ್‌ಸ್ಟರ್ ಸಿನಿಮಾ ಅಂದ್ರೆ ಬರೀ ಫೈಟು, ರಕ್ತಪಾತ ಅಂದುಕೊಳ್ತೀವಿ. ಆದ್ರೆ ಡೈರೆಕ್ಟರ್ ಗೀತು ಮೋಹನ್ ದಾಸ್ ಈ ಸ್ಟೋರಿಯನ್ನ ತುಂಬಾನೇ ಡಿಫರೆಂಟ್ ಆಗಿ ಪ್ಲಾನ್ ಮಾಡಿದ್ದಾರಂತೆ. ಯಶ್ ಪಾತ್ರದಲ್ಲಿ ಸಾಕಷ್ಟು ಲೇಯರ್‌ಗಳಿದ್ದು, ಸಿನಿಮಾ ನೋಡಿ ಹೊರಬಂದ ಮೇಲೂ ಪ್ರೇಕ್ಷಕರ ತಲೆಯಲ್ಲಿ ಆ ಕ್ಯಾರೆಕ್ಟರ್ ಉಳಿಯೋದು ಫಿಕ್ಸ್ ಅನ್ನೋದು ರಾಕಿ ಭಾಯ್ ನಂಬಿಕೆ.

ಇನ್ನೊಂದು ವಿಷಯ ಏನಪ್ಪಾ ಅಂದ್ರೆ, ಈ ಸಿನಿಮಾ ಬರೀ ಇಂಡಿಯನ್ ಭಾಷೆಗಳಲ್ಲಿ ಮಾತ್ರವಲ್ಲ, ಇಂಗ್ಲಿಷ್‌ನಲ್ಲೂ ಶೂಟ್ ಆಗಿದೆಯಂತೆ! ಅಂದ್ರೆ ಯಶ್ ಅವರು ಗ್ಲೋಬಲ್ ಸ್ಟಾರ್ ಆಗಿ ಮಿಂಚೋಕೆ ಫುಲ್ ತಯಾರಿ ನಡೆಸಿದ್ದಾರೆ. ಇನ್ನು ಈ ಸಿನಿಮಾಗೆ ಕೆಲಸ ಮಾಡಿರೋ ವರ್ಲ್ಡ್ ಕ್ಲಾಸ್ ಟೆಕ್ನಿಷಿಯನ್ಸ್ ನೋಡ್ತಿದ್ರೆ, ವಿಶುವಲ್ಸ್ ಮಾತ್ರ ಕಣ್ಣಿಗೆ ಹಬ್ಬ ಕೊಡೋದು ಗ್ಯಾರಂಟಿ.

ಈಗಾಗ್ಲೇ ರಿಲೀಸ್ ಆಗಿರೋ ಟೀಸರ್‌ಗಳಲ್ಲಿ ಫುಲ್ ವೈಲೆನ್ಸ್ ಇರೋ ಹಾಗೆ ತೋರಿಸಿದ್ದಾರೆ. ಆದ್ರೆ, "ನೋಡೋದು ಒಂದು, ಒಳಗಿರೋದು ಇನ್ನೊಂದು" ಅನ್ನೋದು ಯಶ್ ಅವರ ಮಾತು. ಅಂದ್ರೆ ನೀವು ಟೀಸರ್‌ನಲ್ಲಿ ನೋಡಿರೋದು ಬರೀ ಸ್ಯಾಂಪಲ್ ಅಷ್ಟೇ, ಅಸಲಿ ಪಿಕ್ಚರ್ ಫೀಲ್ ಬೇರೆಯೇ ಇರಲಿದೆ!

ಗೀತು ಮೋಹನ್ ದಾಸ್ ಅವರ ಹಳೆ ಸಿನಿಮಾಗಳನ್ನು ನೋಡಿದವರಿಗೆ ಚೆನ್ನಾಗಿ ಗೊತ್ತು, ಅವರು ಹ್ಯೂಮನ್ ಎಮೋಷನ್ಸ್‌ಗೆ ಎಷ್ಟು ಇಂಪಾರ್ಟೆನ್ಸ್ ಕೊಡ್ತಾರೆ ಅಂತ. ಹಾಗಾಗಿ 'ಟಾಕ್ಸಿಕ್' ಬರೀ ಮಾಸ್ ಅಷ್ಟೇ ಅಲ್ಲ, ಒಂದು ಕ್ಲಾಸ್ ಅನುಭವ ಕೂಡ ಕೊಡೋದರಲ್ಲಿ ಡೌಟೇ ಇಲ್ಲ.