ಕಾಲಿವುಡ್ ಅಂಗಳದಿಂದ ಒಂದು ಭರ್ಜರಿ ಸುದ್ದಿ ಬಂದಿದೆ ವರ್ಸಟೈಲ್ ನಟ ಸೂರ್ಯ ಮತ್ತು ಆರ್.ಜೆ. ಬಾಲಾಜಿ ಜೋಡಿಯ ಹೊಸ ಸಿನಿಮಾ ಕರುಪ್ಪು ಸದ್ಯ ಸಖತ್ ಸೌಂಡ್ ಮಾಡುತ್ತಿದೆ. ಈ ಚಿತ್ರದ ಮೂಲಕ ಆರ್.ಜೆ. ಬಾಲಾಜಿ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ಆಕ್ಷನ್ ಥ್ರಿಲ್ಲರ್ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲ, ಸೂರ್ಯ ಜೊತೆ ನಟಿ ತ್ರಿಷಾ ಕೃಷ್ಣನ್ ಕೂಡ ಸ್ಕ್ರೀನ್ ಶೇರ್ ಮಾಡುತ್ತಿರುವುದು ಅಭಿಮಾನಿಗಳ ಕುತೂಹಲವನ್ನು ಡಬಲ್ ಮಾಡಿದೆ.
ಈ ಚಿತ್ರದ ಮೇಲಿರುವ ಕ್ರೇಜ್ ಹೇಗಿದೆ ಅಂದ್ರೆ, ಆಗಲೇ ಕೆನಡಾದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಿ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಇನ್ನು ಇವತ್ತಿನಿಂದ ತಮಿಳುನಾಡಿನಾದ್ಯಂತ ಅಡ್ವಾನ್ಸ್ ಬುಕ್ಕಿಂಗ್ ಅಧಿಕೃತವಾಗಿ ಶುರುವಾಗಿದೆ. ಮಲೇಷ್ಯಾ, ಯುಕೆ ಮತ್ತು ಯುರೋಪ್ ದೇಶಗಳಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಟಿಕೆಟ್ ಬುಕ್ಕಿಂಗ್ ಓಪನ್ ಆಗಲಿದೆ. ಸಿನಿಮಾ ರಿಲೀಸ್ ಆಗುವ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡೋದು ಗ್ಯಾರಂಟಿ ಎನ್ನುತ್ತಿದ್ದಾರೆ ಸಿನಿ ಪಂಡಿತರು.
ಇವತ್ತೇ ಟ್ರೈಲರ್ ಹಬ್ಬ
ಕಳೆದ ಕೆಲ ವಾರಗಳಿಂದ ಚಿತ್ರತಂಡ ಹಂಚಿಕೊಂಡಿರುವ ಪೋಸ್ಟರ್‌ಗಳು ಮತ್ತು ಸಣ್ಣ ಸಣ್ಣ ತುಣುಕುಗಳು ಫ್ಯಾನ್ಸ್‌ಗೆ ಕಿಕ್ ಕೊಟ್ಟಿವೆ. ಅದರಲ್ಲೂ ಸೂರ್ಯ ಅವರು ಮೆಣಸಿನಕಾಯಿಗಳ ನಡುವೆ ಸರಪಳಿ ತುಂಡರಿಸುತ್ತಿರುವ ಸೀನ್ ಮತ್ತು ದೇವಾಲಯದ ಜಾತ್ರೆಯ ಆ ವೈಬ್ ನೋಡಿದ್ರೆ, ಇದೊಂದು ಪಕ್ಕಾ ಮಾಸ್ ಸಿನಿಮಾ ಅನ್ನೋದ್ರಲ್ಲಿ ಡೌಟೇ ಇಲ್ಲ. ಈ ಕುತೂಹಲಕ್ಕೆ ಇನ್ನಷ್ಟು ಪುಷ್ಠಿ ನೀಡಲು ಚಿತ್ರದ ಅಸಲಿ ಟ್ರೈಲರ್ ಇಂದು ಸಂಜೆ 7 ಗಂಟೆಗೆ ಬಿಡುಗಡೆಯಾಗುತ್ತಿದೆ.
ವದಂತಿಗಳಿಗೆ ಬ್ರೇಕ್: ಮೇ 14ಕ್ಕೆ ಪಕ್ಕಾ ರಿಲೀಸ್
ನಡುವೆ ಈ ಸಿನಿಮಾ ರಿಲೀಸ್ ಲೇಟ್ ಆಗಬಹುದು ಅನ್ನೋ ಒಂದಷ್ಟು ಗಾಸಿಪ್‌ಗಳು ಹರಿದಾಡಿದ್ದವು. ಆದರೆ, 'ಡ್ರೀಮ್ ವಾರಿಯರ್ ಪಿಕ್ಚರ್ಸ್' ಈ ಎಲ್ಲಾ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದೆ. ಹೌದು, ಮೇ 14ರಂದು ಸಿನಿಮಾ ಪ್ರಪಂಚದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ. ಸಾಯಿ ಅಭ್ಯಾಂಕರ್ ಅವರ ಹೈ-ಎನರ್ಜಿ ಮ್ಯೂಸಿಕ್ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಲಿದ್ದು, ಥಿಯೇಟರ್‌ಗಳಲ್ಲಿ ಡ್ಯಾನ್ಸ್ ಮಾಡೋದಕ್ಕೆ ಫ್ಯಾನ್ಸ್ ಈಗಲೇ ರೆಡಿಯಾಗಿದ್ದಾರೆ.
ನೀವು ಸೂರ್ಯ ಮತ್ತು ತ್ರಿಷಾ ಅವರ ಈ ಹೊಸ ಅವತಾರ ನೋಡಲು ರೆಡಿಯಾ? ಇವತ್ತು ಸಂಜೆ ಟ್ರೈಲರ್ ಮಿಸ್ ಮಾಡಬೇಡಿ.