Apr 21, 2026 Languages : ಕನ್ನಡ | English

ಗಿಲ್ಲಿಗೆ ಯೋಗ್ಯತೆ ಇಲ್ಲ ಅಂದ್ರಾ ಡಾಗ್ ಸತೀಶ್? ಚಿನ್ನದ ಸರದ ವಿಚಾರವಾಗಿ ಶುರುವಾಯ್ತು ಹೊಸ ವಾರ್!!

ಸೋಶಿಯಲ್ ಮೀಡಿಯಾ ಅಂದ್ಮೇಲೆ ಅಲ್ಲಿ ದಿನಕ್ಕೊಂದು ಹವಾ ಇರಲೇಬೇಕು. ಇತ್ತೀಚಿನ ದಿನಗಳಲ್ಲಿ 'ಡಾಗ್ ಸತೀಶ್' ಅನ್ನೋ ಹೆಸರು ಕೇಳದ ಕನ್ನಡಿಗರಿಲ್ಲ. ತಮ್ಮ ವಿಲಕ್ಷಣ ಹೇಳಿಕೆಗಳು ಮತ್ತು ನಾಯಿಗಳ ಮೇಲಿರೋ ಪ್ರೀತಿಯಿಂದ ಫೇಮಸ್ ಆಗಿರೋ ಸತೀಶ್, ಈಗ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ವಿರುದ್ಧ ಮತ್ತೆ ಗುಡುಗಿದ್ದಾರೆ. ಇವರ ಮಾತುಗಳು ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿವೆ.

ಗಿಲ್ಲಿಗೆ ಯೋಗ್ಯತೆ ಇಲ್ಲ ಅಂದ್ರಾ ಸತೀಶ್? | Photo Credit: satishcadaboms/ | official_gilli_nata/ |
ಗಿಲ್ಲಿಗೆ ಯೋಗ್ಯತೆ ಇಲ್ಲ ಅಂದ್ರಾ ಸತೀಶ್? | Photo Credit: satishcadaboms/ | official_gilli_nata/ |

ಏನಿದು ಹೊಸ ವಿವಾದ?

ನಿಮಗೆ ನೆನಪಿರಬಹುದು, ಬಿಗ್ ಬಾಸ್ ನಡೆಯೋವಾಗ "ಗಿಲ್ಲಿ ಗೆದ್ದರೆ ನಾನು ಅವರ ಕಾಲು ಕೆಳಗೆ ನುಸುಳುತ್ತೇನೆ" ಅಂತ ಸತೀಶ್ ದೊಡ್ಡ ಸವಾಲು ಹಾಕಿದ್ರು. ಆದ್ರೆ ಗಿಲ್ಲಿ ಗೆದ್ದು ಬೀಗಿದ್ರು. ಈಗ ಆ ಸೋಲಿನ ಸೇಡೋ ಏನೋ ಗೊತ್ತಿಲ್ಲ, ಸತೀಶ್ ಅವರು ಗಿಲ್ಲಿಯ 'ಮರ್ಯಾದೆ' ಮತ್ತು 'ಕೆಪಾಸಿಟಿ' ಬಗ್ಗೆ ತುಂಬಾನೇ ಕೇವಲವಾಗಿ ಮಾತನಾಡಿದ್ದಾರೆ. ಇತ್ತೀಚಿನ ವಿಶ್ವ ವಾಣಿ ಚಾನೆಲ್ ನ ಸಂದರ್ಶನವೊಂದರಲ್ಲಿ ಅವರು ನೀಡಿರುವ ಹೇಳಿಕೆ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಸರ ಹಾಕೋದು.. ವಾಪಸ್ ಕಿತ್ಕೊಳ್ಳೋದು. ಸತೀಶ್ ಅವರು ಗಿಲ್ಲಿಗೆ ಹೋಲಿಕೆ ಮಾಡ್ತಾ ಹೇಳಿರೋದು ತುಂಬಾನೇ ವಿಚಿತ್ರವಾಗಿದೆ. 

ಸತೀಶ್ ಪ್ರಕಾರ: "ಗಿಲ್ಲಿಗೆ ಎಲ್ಲಾದರೂ ಫಂಕ್ಷನ್‌ನಲ್ಲಿ ಚಿನ್ನದ ಸರ ಹಾಕಿದ್ರೆ, ಕಾರ್ಯಕ್ರಮ ಮುಗಿದ ಮೇಲೆ ಅದನ್ನ ವಾಪಸ್ ಕಿತ್ಕೊಳ್ತಾರೆ. ಅವರಿಗೆ ಆ ಸರ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲ ಅನ್ನೋದು ಸಂಘಟಕರ ಉದ್ದೇಶ ಇರಬಹುದು. ಆದ್ರೆ ಅದೇ ಸರ ನನಗೆ ಹಾಕಿದ್ರೆ, ಅದನ್ನ ನನಗೇ ಗಿಫ್ಟ್ ಆಗಿ ಕೊಟ್ಟುಬಿಡ್ತಾರೆ. ಅಷ್ಟೇ ಯಾಕೆ, ಈಗ ನನಗಿರೋ ರೇಂಜ್‌ಗೆ ಡೈಮಂಡ್ ನೆಕ್ಲೇಸ್ ಕೂಡ ಫ್ರೀಯಾಗಿ ಬರ್ತಿದೆ."

