ಹಾಲ್ ಬಾಡಿಗೆನೇ ₹24 ಲಕ್ಷ? ಒಟ್ಟು ವೆಚ್ಚ ಕೋಟಿ - ‘ಗಿಚ್ಚಿ ಗಿಲಿಗಿಲಿ’ ಪ್ರಶಾಂತ್ ಕಲಾವಿದ-ಕೃತಿ ಗೌಡ ಅದ್ಧೂರಿ ಕಲ್ಯಾಣ!!

ಕಿರುತೆರೆಯ ಅತ್ಯಂತ ಜನಪ್ರಿಯ ಕಾಮಿಡಿ ರಿಯಾಲಿಟಿ ಶೋ ‘ಗಿಚ್ಚಿ ಗಿಲಿಗಿಲಿ’ (Gicchi Giligili) ಮೂಲಕ ಕನ್ನಡಿಗರ ಮನೆಮಾತಾಗಿರುವ ಅದ್ಭುತ ನಟ ಪ್ರಶಾಂತ್ ಕಲಾವಿದ (Prashanth Kalavid) ಇತ್ತೀಚೆಗಷ್ಟೇ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳತಿ ಕೃತಿ ಗೌಡ ಅವರೊಂದಿಗೆ ಪ್ರಶಾಂತ್ ಅದ್ಧೂರಿಯಾಗಿ ವಿವಾಹವಾಗಿದ್ದು, ಸದ್ಯ ಇವರ ಮದುವೆ ಮತ್ತು ರಿಸೆಪ್ಷನ್‌ನ ವೈಭವದ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನವಜೀವನಕ್ಕೆ ಕಾಲಿಟ್ಟ ನಟ ಪ್ರಶಾಂತ್ ಕಲಾವಿದ | Photo Credit: https://www.instagram.com/talented_kalavida_official/
ನವಜೀವನಕ್ಕೆ ಕಾಲಿಟ್ಟ ನಟ ಪ್ರಶಾಂತ್ ಕಲಾವಿದ | Photo Credit: https://www.instagram.com/talented_kalavida_official/

ಪ್ರಶಾಂತ್ ಕಲಾವಿದ ಹಾಗೂ ಕೃತಿ ಗೌಡ ಅವರದ್ದು ಇಂದು ನಿನ್ನೆಯ ಪ್ರೀತಿಯಲ್ಲ. ಇವರಿಬ್ಬರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಪ್ರೀತಿಯನ್ನು ಪೋಷಿಸಿಕೊಂಡು ಬಂದ ಈ ಜೋಡಿ, ಇದೀಗ ಇಬ್ಬರ ಮನೆಯವರ ಒಪ್ಪಿಗೆಯ ಮೇರೆಗೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಶಾಂತ್ ಕಲಾವಿದ, "ಕೈ ಹಿಡಿದ ದಿನದಿಂದ… ಕೈ ಬಿಡದ ಜೀವನದವರೆಗೆ. 5 ವರ್ಷದ ಪ್ರೀತಿ, ಇಂದು ಶಾಶ್ವತ ಬಂಧವಾಗಿದೆ" ಎಂದು ಅತ್ಯಂತ ಭಾವುಕರಾಗಿ ಬರೆದುಕೊಂಡಿದ್ದಾರೆ. ಪ್ರಶಾಂತ್ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಕಿರುತೆರೆಯ ಸಹ-ಕಲಾವಿದರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಪ್ರಶಾಂತ್ ಮತ್ತು ಕೃತಿ ಗೌಡ ಅವರ ಮದುವೆ ಹಾಗೂ ಆರತಕ್ಷತೆ (Reception) ಕಾರ್ಯಕ್ರಮಗಳು ಬೆಂಗಳೂರಿನ ಹೊಸಕೆರಹಳ್ಳಿ ಬಳಿ ಇರುವ ಅತ್ಯಂತ ಪ್ರತಿಷ್ಠಿತ ಹಾಗೂ ಐಷಾರಾಮಿ ಕಲ್ಯಾಣ ಮಂಟಪವಾದ 'ವಿ ಲೆಗೆಸಿ' (V Legacy) ನಲ್ಲಿ ಜರುಗಿದೆ. ರಾಜವೈಭವವನ್ನು ನೆನಪಿಸುವಂತೆ ಕಂಗೊಳಿಸುವ ಈ ಕಲ್ಯಾಣ ಮಂಟಪದ ಒಂದೇ ಒಂದು ದಿನದ ಬಾಡಿಗೆನೇ ಬರೋಬ್ಬರಿ 24 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ!

