ವಿಜಯ್ ಫ್ಯಾನ್ಸ್‌ಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ನಿರ್ಮಾಪಕ - ಜನ ನಾಯಗನ್ ಯಾವಾಗ ತೆರೆಗೆ ಬರ್ತಿದೆ ಗೊತ್ತಾ?

ದಳಪತಿ ವಿಜಯ್ ಇತ್ತೀಚೆಗಷ್ಟೇ ರಾಜಕೀಯದಲ್ಲಿ ಭರ್ಜರಿ ಗೆಲುವು ಸಾಧಿಸಿ ತಮಿಳುನಾಡಿನ ಸಿಎಂ ಗದ್ದುಗೆ ಏರಿರೋದು ನಿಮಗೆಲ್ಲಾ ಗೊತ್ತೇ ಇದೆ. ಅವರು ರಾಜಕೀಯಕ್ಕೆ ಬರೋ ಮುಂಚೆ, ಇದೇ ನನ್ನ 'ಕೊನೆಯ ಸಿನಿಮಾ' ಅಂತ ಅನೌನ್ಸ್ ಮಾಡಿದ್ದ ಚಿತ್ರವೇ 'ಜನ ನಾಯಗನ್' (Jana Nayagan). ಆದರೆ, ವಿಜಯ್ ಸಿಎಂ ಪಟ್ಟಕ್ಕೇರಿದ್ರೂ ಈ ಸಿನಿಮಾ ಯಾವಾಗ ಥಿಯೇಟರ್‌ಗೆ ಬರುತ್ತೆ ಅಂತ ಕಾಯ್ತಾ ಇದ್ದ ಅಭಿಮಾನಿಗಳಿಗೆ ಮಾತ್ರ ಇಷ್ಟು ದಿನ ಸರಿಯಾದ ಉತ್ತರ ಸಿಕ್ಕಿರಲಿಲ್ಲ. 

‘ಜನ ನಾಯಕನ್’: ರಿಲೀಸ್‌ಗೆ ಕೌಂಟ್‌ಡೌನ್ ಶುರು! | Photo Credit: https://www.indiatoday.in/
‘ಜನ ನಾಯಕನ್’: ರಿಲೀಸ್‌ಗೆ ಕೌಂಟ್‌ಡೌನ್ ಶುರು! | Photo Credit: https://www.indiatoday.in/

ಇದೀಗ ಚಿತ್ರದ ನಿರ್ಮಾಪಕರಾದ ವೆಂಕಟ್ ನಾರಾಯಣ್ ಅವರು ವಿಜಯ್ ಫ್ಯಾನ್ಸ್‌ಗೆ ಒಂದು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರಲಿದೆ ಅಂತ ಅವರು ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ!

ಅಭಿಮಾನಿಗಳಲ್ಲಿ ಮತ್ತೆ ಸಿನಿಕ್ರೇಜ್ ಹೆಚ್ಚಿಸಿರೋ 'ಜನ ನಾಯಗನ್' ಚಿತ್ರದ ರಿಲೀಸ್ ಪ್ಲಾನ್ ಮತ್ತು ಸದ್ಯಕ್ಕೆ ಮೂವಿ ಕ್ರಿಯೇಟ್ ಮಾಡ್ತಿರೋ ಹವಾ ಹೇಗಿದೆ ಅನ್ನೋ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ರಿಲೀಸ್ ಯಾವಾಗ?

ಸಿನಿಮಾ ಬಿಡುಗಡೆ ತಡವಾಗ್ತಿರೋದರ ಬಗ್ಗೆ ಓಪನ್ ಆಗಿ ಮಾತನಾಡಿರೋ ಪ್ರೊಡ್ಯೂಸರ್ ವೆಂಕಟ್ ನಾರಾಯಣ್, 'ಚಿತ್ರಕ್ಕೆ ಇನ್ನೂ ಸೆನ್ಸಾರ್ ಮಂಡಳಿಯಿಂದ (Sensor Board) ಪ್ರಮಾಣ ಪತ್ರ ಸಿಕ್ಕಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಅದು ತಡವಾಗಿದೆ. ಆದರೆ ಅತಿ ಶೀಘ್ರದಲ್ಲೇ ಸೆನ್ಸಾರ್ ಸರ್ಟಿಫಿಕೇಟ್ ಸಿಗುವ ಎಲ್ಲಾ ನಿರೀಕ್ಷೆಗಳು ಇವೆ. ಒಮ್ಮೆ ಅದು ನಮ್ಮ ಕೈ ಸೇರಿದ ತಕ್ಷಣ, ಯಾವುದೇ ಲೇಟ್ ಮಾಡದೆ ಸಿನಿಮಾದ ಅಫೀಷಿಯಲ್ ರಿಲೀಸ್ ಡೇಟ್ ಅನೌನ್ಸ್ ಮಾಡ್ತೀನಿ, ಅಂತ ಹೇಳಿದ್ದಾರೆ.

