ಥಿಯೇಟರ್‌ಗಳಲ್ಲಿ ಮೋಹನ್ ಲಾಲ್ ಮ್ಯಾಜಿಕ್ - 'ದೃಶ್ಯಂ 3' ಸಿನಿಮಾ ನೋಡಿದ ಪ್ರೇಕ್ಷಕರು ನೀಡಿದ ರಿವ್ಯೂ ಹೀಗಿದೆ;

ಒಂದು ಕೊ*ಲೆ.. ಅದನ್ನು ಮುಚ್ಚಿಡಲು ಹೆಣಗಾಡುವ ಒಬ್ಬ ಸಾಮಾನ್ಯ ಫ್ಯಾಮಿಲಿ ಮ್ಯಾನ್.. ಆತನ ಹಿಂದೆ ಬಿದ್ದ ಇಡೀ ಪೊಲೀಸ್ ಇಲಾಖೆ! ಹೌದು, ಭಾರತೀಯ ಚಿತ್ರರಂಗದಲ್ಲೇ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ಹೊಸ ಭಾಷ್ಯ ಬರೆದ ಜಾರ್ಜ್‌ಕುಟ್ಟಿಯ ಅಸಲಿ ಆಟ ಇಂದಿನಿಂದ (ಮೇ 21) ಮತ್ತೆ ಶುರುವಾಗಿದೆ. ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಜನ್ಮದಿನದಂದೇ ಬಿಡುಗಡೆಯಾಗಿರೋ 'ದೃಶ್ಯಂ 3' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ.

ದೃಶ್ಯಂ 3: ಜಾರ್ಜ್‌ಕುಟ್ಟಿಯ ಆಟ ಮತ್ತೆ ಶುರು! | Photo Credit: https://www.zoomtventertainment.com
ದೃಶ್ಯಂ 3: ಜಾರ್ಜ್‌ಕುಟ್ಟಿಯ ಆಟ ಮತ್ತೆ ಶುರು! | Photo Credit: https://www.zoomtventertainment.com

ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆ ಪ್ರೇಕ್ಷಕರು ಸೋಶಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ರಿವ್ಯೂಗಳ ಸುರಿಮಳೆಗೈಯುತ್ತಿದ್ದಾರೆ. ಚಿತ್ರದ ಕಥೆ ಹೇಗಿದೆ? ಮೂರನೇ ಪಾರ್ಟ್ ಮೊದಲಿನ ಎರಡೂ ಭಾಗಗಳಷ್ಟು ಕಿಕ್ ಕೊಡುತ್ತಾ? ಕಂಪ್ಲೀಟ್ ಪಬ್ಲಿಕ್ ಟಾಕ್ ಇಲ್ಲಿದೆ ನೋಡಿ.

ಮೊದಲಾರ್ಧದಲ್ಲಿ ಸ್ಲೋ ಬಿಲ್ಡಪ್: ಕ್ಯಾರೆಕ್ಟರ್‌ಗಳ ಎಮೋಷನಲ್ ಡ್ರಾಮಾ

ಚಿತ್ರದ ಫಸ್ಟ್ ಹಾಫ್ ಬಗ್ಗೆ ಜನರಿಂದ ಮಿಕ್ಸ್ಡ್ ರೆಸ್ಪಾನ್ಸ್ ಸಿಕ್ಕಿದೆ. ನಿರ್ದೇಶಕ ಜೀತು ಜೋಸೆಫ್ ಕಥೆಯ ಬ್ಯಾಕ್‌ಗ್ರೌಂಡ್ ಸೆಟ್ ಮಾಡಲು ಮತ್ತು ಪಾತ್ರಗಳ ಭಾವನಾತ್ಮಕ ಜರ್ನಿಯನ್ನು ತೋರಿಸಲು ಮೊದಲಾರ್ಧದಲ್ಲಿ ಸ್ವಲ್ಪ ಹೆಚ್ಚಿನ ಸಮಯ ತಗೊಂಡಿದ್ದಾರೆ. ಹಾಗಾಗಿ ಚಿತ್ರಕಥೆ ಕೊಂಚ ನಿಧಾನವಾಗಿ ಸಾಗುತ್ತದೆ.