ಕೇವಲ ಹಾಲ್ ಬಾಡಿಗೆಯೇ ಇಷ್ಟೊಂದು ಇರುವಾಗ, ಇನ್ನು ಇಡೀ ಮಂಟಪಕ್ಕೆ ಮಾಡಿಸಲಾಗಿದ್ದ ಅದ್ಭುತವಾದ ಫ್ಲವರ್ ಮತ್ತು ಲೈಟಿಂಗ್ಸ್ ಡೆಕೋರೇಷನ್, ಸೌಂಡ್ ಸಿಸ್ಟಮ್ ಹಾಗೂ ಅತಿಥಿಗಳ ಸತ್ಕಾರ ಎಲ್ಲವನ್ನೂ ಲೆಕ್ಕ ಹಾಕಿದರೆ, ಈ ಮದುವೆಯ ಒಟ್ಟು ವೆಚ್ಚ ಖಂಡಿತವಾಗಿಯೂ 1 ಕೋಟಿ ರೂಪಾಯಿಗೂ ಅಧಿಕ ದಾಟಿದೆ ಎನ್ನಲಾಗುತ್ತಿದೆ. ಈ ಐಷಾರಾಮಿ ವೆಚ್ಚವೇ ಈಗ ಗಾಂಧಿನಗರ ಹಾಗೂ ಕಿರುತೆರೆ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಶಾಂತ್ ಕಲಾವಿದ ಅವರ ಮದುವೆಗೆ ಕಿರುತೆರೆ ಮತ್ತು ಬೆಳ್ಳಿತೆರೆಯ ನಟ-ನಟಿಯರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ (Niranjan Deshpande) ತಮ್ಮ ಪತ್ನಿ ಯಶಸ್ವಿನಿ ಜೊತೆ ಮದುವೆಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೆ, ಇಡೀ ಮದುವೆಯ ಸಡಗರವನ್ನು ನಿರಂಜನ್ ತಮ್ಮದೇ ಶೈಲಿಯಲ್ಲಿ ವ್ಲಾಗ್ (Vlog) ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಈ ವ್ಲಾಗ್‌ನಲ್ಲಿ ಮದುವೆಯ ಅದ್ಧೂರಿತನ, ಮಂಟಪದ ವೈಭವ ಮತ್ತು ಅಲ್ಲಿನ ವಾತಾವರಣವನ್ನು ಕಂಡು ನಿರಂಜನ್ ದೇಶಪಾಂಡೆ ದಂಪತಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಮದುವೆಗೆ ಖಂಡಿತವಾಗಿಯೂ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚಾಗಿರಬಹುದು ಎಂದು ಅವರು ತಮ್ಮ ವ್ಲಾಗ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ವಿಡಿಯೋ ಯೂಟ್ಯೂಬ್‌ನಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ.

ಪ್ರಶಾಂತ್ ಕಲಾವಿದ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ದೊಡ್ಡ ಸ್ನೇಹಬಳಗವನ್ನೇ ಹೊಂದಿದ್ದಾರೆ. ಹೀಗಾಗಿ ಇವರ ಮದುವೆ ರಿಸೆಪ್ಷನ್ ಹಳೇ ಗೆಳೆಯರ ಮತ್ತು ಸಹ-ಕಲಾವಿದರ ದೊಡ್ಡ ‘ರೀವ್ಯೂನಿಯನ್’ (Reunion) ವೇದಿಕೆಯಾಗಿ ಮಾರ್ಪಟ್ಟಿತ್ತು.