ಇದರ ನಡುವೆ ಗಾಂಧಿನಗರ ಹಾಗೂ ಕೋಲಿವುಡ್ ಅಂಗಳದಲ್ಲಿ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಜೋರಾಗಿ ಹರಿದಾಡ್ತಿದೆ. ಮುಂಬರುವ ಜೂನ್ 22 ಕ್ಕೆ ನಟ ವಿಜಯ್ ಅವರ ಹುಟ್ಟುಹಬ್ಬ (Birthday) ಇದೆ. ಒಂದು ವೇಳೆ ಜೂನ್ ಮೊದಲ ವಾರದ ಒಳಗಾಗಿ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಬಿಟ್ರೆ, ವಿಜಯ್ ಬರ್ತ್‌ಡೇ ಗಿಫ್ಟ್ ಆಗಿ ಜೂನ್ ತಿಂಗಳಲ್ಲೇ ಈ ಸಿನಿಮಾವನ್ನು ವರ್ಲ್ಡ್ ವೈಡ್ ರಿಲೀಸ್ ಮಾಡಿದ್ರೂ ಆಶ್ಚರ್ಯ ಇಲ್ಲ ಎನ್ನಲಾಗ್ತಿದೆ.

ಸಿಎಂ ಆದ್ಮೇಲೆ ಉಲ್ಟಾ ಆಯ್ತು ಸೀನ್;

ನಿಮಗೆ ಗೊತ್ತಿರಲಿ, ಈ 'ಜನ ನಾಯಗನ್' ಸಿನಿಮಾ ಅನೌನ್ಸ್ ಆದಾಗ ಇಡೀ ಸೌತ್ ಇಂಡಸ್ಟ್ರಿಯಲ್ಲೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ ಆಮೇಲೆ ಶೂಟಿಂಗ್ ತಡವಾಗಿದ್ದು, ರಿಲೀಸ್ ಡೇಟ್ ಮುಂದಕ್ಕೆ ಹೋಗಿದ್ದು ಹಾಗೂ ಸೆನ್ಸಾರ್ ಗೊಂದಲಗಳಿಂದಾಗಿ ಈ ಚಿತ್ರದ ಮೇಲಿದ್ದ ಕ್ರೇಜ್ ಕಂಪ್ಲೀಟ್ ಆಗಿ ಕಮ್ಮಿಯಾಗಿ ಹೋಗಿತ್ತು. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗೆಲ್ಲುತ್ತಾ ಇಲ್ವಾ ಅನ್ನೋ ಡೌಟ್ ಕೂಡ ಶುರುವಾಗಿತ್ತು.

ಆದರೆ ಯಾವಾಗ ವಿಜಯ್ ಚುನಾವಣೆಯಲ್ಲಿ ಗೆದ್ದು ತಮಿಳುನಾಡಿನ ಮುಖ್ಯಮಂತ್ರಿಯಾದರೋ, ಈ ಸಿನಿಮಾದ ಕಟೌಟ್ ರೇಂಜ್ ಇಡೀ ಇಂಡಿಯಾದಲ್ಲೇ ಚೇಂಜ್ ಆಗ್ಬಿಟ್ಟಿದೆ! ಒಂದು ಕಾಲದಲ್ಲಿ ಈ ಸಿನಿಮಾವನ್ನು ಕಮ್ಮಿ ರೇಟ್‌ಗೆ ಕೇಳಿ, ಆಮೇಲೆ ಇಂಟರೆಸ್ಟ್ ಕಳೆದುಕೊಂಡಿದ್ದ ದೊಡ್ಡ ದೊಡ್ಡ ಓಟಿಟಿ (OTT) ಸಂಸ್ಥೆಗಳು ಇದೀಗ ವಿಜಯ್ ಸಿಎಂ ಆಗ್ತಿದ್ದಂತೆ ಮತ್ತೆ ನಿರ್ಮಾಪಕರ ಮನೆ ಮುಂದೆ ಕ್ಯೂ ನಿಂತಿವೆ. ಕೋಟಿ ಕೋಟಿ ರೂಪಾಯಿಗಳ ಬಂಪ್ ಆಫರ್ ಹಿಡಿದುಕೊಂಡು ಸಿನಿಮಾದ ಡಿಜಿಟಲ್ ರೈಟ್ಸ್ ಖರೀದಿಸಲು ಮುಗಿಬೀಳ್ತಾ ಇವೆ.

ವಿಜಯ್ ರಾಜಕೀಯ ಎಂಟ್ರಿ ಮತ್ತು ಸಿಎಂ ಪಟ್ಟ 'ಜನ ನಾಯಕನ್' ಸಿನಿಮಾಗೆ ಪ್ಯಾರಾಚೂಟ್ ತರಹ ಹೆಲ್ಪ್ ಮಾಡಿರೋದಂತೂ ಸುಳ್ಳಲ್ಲ. ಒಬ್ಬ ಸಿಟ್ಟಿಂಗ್ ಸಿಎಂ ನಟಿಸಿರೋ ಕೊನೆಯ ಸಿನಿಮಾ ಥಿಯೇಟರ್‌ಗೆ ಬಂದ್ರೆ ಬಾಕ್ಸ್ ಆಫೀಸ್ ಧೂಳಿಪಟ ಆಗೋದಂತೂ ಗ್ಯಾರಂಟಿ. ಕಿಂಗ್ ಕೊಹ್ಲಿ ತರಹನೇ ನಮ್ಮ ದಳಪತಿ ವಿಜಯ್ ಕೂಡ ಇತ್ತೀಚಿನ ದಿನಗಳಲ್ಲಿ ಇತಿಹಾಸ ಸೃಷ್ಟಿಸ್ತಾ ಇದ್ದಾರೆ. ಈ ಸಿನಿಮಾ ನೋಡೋಕೆ ನೀವು ಎಷ್ಟು ಕಾಯ್ತಾ ಇದ್ದೀರಾ?

Latest News