ಆದರೆ ಲಾಲೇಟನ್ ಮೋಹನ್ ಲಾಲ್ ಸ್ಕ್ರೀನ್ ಮೇಲೆ ಬರ್ತಿದ್ದಂತೆ ಥಿಯೇಟರ್‌ಗಳಲ್ಲಿ ಶಿಳ್ಳೆ, ಚಪ್ಪಾಳೆಗಳ ಸೌಂಡ್ ಜೋರಾಗಿದೆ. ಅವರ ಮಾಸ್ ಇಂಟ್ರೋ ಸೀನ್ ಅಭಿಮಾನಿಗಳಿಗೆ ಪಕ್ಕಾ ಪೈಸಾ ವಸೂಲ್ ಎನಿಸಿದೆ.

ಸೀಟಿನ ತುದಿಗೆ ನಿಲ್ಲಿಸೋ ಟ್ವಿಸ್ಟ್!

ನಿಮಗೆ ಫಸ್ಟ್ ಹಾಫ್ ಸ್ವಲ್ಪ ಸ್ಲೋ ಅನಿಸಿದ್ರೂ, ಸೆಕೆಂಡ್ ಹಾಫ್ (Second Half) ಮಾತ್ರ ನಿಮ್ಮ ಮೈಂಡ್ ಬ್ಲೋ ಮಾಡೋದು ಗ್ಯಾರಂಟಿ. ದ್ವಿತೀಯಾರ್ಧದಲ್ಲಿ ಕಥೆ ಸೂಪರ್ ಫಾಸ್ಟ್ ಆಗಿ ಮೂವ್ ಆಗುತ್ತದೆ. ಪೊಲೀಸರ ಹೊಸ ಹೊಸ ತಂತ್ರಗಳು ಹಾಗೂ ಅದಕ್ಕೆ ಜಾರ್ಜ್‌ಕುಟ್ಟಿ ಕೊಡುವ ಮೈಂಡ್ ಗೇಮ್ ಕೌಂಟರ್‌ಗಳು ಸಿನಿಮಾವನ್ನು ನೆಕ್ಸ್ಟ್ ಲೆವೆಲ್‌ಗೆ ತಗೆದುಕೊಂಡು ಹೋಗುತ್ತವೆ.

ಕ್ಲೈಮ್ಯಾಕ್ಸ್ ತಲುಪುವವರೆಗಿನ ಪ್ರತಿಯೊಂದು ಸೀನ್ ಕೂಡ ರೋಮಾಂಚನ ಉಂಟುಮಾಡುತ್ತದೆ. ದೃಶ್ಯಂ ಮೊದಲ ಎರಡು ಭಾಗಗಳ ತರಹನೇ ಈ ಮೂರನೇ ಪಾರ್ಟ್‌ನಲ್ಲೂ ಪ್ರೇಕ್ಷಕರು ಊಹಿಸಲು ಸಾಧ್ಯವಾಗದ ಟ್ವಿಸ್ಟ್‌ಗಳನ್ನು ಇಡಲಾಗಿದೆ.

ಟ್ವಿಟರ್‌ನಲ್ಲಿ ಪ್ರೇಕ್ಷಕರ ರಿಯಾಕ್ಷನ್ ಹೇಗಿದೆ?

ಸಿನಿಮಾ ನೋಡಿದ ಅಭಿಮಾನಿಯೊಬ್ಬರು ಎಕ್ಸ್‌ನಲ್ಲಿ ಹೀಗೆ ಟ್ವೀಟ್ ಮಾಡಿದ್ದಾರೆ:

"ದೃಶ್ಯಂ 3 ಮೊದಲಾರ್ಧ ಸಕ್ಕತ್ ಇಂಟರೆಸ್ಟಿಂಗ್ ಆಗಿದೆ. ಇಂಟರ್ವಲ್ ಬ್ಲಾಕ್ ಅಂತೂ ಅಲ್ಟಿಮೇಟ್. ಮೋಹನ್ ಲಾಲ್ ಸರ್ ತಮ್ಮ ಆಕ್ಟಿಂಗ್‌ನಿಂದ ಜಾರ್ಜ್‌ಕುಟ್ಟಿ ಪಾತ್ರಕ್ಕೆ ಮತ್ತೊಮ್ಮೆ ಜೀವ ತುಂಬಿದ್ದಾರೆ. ಸೆಕೆಂಡ್ ಹಾಫ್‌ನಲ್ಲಿ ಬರುವ ಟ್ವಿಸ್ಟ್‌ಗಳು ರೋಮಾಂಚನ ಉಂಟುಮಾಡುತ್ತವೆ. ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಬ್ಲಾಕ್‌ಬಸ್ಟರ್ ಲೋಡ್ ಆಗಿದೆ."

