Mar 28, 2026 Languages : ಕನ್ನಡ | English

ಸಿನಿಮಾ ಸೆಟ್‌ನಿಂದ ಕೋರ್ಟ್ ಮೆಟ್ಟಿಲಿಗೆ - ನಟಿ ಮೊನಾಲಿಸಾ ಮತ್ತು ನಿರ್ದೇಶಕ ಸನೋಜ್ ಜಗಳದ ಅಸಲಿ ಕಥೆ ಇಲ್ಲಿದೆ!!

ಸಿನಿಮಾ ಲೋಕದ ಗ್ಲಾಮರ್ ನಡುವೆ ಈಗ ದೊಡ್ಡದೊಂದು ವಿವಾದ ಸ್ಫೋಟಗೊಂಡಿದೆ! ವೈರಲ್ ಸುಂದರಿ ಮೊನಾಲಿಸಾ ಭೋಸ್ಲೆ ಮತ್ತು ನಿರ್ದೇಶಕ ಸನೋಜ್ ಮಿಶ್ರಾ ನಡುವಿನ ಜಗಳ ಈಗ ಕೋರ್ಟ್ ಮೆಟ್ಟಿಲೇರುವ ಲಕ್ಷಣ ಕಾಣುತ್ತಿದೆ. ಲೈಂಗಿಕ ಕಿರುಕುಳದ ಆರೋಪ ಮತ್ತು ಮಾನನಷ್ಟ ಮೊಕದ್ದಮೆಯ ಈ ಕಥೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಕೇರಳದಲ್ಲಿ ಮದುವೆ, ಉಜ್ಜಯಿನಿಯಲ್ಲಿ ವಾಸ: ಚಿತ್ರರಂಗದ ಈ ವಿವಾದದ ಹಿಂದೆ ಅಡಗಿದೆ ದೊಡ್ಡ ರಹಸ್ಯ!
ಕೇರಳದಲ್ಲಿ ಮದುವೆ, ಉಜ್ಜಯಿನಿಯಲ್ಲಿ ವಾಸ: ಚಿತ್ರರಂಗದ ಈ ವಿವಾದದ ಹಿಂದೆ ಅಡಗಿದೆ ದೊಡ್ಡ ರಹಸ್ಯ!

ನಟಿ ಮೊನಾಲಿಸಾ ಭೋಸ್ಲೆ ಅವರು ಇತ್ತೀಚೆಗಷ್ಟೇ ಕೇರಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. "ಸನೋಜ್ ಅವರು ಸಿನಿಮಾದಲ್ಲಿ ಚಾನ್ಸ್ ಕೊಡುವ ನೆಪದಲ್ಲಿ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ, ಲೈಂಗಿಕ ಕಿರುಕುಳ ನೀಡಿದ್ದಾರೆ" ಅಂತ ಕಣ್ಣೀರು ಹಾಕಿದ್ರು. ಅಷ್ಟೇ ಅಲ್ಲ, ಇದು ನನ್ನ ಮೊದಲ ಸಿನಿಮಾ ಆಗಿರೋದ್ರಿಂದ ಮನೆಯವರು ಸುಮ್ಮನಿರುವಂತೆ ಹೇಳಿದ್ರು ಅಂತಲೂ ಮೊನಾಲಿಸಾ ನೋವು ತೋಡಿಕೊಂಡಿದ್ರು.

ಮೊನಾಲಿಸಾ ಅವರ ಈ ಆರೋಪ ಕೇಳಿ ಸುಮ್ಮನಿರದ ಸನೋಜ್ ಮಿಶ್ರಾ, ಈಗ ತಿರುಗಿ ಬಿದ್ದಿದ್ದಾರೆ. "ನಾನು ಯಾವುದೇ ತಪ್ಪು ಮಾಡಿಲ್ಲ, ಇವೆಲ್ಲಾ ಶುದ್ಧ ಸುಳ್ಳು" ಅಂತ ಹೇಳಿರೋ ಅವರು ಒಂದು ಇಂಟರೆಸ್ಟಿಂಗ್ ವಿಷಯವನ್ನ ಹೊರಹಾಕಿದ್ದಾರೆ.

