May 11, 2026 Languages : ಕನ್ನಡ | English

ಯುಪಿಯಲ್ಲಿ 'ಕೃಷ್ಣಾವತಾರಂ' ದರ್ಬಾರ್ - ತೆರಿಗೆ ಮುಕ್ತ ಘೋಷಣೆ ಮಾಡಿದ ಸಿಎಂ ಯೋಗಿ ಆದಿತ್ಯನಾಥ್!!

ಪೌರಾಣಿಕ ಕಥೆಗಳಿಗೆ ಭಾರತೀಯ ಚಿತ್ರರಂಗದಲ್ಲಿ ಯಾವಾಗಲೂ ಒಂದು ತೂಕ ಇರುತ್ತೆ. ಈಗ ಅದೇ ಸಾಲಿಗೆ ಸೇರ್ಪಡೆಯಾಗಿರೋದು ‘ಕೃಷ್ಣಾವತಾರಂ’. ಮೇ 7ಕ್ಕೆ ರಿಲೀಸ್ ಆಗಿರೋ ಈ ಸಿನಿಮಾ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ವಿಶೇಷ ಅಂದ್ರೆ, ಈ ಚಿತ್ರಕ್ಕೆ ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಭರ್ಜರಿ ಬೆಂಬಲ ಸಿಕ್ಕಿದೆ.

ಯುಪಿಯಲ್ಲಿ ‘ಕೃಷ್ಣಾವತಾರಂ’ ಸಿನಿಮಾಗೆ ಟ್ಯಾಕ್ಸ್ ಫ್ರೀ | Photo Credit: Im_Ritikaa | Bhupend29375158
ಯುಪಿಯಲ್ಲಿ ‘ಕೃಷ್ಣಾವತಾರಂ’ ಸಿನಿಮಾಗೆ ಟ್ಯಾಕ್ಸ್ ಫ್ರೀ | Photo Credit: Im_Ritikaa | Bhupend29375158

ಯುಪಿಯಲ್ಲಿ ಸಿನಿಮಾ ಟ್ಯಾಕ್ಸ್ ಫ್ರೀ

ಹೌದು, ಈ ಚಿತ್ರದ ಸಾಂಸ್ಕೃತಿಕ ಮೌಲ್ಯ ಮತ್ತು ನಮ್ಮ ಪರಂಪರೆಯನ್ನು ಎತ್ತಿ ಹಿಡಿಯುವ ರೀತಿಗೆ ಮಾರುಹೋಗಿರೋ ಯೋಗಿ ಸರ್ಕಾರ, ಇಡೀ ರಾಜ್ಯದಲ್ಲಿ ಸಿನಿಮಾವನ್ನು ತೆರಿಗೆ ಮುಕ್ತ (Tax-Free) ಎಂದು ಘೋಷಿಸಿದೆ. ಅಷ್ಟೇ ಅಲ್ಲ, ಇಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ತಲುಪಬೇಕು ಅನ್ನೋ ಕಾರಣಕ್ಕೆ ಪ್ರತಿ ಜಿಲ್ಲೆಯಲ್ಲೂ ಶಾಲಾ-ಕಾಲೇಜು ಮಕ್ಕಳಿಗೆ ವಿಶೇಷ ಪ್ರದರ್ಶನ ಏರ್ಪಡಿಸಲು ಸೂಚನೆ ನೀಡಿದ್ದಾರೆ.

ಚಿತ್ರದಲ್ಲಿ ನಮ್ಮ ಕನ್ನಡಿಗರ ಕಮಾಲ್

ಈ ಸಿನಿಮಾ ಕನ್ನಡಿಗರಿಗೆ ಯಾಕೆ ವಿಶೇಷ ಅಂದ್ರೆ, ಇಲ್ಲಿ ನಮ್ಮ ಹೆಮ್ಮೆಯ ಕಲಾವಿದರಾದ ಕಾರ್ತಿಕ್ ಜಯರಾಮ್ (JK) ಮತ್ತು ಸುಷ್ಮಿತಾ ಭಟ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕನ್ನಡಿಗರು ಈ ರೀತಿ ಮಿಂಚುತ್ತಿರೋದು ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಚಿತ್ರತಂಡದ ಜೊತೆ ಸಿಎಂ ಯೋಗಿ ಅವರನ್ನ ಭೇಟಿ ಮಾಡಿರೋ ಜೆಕೆ, ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

