Mar 25, 2026 Languages : ಕನ್ನಡ | English

ಅನಿಮಲ್ ನಿರ್ದೇಶಕನ ಜೊತೆ ಪ್ರಭಾಸ್ ಸ್ಪಿರಿಟ್ ಚಿತ್ರದ ರಗಡ್ ಪೋಸ್ಟರ್ ರಿಲೀಸ್ - ಫ್ಯಾನ್ಸ್ ಖುಷ್

2026ರ ಹೊಸ ವರ್ಷದ ಆರಂಭದ ಸಂಭ್ರಮದಲ್ಲಿ ನಟ ಪ್ರಭಾಸ್ ಅಭಿನಯದ ‘ಸ್ಪಿರಿಟ್’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿ ಅವರ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮಧ್ಯರಾತ್ರಿ 12 ಗಂಟೆಗೆ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳಿಗೆ ಹೊಸ ವರ್ಷದ ವಿಶೇಷ ಗಿಫ್ಟ್ ಆಗಿ ಪರಿಣಮಿಸಿತು ಎನ್ನಬಹುದು. 

2026ರ ಹೊಸ ವರ್ಷದ ಗಿಫ್ಟ್ – ಪ್ರಭಾಸ್ ‘ಸ್ಪಿರಿಟ್’ ಪೋಸ್ಟರ್ ಬಿಡುಗಡೆ | Photo Credit: https://x.com/maadalaadlahere
2026ರ ಹೊಸ ವರ್ಷದ ಗಿಫ್ಟ್ – ಪ್ರಭಾಸ್ ‘ಸ್ಪಿರಿಟ್’ ಪೋಸ್ಟರ್ ಬಿಡುಗಡೆ | Photo Credit: https://x.com/maadalaadlahere

ಪೋಸ್ಟರ್‌ನಲ್ಲಿ ಪ್ರಭಾಸ್ ಗಾಯಗೊಂಡ ಬೆನ್ನಿನೊಂದಿಗೆ ಗಂಭೀರ ಮುಖಭಾವದಲ್ಲಿ ಕಾಣಿಸಿಕೊಂಡಿದ್ದಾರೆ. ಆಫ್-ವೈಟ್ ಪ್ಯಾಂಟ್ ಧರಿಸಿ, ಕಪ್ಪು ಗಾಗಲ್ ಹಾಕಿಕೊಂಡು, ಕೈಯಲ್ಲಿ ಮದ್ಯದ ಬಾಟಲ್ ಹಿಡಿದಿರುವ ಲುಕ್ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ಅವರ ಪಕ್ಕದಲ್ಲಿ ನಟಿ ತ್ರಿಪ್ತಿ ದಿಮ್ರಿ ಸಿಗರೇಟ್ ಹಚ್ಚುತ್ತಿರುವ ದೃಶ್ಯವು ಚಿತ್ರದ ತೀವ್ರತೆಯನ್ನು ಸೂಚಿಸುತ್ತಿದೆ.

‘ಅನಿಮಲ್’ ಮೂಲಕ ಭಾರೀ ಯಶಸ್ಸು ಕಂಡ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಈ ಬಾರಿ ಸ್ಟಾರ್ ನಟ ಪ್ರಭಾಸ್ ಅವರ ಜೊತೆ ಕೈಜೋಡಿಸಿದ್ದಾರೆ. ಪೋಸ್ಟರ್ ಬಿಡುಗಡೆ ವೇಳೆ ಅವರು “INDIAN CINEMA… witness your AJANUBAHUDU / AJANUBAHU” ಎಂದು ಬರೆಯುತ್ತಾ ಪ್ರಭಾಸ್ ಅವರ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದರು. 

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಬಿಡುಗಡೆಯಾದ ತಕ್ಷಣವೇ #SpiritFirstLook ಟ್ರೆಂಡ್ ಆಗಿದೆ ನೋಡಿ. ಅಭಿಮಾನಿಗಳು ಪ್ರಭಾಸ್‌ ಅವರ ಹೊಸ ಲುಕ್‌ನ್ನು ಮೆಚ್ಚಿ, “ಇದು 2026ರ ದೊಡ್ಡ ಹಿಟ್ ಆಗಲಿದೆ” ನೋಡಿ ಎಂದು ಅವರ ನೆಚ್ಚಿನ ನಟನ ಚಿತ್ರದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕೆಲವರು “ಈ ಪೋಸ್ಟರ್ ಅನಿಮಲ್ ಶೈಲಿಯ ತೀವ್ರತೆಯನ್ನು ನೆನಪಿಸುತ್ತದೆ” ಎಂದು ಹೋಲಿಕೆ ಕೂಡ ಮಾಡಿದರು.

‘ಸ್ಪಿರಿಟ್’ ಒಂದು ಕಾಪ್ ಡ್ರಾಮಾ ಆಗಿದ್ದು, ಪ್ರಭಾಸ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕಥೆ ತೀವ್ರ ಭಾವನೆ, ಆಕ್ಷನ್ ಮತ್ತು ಡ್ರಾಮಾ ತುಂಬಿಕೊಂಡಿರಲಿದೆ ಎಂಬ ನಿರೀಕ್ಷೆ ಇದೆ. ತ್ರಿಪ್ತಿ ದಿಮ್ರಿ ಅವರ ಪಾತ್ರವೂ ಪ್ರಮುಖವಾಗಿದ್ದು, ಅವರ ತೀವ್ರ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

2026ರಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಹೊಸ ವರ್ಷದ ಆರಂಭದಲ್ಲೇ ಬಿಡುಗಡೆಯಾದ ಈ ಪೋಸ್ಟರ್ ಅಭಿಮಾನಿಗಳಿಗೆ ಭಾರೀ ಉಡುಗೊರೆಯಾಗಿದೆ. ಪ್ರಭಾಸ್‌ನ ತೀವ್ರ ಲುಕ್ ಹಾಗೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಶೈಲಿ, ‘ಸ್ಪಿರಿಟ್’ ಚಿತ್ರವನ್ನು 2026ರ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನ್ನುತ್ತಿದ್ದಾರೆ. ನಟ ಪ್ರಭಾಸ್ ಅಭಿಮಾನಿಗಳಿಗೆ ‘ಸ್ಪಿರಿಟ್’ ಹೊಸ ವರ್ಷದ ವಿಶೇಷ ಗಿಫ್ಟ್ ಆಗಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಸದ್ದು ಮಾಡುವ ನಿರೀಕ್ಷೆಯಿದೆ. ನೀವು ಸಹ ಈ ಸಿನಿಮಾದ ಅಪಡೇಟ್ ಗಾಗಿ, ಸಿನಿಮಾ ಹೇಗೆ ಮೂಡಿ ಬರಲಿದೆ ಎನ್ನುವ ನಿರೀಕ್ಷೆಗಾಗಿ ಎದುರು ನೋಡುತ್ತಿದ್ದರೆ ಕಾಮೆಂಟ್ ಮಾಡಿ ತಿಳಿಸಿ ಹಾಗೆ ಚಿತ್ರಕ್ಕೆ ಶುಭಕೋರಿ ಧನ್ಯವಾದಗಳು. 

Latest News