Apr 24, 2026 Languages : ಕನ್ನಡ | English

ಕಿಯಾರಾ ಅಡ್ವಾಣಿ ಕೊರಳಿನ 'ಸಿಲುಬೆ' ಪೆಂಡೆಂಟ್ ಕಿರಿಕ್! ಬಾಲಿವುಡ್ ಬೆಡಗಿ ಮತಾಂತರ ಆಗ್ತಿದ್ದಾರಾ? ನೆಟ್ಟಿಗರ ಪ್ರಶ್ನೆ!!

ಚಿತ್ರರಂಗದಲ್ಲಿ ಸ್ಟೈಲ್ ಮತ್ತು ವಿವಾದಗಳಿಗೆ ಯಾವತ್ತೂ ಬರವಿಲ್ಲ. ಅದರಲ್ಲೂ ಸೆಲೆಬ್ರಿಟಿಗಳು ಏನಾದರೂ ಸ್ವಲ್ಪ ಡಿಫರೆಂಟ್ ಆಗಿ ಕಾಣಿಸಿಕೊಂಡರೆ ಸಾಕು, ನೆಟ್ಟಿಗರು ಅದನ್ನು ಭೂತಗನ್ನಡಿ ಹಿಡಿದು ನೋಡೋಕೆ ಶುರು ಮಾಡ್ತಾರೆ. ಈಗ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಅವರ ಸರದಿಯಾಗಿದೆ.

ಕಿಯಾರಾ ಅಡ್ವಾಣಿ ಕೊರಳಲ್ಲಿ ಮುತ್ತಿನ ಸರದ ಜೊತೆಗೆ ಸಣ್ಣದಾದ 'ಕ್ರಾಸ್' | Photo Credit: https://x.com/choga_don
ಕಿಯಾರಾ ಅಡ್ವಾಣಿ ಕೊರಳಲ್ಲಿ ಮುತ್ತಿನ ಸರದ ಜೊತೆಗೆ ಸಣ್ಣದಾದ 'ಕ್ರಾಸ್' | Photo Credit: https://x.com/choga_don

ಏಪ್ರಿಲ್ 23 ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆದ 'GQ ಮೋಸ್ಟ್ ಇನ್ಫ್ಲುಯೆನ್ಷಿಯಲ್ ಯಂಗ್ ಇಂಡಿಯನ್ಸ್' ಅವಾರ್ಡ್ ಫಂಕ್ಷನ್‌ನಲ್ಲಿ ಕಿಯಾರಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಅವರು ತೊಟ್ಟಿದ್ದ ಬಟ್ಟೆಗಿಂತ ಹೆಚ್ಚಾಗಿ, ಅವರು ಕೊರಳಿಗೆ ಹಾಕಿದ್ದ ಒಂದು ಪೆಂಡೆಂಟ್ ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ.

ಮುತ್ತಿನ ಸರ ಮತ್ತು ಆ ಪುಟ್ಟ 'ಸಿಲುಬೆ'  

ಅವಾರ್ಡ್ ಸಮಾರಂಭದಲ್ಲಿ ಕಿಯಾರಾ ಮುತ್ತಿನ ಸರದ ಜೊತೆಗೆ ಸಣ್ಣದಾದ 'ಕ್ರಾಸ್' (Cross) ಪೆಂಡೆಂಟ್ ಧರಿಸಿದ್ದರು. ಇದನ್ನು ನೋಡಿದ್ದೇ ತಡ, ಕೆಲವು ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಕಿಯಾರಾ ಅವರ ಹಿಂದೂ ಹಿನ್ನೆಲೆಯನ್ನು ನೆನಪಿಸುತ್ತಿರುವ ಜನರು, "ಇವರು ಮತಾಂತರ ಆಗುತ್ತಿದ್ದಾರಾ? ಅಥವಾ ಇದು ಮತಾಂತರದ ಸೂಚನೆಯೇ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಈ ಹಿಂದೆ ಸೌತ್ ಬ್ಯೂಟಿ ತ್ರಿಶಾ ಕೃಷ್ಣನ್ ವಿಷಯದಲ್ಲೂ ಇಂತಹುದೇ ಒಂದು ಚರ್ಚೆ ನಡೆದಿತ್ತು. ಈಗ ಕಿಯಾರಾ ಕೂಡ ಅದೇ ಸಾಲಿಗೆ ಸೇರಿದ್ದಾರೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಇದು ಧರ್ಮವೋ ಅಥವಾ ಬರಿ ಫ್ಯಾಷನ್ ಬ್ರ್ಯಾಂಡ್ ಕ್ರೇಜೋ?