ಆದರೆ ಕೆಲವರು ಚಿತ್ರದ ಬರವಣಿಗೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದು, "ದೃಶ್ಯಂ 3 ಹಳೇ ಕಥೆಯನ್ನೇ ನೆನಪಿಸುತ್ತದೆ. ಈ ಬಾರಿ ನಿರೂಪಣೆ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ. ಫಸ್ಟ್ ಹಾಫ್ ತುಂಬಾ ಲ್ಯಾಗ್ ಅನಿಸುತ್ತದೆ. ಸೆಕೆಂಡ್ ಹಾಫ್‌ನಲ್ಲಿ ಸಸ್ಪೆನ್ಸ್ ರಿವೀಲ್ ಆದ್ರೂ ಮೊದಲಿನ ಎರಡು ಪಾರ್ಟ್‌ಗಳಷ್ಟು ಥ್ರಿಲ್ ಕೊಡಲ್ಲ. ಕ್ಲೈಮ್ಯಾಕ್ಸ್ ಸ್ವಲ್ಪ ಪರವಾಗಿಲ್ಲ ಅನ್ನಿಸಿದ್ರೂ, ಕೆಲವು ಸೀನ್‌ಗಳು ಅನ್-ನೆಸೆಸರಿ ಅನಿಸುತ್ತವೆ," ಎಂದು ಕಮೆಂಟ್ ಮಾಡಿದ್ದಾರೆ.

ಭಾರತೀಯ ಸಿನಿಮಾರಂಗದ ಬೆಸ್ಟ್ ಥ್ರಿಲ್ಲರ್ ಫ್ರಾಂಚೈಸಿ!

2013 ರಲ್ಲಿ ರಿಲೀಸ್ ಆಗಿದ್ದ 'ದೃಶ್ಯಂ' ಸಿನಿಮಾ ಕೇವಲ ಮಾಲಿವುಡ್ ಮಾತ್ರವಲ್ಲದೆ ಇಡೀ ಇಂಡಿಯನ್ ಸಿನಿಮಾರಂಗವನ್ನೇ ನಡುಗಿಸಿತ್ತು. ಆಮೇಲೆ 2021 ರಲ್ಲಿ ಬಂದ 'ದೃಶ್ಯಂ 2' ಒಟಿಟಿಯಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಈಗ ಬಂದಿರೋ ಮೂರನೇ ಸರಣಿಯನ್ನು ಆಶೀರ್ವಾದ್ ಸಿನಿಮಾಸ್ ಮತ್ತು ಪನೋರಮಾ ಸ್ಟುಡಿಯೋಸ್ ಜಂಟಿಯಾಗಿ ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಿವೆ. ಈ ಚಿತ್ರದಲ್ಲೂ ಮೋಹನ್ ಲಾಲ್ ಅವರಿಗೆ ಜೋಡಿಯಾಗಿ ಮೀನಾ ನಟಿಸಿದ್ದು, ಅನಿಲ್ ಮತ್ತು ಅನ್ಸಿಬಾ ಹಾಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಕೆಲವೊಂದು ಸಣ್ಣಪುಟ್ಟ ನೆಗೆಟಿವ್ ಕಮೆಂಟ್‌ಗಳಿದ್ದರೂ ಶೇ. 80 ರಷ್ಟು ಜನರಿಂದ ಪಾಸಿಟಿವ್ ಟಾಕ್ ಸಿಗುತ್ತಿದ್ದು, ಈ ವೀಕೆಂಡ್‌ನಲ್ಲಿ ಸಸ್ಪೆನ್ಸ್ ಪ್ರಿಯರಿಗೆ 'ದೃಶ್ಯಂ 3' ಒಂದು ಬೆಸ್ಟ್ ಥ್ರಿಲ್ಲರ್ ಮೂವಿ ಅನ್ನೋದ್ರಲ್ಲಿ ಡೌಟೇ ಇಲ್ಲ. 

Latest News