ಸನೋಜ್ ಅವರ ಪ್ರಕಾರ, ಈ ಗಲಾಟೆಗೆ ಅಸಲಿ ಕಾರಣ ಮೊನಾಲಿಸಾ ಅವರ ಮದುವೆ! ಮೊನಾಲಿಸಾ ಇತ್ತೀಚೆಗಷ್ಟೇ ಫರ್ಮಾನ್ ಖಾನ್ ಎಂಬುವವರನ್ನ ಪ್ರೀತಿಸಿ ಕೇರಳದಲ್ಲಿ ಮದುವೆಯಾಗಿದ್ದರು. ಆದರೆ, "ಈ ಮದುವೆ ಕಾನೂನುಬದ್ಧವಾಗಿಲ್ಲ, ಇದು ಅಮಾನ್ಯ" ಅಂತ ಸನೋಜ್ ಪ್ರಶ್ನೆ ಮಾಡಿದ್ದರಂತೆ. ಇದೇ ಕಾರಣಕ್ಕೆ ಸಿಟ್ಟಾದ ಮೊನಾಲಿಸಾ ನನ್ನ ಮೇಲೆ ಈ ರೀತಿ ಸುಳ್ಳು ಆರೋಪ ಮಾಡ್ತಿದ್ದಾರೆ ಅನ್ನೋದು ನಿರ್ದೇಶಕರ ವಾದ.

"ನನ್ನ ಮನೇಲೇ ಅವರ ಫ್ಯಾಮಿಲಿ ಇದೆ!"

ಸನೋಜ್ ಮಿಶ್ರಾ ಅವರು ಈ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ. "ನಾನು ಅವರಿಗೆ ಕಿರುಕುಳ ಕೊಟ್ಟಿದ್ದರೆ, ಮೊನಾಲಿಸಾ ಅವರ ಫ್ಯಾಮಿಲಿಯ 7-8 ಜನರು ಇವತ್ತಿಗೂ ಉಜ್ಜಯಿನಿಯಲ್ಲಿರೋ ನನ್ನ ಮನೇಲೇ ಯಾಕೆ ವಾಸ ಮಾಡ್ತಿದ್ದಾರೆ? ಅವರಿಗೆ ಆಕ್ಟಿಂಗ್ ಹೇಳಿಕೊಡುವಾಗ, ಡೈಲಾಗ್ ಕಲಿಸುವಾಗ ಇಲ್ಲದ ಕಿರುಕುಳ ಈಗ ಎಲ್ಲಿಂದ ಬಂತು?" ಅಂತ ಖಾರವಾಗಿ ಪ್ರಶ್ನಿಸಿದ್ದಾರೆ.

ಈಗ ವಿಷಯ ಸೀರಿಯಸ್ ಆಗಿದೆ. ಸನೋಜ್ ಮಿಶ್ರಾ ಅವರು ಮೊನಾಲಿಸಾ ವಿರುದ್ಧ ಮಾನನಷ್ಟ ಮೊಕದ್ದಮೆ (Defamation Case) ಹೂಡಲು ನಿರ್ಧರಿಸಿದ್ದಾರೆ. "ಒಂದೆರಡು ದಿನದಲ್ಲೇ ನಾನು ಕೇಸ್ ಫೈಲ್ ಮಾಡ್ತೀನಿ, ಅವರ ಹತ್ತಿರ ಸಾಕ್ಷಿ ಇದ್ರೆ ಕೋರ್ಟ್‌ನಲ್ಲಿ ತೋರಿಸಲಿ" ಅಂತ ಸವಾಲು ಹಾಕಿದ್ದಾರೆ.

ಮದುವೆ ಅಮಾನ್ಯ ಅಂದಿದ್ದಕ್ಕೆ ಈ ಆರೋಪ ಮಾಡಿದ್ರಾ? ಅಥವಾ ನಿಜವಾಗಿಯೂ ಕಿರುಕುಳ ನಡೆದಿದೆಯಾ? ಅನ್ನೋದು ಈಗ ಕಾನೂನು ಸಮರದಲ್ಲಿ ತೇಲಲಿದೆ.

Latest News