ತಮಗೆ ಸಿಗುವ ಉಡುಗೊರೆಗಳನ್ನೇ ತಮ್ಮ 'ಕೆಪಾಸಿಟಿ' ಅಂತ ಸತೀಶ್ ಅಂದುಕೊಂಡಂತಿದೆ. ಗಿಲ್ಲಿಗೆ ಮರ್ಯಾದೆ ಇಲ್ಲ, ನನಗೇ ಜಾಸ್ತಿ ಮರ್ಯಾದೆ ಇರೋದು ಅನ್ನೋ ರೀತಿ ಜಂಬ ಕೊಚ್ಚಿಕೊಂಡಿದ್ದಾರೆ.

ಬಿಗ್ ಬಾಸ್‌ನಿಂದ ನಷ್ಟ ಆಯ್ತಾ?

ಬರಿ ಗಿಲ್ಲಿ ಮಾತ್ರವಲ್ಲ, ಸತೀಶ್ ಈಗ ಬಿಗ್ ಬಾಸ್ ಶೋ ವಿರುದ್ಧವೂ ಕಿಡಿ ಕಾರಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಬಿಗ್ ಬಾಸ್ ಮನೆಗೆ ಹೋಗಿ ಹೆಸರು, ದುಡ್ಡು ಮಾಡಬೇಕು ಅನ್ಕೊಳ್ತಾರೆ. ಆದ್ರೆ ಸತೀಶ್ ಕಥೆಯೇ ಬೇರೆ.

ಸಂಭಾವನೆ ಇಳಿಕೆ: "ಬಿಗ್ ಬಾಸ್ ಮನೆಗೆ ಹೋದ ಮೇಲೆ ನನ್ನ ರೇಟ್ ಕಮ್ಮಿಯಾಗಿದೆ. ಮುಂಚೆ ನಾನು ಒಂದು ಕಾರ್ಯಕ್ರಮಕ್ಕೆ ಎರಡುವರೆ ಲಕ್ಷ ತಗೊಳ್ತಿದ್ದೆ, ಈಗ ಅಷ್ಟು ಸಿಗ್ತಿಲ್ಲ" ಅಂತ ಅಳಲು ತೋಡಿಕೊಂಡಿದ್ದಾರೆ.

ಮರ್ಯಾದೆ ಪ್ರಶ್ನೆ: ಬಿಗ್ ಬಾಸ್‌ನಿಂದ ನನ್ನ ಮಾನ ಮರ್ಯಾದೆ ಹೋಯ್ತು ಹೊರತು, ಅದರಿಂದ ನನಗೇನು ಲಾಭ ಆಗಿಲ್ಲ ಅಂತಿದ್ದಾರೆ.

ನಾಯಿಯೇ ದೇವರು: ಇಂದಿಗೂ ನಾನು ಹೆಸರು ಮಾಡ್ತಿರೋದು ನನ್ನ ನಾಯಿಗಳಿಂದಲೇ ಹೊರತು ಆ ಶೋ ಇಂದ ಅಲ್ಲ ಅನ್ನೋದು ಸತೀಶ್ ವಾದ.

ಜನರ ರಿಯಾಕ್ಷನ್ ಏನು?

ಸತೀಶ್ ಅವರ ಈ ಹೇಳಿಕೆ ಕೇಳಿ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. "ಚಿನ್ನದ ಸರ ಹಾಕಿಸಿಕೊಳ್ಳೋದೇ ಸಾಧನೆಯಾ?" ಅಂತ ಕೆಲವರು ಪ್ರಶ್ನೆ ಮಾಡಿದ್ರೆ, ಇನ್ನು ಕೆಲವರು "ಗಿಲ್ಲಿ ಕಷ್ಟಪಟ್ಟು ಗೆದ್ದಿದ್ದಾರೆ, ಅವರನ್ನ ಈ ರೀತಿ ಅವಮಾನ ಮಾಡೋದು ತಪ್ಪು" ಅಂತಿದ್ದಾರೆ. ಬರಿ ವಿವಾದ ಮಾಡಿ ಸುದ್ದಿಯಲ್ಲಿ ಇರೋದಕ್ಕಿಂತ, ಬೇರೆಯವರಿಗೆ ಗೌರವ ಕೊಡೋದನ್ನ ಕಲಿಯಿರಿ ಅಂತ ಸತೀಶ್‌ಗೆ ಕ್ಲಾಸ್ ತಗೊಳ್ತಿದ್ದಾರೆ.

Latest News