ಬಾಕ್ಸ್ ಆಫೀಸ್ ರಿಪೋರ್ಟ್: ವೀಕೆಂಡ್‌ನಲ್ಲಿ ಕೋಟಿ ಕೋಟಿ ಲೂಟಿ!

ಕಲೆಕ್ಷನ್ ವಿಚಾರದಲ್ಲೂ 'ಕೃಷ್ಣಾವತಾರಂ' ಹಿಂದೆ ಬಿದ್ದಿಲ್ಲ. ರಿಲೀಸ್ ಆದ ಮೊದಲ ವಾರಾಂತ್ಯದಲ್ಲೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ:

ಭಾನುವಾರದ ಕಲೆಕ್ಷನ್ - ಬರೋಬ್ಬರಿ 3.25 ಕೋಟಿ ರೂ.

ಒಟ್ಟು ಮೊತ್ತ - ಮೊದಲ ಮೂರು ದಿನದಲ್ಲೇ ಸುಮಾರು 6.75 ಕೋಟಿ ರೂ. ಗಡಿ ದಾಟಿದೆ.

ಇತರೆ ಭಾಷೆಗಳು - ತೆಲುಗು ಮತ್ತು ತಮಿಳಿನಲ್ಲೂ 50 ಲಕ್ಷಕ್ಕೂ ಹೆಚ್ಚು ಗಳಿಕೆ ಕಂಡುಬಂದಿದೆ.

ಸಿದ್ಧಾರ್ಥ್ ಗುಪ್ತಾ ಮತ್ತು ಸಂಸ್ಕೃತಿ ಜಯಾನ ಅವರ ನಟನೆ ಹಾಗೂ ಚಿತ್ರದ ಅದ್ದೂರಿ ವಿಎಫ್‌ಎಕ್ಸ್ (VFX) ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದೆ.

ಏನಿದು ಸಿನಿಮಾದ ವಿಶೇಷತೆ?

ಇದು ಮೂರು ಭಾಗಗಳ ಸಿನಿಮಾ ಸರಣಿಯಾಗಿದ್ದು, ಈಗ ರಿಲೀಸ್ ಆಗಿರೋದು ಮೊದಲ ಭಾಗ. ಶ್ರೀಕೃಷ್ಣನ ಜೀವನದ ಪ್ರಮುಖ ಘಟ್ಟಗಳನ್ನು ಇಂದಿನ ತಂತ್ರಜ್ಞಾನ ಬಳಸಿ ತುಂಬಾ ರಿಚ್ ಆಗಿ ತೋರಿಸಲಾಗಿದೆ. ಪ್ರಶಾಂತ್ ನೀಲ್ ಅವರಂತಹ ದೊಡ್ಡ ಡೈರೆಕ್ಟರ್‌ಗಳೇ ಪೌರಾಣಿಕ ಸಬ್ಜೆಕ್ಟ್‌ಗಳ ಬಗ್ಗೆ ಮಾತಾಡ್ತಿರೋ ಈ ಕಾಲದಲ್ಲಿ, ‘ಕೃಷ್ಣಾವತಾರಂ’ ಈ ಮಟ್ಟದ ಯಶಸ್ಸು ಕಾಣುತ್ತಿರೋದು ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ನಮ್ಮ ಕನ್ನಡದ ಕಲಾವಿದರ ಅಭಿನಯವಿರೋ ಈ ಪೌರಾಣಿಕ ದೃಶ್ಯವೈಭವವನ್ನ ನೀವು ಮಿಸ್ ಮಾಡ್ದೆ ಥಿಯೇಟರ್‌ನಲ್ಲಿ ನೋಡಿ.

Latest News