Mar 23, 2026 Languages : ಕನ್ನಡ | English

ಟ್ರೋಲ್‌ ಮಾಡಿದವರಿಗೆ ರಶ್ಮಿಕಾ ಖಡಕ್ ಉತ್ತರ - 'ಗರ್ಲ್‌ಫ್ರೆಂಡ್' ಚಿತ್ರದ ನಟನೆಗೆ ಸಿಕ್ಕಿತು ಪ್ರತಿಷ್ಠಿತ ರಾಜ್ಯ ಪ್ರಶಸ್ತಿ!!

ಚಿತ್ರರಂಗದಲ್ಲಿ ನಟಿಯರು ಎದುರಿಸುವ ಅತಿದೊಡ್ಡ ಸವಾಲು ಎಂದರೆ ಅದು ಸಾಮಾಜಿಕ ಜಾಲತಾಣದ ಟ್ರೋಲ್‌ಗಳು. ಅದರಲ್ಲೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ವೃತ್ತಿಜೀವನದ ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. 

ವಿಜಯ ದೇವರಕೊಂಡ ತಾಯಿಗೂ ಕಣ್ಣೀರು ತರಿಸಿದ ರಶ್ಮಿಕಾ ಮಾತು
ವಿಜಯ ದೇವರಕೊಂಡ ತಾಯಿಗೂ ಕಣ್ಣೀರು ತರಿಸಿದ ರಶ್ಮಿಕಾ ಮಾತು

ಇತ್ತೀಚೆಗೆ ನಡೆದ ತೆಲಂಗಾಣದ ಪ್ರತಿಷ್ಠಿತ ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವರು ತಮ್ಮ 'ಗರ್ಲ್‌ಫ್ರೆಂಡ್' ಚಿತ್ರದ ಅದ್ಭುತ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹಸ್ತದಿಂದ ಈ ಗೌರವ ಸ್ವೀಕರಿಸಿದ ರಶ್ಮಿಕಾ, ವೇದಿಕೆಯ ಮೇಲೆ ಭಾವುಕರಾದರು. ಈ ಪ್ರಶಸ್ತಿಯು ಕೇವಲ ಒಂದು ಗೌರವವಲ್ಲ, ಬದಲಿಗೆ ತಮ್ಮ ನಟನಾ ಸಾಮರ್ಥ್ಯವನ್ನು ಪ್ರಶ್ನಿಸಿದವರಿಗೆ ಸಂದ ಜಯ ಎಂದು ಅವರು ಭಾವಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ರಶ್ಮಿಕಾ, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. "ಈ ಹಿಂದೆ ನಾನು ಅನೇಕ ಟ್ರೋಲ್‌ಗಳನ್ನು ಮತ್ತು ನಕಾರಾತ್ಮಕ ಕಾಮೆಂಟ್‌ಗಳನ್ನು ಎದುರಿಸಿದ್ದೇನೆ. ಆದರೆ ಇಂದು ರಾಜ್ಯ ಪ್ರಶಸ್ತಿಯನ್ನು ಪಡೆಯುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ. ನನ್ನ ಕೆಲಸವೇ ಟೀಕಾಕಾರರಿಗೆ ಉತ್ತರ ನೀಡಲಿ ಎಂದು ನಾನು ಬಯಸಿದ್ದೆ," ಎಂದು ಅವರು ಮಾರ್ಮಿಕವಾಗಿ ನುಡಿದರು. 'ಗರ್ಲ್‌ಫ್ರೆಂಡ್' ಅಂತಹ ಸದಭಿರುಚಿಯ ಚಿತ್ರಕ್ಕೆ ಈ ಮನ್ನಣೆ ಸಿಕ್ಕಿರುವುದು ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ರಶ್ಮಿಕಾ ಮಂದಣ್ಣ ಅವರು ತೆಲಂಗಾಣವನ್ನು ತಮ್ಮ ಎರಡನೇ ಮನೆ ಎಂದು ಕರೆದರು. "ನಾನು ಈ ಚಿತ್ರರಂಗಕ್ಕೆ ಬಂದಾಗ ಎಲ್ಲರೂ ನನ್ನನ್ನು ಮಗಳಂತೆ ಪ್ರೀತಿಯಿಂದ ಬರಮಾಡಿಕೊಂಡರು. ಆದರೆ ಈಗ ನಾನು ನಿಮ್ಮ ಮನೆಯ ಸೊಸೆಯಾಗಿದ್ದೇನೆ. ದಯವಿಟ್ಟು ನನ್ನನ್ನು ಹಾಗೆಯೇ ಪ್ರೀತಿಯಿಂದ ನೋಡಿಕೊಳ್ಳಿ," ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು. ರಶ್ಮಿಕಾ ಈ ರೀತಿ ಮಾತನಾಡುತ್ತಿರುವಾಗ ಸಬೆಯಲ್ಲಿ ಉಪಸ್ಥಿತರಿದ್ದ ವಿಜಯ ದೇವರಕೊಂಡ ಅವರ ತಾಯಿ ಭಾವುಕರಾದದ್ದು ವಿಶೇಷವಾಗಿತ್ತು.

ತಮ್ಮ ಈ ಯಶಸ್ಸಿಗೆ ಚಿತ್ರದ ನಿರ್ದೇಶಕ ರಾಹುಲ್ ರವೀಂದ್ರನ್ ಮತ್ತು ಇಡೀ ತಾಂತ್ರಿಕ ತಂಡವೇ ಕಾರಣ ಎಂದು ರಶ್ಮಿಕಾ ಧನ್ಯವಾದ ಅರ್ಪಿಸಿದರು. ಸಿನಿಮಾ ಬಜೆಟ್ ಅಥವಾ ಭಾಷೆಗಿಂತ ಹೆಚ್ಚಾಗಿ, ಕಲಾವಿದನ ಶ್ರಮಕ್ಕೆ ಬೆಲೆ ಸಿಕ್ಕಾಗ ಸಿಗುವ ತೃಪ್ತಿಯೇ ಬೇರೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಈಗ ರಶ್ಮಿಕಾ ಅವರಿಗೆ ಟ್ರೋಲ್‌ಗಳ ಬಗ್ಗೆ ಚಿಂತೆಯಿಲ್ಲ, ಬದಲಿಗೆ ಉತ್ತಮ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆಲ್ಲುವುದೇ ಅವರ ಏಕೈಕ ಗುರಿಯಾಗಿದೆ.

Latest News