ಕನ್ನಡದ ನಗು ಮುಖದ ಒಡೆಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಜನತೆಯ ಪಾಲಿಗೆ ದೇವರಿಂದ್ದಂತೆ. ಹೆಮ್ಮೆಯಿಂದ ಹೇಳಬಹುದು ಇವರು ನಮ್ಮ ಕನ್ನಡ ಚಿತ್ರರಂಗದ ಒಬ್ಬ ಅದ್ಬುತ ನಟ ಎಂದು. ಅಪ್ಪು ಸರ್ ಎಲ್ಲಿಯೂ ಹೋಗಿಲ್ಲ ಅವರ ಒಳ್ಳೆಯ ಕೆಲಸದ ಮೂಲಕ ಸದಾ ನಮ್ಮ ಜೊತೆಗಿದ್ದಾರೆ. ಅಷ್ಟು ಇಲ್ದೇ ಹೇಳ್ತಾರಾ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅಂತ, ಮೊನ್ನೆಯಷ್ಟೇ ಅಪ್ಪು ಸರ್ ಅವರ ಹುಟ್ಟುಹಬ್ಬವಾಗಿತು. ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಮಹತ್ವವಾದ ಕಾರ್ಯಗಳನ್ನ ಮಾಡಿ ಅವರ ಹುಟ್ಟುವನ್ನು ಸಾರ್ಥಕಗೊಳಿಸಿದರು. ಇದೀಗ ಬೆಂಗಳೂರಿನ ಫೇಮಸ್ ಪ್ರವಾಸಿ ತಾಣವಾದ ಸ್ಯಾಂಕಿ ಕೆರೆಯ ಮುಂಭಾಗದಲ್ಲಿ ಅಪ್ಪು ಅವರ ಭವ್ಯವಾದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಈ ಸುಂದರ ಪ್ರತಿಮೆಯು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದ್ದು, ಅಭಿಮಾನಿಗಳಲ್ಲಿ ಹೊಸ ಸಂಭ್ರಮವನ್ನು ತಂದಿದೆ.
ಸುಮಾರು 800 ಕೆಜಿ ತೂಕದ ಈ ಬೃಹತ್ ಕಂಚಿನ ಪ್ರತಿಮೆಯನ್ನು ಬಹಳ ಸುಂದರ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಯುಗಾದಿ ಹಬ್ಬದ ವಿಶೇಷ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಾಜಿ ಸಚಿವ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಮತ್ತು ಹಿರಿಯ ಚಲನಚಿತ್ರ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಅವರು ಪಾಲ್ಗೊಂಡು ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು.
ಈ ಸಮಾರಂಭಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದು ಕೊಟ್ಟಿದೆ. ಇದರ ಜೊತೆಗೆ ಅಪ್ಪು ಅಮರ ಎಂಬ ಘೋಷಣೆಗಳ ನಡುವೆ ನಡೆದ ಈ ಕಾರ್ಯಕ್ರಮವು ಕೇವಲ ಒಂದು ಪ್ರತಿಮೆ ಅನಾವರಣವಾಗಿರದೆ, ಪುನೀತ್ ಅವರ ಮೇಲಿರುವ ಅಪಾರ ಗೌರವದ ಸಂಕೇತವಾಗಿತ್ತು. ಅಪ್ಪು ಅವರಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವಾಗಲಿ ಅದಕ್ಕೆ ಅಭಿಮಾನಿಗಳು ಸೇರದೆ ಇರಲಾರರು ಇದನ್ನ ನೋಡಿದ್ರೆ ಗೊತ್ತಾಗುತ್ತೆ ಅಪ್ಪು ಅವರ ವ್ಯಕ್ತಿತ್ವ ಎಂಥದು ಅಂತ.
ಈ ಕಾರ್ಯಕ್ರಮದ ಕುರಿತು ಮಾತನಾಡಿದ ಶಾಸಕ ಅಶ್ವತ್ಥ್ ನಾರಾಯಣ್ ಅವರು, ಹೊಸ ವರ್ಷದ ಹರುಷ ತರುವ ಯುಗಾದಿ ಹಬ್ಬದ ದಿನದಂದು ಅಪ್ಪು ಅವರ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಸ್ಯಾಂಕಿ ಟ್ಯಾಂಕ್ ಆವರಣಕ್ಕೆ ಬರುವ ಪ್ರತಿಯೊಬ್ಬರಿಗೂ ಈ ಪ್ರತಿಮೆಯು ಸ್ಫೂರ್ತಿ ನೀಡಲಿದೆ. ಪುನೀತ್ ಅವರು ಕೇವಲ ನಟರಾಗಿರಲಿಲ್ಲ, ಅವರು ಸಮಾಜಕ್ಕೆ ಮಾದರಿಯಾದ ವ್ಯಕ್ತಿಯಾಗಿದ್ದರು, ಎಂದು ಅಭಿಪ್ರಾಯಪಟ್ಟರು.
ಇನ್ನು ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಬಗ್ಗೆ ಮಾತಾಡಿದ್ದು, ಪ್ರತಿಮೆಯು ತುಂಬಾ ಸುಂದರವಾಗಿ ಮೂಡಿಬಂದಿದೆ. ಅಭಿಮಾನಿಗಳು ತೋರುತ್ತಿರುವ ಈ ನಿರಂತರ ಪ್ರೀತಿ ಮತ್ತು ಗೌರವಕ್ಕೆ ನಾನು ಚಿರಋಣಿ. ಅಪ್ಪು ಅವರನ್ನು ಇಷ್ಟು ವರ್ಷಗಳ ನಂತರವೂ ಇಷ್ಟೇ ಅಭಿಮಾನದಿಂದ ನೆನಪಿಸಿಕೊಳ್ಳುತ್ತಿರುವುದು ನೋಡಿ ತುಂಬಾ ಖುಷಿಯಾಗುತ್ತಿದೆ, ಎಂದು ಅವರು ತಮ್ಮ ಕೃತಜ್ಞತೆ ಸಲ್ಲಿಸಿದರು.
ಸ್ಯಾಂಕಿ ಟ್ಯಾಂಕ್ ಅಲ್ಲಿ ವಾಕ್ ಬರುವವರಿಗೆ ಈ ಒಂದು ಪ್ರತಿಮೆ ಜನರನ್ನ ಅಟ್ರಾಕ್ಟ್ ಮಾಡಲಿದೆ. ಪ್ರತಿಮೆಯ ಸುತ್ತಮುತ್ತ ಸುಂದರವಾದ ಕಲರ್ ಫುಲ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅಪ್ಪು ಅವರ ನಗುವಿನ ಮುಖವು ಎಂಥವರನ್ನ .
ಪುನೀತ್ ರಾಜ್‌ಕುಮಾರ್ ಅವರ ಈ ಕಂಚಿನ ಪ್ರತಿಮೆಯು ಬೆಂಗಳೂರಿನ ಹೃದಯಭಾಗದಲ್ಲಿ ಸದಾಕಾಲ ಅವರ ನೆನಪನ್ನು ಜಿವಂತವಾಗಿರಿಸಲಿದೆ. ಶ್ರಮಜೀವಿಗಳಿಗೆ, ಯುವಕರಿಗೆ ಮತ್ತು ಕಲಾವಿದರಿಗೆ ಈ ಪ್ರತಿಮೆಯು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸ್ಫೂರ್ತಿಯಾಗುವುದರಲ್ಲಿ ಸಂಶಯವಿಲ್ಲ.