May 9, 2026 Languages : ಕನ್ನಡ | English

ಜಾರ್ಜ್‌ಕುಟ್ಟಿ ಜೊತೆ ಅಜಿತ್ ಕುಮಾರ್ ಜುಗಲ್ಬಂದಿ? 'ದೃಶ್ಯಂ 3' ಚಿತ್ರದ ಬಗ್ಗೆ ಕೇಳಿಬರುತ್ತಿದೆ ಇಂಟರೆಸ್ಟಿಂಗ್ ಸುದ್ದಿ!!

ಮಲಯಾಳಂನ 'ದೃಶ್ಯಂ' (Drishyam) ಸಿನಿಮಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಮೋಹನ್‌ಲಾಲ್ ಅವರ ನಟನೆಯ ಈ ಕ್ರೈಮ್ ಥ್ರಿಲ್ಲರ್ ಸರಣಿ ಇಡೀ ಭಾರತದಲ್ಲೇ ಹೊಸ ಇತಿಹಾಸ ಸೃಷ್ಟಿಸಿತ್ತು. ಈಗ ಈ ಸರಣಿಯ ಮೂರನೇ ಭಾಗ ಅಂದ್ರೆ 'ದೃಶ್ಯಂ 3' ಸದ್ಯದಲ್ಲೇ ಬರ್ತಿದೆ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆದರೆ ಈ ಸಂಭ್ರಮದ ನಡುವೆ ಮತ್ತೊಂದು ಅಚ್ಚರಿಯ ಸುದ್ದಿ ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ!

'ದೃಶ್ಯಂ 3' ಚಿತ್ರದಲ್ಲಿ ಅಜಿತ್ ಕುಮಾರ್ | Photo Credit: https://x.com/AlwaysBollywood
'ದೃಶ್ಯಂ 3' ಚಿತ್ರದಲ್ಲಿ ಅಜಿತ್ ಕುಮಾರ್ | Photo Credit: https://x.com/AlwaysBollywood

ಅಜಿತ್ ಕುಮಾರ್ ಎಂಟ್ರಿ ನಿಜಾನಾ?

ತಮಿಳಿನ ಇನ್‌ಸ್ಟಾಗ್ರಾಮ್ ಪೇಜ್‌ವೊಂದರಲ್ಲಿ ಈ ಸುದ್ದಿ ಮೊದಲು ಕಾಣಿಸಿಕೊಂಡಿತ್ತು. "ಮೋಹನ್‌ಲಾಲ್ ಅವರ ಮೇಲಿರೋ ಸ್ನೇಹಕ್ಕಾಗಿ ಅಜಿತ್ ಕುಮಾರ್ ಅವರು ಈ ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಮಲಯಾಳಂ ಮತ್ತು ತಮಿಳು ಚಿತ್ರರಂಗದ ಈ ಇಬ್ಬರು ದಿಗ್ಗಜರು ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ" ಎಂದು ಪೋಸ್ಟ್ ಮಾಡಲಾಗಿತ್ತು.

ಈ ಪೋಸ್ಟ್ ನೋಡಿದ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದಾರೆ. ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳ ಮೂಲಕ ಈ ಸುದ್ದಿ ಈಗ ಎಲ್ಲೆಡೆ ಹರಡಿದೆ. ಒಂದು ವೇಳೆ ಅಜಿತ್ ಅವರು ಜಾರ್ಜ್‌ಕುಟ್ಟಿ ಜೊತೆ ಕೈ ಜೋಡಿಸಿದರೆ ಥಿಯೇಟರ್‌ಗಳಲ್ಲಿ ಹಬ್ಬವಾಗೋದಂತೂ ಗ್ಯಾರಂಟಿ!

ನೆಟ್ಟಿಗರ ತಮಾಷೆಯ ಕಾಮೆಂಟ್‌ಗಳು!

ಈ ಸುದ್ದಿ ವೈರಲ್ ಆಗ್ತಿದ್ದಂತೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ರಿಯಾಕ್ಟ್ ಮಾಡ್ತಿದ್ದಾರೆ. ಕೆಲವರು ಇದನ್ನ 'ನಕಲಿ ಸುದ್ದಿ' ಅಂತ ಕರೆದರೆ, ಇನ್ನು ಕೆಲವರು ಸಖತ್ ಕಾಮಿಡಿ ಮಾಡ್ತಿದ್ದಾರೆ.

ಒಬ್ಬ ನೆಟ್ಟಿಗ "ಜಾರ್ಜ್‌ಕುಟ್ಟಿ ಥಿಯೇಟರ್‌ನಲ್ಲಿ ಅಜಿತ್ ಅವರ ಸಿನಿಮಾ ರಿಲೀಸ್ ಮಾಡ್ತಾರೆ, ಅದೇ ಕೇಮಿಯೋ ಇರಬಹುದು!" ಅಂತ ಕಾಲೆಳೆದಿದ್ದಾರೆ.

ಮತ್ತೊಬ್ಬರು "ಅಜಿತ್ ಅವರ ಮಂಕಥಾ ಸಿನಿಮಾ ಮತ್ತೆ ರಿಲೀಸ್ ಮಾಡ್ತಾರಾ?" ಅಂತ ಕೇಳಿದ್ದಾರೆ.

ಇನ್ನೊಬ್ಬ ಅಭಿಮಾನಿ ಸ್ವಲ್ಪ ಲಾಜಿಕ್ ಯೋಚಿಸಿ, "ಸಿನಿಮಾ ಮೇ ತಿಂಗಳಲ್ಲೇ ರಿಲೀಸ್ ಅಂತೆ, ಇಷ್ಟೊಂದು ಬೇಗ ಅಜಿತ್ ಅವರ ಶೂಟಿಂಗ್ ಯಾವಾಗ ಮುಗಿಸ್ತಾರೆ?" ಅಂತ ಪ್ರಶ್ನೆ ಮಾಡಿದ್ದಾರೆ.

ಯಾವಾಗ ರಿಲೀಸ್ ಆಗಬಹುದು?

ಮೊದಲು ಈ ಸಿನಿಮಾ ಏಪ್ರಿಲ್ 2ಕ್ಕೆ ಬರುತ್ತೆ ಅಂತ ಹೇಳಲಾಗಿತ್ತು. ಆದರೆ ಈಗಿನ ಮಾಹಿತಿ ಪ್ರಕಾರ ಮೋಹನ್‌ಲಾಲ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಮೇ 21ರಂದು 'ದೃಶ್ಯಂ 3' ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

'ದೃಶ್ಯಂ' ಹವಾ ಹೀಗಿದೆ!

ಮಲಯಾಳಂನಲ್ಲಿ ಹಿಟ್ ಆದ ಮೇಲೆ ಈ ಸಿನಿಮಾ ತಮಿಳಿನಲ್ಲಿ ಕಮಲ್ ಹಾಸನ್ ಅವರ ನಟನೆಯಲ್ಲಿ 'ಪಾಪನಾಸಂ' ಆಗಿ ಮೂಡಿಬಂದು ಅಲ್ಲಿಯೂ ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿ ರವಿಚಂದ್ರನ್ ಅವರ 'ದೃಶ್ಯ' ಕೂಡ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಹೀಗಾಗಿ ಈ ಮೂರನೇ ಭಾಗದ ಮೇಲೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇದೆ.

Latest News