Apr 24, 2026 Languages : ಕನ್ನಡ | English

ಗಿಚ್ಚಿ ಗಿಲಿಗಿಲಿ ಜೋಡಿ ಮಾನಸ - ಶಿವು ಮದುವೆ ಕಾರ್ಯಕ್ರಮಗಳು ಶುರು!! ಮೆಹಂದಿ ಸಂಭ್ರಮದ ಕ್ಯೂಟ್ ಫೋಟೋಸ್ ವೈರಲ್!!

ಕಿರುತೆರೆಯ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಕಾಮಿಡಿ ಕಿಲಾಡಿಗಳಾದ ಶಿವು ಮತ್ತು ಮಾನಸಾ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇಷ್ಟು ದಿನ ಸ್ಕ್ರೀನ್ ಮೇಲೆ ಎಲ್ಲರನ್ನೂ ನಗಿಸುತ್ತಿದ್ದ ಈ ಲವ್ ಬರ್ಡ್ಸ್, ಈಗ ಹಸೆಮಣೆ ಏರೋ ಕಾಲ ಬಂದಿದೆ. ಇತ್ತೀಚೆಗಷ್ಟೇ ಇವರ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಸಖತ್ ಸೌಂಡ್ ಮಾಡಿತ್ತು. ಈಗ ಮದುವೆಯ ಮೊದಲ ಶಾಸ್ತ್ರವಾದ ಮೆಹಂದಿ ಕಾರ್ಯಕ್ರಮ ಬೆಂಗಳೂರಿನಲ್ಲಿ ಬಹಳ ಸಡಗರದಿಂದ ನೆರವೇರಿದೆ.

ಶಿವು ಮತ್ತು ಮಾನಸಾ ಮೆಹಂದಿ ಶಾಸ್ತ್ರ , ಅರಿಶಿನ ಶಾಸ್ತ್ರ ಫೋಟೋ | Photo Credit: iam_maansa
ಶಿವು ಮತ್ತು ಮಾನಸಾ ಮೆಹಂದಿ ಶಾಸ್ತ್ರ , ಅರಿಶಿನ ಶಾಸ್ತ್ರ ಫೋಟೋ | Photo Credit: iam_maansa

ಸ್ನೇಹದಿಂದ ಪ್ರೀತಿಗೆ, ಪ್ರೀತಿಯಿಂದ ಮದುವೆಗೆ

ಈ ಜೋಡಿಯ ಲವ್ ಸ್ಟೋರಿ ಶುರುವಾಗಿದ್ದು 'ಗಿಚ್ಚಿ ಗಿಲಿಗಿಲಿ' ಸೆಟ್‌ನಲ್ಲಿ. ಮೊದಲು ಫ್ರೆಂಡ್ಸ್ ಆಗಿದ್ದ ಈ ಜೋಡಿ ಆಮೇಲೆ ಪ್ರೀತಿಗೆ ಬಿದ್ದರು. ಈಗ ಮನೆಯವರ ಪೂರ್ಣ ಒಪ್ಪಿಗೆಯೊಂದಿಗೆ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ. ಮೆಹಂದಿ ಶಾಸ್ತ್ರದಲ್ಲಿ ಶಿವು ಅವರು ತಮ್ಮ ಭಾವಿ ಪತ್ನಿ ಮಾನಸಾ ಕೈಗೆ ತಾವೇ ಮೆಹಂದಿ ಹಚ್ಚುವ ಮೂಲಕ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಕಿರುತೆರೆ ತಾರೆಯರ ಸಮಾಗಮ

ಬೆಂಗಳೂರಿನಲ್ಲಿ ನಡೆದ ಈ ಮೆಹಂದಿ ಕಾರ್ಯಕ್ರಮಕ್ಕೆ ಕಿರುತೆರೆಯ ಹಲವು ಗಣ್ಯರು ಸಾಕ್ಷಿಯಾಗಿದ್ದರು.
'ಮಜಾ ಭಾರತ' ಖ್ಯಾತಿಯ ಸುಷ್ಮಿತಾ ಜಗ್ಗಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಖತ್ ಎಂಜಾಯ್ ಮಾಡಿದ್ದಾರೆ.ನಿರೂಪಕ ನಿರಂಜನ್ ದೇಶಪಾಂಡೆ ಅವರ ಪತ್ನಿ ಯಶಸ್ವಿನಿ ಕೂಡ ಆಗಮಿಸಿ ಜೋಡಿಗೆ ಶುಭ ಹಾರೈಸಿದ್ದಾರೆ. ಮಾನಸಾ ಅವರ ಸಹೋದರ ರಾಘವೇಂದ್ರ ಕೂಡ ಅಕ್ಕನ ಮದುವೆಯ ಸಂಭ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

'ಟ್ವಿನ್ನಿಂಗ್' ಔಟ್‌ಫಿಟ್‌ನಲ್ಲಿ ಕಂಗೊಳಿಸಿದ ಜೋಡಿ

ಮೆಹಂದಿ ಶಾಸ್ತ್ರದ ವಿಶೇಷ ಅಂದ್ರೆ ಈ ಜೋಡಿಯ ಬಟ್ಟೆ ಆಯ್ಕೆ. ಶಿವು ಮತ್ತು ಮಾನಸಾ ಇಬ್ಬರೂ 'ಟ್ವಿನ್ನಿಂಗ್' ಔಟ್‌ಫಿಟ್‌ನಲ್ಲಿ ಮಿಂಚುತ್ತಿದ್ದರು. ಒಂದೇ ರೀತಿಯ ಬಣ್ಣದ ಉಡುಪು ಧರಿಸಿ ಫೋಟೋಗೆ ಫೋಸ್ ನೀಡಿದ ಈ ಜೋಡಿಯನ್ನು ನೋಡಿ ಅಭಿಮಾನಿಗಳು "ಸಖತ್ ಜೋಡಿ" ಅಂತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬಾಲಿವುಡ್ ಸ್ಟೈಲ್‌ನಲ್ಲಿ ಕಲರ್‌ಫುಲ್ ಆಗಿ ನಡೆದ ಈ ಮೆಹಂದಿ ಶಾಸ್ತ್ರದಲ್ಲಿ ಹಾಡು-ಕುಣಿತಕ್ಕೆ ಏನೂ ಕಡಿಮೆ ಇರಲಿಲ್ಲ. 'ಗಿಚ್ಚಿ ಗಿಲಿಗಿಲಿ' ತಂಡದ ಗೆಳೆಯರೆಲ್ಲಾ ಸೇರಿ ಅದ್ದೂರಿಯಾಗಿ ಸಂಭ್ರಮಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಶಿವು ಮತ್ತು ಮಾನಸಾ ಅವರ ಗ್ರ್ಯಾಂಡ್ ವೆಡ್ಡಿಂಗ್ ನಡೆಯಲಿದ್ದು, ಅಭಿಮಾನಿಗಳು ಕೂಡ ಅಷ್ಟೇ ಕಾತರದಿಂದ ಕಾಯುತ್ತಿದ್ದಾರೆ.

ನಗು ಹಂಚುತ್ತಿದ್ದ ಈ ಕ್ಯೂಟ್ ಜೋಡಿ ಈಗ ಹೊಸ ಜೀವನದ ಆರಂಭದಲ್ಲಿದ್ದಾರೆ. ಶಿವು ಮತ್ತು ಮಾನಸಾ ಅವರಿಗೆ ನಮ್ಮ ಕಡೆಯಿಂದಲೂ ಕಂಗ್ರಾಜುಲೇಷನ್ಸ್.