Apr 4, 2026 Languages : ಕನ್ನಡ | English

ರಾಮಾಯಣ ಟೀಸರ್ ಬೆನ್ನಲ್ಲೇ ಸಂಭಾವನೆ ಸಂಚಲನ - ಶ್ರೀರಾಮನ ಪಾತ್ರಕ್ಕೆ ರಣಬೀರ್ ಪಡೆದ ಹಣ ಕೇಳಿದ್ರೆ ದಂಗಾಗ್ತೀರಾ!!

ನಿನ್ನೆ ತಾನೇ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಿ ಇಡೀ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಈ ಟೀಸರ್ ನೋಡಿದ ಮೇಲೆ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಆದರೆ ಈಗ ಅದಕ್ಕಿಂತ ದೊಡ್ಡ ಚರ್ಚೆ ಶುರುವಾಗಿರೋದು ಈ ಸಿನಿಮಾದ ಸ್ಟಾರ್ ನಟರ ಸಂಭಾವನೆ (Salary) ವಿಚಾರದಲ್ಲಿ.

4,000 ಕೋಟಿ ಬಜೆಟ್‌ನ ಅದ್ದೂರಿ ಸಿನಿಮಾ
4,000 ಕೋಟಿ ಬಜೆಟ್‌ನ ಅದ್ದೂರಿ ಸಿನಿಮಾ

ಸುಮಾರು 4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ, ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಅತ್ಯಂತ ಅದ್ದೂರಿ ಚಿತ್ರ ಎನಿಸಿಕೊಂಡಿದೆ. ಹಾಗಾದರೆ ಶ್ರೀರಾಮನಾಗಿ ರಣಬೀರ್, ರಾವಣನಾಗಿ ನಮ್ಮ ಯಶ್ ಎಷ್ಟು ಕೋಟಿ ಜೇಬಿಗೆ ಇಳಿಸಿಕೊಂಡಿದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್.

ಶ್ರೀರಾಮನ ಪಾತ್ರಕ್ಕೆ ರಣಬೀರ್‌ಗೆ ಬರೋಬ್ಬರಿ 150 ಕೋಟಿ!

ಬಾಲಿವುಡ್ ಚಾಕೊಲೇಟ್ ಬಾಯ್ ರಣಬೀರ್ ಕಪೂರ್ ಈ ಸಿನಿಮಾದಲ್ಲಿ ಶ್ರೀರಾಮನ ಪಾತ್ರ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ರಣಬೀರ್ ಈ ಚಿತ್ರದ ಎರಡು ಭಾಗಗಳಿಗೆ ಸೇರಿ ಒಟ್ಟು 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಅಂದರೆ ಪ್ರತಿ ಭಾಗಕ್ಕೆ 75 ಕೋಟಿ ರೂ.
ಇದು ಅವರ ಕೆರಿಯರ್‌ನಲ್ಲೇ ಅತಿ ದೊಡ್ಡ ಮೊತ್ತ. ಯಾಕೆಂದರೆ, ಹೋದ ವರ್ಷ ಬಂದ ಸೂಪರ್ ಹಿಟ್ ಸಿನಿಮಾ 'ಅನಿಮಲ್'ಗೆ ಅವರು ಕೇವಲ 30-35 ಕೋಟಿ ರೂ. ಪಡೆದಿದ್ದರು ಎನ್ನಲಾಗಿತ್ತು. ಈಗ ರಾಮನ ಪಾತ್ರಕ್ಕಾಗಿ ಅವರ ಡಿಮ್ಯಾಂಡ್ ಡಬಲ್ ಆಗಿದೆ!

ರಾವಣನಾಗಿ ಅಬ್ಬರಿಸಲಿರೋ ಯಶ್ ಸಂಭಾವನೆ ಎಷ್ಟು?

ನಮ್ಮ ಕೆಜಿಎಫ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ಲಂಕೇಶ್ವರ ಅಂದ್ರೆ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಅವರಿಗೆ ಹಿಂದಿ ಮಾರ್ಕೆಟ್‌ನಲ್ಲಿ ಈಗ ಸಿಕ್ಕಾಪಟ್ಟೆ ಕ್ರೇಜ್ ಇದೆ. ಅವರು ಪ್ರತಿ ಭಾಗಕ್ಕೆ 50 ಕೋಟಿಯಂತೆ ಎರಡು ಭಾಗಕ್ಕೆ ಸೇರಿ ಒಟ್ಟು 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಕೆಜಿಎಫ್ ಸಮಯದಲ್ಲಿ ಅವರು 30-35 ಕೋಟಿ ಪಡೆಯುತ್ತಿದ್ದರು, ಈಗ ರಾಮಾಯಣದ ಮೂಲಕ ನೂರರ ಕ್ಲಬ್ ಸೇರಿದ್ದಾರೆ.

