ಸಿನಿಮಾ ಪ್ರಿಯರಿಗೆ ಈಗ ಸಖತ್ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ‘ಧುರಂಧರ್’ ಸರಣಿಯ ಸಿನಿಮಾಗಳು ಈಗಾಗಲೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ಈಗ ಅದೇ ‘ಧುರಂಧರ್’ ಸಿನಿಮಾದ ಫ್ಯಾನ್ಸ್‌ಗೆ ಒಂದು ಅಚ್ಚರಿಯ ಸುದ್ದಿ ಬಂದಿದೆ. ‘ಧುರಂಧರ್’ ಹಾಗೂ ‘ಧುರಂಧರ್ 2’ ಎರಡನ್ನೂ ಸೇರಿಸಿ, ‘ಧುರಂಧರ್: ಡೈರೆಕ್ಟರ್ಸ್ ಕಟ್’ ಎಂಬ ಹೆಸರಿನಲ್ಲಿ ಒಟ್ಟಾರೆಯಾಗಿ ಏಳೂವರೆ ಗಂಟೆಯ (450 ನಿಮಿಷ) ಬೃಹತ್ ಸಿನಿಮಾವನ್ನು ತೆರೆಗೆ ತರುತ್ತಿದ್ದಾರಂತೆ!
ಏನಿದು ಸುದ್ದಿ? ಸೋಶಿಯಲ್ ಮೀಡಿಯಾದಲ್ಲಿ ಈಗ ಒಂದು ಸೆನ್ಸಾರ್ ಪ್ರಮಾಣಪತ್ರ (Censor Certificate) ಸಿಕ್ಕಾಪಟ್ಟೆ ಓಡಾಡ್ತಿದೆ. ಇದರಲ್ಲಿ ‘ಧುರಂಧರ್: ಡೈರೆಕ್ಟರ್ಸ್ ಕಟ್’ ಎಂಬ ಹೆಸರಿದ್ದು, ಸಿನಿಮಾದ ಅವಧಿ 450 ನಿಮಿಷ ಎಂದು ನಮೂದಿಸಲಾಗಿದೆ. ಅಂದರೆ, ನೀವು ಅರೆದರೆ ಏಳೂವರೆ ಗಂಟೆಗಳ ಕಾಲ ಥಿಯೇಟರ್‌ನಲ್ಲೇ ಕೂರಬೇಕು! ಕೇಳೋಕೆ ಶಾಕ್ ಆದ್ರೂ, ಈ ಸಿನಿಮಾಗೆ ಎರಡು ಇಂಟರ್‌ವಲ್‌ಗಳು ಇರುತ್ತವೆಯಂತೆ. ಐಮ್ಯಾಕ್ಸ್ (IMAX) ಅಥವಾ ಡಿಸಿ (DC) ಅಂತಹ ಪ್ರೀಮಿಯಂ ಸ್ಕ್ರೀನ್‌ಗಳಲ್ಲಿ ಮಾತ್ರ ಈ ಸಿನಿಮಾ ಪ್ರದರ್ಶನ ಕಾಣಲಿದೆ ಎಂದು ಹೇಳಲಾಗುತ್ತಿದೆ.
Finally a win for cinema and every cinephile in country! #Dhurandhar & #DhurandharTheRevenge is set to release an extended 7 hours 30 minute director’s cut uncensored exclusively on premium screens (DC, IMAX, HDR and EPIQ)
— Parth Chaturvedi (@_mrchaturvedi) March 31, 2026
A new certificate was issued by CBFC team today. The… pic.twitter.com/lNr4z0jG8x
ಹಿಂದೆ ಏನಾಗಿತ್ತು? ನಿಮಗೆ ನೆನಪಿರಬಹುದು, ‘ಬಾಹುಬಲಿ’ ಮೊದಲ ಮತ್ತು ಎರಡನೇ ಭಾಗವನ್ನು ಒಟ್ಟಿಗೆ ಸೇರಿಸಿ ಪ್ರದರ್ಶನ ಮಾಡಲಾಗಿತ್ತು. ಅದು ನೋಡುಗರಿಗೆ ಹೊಸ ಅನುಭವ ನೀಡಿತ್ತು. ಈಗ ಅದೇ ಹಾದಿಯಲ್ಲಿ ‘ಧುರಂಧರ್’ ತಂಡವೂ ಹೊರಟಿದೆ ಅನ್ನೋದು ಚರ್ಚೆಯ ವಿಷಯ. ‘ಧುರಂಧರ್’ ಮೂರು ಗಂಟೆ 34 ನಿಮಿಷ, ‘ಧುರಂಧರ್ 2’ ಮೂರು ಗಂಟೆ 49 ನಿಮಿಷಗಳಿದ್ದವು. ಇವೆರಡನ್ನೂ ಸೇರಿದರೆ ಬರೋಬ್ಬರಿ ಏಳೂವರೆ ಗಂಟೆ!
