Apr 30, 2026 Languages : ಕನ್ನಡ | English

ಹಿಟ್ ಸಿನಿಮಾ 'ಜೋಗಿ' ನಿರ್ಮಾಪಕ ಬಿಚ್ಚಿಟ್ಟ ಅಸಲಿ ಸತ್ಯ - ಯಾಕೆ 'ಜೋಗಿ 2' ಮಾಡಲಿಲ್ಲವಂತೆ ಗೊತ್ತಾ?

2005ರಲ್ಲಿ ಕನ್ನಡ ಚಿತ್ರರಂಗದ ದಾಖಲೆಗಳನ್ನು ಮುರಿದು, ಜನರಲ್ಲಿ ಅಪಾರ ಕ್ರೇಜ್ ಹುಟ್ಟಿಸಿದ ಸಿನಿಮಾ ಅಂದ್ರೆ ಅದು ‘ಜೋಗಿ’ ಸಿನಿಮಾ. ಹೌದು, ಈ ಚಿತ್ರದ ಟಿಕೆಟ್‌ಗಾಗಿ ಜನರು ಮುಗಿಬಿದ್ದು, ಬ್ಲಾಕ್‌ನಲ್ಲಿ ಸಾವಿರಾರು ರೂಪಾಯಿಗೆ ಮಾರಾಟವಾಗುತ್ತಿತ್ತು. ಇಂದಿಗೂ ‘ಜೋಗಿ’ ಕನ್ನಡದ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದಾಗಿ ಉಳಿದಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರವನ್ನು ನಿರ್ಮಿಸಿದ್ದವರು ಅಶ್ವಿನಿ ರಾಮ್ ಪ್ರಸಾದ್ ಅವರು, ‘ಜೋಗಿ’ ಅವರಿಗೆ ಭಾರೀ ಲಾಭ ತಂದುಕೊಟ್ಟಿತ್ತು. ಆದರೆ ನಂತರದ ಕೆಲವು ಸಿನಿಮಾಗಳಲ್ಲಿ ನಷ್ಟ ಅನುಭವಿಸಿದ ಕಾರಣ ಅವರು ಸಿನಿಮಾ ನಿರ್ಮಾಣದಿಂದ ದೂರವಿದ್ದು, ತಮ್ಮ ಆಡಿಯೋ ಕಂಪನಿಯ ಮೇಲೆ ಹೆಚ್ಚು ಗಮನ ಹರಿಸಿದರು ಎಂದು ತಿಳಿದು ಬಂದಿದೆ. 

‘ಜೋಗಿ 2’ ಯಾಕೆ ಮಾಡಲಿಲ್ಲ? ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಸ್ಪಷ್ಟನೆ
‘ಜೋಗಿ 2’ ಯಾಕೆ ಮಾಡಲಿಲ್ಲ? ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಸ್ಪಷ್ಟನೆ

ಇದೀಗ ಅವರು ‘ಘಾರ್ಗಾ’ ಎಂಬ ಹೊಸ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ತಮ್ಮ ಮಗ ಅರುಣ್ ರಾಮ್ ಪ್ರಸಾದ್ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಸುತ್ತಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ಸಂದರ್ಶನದಲ್ಲಿ ಅವರು ಸಿನಿಮಾ ನಿರ್ಮಾಣದ ಬಗ್ಗೆ, ‘ಜೋಗಿ 2’ ಯಾಕೆ ಮಾಡಲಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ಕೊಟ್ಟರು.

ಅವರ ಮಾತಿನಲ್ಲಿ – “ಸಿನಿಮಾ ಮಾಡೋದು ಹಿಂದಿನ ಹಾಗಿಲ್ಲ. ಈಗ 40-45 ಜನರು ಕೆಲಸ ಮಾಡುತ್ತಿದ್ದಾರೆ. ‘ಘಾರ್ಗಾ’ ಒಳ್ಳೆಯ ಕಥೆ ಇದ್ದ ಕಾರಣದಿಂದ ಮಾಡುತ್ತಿದ್ದೇನೆ. ಬೇರೆ ಕೆಲಸ ಮಾಡಲೇಬೇಕು ಅನ್ನೋದು ಇಲ್ಲ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ, ಎಲ್ಲಿ ಮಾಡಿದರೂ ಯಶಸ್ಸು ಸಿಗುತ್ತದೆ.” ಎಂದು ಹೇಳಿದ್ದಾರೆ. ಜನರು ಥಿಯೇಟರ್‌ಗೆ ಬರ್ತಿಲ್ಲ ಎಂಬ ಪ್ರಶ್ನೆಗೆ ಮಾತನಾಡಿದ ಅವರು – “ಜನರು ಓಟಿಟಿ ಕಾರಣದಿಂದ ಬರ್ತಿಲ್ಲ ಅಂತಾರೆ. ಆದರೆ ‘ಕಾಂತಾರ ಚಾಪ್ಟರ್ 1’ ನೋಡಿದರೆ, ಜನರು ಕಂಟೆಂಟ್ ಇದ್ದರೆ ಥಿಯೇಟರ್‌ಗೆ ಬರುತ್ತಾರೆ. ಒಳ್ಳೆಯ ಸಿನಿಮಾ ಮಾಡಿದರೆ ಜನರು ಖಂಡಿತ ಬರುತ್ತಾರೆ.” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ರಿಸ್ಕ್ ಬಗ್ಗೆ ಮಾತನಾಡುತ್ತಾ – “ಆಗ 5-10 ಕೋಟಿಯಲ್ಲಿ ಸಿನಿಮಾ ಆಗುತ್ತಿತ್ತು. ಈಗ 200 ಕೋಟಿ ಬೇಕು ಅಂತಾರೆ. ಅಷ್ಟು ರಿಸ್ಕ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ‘ಜೋಗಿ’ ಸಿನಿಮಾಗೆ ಅಂದು 2.5 ಕೋಟಿ ಖರ್ಚು ಮಾಡಿದ್ದೆ. ಈಗ ಅದೇ ಮಾಡಲು 200 ಕೋಟಿ ಬಜೆಟ್ ಕೇಳುತ್ತಾರೆ. ಅದು ನನಗೆ ಸಾಧ್ಯವಿಲ್ಲ. ನಾನು ಈಗ ಮಾಡುತ್ತಿರುವ ಕೆಲಸದಲ್ಲಿ ತೃಪ್ತಿ ಇದೆ.” ಎಂದು ಹೇಳಿದ್ದಾರೆ.

‘ಜೋಗಿ’ ಬಜೆಟ್ ಬಗ್ಗೆ ಅವರು – “2005ರಲ್ಲಿ 2.5 ಕೋಟಿಯಲ್ಲಿ ‘ಜೋಗಿ’ ಮಾಡಿದ್ದೆ. ಈಗ 200 ಕೋಟಿ ಅಂತಾರೆ. ಆದರೆ ಇದು ಬೇಡದ ಖರ್ಚುಗಳ ಕಾರಣ. ನಮಗೆ ಆಸಕ್ತಿ ಇದ್ದರೆ ಸಿನಿಮಾ ಮಾಡಬೇಕು, ಇಲ್ಲದಿದ್ದರೆ ಸುಮ್ಮನಿರಬೇಕು. ನಾನು ಬ್ಯಾಕ್‌ಗ್ರೌಂಡ್‌ನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇನೆ.” ಎಂದು ಹೇಳಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು.  

Latest News