ಸೀತಾಮಾತೆಯಾಗಿ ಸಾಯಿ ಪಲ್ಲವಿ

ದಕ್ಷಿಣ ಭಾರತದ ಫೇಮಸ್ ನಟಿ ಸಾಯಿ ಪಲ್ಲವಿ ಇಲ್ಲಿ ಸೀತಾಮಾತೆಯ ಪಾತ್ರ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಸೌತ್ ಸಿನಿಮಾಗಳಿಗೆ 2.5 ರಿಂದ 3 ಕೋಟಿ ಪಡೆಯುತ್ತಿದ್ದ ಸಾಯಿ ಪಲ್ಲವಿ, ರಾಮಾಯಣಕ್ಕಾಗಿ ತನ್ನ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಪ್ರತಿ ಭಾಗಕ್ಕೆ 6 ಕೋಟಿಯಂತೆ ಒಟ್ಟು 12 ಕೋಟಿ ರೂ. ಅವರಿಗೆ ಸಿಗುತ್ತಿದೆ. ಇದು ಅವರ ಮಾರುಕಟ್ಟೆ ಮೌಲ್ಯ ಹೆಚ್ಚುತ್ತಿರುವುದಕ್ಕೆ ಸಾಕ್ಷಿ.

ಇತರ ನಟರ ಲಿಸ್ಟ್ ಇಲ್ಲಿದೆ

ಹನುಮಂತ (ಸನ್ನಿ ಡಿಯೋಲ್): 'ಗದರ್ 2' ಖ್ಯಾತಿಯ ಸನ್ನಿ ಡಿಯೋಲ್ ಹನುಮಂತನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅವರು ಎರಡು ಭಾಗಕ್ಕೆ ಸೇರಿ ಒಟ್ಟು 40 ಕೋಟಿ ರೂ. ಪಡೆಯುತ್ತಿದ್ದಾರೆ.

ಲಕ್ಷ್ಮಣ (ರವಿ ದುಬೆ): ಟಿವಿ ಲೋಕದ ಸ್ಟಾರ್ ರವಿ ದುಬೆ ಲಕ್ಷ್ಮಣನ ಪಾತ್ರಕ್ಕಾಗಿ 2 ರಿಂದ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.

ಮ್ಯೂಸಿಕ್‌ನಲ್ಲಿ ಮ್ಯಾಜಿಕ್!

ಈ ಸಿನಿಮಾದ ಮತ್ತೊಂದು ಹೈಲೈಟ್ ಅಂದ್ರೆ ಮ್ಯೂಸಿಕ್. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಹ್ಯಾನ್ಸ್ ಜಿಮ್ಮರ್ ಮೊದಲ ಬಾರಿಗೆ ಈ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಅಂದ್ರೆ ಮ್ಯೂಸಿಕ್ ನೆಕ್ಸ್ಟ್ ಲೆವೆಲ್ ಇರೋದು ಗ್ಯಾರಂಟಿ.

ಸಿನಿಮಾ ಯಾವಾಗ ರಿಲೀಸ್?

ಈ ಮಹಾಕಾವ್ಯ ಎರಡು ಭಾಗಗಳಲ್ಲಿ ಬರಲಿದೆ. ಮೊದಲ ಭಾಗವು ಮುಂದಿನ ವರ್ಷ ಅಂದರೆ 2026ರ ಅಕ್ಟೋಬರ್‌ನಲ್ಲಿ (ದೀಪಾವಳಿ ವೇಳೆ) ಬಿಡುಗಡೆಯಾಗಲಿದೆ. ಎರಡನೇ ಭಾಗವು 2027ರ ದೀಪಾವಳಿಗೆ ತೆರೆಗೆ ಬರಲಿದೆ.

ಬಾಲಿವುಡ್ ಮತ್ತು ಸೌತ್ ಸಿನಿಮಾ ಮಂದಿ ಸೇರಿ ಮಾಡುತ್ತಿರುವ ಈ 'ರಾಮಾಯಣ' ವರ್ಲ್ಡ್ ಕ್ಲಾಸ್ ಮಟ್ಟದಲ್ಲಿ ಇರೋದು ಪಕ್ಕಾ.