ಮದುವೆಗೆ ಬಂದಿದ್ದ ಪ್ರಮುಖ ತಾರೆಯರು:

  • ಖ್ಯಾತ ನಿರೂಪಕಿ ಅನುಪಮಾ ಗೌಡ, ನಿವೇದಿತಾ ಗೌಡ
  • ಧಾರಾವಾಹಿ ತಾರೆಯರಾದ ಭವ್ಯಾ ಗೌಡ, ದೀಕ್ಷಾ, ಅಂಕಿತಾ ಅಮರ್
  • ಕಿರುತೆರೆ ನಟರಾದ ತಾಂಡವ್, ವಾಣಿ, ಸೂರಜ್
  • ‘ಬಿಗ್ ಬಾಸ್’ ಹಾಗೂ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ತುಕಾಲಿ ಸ್ಟಾರ್ ಸಂತು

ಸದಾ ಶೂಟಿಂಗ್ ಬ್ಯುಸಿಯಲ್ಲಿರುವ ಎಲ್ಲಾ ಕಲಾವಿದರು ಒಂದೇ ಸೂರಿನಡಿ ಸೇರಿ, ಪ್ರಶಾಂತ್ ಮತ್ತು ಕೃತಿ ಗೌಡ ಜೋಡಿಗೆ ಅಕ್ಷತೆ ಹಾಕಿ ಆಶೀರ್ವದಿಸಿ, ಫೋಟೋಗಳಿಗೆ ಪೋಸ್ ನೀಡುತ್ತಾ ಸಂಭ್ರಮಿಸಿದರು.

ಐಷಾರಾಮಿ ಮದುವೆ ಅಂದಮೇಲೆ ಅಲ್ಲಿನ ಫುಡ್ ಮೆನು ಕೂಡ ಅಷ್ಟೇ ರಿಚ್ ಆಗಿ ಇರಬೇಕಲ್ಲವೇ? ಪ್ರಶಾಂತ್ ಅವರ ಮದುವೆಯಲ್ಲಿ ಅತಿಥಿಗಳಿಗೆ ರಾಯಲ್ ರtreatment ನೀಡಲಾಗಿತ್ತು. ಊಟದ ಮೆನುವಿನಲ್ಲಿ ಸಾಂಪ್ರದಾಯಿಕ ಅಡುಗೆಗಳ ಜೊತೆಗೆ ಅತ್ಯಂತ ವೆರೈಟಿ ಹಾಗೂ ಟ್ರೆಂಡಿ ಐಟಂಗಳನ್ನು ಇಡಲಾಗಿತ್ತು.

ವಿಶೇಷವಾಗಿ ಸ್ವೀಟ್ಸ್ ಪ್ರಿಯರಿಗಾಗಿ ಬಿಸಿಬಿಸಿ ಕುನಾಫಾ ಜಾಮೂನ್ (Kunafa Jamun), ಇಟಾಲಿಯನ್ ಶೈಲಿಯ ತಿರಾಮಿಸು (Tiramisu) ಡೆಸರ್ಟ್ ಮತ್ತು ಲೈವ್ ಕೌಂಟರ್‌ನಲ್ಲಿ ತಯಾರಾಗುತ್ತಿದ್ದ ಫೈರ್ ಪಿಜ್ಜಾ (Fire Pizza) ಸೇರಿದಂತೆ ನೂರಾರು ಬಗೆಯ ಬಾಯಲ್ಲಿ ನೀರೂರಿಸುವ ಖಾದ್ಯಗಳು ಮದುವೆಯಲ್ಲಿದ್ದವು. ಮದುವೆಗೆ ಬಂದವರೆಲ್ಲರೂ ಈ ಭರ್ಜರಿ ಊಟೋಪಚಾರವನ್ನು ಸಖತ್ ಆಗಿ ಎಂಜಾಯ್ ಮಾಡಿದರು.

Latest News