ಆದರೆ ಇಲ್ಲಿ ಒಂದು ದೊಡ್ಡ ಟ್ವಿಸ್ಟ್ ಇದೆ! ಇಂದು ಏಪ್ರಿಲ್ 1, ಅಂದರೆ ‘ಏಪ್ರಿಲ್ ಫೂಲ್ಸ್ ಡೇ’. ಸೋಶಿಯಲ್ ಮೀಡಿಯಾದಲ್ಲಿ ಇವತ್ತು ಹರಿದಾಡುವ ಯಾವುದೇ ವಿಷಯವನ್ನೂ ನಂಬುವಂತಿಲ್ಲ. ಪಾರ್ಥ ಚತುರ್ವೇದಿ ಎಂಬುವವರು ಈ ಪ್ರಮಾಣಪತ್ರವನ್ನು ಹಂಚಿಕೊಂಡಿದ್ದಾರೆ ನಿಜ, ಆದರೆ ಇದು ನಿಜವಾಗಿಯೂ ರಿಲೀಸ್ ಆಗುತ್ತಾ? ಅಥವಾ ಯಾರೋ ಫ್ಯಾನ್ ಮಾಡಿರುವ ಜೋಕ್ ಅಷ್ಟೇನಾ ಅನ್ನೋ ಅನುಮಾನ ಎಲ್ಲರಿಗೂ ಇದೆ.
‘ಧುರಂಧರ್ 2’ ಈಗಾಗಲೇ ಸಾವಿರ ಕೋಟಿ ರೂಪಾಯಿ ಗಳಿಸಿ ಸೂಪರ್ ಹಿಟ್ ಆಗಿದೆ. ಸಿನಿಮಾ ಸಕ್ಸಸ್ ಆಗಿರೋ ಖುಷಿಯಲ್ಲಿ ಫ್ಯಾನ್ಸ್ ಇಂತಹ ಸುದ್ದಿಗಳನ್ನ ನಂಬೋಕೆ ತಯಾರಿದ್ದಾರೆ. ಆದ್ರೆ, ಇಷ್ಟು ದೀರ್ಘಾವಧಿಯ ಸಿನಿಮಾವನ್ನು ಜನರು ಥಿಯೇಟರ್‌ನಲ್ಲಿ ಬಂದು ನೋಡ್ತಾರಾ? ಅಷ್ಟು ಹೊತ್ತು ಕೂರೋಕೆ ತಾಳ್ಮೆ ಇರುತ್ತಾ? ಅನ್ನೋದು ದೊಡ್ಡ ಪ್ರಶ್ನೆ.
ಈ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್ ಆಗಿದೆ. ಸಿನಿಮಾ ತಂಡದಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ಇದು ಏಪ್ರಿಲ್ ಫೂಲ್ ತಮಾಷೆಯೋ ಅಥವಾ ನಿಜಕ್ಕೂ ಸಿನಿಮಾ ಬರ್ತಿದೆಯೋ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ. ನೀವು ಹೇಳಿ, ಏಳೂವರೆ ಗಂಟೆಗಳ ಕಾಲ ಥಿಯೇಟರ್‌ನಲ್ಲಿ ಕೂತು ಸಿನಿಮಾ ನೋಡೋಕೆ ನೀವು ರೆಡಿನಾ? ಕಮೆಂಟ್ ಮಾಡಿ ತಿಳಿಸಿ!