ವಿವಾದ ಒಂದೆಡೆಯಾದರೆ, ಕಿಯಾರಾ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟಿಯ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ರೀ ಸ್ವಾಮಿ, ಇದು ಧರ್ಮದ ವಿಷಯವೇ ಅಲ್ಲ, ಇದು ಕೇವಲ ಫ್ಯಾಷನ್ ಎನ್ನುತ್ತಿದ್ದಾರೆ ಬೆಂಬಲಿಗರು.

ಫ್ಯಾಷನ್ ಜಗತ್ತಿನಲ್ಲಿ 'Chrome Hearts' ನಂತಹ ಪ್ರತಿಷ್ಠಿತ ಬ್ರ್ಯಾಂಡ್‌ಗಳು ಇಂತಹ 'ಗಾಥಿಕ್ ಕ್ರಾಸ್' (Gothic Cross) ವಿನ್ಯಾಸದ ಆಭರಣಗಳನ್ನು ತಯಾರಿಸುವುದು ಕಾಮನ್. ಇದೊಂದು ಪಾಶ್ಚಿಮಾತ್ಯ ಸ್ಟೈಲ್ ಅಷ್ಟೇ. ಹಾಲಿವುಡ್ ಸ್ಟಾರ್‌ಗಳಿಂದ ಹಿಡಿದು ಲೋಕಲ್ ಫ್ಯಾಷನ್ ಐಕಾನ್‌ಗಳವರೆಗೆ ಎಲ್ಲರೂ ಇಂತಹ ಪೆಂಡೆಂಟ್‌ಗಳನ್ನು ಶೈಲಿಗಾಗಿ ಧರಿಸುತ್ತಾರೆ. ಇದನ್ನು ಧರ್ಮಕ್ಕೆ ಲಿಂಕ್ ಮಾಡುವುದು ಮೂರ್ಖತನ ಎನ್ನುವುದು ಅಭಿಮಾನಿಗಳ ವಾದ.

ಕಿಯಾರಾ ರಿಯಾಕ್ಷನ್ ಏನು?

ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ. ಬಾಲಿವುಡ್ ಫ್ಯಾಷನ್ ಮತ್ತು ನಮ್ಮ ಸಾಂಸ್ಕೃತಿಕ ನಂಬಿಕೆಗಳ ನಡುವೆ ಒಂದು ದೊಡ್ಡ ಸಂಘರ್ಷವೇ ಏರ್ಪಟ್ಟಿದೆ. ಆದರೆ ಈ ಕಿರಿಕ್ ಬಗ್ಗೆ ಕಿಯಾರಾ ಅಡ್ವಾಣಿ ಆಗಲಿ ಅಥವಾ ಅವರ ಟೀಮ್ ಆಗಲಿ ಯಾವುದೇ ರಿಯಾಕ್ಷನ್ ಕೊಟ್ಟಿಲ್ಲ. ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ ಎಂಬಂತೆ ಕಿಯಾರಾ ಸೈಲೆಂಟ್ ಆಗಿ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಸೆಲೆಬ್ರಿಟಿಗಳು ಏನನ್ನೇ ಧರಿಸಿದರೂ ಅದಕ್ಕೊಂದು ಅರ್ಥ ಕಲ್ಪಿಸುವುದು ಜನರಿಗೆ ಅಭ್ಯಾಸವಾಗಿಬಿಟ್ಟಿದೆ. ಕಿಯಾರಾ ಅವರ ಈ ಮುತ್ತಿನ ಸರದ ವಿವಾದ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕು.