Mar 23, 2026 Languages : ಕನ್ನಡ | English

ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟ ಶೋಭಿತಾ - ವೈರಲ್ ಆಯ್ತು ಸೀರೆಯ ಲುಕ್!!

ಟಾಲಿವುಡ್‌ನ ಸ್ಟಾರ್ ಜೋಡಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಮದುವೆಯಾದಾಗಿನಿಂದಲೂ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ದಂಪತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಅಚ್ಚರಿಯ ಸುದ್ದಿ ಜೋರಾಗಿ ಹರಿದಾಡುತ್ತಿತ್ತು. ಅದೇನಪ್ಪಾ ಅಂದರೆ, ನಟಿ ಶೋಭಿತಾ ಧೂಳಿಪಾಲ ಗರ್ಭಿಣಿಯಾಗಿದ್ದಾರೆ ಎಂಬ ವದಂತಿ! ಈ ಸುದ್ದಿಗೆ ಈಗ ಸ್ವತಃ ನಟಿ ತೆರೆ ಎಳೆದಿದ್ದಾರೆ.

ಗರ್ಭಿಣಿ ಎಂಬ ಸುದ್ದಿಗೆ ತೆರೆ ಎಳೆದ ನಟಿ
ಗರ್ಭಿಣಿ ಎಂಬ ಸುದ್ದಿಗೆ ತೆರೆ ಎಳೆದ ನಟಿ

ಸಾಮಾನ್ಯವಾಗಿ ಮದುವೆಯಾದ ಹೊಸದರಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಅವರು ಎಲ್ಲೇ ಹೋದರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಕಳೆದ ಕೆಲವು ಕಾರ್ಯಕ್ರಮಗಳಲ್ಲಿ ನಾಗ ಚೈತನ್ಯ ಒಬ್ಬರೇ ಕಾಣಿಸಿಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ನೆಟ್ಟಿಗರು, "ಅಕ್ಕಿನೇನಿ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ, ಅದಕ್ಕಾಗಿಯೇ ಶೋಭಿತಾ ಮನೆಯಿಂದ ಹೊರಬರುತ್ತಿಲ್ಲ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ಹಬ್ಬಿಸಿದ್ದರು. ಈ ಪ್ರೆಗ್ನೆನ್ಸಿ ಸುದ್ದಿ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿತ್ತು.

ಈ ಎಲ್ಲಾ ವದಂತಿಗಳಿಗೆ ಉತ್ತರ ನೀಡುವಂತೆ, ಇತ್ತೀಚೆಗೆ ನಡೆದ ಪ್ರತಿಷ್ಠಿತ 'ಗದ್ದರ್ ಪ್ರಶಸ್ತಿ ಪ್ರದಾನ' ಸಮಾರಂಭಕ್ಕೆ ಈ ಜೋಡಿ ಒಟ್ಟಾಗಿ ಆಗಮಿಸಿದರು. ಈ ವೇಳೆ ಶೋಭಿತಾ ಧೂಳಿಪಾಲ ಅತ್ಯಂತ ಆಕರ್ಷಕವಾದ ಮತ್ತು ಪಾರದರ್ಶಕ ಸೀರೆಯನ್ನು ಧರಿಸಿ ಮಿಂಚಿದರು. ಅವರ ಫಿಟ್ ಫಿಗರ್ ಕಂಡು, ಅಭಿಮಾನಿಗಳು ಮತ್ತು ನೆಟ್ಟಿಗರು ಶೋಭಿತಾ ಗರ್ಭಿಣಿ ಎಂಬುದು ಕೇವಲ ಸುಳ್ಳು ಸುದ್ದಿ ಎಂಬುದನ್ನು ಖಚಿತಪಡಿಸಿಕೊಂಡರು. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ಊಹಾಪೋಹಗಳಿಗೆ ಶೋಭಿತಾ ಪರೋಕ್ಷವಾಗಿ ಬ್ರೇಕ್ ಹಾಕಿದ್ದಾರೆ.

ಅದೇ ಸಮಾರಂಭದಲ್ಲಿ ನಾಗ ಚೈತನ್ಯ ಅವರಿಗೆ 'ತಂಡೇಲ್' ಚಿತ್ರದ ಅದ್ಭುತ ನಟನೆಗಾಗಿ 'ಅತ್ಯುತ್ತಮ ನಟ' ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸುವಾಗ ಭಾವುಕರಾದ ನಾಗ ಚೈತನ್ಯ, "ನನ್ನ ಈ ಯಶಸ್ಸಿಗೆ ತಂಡೇಲ್ ಚಿತ್ರತಂಡದ ಶ್ರಮವೇ ಕಾರಣ. ಜತೆಗೆ ನನ್ನ ಶಕ್ತಿಯ ಮೂಲಸ್ತಂಭಗಳಾದ ನನ್ನ ತಂದೆ-ತಾಯಿ ಮತ್ತು ನನ್ನ ಪತ್ನಿ ಶೋಭಿತಾಗೆ ನಾನು ವಿಶೇಷ ಧನ್ಯವಾದ ಹೇಳುತ್ತೇನೆ" ಎಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಚೈತನ್ಯ ತಮ್ಮ ಹೆಸರನ್ನು ಪ್ರಸ್ತಾಪಿಸುತ್ತಿದ್ದಂತೆ, ಶೋಭಿತಾ ವೇದಿಕೆಯ ಮುಂಭಾಗದಲ್ಲಿ ಕುಳಿತು ಮುಗುಳ್ನಗುತ್ತಾ ಕಾಣಿಸಿಕೊಂಡರು.

ಸದ್ಯ ಶೋಭಿತಾ ಧೂಳಿಪಾಲ ತಾವು ಧರಿಸಿದ ಸೀರೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವು ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು "ಅಕ್ಕಿನೇನಿ ಸೊಸೆ ತುಂಬಾ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ, ಗರ್ಭಿಣಿ ಎಂಬ ವದಂತಿ ಸುಳ್ಳು ಎಂದು ಸಾಬೀತಾಗಿದ್ದು, ಚೈತನ್ಯ-ಶೋಭಿತಾ ದಂಪತಿ ತಮ್ಮ ಮಧುರ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ.